ಕಳೆದ ಐವತ್ತು ವರ್ಷಗಳಲ್ಲಿ ಅಡಿಕೆ ಉತ್ಪನ್ನ ದೇಶದ ಕೃಷಿ ಉತ್ಪನ್ನ ದ ಮಾರುಕಟ್ಟೆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ಆದರೆ ಇಲ್ಲಿ ತೀರ್ಥಹಳ್ಳಿಯೋ . ಕೊಪ್ಪವೋ ,ಸಾಗರ- ಶಿರಸಿ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಬಯಲು ಸೀಮೆಯ ಅಡಿಕೆ ಬೆಳೆಗಾರರ ಕ್ಷೇತ್ರದ ಯಾರೊಬ್ಬ ಬೆಳೆಗಾರರಿಗೂ ಇಷ್ಟು ಬೃಹತ್ ಪ್ರಮಾಣದಲ್ಲಿ ಉತ್ಪನ್ನವಾಗುವ ಅಡಿಕೆ ಕೊನೆಯಲ್ಲಿ ಏನಾಗುತ್ತದೆ ಎಂಬ ಸ್ಪಷ್ಟವಾದ ಮಾಹಿತಿ ಇಲ್ಲ.. !. ಈ ಬೆಳೆಯುವ ಬೆಳೆಗಾರರಿಗೂ ಮಾಹಿತಿ ಇಲ್ಲ.
ಈ ದೇಶದಲ್ಲಿ ಅಡಿಕೆ ಬೆಳೆಗಿರುವಷ್ಟು ವ್ಯವಸ್ಥಿತ ಮಾರುಕಟ್ಟೆ ಇನ್ಯಾವ ಕೃಷಿ ಉತ್ಪನ್ನಗಳಿಗೂ ಇಲ್ಲ….!. ಈ ವ್ಯವಸ್ಥಿತ ಮಾರುಕಟ್ಟೆ ಗೆ ಕಾರಣ “ಅಡಿಕೆ ಬೆಳೆಗಾರರ ಮಾರಾಟ ಸಹಕಾರಿ ಸಂಘಗಳು. .”. ಅಡಿಕೆ ಮಾರುಕಟ್ಟೆ ಕ್ಷೇತ್ರದಲ್ಲಿ ಈ ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿದ್ದರೆ ಯಾವತ್ತೋ ಅಡಿಕೆ ಬೆಳೆಯ ಮೇಲೆ ಈ ಖೂಳ ದಲ್ಲಾಳಿಗಳು ಪ್ರಹಾರ ಮಾಡುತ್ತಿದ್ದರು. ಈ ದಲ್ಲಾಳಿಗಳು ಅಡಿಕೆ ಬೆಲೆಗೆ ಇವತ್ತು ಸಿಗುವ ” ಗೌರವಯುತ ಬೆಲೆ ” ಖಂಡಿತವಾಗಿಯೂ ಸಿಗಲು ಬಿಡು ತ್ತಿರಲಿಲ್ಲ….!
ಇವತ್ತು ಮಾರುಕಟ್ಟೆ ಹ್ಯಾಗಿದೆ ಎಂದರೆ ಅಲ್ಲೊಂದು ಪಾರದರ್ಶಕತೆ , ಪ್ರಾಮಾಣಿಕತೆ ಖಂಡಿತವಾಗಿಯೂ ಇಲ್ಲ. ಕೃಷಿ ಮಾರುಕಟ್ಟೆಯ ವ್ಯವಸ್ಥೆ ಯಲ್ಲಿ ಮೊದಲು ಪರಿಗಣನೆಗೆ ಬರುವುದು ರೈತನ ಕೃಷಿ ಉತ್ಪನ್ನ ಗಳನ್ನು “ಹೆಚ್ಚು ಕಾಲ ದಾಸ್ತಾನು ಇಟ್ಟುಕೊಳ್ಳಲು ಆಗದ ಅಸಾಹಾಯಕತೆ ” …
ಇವತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಮ್ಯಾಮ್ಕೋಸು ಸಹಕಾರಿ ಅಡಿಕೆ ಮಾರಾಟ ಸಂಸ್ಥೆ, ತೀರ್ಥಹಳ್ಳಿ ಯ ಎಪಿಎಂಸಿ ಯ ಎಲ್ಲಾ ವ್ಯವಸ್ಥಿತ ಗೋಡೌನ್ ಗಳನ್ನು ತನ್ನ ಸುಪರ್ದಿಗೆ ತೆಗದುಕೊಂಡು ರೈತರ ಅಡಿಕೆ ಉತ್ಪನ್ನ ಗಳನ್ನು ಇಟ್ಟುಕೊಳ್ಳಲು ಸಹಕಾರ ನೀಡಿದೆ. ಬಹುತೇಕ ಎಲ್ಲ ಗೋಡೋನು ಗಳು ರೈತರ ಅಡಿಕೆ ಉತ್ಪನ್ನ ಗಳಿಂದ ಭರ್ತಿ ಯಾಗಿದೆ. ಅಡಿಕೆ ಬೆಳೆಗಾರ ರೈತರಿಗೆ ಈ ವ್ಯವಸ್ಥೆ ಇಲ್ಲವಾಗಿದ್ದಿದ್ದರೆ , ತಮ್ಮ ಉತ್ಪನ್ನ ದ ಮೇಲೆ ದಾಸ್ತಾನು ಮುಂಗಡ ಸಿಗುವ ವ್ಯವಸ್ಥೆ ಇಲ್ಲವಾಗಿದ್ದಿದ್ದರೆ ಮಾರುಕಟ್ಟೆ ದಲ್ಲಾಳಿ ರೈತರಿಗೆ ಅತಿ ಕಡಿಮೆ ಬೆಲೆ ನಮೂದಿಸಿ ಇಷ್ಟು ಬೆಲೆ ನಂದು ನೀ ಮಾರಿದರೆ ಮಾರು ಇಲ್ಲವಾದರೆ ಬಿಡು ಎಂದು ಒತ್ತಡ ಹಾಕುತ್ತಿದ್ದ. … ಅದೀಗ ಸದ್ಯ ಸಾಧ್ಯವಾಗುತ್ತಿಲ್ಲ.
ಸಾಮಾನ್ಯವಾಗಿ ಬೇರೆಲ್ಲಾ ಮಾರುಕಟ್ಟೆಗಳು ಹೇಗಿರುತ್ತದೆ ಎಂದರೆ ಅಲ್ಲಿ ಖರೀದಿ ದಾರರೊಂದಿಗೆ ಬೆಳೆಗಾರ ರೈತ ನೇರ ಮುಖಾಮುಖಿ ಯಾಗುತ್ತಾನೆ. ಉದಾಹರಣೆಗೆ ಟೊಮ್ಯಾಟೊ ನಂತಹ ಉತ್ಪನ್ನಗಳು. ಅಡಿಕೆ ಮಾರುಕಟ್ಟೆ ವ್ಯವಸ್ಥೆ ಯಲ್ಲಿ ರೈತ ಬೆಳೆಗಾರ ಮಾರುಕಟ್ಟೆ ದಲ್ಲಾಳಿ ಯ ಇನ್ನಿಲ್ಲದ ನಾಟಕ ಗಳಿಗೆ , ಒತ್ತಡ ಗಳಿಗೆ ಬಲಿಯಾಗುವ ಅವಕಾಶ ಕಡಿಮೆ. ಏಕೆಂದರೆ ಸಹಕಾರಿ ಅಡಿಕೆ ಮಾರುಕಟ್ಟೆ ವ್ಯವಸ್ಥೆ ಈ ಕುತಂತ್ರ ನಾಟಕಕ್ಕೆ ತಡೆ ಯಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ ಕಾಯ್ದೆ ತರಲು ಯತ್ನಿಸಿತ್ತು. ಆದರೆ ಆ ಕಾಯ್ದೆ ಯನ್ನು ಕೇಂದ್ರ ಸರ್ಕಾರ ಹಿಂಪಡೆಯದಿದ್ದರೆ ಅಡಿಕೆ ಮಾರುಕಟ್ಟೆ ವ್ಯವಸ್ಥೆ ಅಡಿಕೆ ಬೆಳೆಗಾರರಿಗೆ ಬಹಳ ದೊಡ್ಡ ಪ್ರಹಾರ ಮಾಡುತ್ತಿತ್ತು. ಏಕೆಂದರೆ ಅಡಿಕೆ ದಾಸ್ತಾನು ಅವಕ ದ ಬೇಡಿಕೆಯ ಸಾಮಾನ್ಯ ಲೆಕ್ಕಾಚಾರ ಕಾಣಿಸುತ್ತಿದೆ. ಇದು ನೂರಕ್ಕೆ ನೂರರಷ್ಟು ಸತ್ಯ ಅಲ್ಲ ದಿದ್ದರೂ ಒಂದು ಅಂದಾಜಂತೂ ಕಾಣಿ ಸುತ್ತಿದೆ.
ನಮ್ಮ ದೇಶದ ಕೃಷಿ ಮಾರುಕಟ್ಟೆ ವ್ಯವಸ್ಥೆ ಯಲ್ಲಿ ಅದೇನೇ ಮಾರ್ಪಾಡು ಮಾಡಿದ್ದರೂ ಬೇಡಿಕೆಯ ಪೂರೈಕೆಯ ಸ್ಪಷ್ಟವಾದ ಲೆಕ್ಕಾಚಾರ ಇಲ್ಲ. ಈ “ಬೇಡಿಕೆ ಪೂರೈಕೆಯ ಅಸ್ಪಷ್ಟತೆ” ದಲ್ಲಾಳಿಗಳ ಪ್ರಮುಖ ಅಸ್ತ್ರ ಆಗಿದೆ…!
ಅಡಿಕೆ ಬೇಡಿಕೆ ಕುಸಿತಕ್ಕೆ ಎರಡು ಪ್ರಮುಖ ಕಾರಣಗಳು ಮುಂದಿವೆ. 1. ವಿದೇಶಿ ಅಡಿಕೆ ಆಮದು , 2. ದೇಶಿ ಕಳಪೆ ಗುಣಮಟ್ಟದ ಅಡಿಕೆ. ಇದೆರೆಡೂ ಅವಳಜವಳಿ ಅಥವಾ ಒಂದಕ್ಕೊಂದು ಕೂಡಿ ಕೊಂಡಿರುವ ಕಾರಣಗಳು. ಈಗ ಅಡಿಕೆ ಉತ್ಪನ್ನ ಗಳು ಈ ಐವತ್ತು ವರ್ಷಗಳ ಹಿಂದಿನಂತೆ ನೇರ ಬಳಕೆಯಿಲ್ಲ.
ಐವತ್ತು ವರ್ಷಗಳ ಹಿಂದೆ ಅಡಿಕೆ ಕೇವಲ ಕರಾವಳಿ ಮತ್ತು ಮಲೆನಾಡು ಭಾಗದ ಕೃಷಿ ಉತ್ಪನ್ನವಾಗಿತ್ತು.ಅಡಿಕೆ ನೇರ ಗ್ರಾಹಕನಿಗಾಗಿ ಗುಣಮಟ್ಟ ಬಣ್ಣ ರುಚಿಗೆ ಆದ್ಯತೆ ಇತ್ತು. ಈಗಿನ ಗುಟ್ಕಾ ತಯಾರಿಕ ಗ್ರಾಹಕ ನ ಬೇಡಿಕೆ ಅಡಿಕೆ ತಾಳಿಕೆ ಹೀರಿಕೊಂಡು ಸುದೀರ್ಘ ಕಾಲ ಕೆಡದಂತಿರುವ ಬಾಳಿಕೆ ಮಾತ್ರ. ಈ ಅಡಿಕೆ ಮಾದರಿಯನ್ನು ಖರೀದಿ ದಾರ ತಾಳಿಕೆ ಬಾಳಿಕೆಯ ಆಧಾರದಲ್ಲೇ ನೋಡುತ್ತಾನೆ ಅಷ್ಟೇ.
ಐವತ್ತು ವರ್ಷಗಳ ಹಿಂದೆ ಅಡಿಕೆ ಯನ್ನು ಪ್ರತಿಶತ ತೊಂಬಂತ್ತೊಂಬತ್ತು ಭಾಗ ನೇರವಾಗಿ ಅಡಿಕೆ ಬೆಳೆಗಾರನೇ ಕೊಯ್ಲು ಸಂಸ್ಕರಣೆ ಮಾಡುತ್ತಿದ್ದ. ಇದೀಗ “ಕಳಪೆ ಅಡಿಕೆ ” ಬೆರಕೆ ಅಡಿಕೆ ” ಎನ್ನುವ ಅನಾಹುತಕಾರಿ ಬೆಳವಣಿಗೆ ನೆಡೆ ಯುತ್ತಲಿರುವುದಕ್ಕೆ ಕಾರಣ ಬಹಳ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಉತ್ಪನ್ನ ವನ್ನು ತಾವೇ ಸಂಸ್ಕರಣೆ ಮಾಡದೇ ಅಡಿಕೆ ಚೇಣಿ ಗುತ್ತಿಗೆ ಮತ್ತು ಇಷ್ಟು ಹಸಿ ಅಡಿಕೆ ಗೆ ಇಷ್ಟು ಒಣ ಅಡಿಕೆ ಬದಲಿಗೆ ಕೊಡುವ ಒಪ್ಪಂದ ದ ಮೂಲಕ ಸಂಸ್ಕರಣೆ ಮಾಡುತ್ತಿದ್ದಾರೆ.
ವರ್ಷ ಗಟ್ಟಲೆ ಅಡಿಕೆ ಕೃಷಿ ಗೆ ಬಂಡವಾಳ ಹೂಡಿದ ಯಾವ ರೈತ ದೊಡ್ಡ ಮಟ್ಟದ ಅಡಿಕೆ ಕಲಬೆರಕೆ ಮಾಡುತ್ತಾನೆ….?
ಅಡಿಕೆ ಬೆಳೆಗಾರ ಅಂತಲ್ಲ ಯಾವುದೇ ಕೃಷಿ ಉತ್ಪನ್ನ ದ ಮೂಲ ಬೆಳೆಗಾರ ಉತ್ಪಾದಕರು ಯಾವುದೇ ಕಾರಣಕ್ಕೂ ಕಲಬೆರಕೆ ಮಾಡುವುದಿಲ್ಲ…!!!
ಈ ಕಲಬೆರಕೆ ಮತ್ತು ಅಪಾಯಕಾರಿ ಬಣ್ಣದ ಪ್ರಯೋಗ “ರೈತರು” ಖಂಡಿತವಾಗಿಯೂ ಮಾಡುತ್ತಿಲ್ಲ ಎಂಬುದು ಸುಸ್ಪಷ್ಟ. ಆದರೆ ಇದೀಗ ಅಡಿಕೆ ಮೌಲ್ಯವರ್ಧಿತ ಉತ್ಪನ್ನ “ಗುಟ್ಕಾ” ದ ಕಚ್ಚಾ ವಸ್ತುವಾಗಿರುವ ಕಾಲದಲ್ಲಿ ಮಲೆನಾಡಿನ ಅಡಿಕೆ ಆ ಭಾಗದ ಈ ಭಾಗದ ಅಡಿಕೆ ಎಂದು ಅಡಿಕೆಯ ” ಸ್ಥಳ ವಿಶೇಷ ” ಪರಿಗಣನೆಗೆ ಬಾರದ ಕಾಲದಲ್ಲಿ, ಅಡಿಕೆ ಉತ್ಪನ್ನ ದ durability ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವ ಕಾಲದಲ್ಲಿ , ಸಂಪೂರ್ಣ ಯಾಂತ್ರೀಕೃತ ತಯಾರಿಕೆಯ ಕಾಲದಲ್ಲಿ ಮುಕ್ಕಾಲು ಪಾಲು ರೈತರು ಹಸಿ ಅಡಿಕೆ ಕೊಡುವ ಕಾಲದಲ್ಲಿ ಅಡಿಕೆ ಗೆ ಸುಲಭವಾಗಿ ಕಳಂಕ ತರುತ್ತಿದೆ.
ಬಯಲು ಸೀಮೆಯ ಅಡಿಕೆ ಬೆಳೆ ಪ್ರದೇಶದಲ್ಲಿ ಮುಕ್ಕಾಲು ಪಾಲು ಅಡಿಕೆ ಬೆಳೆಗಾರರು ಹಸಿ ಅಡಿಕೆ ಮಾರಾಟ ಮಾಡುತ್ತಿದ್ದಾರೆ. ಈ ಹಸಿ ಅಡಿಕೆ ಟ್ರಂಡ್ ಇದೀಗ ಮಲೆನಾಡಿಗೂ ಬರುತ್ತಿದೆ.
“ಅಡಿಕೆ ಬೆಳೆಗಾರರು ಗಣನೀಯ ಪ್ರಮಾಣದಲ್ಲಿ ಕಚ್ಚಾ ಅಡಿಕೆ ಉತ್ಪಾದಿಸುತ್ತಿಲ್ಲ ” ಎಂಬಲ್ಲಿಗೆ ಅಡಿಕೆ ವಿದೇಶಿ ಮತ್ತು ಸ್ವದೇಶಿ ಕಳಪೆ ಅಡಿಕೆ ಕಲಬೆರಕೆ ವ್ಯವಸ್ಥೆ ಕಾರಣ ಕಾಣಿಸುತ್ತಿದೆ.
ಅಡಿಕೆ ಬೆಳೆಗಾರರು ಅಲ್ಲದ ಕಚ್ಚಾ ಅಡಿಕೆ ತಯಾರಕರಿಗೆ “ಹೆಚ್ಚು ಲಾಭ” ದ ಗುರಿ ಮಾತ್ರ ಇರುತ್ತದೆ.. ಅವನಿಗೆ ಅಡಿಕೆ ಬೆಳೆ / ಅಡಿಕೆ ಬೆಳೆಗಾರ ಉಳಿಯಬೇಕೆಂದೇನಿಲ್ಲ. ಅವ ಆ ಕ್ಷಣದ ಲಾಭ ಮಾತ್ರ ನೋಡುತ್ತಾನೆ. ಈ ಲಾಭಕೋರರೊಂದಿಗೆ ದುರುಳ ದಲ್ಲಾಳಿಗಳು ಸೇರಿ ಈ ಕಳ್ಳ ಅಡಿಕೆ ಆಮದು , ಗೊರಬಲು ಪಾಲಿಷರ್ ಅಡಿಕೆ, ಕಳಪೆ ಅಡಿಕೆ ಗಳಿಗೆ ಅಪಾಯಕಾರಿ ರಾಸಾಯನಿಕ ಬಣ್ಣ ಹಚ್ಚಿ ಒಳ್ಳೆಯ ಅಡಿಕೆ ಜೊತೆಗೆ ಬೆರಕೆ ಮಾಡಿ ಗುಟ್ಕೋದ್ಯಮಿಗಳಿಗೆ ಒದಗಿಸಿ ಅಡಿಕೆ ಯ ಮಾನ ಕಳೆಯುತ್ತಿದ್ದಾರೆ….!!
ಅಡಿಕೆ ಬೆಳೆಗಾರ ಕಚ್ಚಾ ಅಡಿಕೆ ಯಿಲ್ಲದೇ ಮಾರುಕಟ್ಟೆಯಲ್ಲಿ ತನ್ನ ಕೃಷಿ ಉತ್ಪನ್ನ ವಾದ ಅಡಿಕೆ ಗಾಗುವ ಅನ್ಯಾಯದ ವಿರುದ್ಧ ಯಾವ ಪ್ರತಿಭಟನೆಯನ್ನೂ ದಾಖಲಿಸಲಾರ…!!! ನಿಧಾನವಾಗಿ ಅಡಿಕೆ ಬೆಳೆಗಾರ ಅದರಲ್ಲೂ ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಅಡಿಕೆ ಯಲ್ಲಿ ತನ್ನ ಬದುಕು ಭವಿಷ್ಯ ಎನ್ನುವ ಜೀವನಾಸರೆಯ ಕೃಷಿ ಯಿಂದ ಹೊರಬರುವ ಅಥವಾ ಬರಲೇಬೇಕಾದ ಲಕ್ಷಣಗಳು ಕಾಣಿಸುತ್ತಿದೆ.
ಮೂರು ನಾಲ್ಕು ಸರ್ತಿ ಔಷಧ ಸಿಂಪಡಣೆ ಮಾಡಬೇಕಾದ ಅವಶ್ಯಕತೆ ಇರದ, ಮೆಕ್ಕೆಜೋಳ, ಜೋಳ , ಬತ್ತ ಕಬ್ಬು ಮುಂತಾದ ಬೆಳೆಗಳಿಗೆ ಹೋಲಿಸಿದರೆ ಎಕರೆವಾರು ಒಮ್ಮೆಗೆ ಗ್ಯಾರಂಟಿ ಗಮನಾರ್ಹ ಉತ್ಪತ್ತಿ ತರುವ ಅಡಿಕೆ ಬಯಲು ಸೀಮೆಯಲ್ಲಿ ಅದೆಷ್ಟೇ ಕಡಿಮೆ ಬೆಲೆ ಬಂದರೂ ಬಯಲು ಸೀಮೆಯ ಪ್ರದೇಶಕ್ಕೆ ಅತ್ಯಂತ ಲಾಭದಾಯಕ ತಲೆ ಬಿಸಿಯಿಲ್ಲದ ಬೆಳೆಯಾಗಿದೆ.
ಮೊನ್ನೆ ದಾವಣಗೆರೆ ಹಸಿ ಅಡಿಕೆ ಮಾರುಕಟ್ಟೆ ಯಲ್ಲಿ ಕ್ವಿಂಟಾಲ್ ಹಸಿ ಅಡಿಕೆ ಗೆ 5300 ರಿಂದ 6000 ತನಕ ಬೆಲೆ ದಾಖಲಾಗಿತ್ತು. ಈ ಬೆಲೆ 35000 ದಿಂದ 38000 (ಕ್ವಿಂಟಾಲ್ ರಾಶಿ ಇಡಿ) ಅಂತಾಯಿತು. ಈ ಸೀಝನ್ ನಲ್ಲಿ “ಮಲೆನಾಡಿನಲ್ಲಿ” ಮೂರು ಮೂರು ಸರ್ತಿ ತ್ವಾಟಕ್ಕೆ ಔಷಧ ಸಿಂಪಡಣೆ ಮಾಡಿಯೂ ಕೊಳೆಬಂದ್ , ಮಂಗ ತರದು ಉಳಿದ ಅಡಿಕೆ ಕ್ವಿಂಟಾಲ್ ಗೆ ಮೂವತ್ತೈದು ಸಾವಿರ ಬೆಲೆ ಬಂದರೆ ಸಾಕ…???!!!!
ಇದೊಂದು ದೊಡ್ಡ ದುರಂತ…, ಅಡಿಕೆ ಖರೀದಿದಾರ ಮಲೆನಾಡು ಅಡಿಕೆ ಗೂ ಬಯಲು ಸೀಮೆಯ ಅಡಿಕೆಯನ್ನೂ ಒಂದು ದೃಷ್ಟಿಯಿಂದ ನೋಡ್ತಾನೆ.. ನಾನು ಗಮನಿಸಿದಂತೆ ಕೆಲವೊಮ್ಮೆ ದಾವಣಗೆರೆ ಚಿತ್ರದುರ್ಗ ದ ರಾಶಿ ಇಡಿ ಅಡಿಕೆ ಗೆ ಮಲೆನಾಡಿನ ಅಡಿಕೆ ಗಿಂತ ಹೆಚ್ಚು ಬೆಲೆ ನಮೂದಾಗಿರುತ್ತದೆ. ಇದರ ಜೊತೆಯಲ್ಲಿ ಮಾರುಕಟ್ಟೆ ಗೆ ಬಯಲು ಸೀಮೆಯ ಪ್ರದೇಶದ ಅಡಿಕೆ ಯೇ ಮೊದಲು ಬರುತ್ತದೆ. ಗುಟ್ಕೋದ್ಯಮಿಯ ಬೇಡಿಕೆಯ ಹಸಿವು ತೀರುವ ಹಂತದಲ್ಲಿ ರುವಾಗ ಮಲೆನಾಡಿನ ಅಡಿಕೆ ಮಾರುಕಟ್ಟೆ ಗೆ ಹೋದರೆ ರುಚಿ ಗುಣಮಟ್ಟ ಬಣ್ಣ ಬೇಡದ ಗುಟ್ಕೋದ್ಯಮಿ ಅಥವಾ ಗುಟ್ಕಾ ದವರಿಗೆ ಅಡಿಕೆ ಒದಗಿಸುವ ಅಡಿಕೆ ದಲ್ಲಾಳಿ ಮಲೆನಾಡಿನ ಅಡಿಕೆ ಬೆಳೆಗಾರರು “ನಾವು ಮೂರು ಮೂರು ಸರ್ತಿ ಔಷಧ ಸಿಂಪಡಣೆ ಮಾಡಿದರೂ ಕೊಳೆ ಬಂದು ಹಾಸಿ ಹೋಗಿದೆ…!! ನಮ್ಮ ಅಡಿಕೆ ತಯಾರಿಕಾ ವೆಚ್ಚ ಬಯಲು ಸೀಮೆಯ ಅಡಿಕೆ ಗಿಂತ ದುಪ್ಪಟ್ಟು… ನಮ್ಮ ಅಡಿಕೆ ಗೆ ಹೆಚ್ಚು ಬೆಲೆ ನಮೂದಿಸಿ “” ಎಂದರೆ ಅವ ಅದಕ್ಕೆ ಮರುಗಿ ಮಲೆನಾಡಿನ ಅಡಿಕೆ ಯನ್ನು ಹೆಚ್ಚು ಬೆಲೆಗೆ ಕೊಂಡುಕೊಳ್ತಾನ…?!!
ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಮತ್ತು ಮಲೆನಾಡಿನಲ್ಲಿ ಅಡಿಕೆ ಕೃಷಿ ಉಳಿಯಬೇಕು ಅಂತಾದರೆ ಮಲೆನಾಡಿನ ಅಡಿಕೆ ಮಾರುಕಟ್ಟೆ ಯಲ್ಲಿ “ಪ್ರತ್ಯೇಕ ಬ್ರಾಂಡ್” ಆಗಿ ಮಾರಾಟಕ್ಕೆ ಹೋಗುವುದೊಂದೇ ದಾರಿ.
ಅಡಿಕೆ ಸಹಕಾರಿ ಸಂಘಗಳು ಈ ಐವತ್ತು ವರ್ಷಗಳ ಹಿಂದಿನ ದೇಶಾವರಿ ಅಡಿಕೆ ಮಾರುಕಟ್ಟೆ ಹೇಗಿತ್ತು ಎಂಬುದನ್ನು ಅಧ್ಯಯನ ಮಾಡಿ ಆ ನಿಟ್ಟಿನಲ್ಲಿ ಮಲೆನಾಡಿನ ಅಡಿಕೆ ಗೆ ಪ್ರತ್ಯೇಕ ಮಾರುಕಟ್ಟೆ ಕಂಡುಕೊಂಡರೆ ಮಲೆನಾಡಿನ ಅಡಿಕೆ ಮತ್ತು ಮಲೆನಾಡು ಅಡಿಕೆ ಬೆಳೆಗಾರರು ಉಳಿತಾರೆ……
ಮಲೆನಾಡು ಅಡಿಕೆ ಬೆಳೆಗಾರರು ಕಸ್ತೂರಿ ರಂಗನ್, ಹಳದಿಎಲೆ, ಎಲೆಚುಕ್ಕಿ, ಅತಿವೃಷ್ಟಿ ಕೊಳೆ , ವಿಪರೀತ ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ ಈ ಎಲ್ಲಾ ಜ್ವಲಂತ ಸಮಸ್ಯೆಗಳ ಜೊತೆಗೆ ಮಲೆನಾಡು ಅಡಿಕೆ ಗೆ ಹೊಸದಲ್ಲ “ಹಳೆ ಮಾರುಕಟ್ಟೆ ವ್ಯವಸ್ಥೆ ಯ ಹಳಿಯತ್ತ ಬಂಡಿ ಯನ್ನು ಕೊಂಡೊಯ್ಯುವ ಪ್ರಯತ್ನ ಮಾಡಬೇಕು” ಎಂಬುದು ಸಮಸ್ತ ಮಲೆನಾಡು ಅಡಿಕೆ ಬೆಳೆಗಾರರ ಪರವಾಗಿನ ಆಶಯ…
ನನ್ನ ನಮ್ಮೆಲ್ಲರ ಆಶಯಕ್ಕೆ ಇಂಬು ಸಿಕ್ಕಿ ಮಲೆನಾಡು ಮತ್ತು ಮಲೆನಾಡು ಎಂದಾಗ ಜ್ಞಾಪಕ ವಾಗುವ “ಸಾಂಪ್ರದಾಯಿಕ ಅಡಿಕೆ ಕೃಷಿ ಉಳಿಯಲಿ ” ಎಂದು ಆಶಿಸುತ್ತಿದ್ದೇನೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…