ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?

June 26, 2025
6:48 AM
ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.ಹೀಗಾದಲ್ಲಿ ಏರು ಪೇರು ಕಡಿಮೆ ಆಗಿ ಸ್ಥಿರ ದಾರಣೆಗೆ ಅವಕಾಶ ದೊರಕಬಹುದು.

ಅಡಿಕೆ ಇಂದು ಉತ್ಪಾದಕನಿಂದ ಹಿಡಿದು ಗ್ರಾಹಕನಿಗೆ ತಲಪುವಲ್ಲಿ ಒಂದು ಉದ್ದದ ದಾರಿಯಲ್ಲಿ ಸಾಗುತ್ತದೆ.ಈ ದಾರಿಯಲ್ಲಿ ನಾನಾ ರೀತಿಯ ಮಧ್ಯವರ್ತಿಗಳು ಕಾರ್ಯನಿಭಾಯಿಸುತ್ತಾರೆ.ಇಲ್ಲಿ ಸಹಕಾರಿ ಸಂಸ್ಥೆಗಳು,ಖಾಸಗಿ ವ್ಯಾಪಾರಸ್ಥರು ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಕರು ಸೇರಿದ್ದಾರೆ.ದೇಶದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಉತ್ಪಾದನೆಯ ಶೇಕಡಾ ಎಂಬತ್ತರಷ್ಟು ಅಡಿಕೆ ವ್ಯವಹಾರ ಖಾಸಗಿ ವಲಯದಲ್ಲಿ ನಡೆಯುತ್ತಿದೆ.ಆದ್ದರಿಂದಲೇ ಧಾರಣೆಯ ಏರಿಕೆಗೆ ಅವಕಾಶ ಜಾಸ್ತಿ.ಅಡಿಕೆಯ ಉತ್ಪಾದಕನಿಂದ ಹಿಡಿದು ಅಂತಿಮ ಗ್ರಾಹಕನಿಗೆ ತಲಪುವಾಗ ನಾನಾ ಹಂತಗಳನ್ನು ದಾಟುತ್ತದೆ. ಇವುಗಳನ್ನು ಹಲವು ವರ್ಗ ಗಳಾಗಿ ವಿಂಗಡಿಸಬಹುದು….

Advertisement
Advertisement

ಚಾಲಿ ಅಡಿಕೆ: 

  1. ಉತ್ಪಾದಕ ಸಹಕಾರಿ ಸಂಸ್ಥೆಯ ಶಾಖೆ – ಸಹಕಾರಿ ಸಂಸ್ಥೆಯ ಸಂಸ್ಕರಣೆ ಕೇಂದ್ರ-  ಗ್ರಾಹಕ ಪ್ರದೇಶದ ಮಾರಾಟ ಕೇಂದ್ರ- ಸಗಟು ವ್ಯಾಪಾರಸ್ಥರು- ಅಡಿಕೆ ತುಂಡರಿಸುವ ಕೇಂದ್ರ-  ಪಾನ್ ವಾಲ ಗ್ರಾಹಕ.
  2.  ಉತ್ಪಾದಕ ಸಹಕಾರಿ ಸಂಸ್ಥೆ – ಸಂಸ್ಕರಣೆ ಕೇಂದ್ರ – ಮಾರಾಟ ಪ್ರತಿನಿಧಿ- ಸಗಟು ವ್ಯಾಪಾರಸ್ಥರು -ಪಾನ್ವಾಲ ಗ್ರಾಹಕ.
  3. ಉತ್ಪಾದಕ ಸಹಕಾರಿ ಸಂಸ್ಥೆ – ಸಂಸ್ಕರಣಾ ಘಟಕ – ಮೌಲ್ಯ ವರ್ಧಿತ ಉತ್ಪನ್ನಗಳ ಉತ್ಪಾದಕರು- ಗ್ರಾಹಕ.
  4.  ಉತ್ಪಾದಕ – ಸ್ಥಳೀಯ ಚಿಲ್ಲರೆ ವ್ಯಾಪಾರಸ್ಥರು ಸಂಸ್ಕರಣಾ ಘಟಕಗಳ ವ್ಯಾಪಾರಸ್ಥರು- ಗ್ರಾಹಕ ಪ್ರದೇಶದ ವ್ಯಾಪಾರಸ್ಥರು –  ತುಂಡರಿಸುವ, ಹುರಿಯುವ ಇತ್ಯಾದಿ ಘಟಕಗಳು ಪಾನವಾಲ – ಗ್ರಾಹಕ.
  5. ಉತ್ಪಾದಕ ಪ್ರದೇಶದಿಂದ ಇಲ್ಲಿ ಬಂದು ನೆಲೆಸಿದ ಪ್ರತಿನಿಧಿ ಇಲ್ಲವೇ ವ್ಯಾಪಾರಿ – ಸಂಸ್ಕರಣಾ ಘಟಕ – ಗ್ರಾಹಕ ಪ್ರದೇಶದ ವ್ಯಾಪಾರಸ್ಥರು – ತುಂಡರಿಸುವ ಕೇಂದ್ರ – ಪಾನ್ ಅಂಗಡಿ ಗ್ರಾಹಕ.

ಇಲ್ಲಿ ಎಲ್ಲಾ ಹಂತದಲ್ಲೂ ಚಿಲ್ಲರೆ ವ್ಯಾಪಾರಿಗಳು ಧಾರಣೆಯ ಏರುಪೇರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಇದಕ್ಕೆ ಮುಖ್ಯ ಕಾರಣ ಅವರಿಗೆ ಬೆಳೆಗಾರನ ಸ್ಥಿತಿ, ಬೆಳೆಯ ಪ್ರಮಾಣ ಇತ್ಯಾದಿಗಳು ತಿಳಿದಿರುವುದು.ಇದರೊಂದಿಗೆ ಗ್ರಾಹಕ ಪ್ರದೇಶದ ವ್ಯಾಪಾರಸ್ಥರಿಗೆ ಬೆಳೆಯ ಉತ್ಪಾದನೆ,ಗುಣಮಟ್ಟ ಎಂಬಿತ್ಯಾದಿ ವಿಚಾರಗಳು ತಿಳಿದಿರುತ್ತದೆ. ಮೇಲೆ ತಿಳಿಸಿದ ಸಂಸ್ಥೆಗಳು ಮತ್ತು ಖಾಸಗಿ ಮೌಲ್ಯ ವರ್ಧಿತ ಉತ್ಪನ್ನಗಳ ಉತ್ಪಾದಕರು ವಿವಿಧ ರೂಪದ ಅಡಿಕೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ.

ಕೆಂಪು ಅಡಿಕೆ:

  1.  ಉತ್ಪಾದಕ – ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪಾರಿ ನಿಯಂತ್ರಿತ ಮಾರುಕಟ್ಟೆಯ ಪ್ರಾಂಗಣದ ವ್ಯಾಪಾರಿ ಮೌಲ್ಯ ವರ್ಧಿತ ಉತ್ಪನ್ನಗಳ ಉತ್ಪಾದಕರು ಅಥವಾ ಅವರ ಪ್ರತಿನಿಧಿ – ಮೌಲ್ಯ ವರ್ಧಿತ ಉತ್ಪನ್ನ ಮಾರಾಟದ ಅಂಗಡಿ ಅಥವಾ ಪಾನ್ ಅಂಗಡಿ – ಗ್ರಾಹಕ.
  2. ಉತ್ಪಾದಕ – ಸಹಕಾರಿ ಸಂಸ್ಥೆ – ಗ್ರಾಹಕ ಪ್ರದೇಶದ ವ್ಯಾಪಾರಸ್ಥರು ಇಲ್ಲವೇ ಮೌಲ್ಯ ವರ್ಧಿತ ಉತ್ಪನ್ನಗಳ ಉದ್ದಿಮೆದಾರರು,ಅಲ್ಲಿಂದ ಅಂತಿಮ ಉತ್ಪನ್ನ ಅಂಗಡಿಗಳ ಮೂಲಕ ಗ್ರಾಹಕ.
  3.  ಉತ್ಪಾದಕ ಸಹಕಾರಿ ಸಂಸ್ಥೆ ಇಲ್ಲವೇ ಖಾಸಗಿ ವ್ಯಾಪಾರಸ್ಥರು ಚಿಲ್ಲರೆ ವ್ಯಾಪಾರಿಗಳು ಕಿರಾಣಿ ಅಂಗಡಿ ಗ್ರಾಹಕ.

ಇಲ್ಲಿ ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಉದ್ದಿಮೆದಾರರು ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಿ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಗ್ರಾಹಕರಿಗೆ ಬೇರೆ ಬೇರೆ ದಾರಿಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ಅಡಿಕೆ ಇಂದು ಉತ್ಪಾದಕರ ಹಂತದಿಂದ ಗ್ರಾಹಕನ ತನಕ ತಲಪುವಾಗ ನಾನಾ ಹಂತಗಳನ್ನು ದಾಟಿ ಹೋಗುವುದರಿಂದಾಗಿ ಉತ್ಪಾದಕರಿಗೆ ಬಳಕೆದಾರರು ಕೊಡುವ ಬೆಲೆಯ ಶೇಕಡಾ ಅರುವತ್ತರ ಆಸು ಪಾಸು ದೊರಕುತ್ತದೆ.ಇದಕ್ಕೆ ಕಾರಣಗಳೆಂದರೆ ಸಾಗಣೆ ವೆಚ್ಚ, ಮಧ್ಯವರ್ತಿ ಅಥವಾ ದಲ್ಲಾಳಿಗಳ ಕಮಿಷನ್,ತೆರಿಗೆ,ಸಂಸ್ಕರಣಾ ವೆಚ್ಚ,ವಿವಿಧ ಹಂತದ ಲಾಭಾಂಶಗಳು,ಇತ್ಯಾದಿಗಳು.

ಇನ್ನು ಉತ್ಪಾದಕ ಮಾರಾಟ ಮಾಡಿದ ಅಡಿಕೆ ವರ್ಗೀಕರಣ ಆಗಿ ಗ್ರಾಹಕ ಪ್ರದೇಶದ ಶುಚಿ, ರುಚಿಗೆ ಅನುಗುಣವಾಗಿ ವಿವಿಧ ಗಾತ್ರಗಳು,ರೂಪಗಳಲ್ಲಿ ಅಂತಿಮ ಮಾರುಕಟ್ಟೆಗೆ ಹೋಗುವುದರಿಂದ ವಿದಕ್ಕೆ ಅನುಗುಣ ಆಗಿ ಧಾರಣೆ ಏರು ಪೇರು ಆಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಡಿಕೆ ಮಾರುಕಟ್ಟೆಯ ಬಹು ಪಾಲು ಖಾಸಗಿ ವರ್ತಕರ ಹತೋಟಿಯಲ್ಲಿದ್ದರೂ ಇಲ್ಲಿ ಸಹಕಾರಿ ಸಂಸ್ಥೆಗಳು ಧಾರಣೆ ನಿರ್ಧರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.

ಇದರೊಂದಿಗೆ ಗ್ರಾಹಕ ಪ್ರದೇಶದ ವ್ಯಾಪಾರಸ್ಥರು ಮತ್ತು ಸ್ಥಳೀಯ ವ್ಯಾಪಾರಸ್ಥರು ಸಹಕಾರಿ ಸಂಸ್ಥೆಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುವುದರೊಂದಿಗೆ ,ಬೆಳೆಗಾರರ ಮಾಹಿತಿಯನ್ನೂ ಕಲೆ ಹಾಕಿ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಾರೆ.ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಇಲ್ಲಿ ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.ಹೀಗಾದಲ್ಲಿ ಏರು ಪೇರು ಕಡಿಮೆ ಆಗಿ ಸ್ಥಿರ ದಾರಣೆಗೆ ಅವಕಾಶ ದೊರಕಬಹುದು.

ಕೃಷಿ,ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಯಾವುದೇ ಉತ್ಪನ್ನ ಇರಲಿ, ಇವು ಗ್ರಾಹಕರಿಗೆ ತಲಪಬೇಕಾಗಿದ್ದಲ್ಲಿ ಮಧ್ಯವರ್ತಿಗಳು ಬೇಕೆ ಬೇಕು.ಆದರೆ ಈ ಸಂಖ್ಯೆ ಕಡಿಮೆ ಆದಷ್ಟು ಗ್ರಾಹಕ ಕೊಡುವ ಹಣದ ಬಹುಪಾಲು ಉತ್ಪಾದಕರಿಗೆ ತಲಪಲು ಸಾಧ್ಯ.ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಧ್ಯವರ್ತಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಈ ಪ್ರವೃತ್ತಿ ಅಡಿಕೆ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.ಇದು ಬೆಳೆಗಾರರ ದೃಷ್ಟಿಯಿಂದ ಒಂದು ಒಳ್ಳೆಯ ಬೆಳವಣಿಗೆ ಆಗಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror