ದೇವಸ್ಥಾನದ ಹುಂಡಿಗೆ ಹಾಕಿದ ಹಣ ಏನಾಗುತ್ತದೆ… ? | ಮಹತ್ವದ ಮಾಹಿತಿ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸೋಶಿಯಲ್‌ ಮೀಡಿಯಾ ಪೇಜ್‌ |

September 29, 2023
6:15 PM
ದೇವಸ್ಥಾನದ ಹುಂಡಿಗೆ ಹಾಕಿದ ಹಣ ಏನಾಗುತ್ತದೆ..?. ಈ ಬಗ್ಗೆ  ಭಕ್ತರು ಮತ್ತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇದಕ್ಕೆ ಸ್ಪಷ್ಟನೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಸೋಶಿಯಲ್‌ ಮೀಡಿಯಾ ಪೇಜಲ್ಲಿ ಸ್ಪಷ್ಟನೆ ನೀಡಲಾಗಿದೆ.

ಕಳೆದ ಸಮಯಗಳಿಂದ ಚರ್ಚೆಯಾಗುತ್ತಿದ್ದ ವಿಷಯ, ದೇವಸ್ಥಾನದ ಹುಂಡಿಗೆ ಹಾಕಿದ ಹಣ ಏನಾಗುತ್ತದೆ..?. ಈ ಬಗ್ಗೆ  ಭಕ್ತರು ಮತ್ತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇದಕ್ಕೆ  ಸ್ಪಷ್ಟನೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಸೋಶಿಯಲ್‌ ಮೀಡಿಯಾ ಪೇಜಲ್ಲಿ ಸ್ಪಷ್ಟನೆ ನೀಡಲಾಗಿದೆ.ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರಲ್ಲಿ ದೇವಾಲಯದ ಹುಂಡಿಗೆ ಹಣ ಹಾಕ್ಬೇಡಿ ಅದು ಸಮಾಜಕ್ಕೆ ಉಪಯೋಗವಾಗೋದಿಲ್ಲ ಅನ್ನುವವರಿಗೆ ಸರಿಯಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Advertisement

ದೇವಾಲಯಕ್ಕೆ ಸೇರಿದ ಹಣದಲ್ಲಿ (ಹುಂಡಿ, ಪೂಜೆ,ಬಾಡಿಗೆ ಅಥವಾ ಇನ್ನಿತರ ಎಲ್ಲಾ) ದೇವಾಲಯದ ಎಲ್ಲಾ ಖರ್ಚು ಕಳೆದು ಉಳಿದ ಹಣದ 10% ಮಾತ್ರ ದೇವಾಲಯ ಸರ್ಕಾರಕ್ಕೆ (ಮುಜರಾಯಿ ಇಲಾಖೆಗೆ) ಕೊಡಬೇಕಾಗಿರುತ್ತದೆ. ಉಳಿದ ಹಣದಲ್ಲಿ ಅನ್ನದಾನ ರೂಪದಲ್ಲಿ ಬಂದ ದೇಣಿಗೆಯನ್ನು ಅನ್ನದಾನಕ್ಕೆ ಉಪಯೋಗಿಸಿಕೊಳ್ಳತಕ್ಕದ್ದು. ಅದನ್ನು ಫಿಕ್ಸೆಡ್ ಡೆಪಾಸಿಟ್ ಮಾಡಬೇಕಾಗಿರುತ್ತದೆ. ಉಳಿದದ್ದನ್ನು ಅಭಿವೃದ್ಧಿಗೆ ಉಪಯೋಗಿಸಬಹುದು. ಈ ಹಣವನ್ನು ಅಭಿವೃದ್ಧಿಗೆ ಉಪಯೋಗಿಸಲು ಸರ್ಕಾರದ ಅನೊಮೋದನೆ ಪಡೆಯಬೇಕಾಗುತ್ತದೆ.

ದೇವಾಲಯದ ಆಡಳಿತ ಮಂಡಳಿಯ ನಿರ್ಣಯದ ನಂತರ 5 ಲಕ್ಷದವರೆಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ, 25 ಲಕ್ಷದವರೆಗೆ ಜಿಲ್ಲಾಧಿಕಾರಿಗಳಿಗೆ, 2 ಕೋಟಿವರೆಗೆ ಮುಜರಾಯಿ ಇಲಾಖೆ ಕಮಿಶನರ್ ಮತ್ತು 10 ಕೋಟಿವರೆಗೆ ಮುಜರಾಯಿ ಮಂತ್ರಿಗಳಿಗೆ ಅವಕಾಶವಿದೆ. ಅದಕ್ಕೂ ಹೆಚ್ಚಿನ ಅನುಮೋದನೆಗೆ ಸರ್ಕಾರದ ಕ್ಯಾಬಿನೇಟ್ ಗೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ದೇವಾಲಯದ ಹಣವನ್ನು ಖರ್ಚು ಮಾಡುವಾಗ ಟೆಂಡರ್ ಮೂಲಕವೇ ಮಾಡತಕ್ಕದ್ದು ಅಥವಾ ನಿರ್ಮಿತಿ ಕೇಂದ್ರ ಅಥವಾ ಇನ್ನಿತರ ಸರಕಾರದ ಸಂಸ್ಥೆಗಳಾದ 4ಜಿ ವಿನಾಯತಿ ಇರುವ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಬೇಕಾಗುತ್ತದೆ. ಅದಲ್ಲದೆ ಹಣವನ್ನು ಏಕ ಏಕಿ ಖರ್ಚು ಮಾಡಲು ಸಾಧ್ಯವಿಲ್ಲ. ಇನ್ನು ಮುಜರಾಯಿ ಇಲಾಖೆಗೆ ಸೇರಿದ 10% ಹಣವನ್ನು ಇನ್ನಿತರ ಸಣ್ಣ ಪುಟ್ಟ ದೇವಾಲಯದ ಅಭಿವೃದ್ಧಿ, ತಸ್ತಿಕ್ ಅಥವಾ ಇನ್ನಿತರ ಕಾರ್ಯಗಳಿಗೆ ಖರ್ಚು ಮಾಡುತ್ತಾರೆ.

ಪ್ರಸ್ತುತ ಸುಬ್ರಹ್ಮಣ್ಯದಲ್ಲಿ ದೇವಾಲಯದ ವತಿಯಿಂದ ಇಡೀ ಸುಬ್ರಹ್ಮಣ್ಯ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಉಚಿತವಾಗಿ ನೀಡುತ್ತದೆ, UGD ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ನಡೆಸಲಾಗಿದೆ. ಮುಖ್ಯ ರಸ್ತೆ ಹಾಗು ಅನೇಕ ಒಳ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲಾಗಿದೆ. ಬೀದಿ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಇದರ ತಿಂಗಳ ವೆಚ್ಚವನ್ನು ಬರಿಸಲಾಗುತ್ತಿದೆ. ಸ್ಥಳೀಯ ಕಡಬ ಮತ್ತು ಸುಳ್ಯದಂತಹ ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್, ಡಯಾಲಿಸಿಸ್ ಹಾಗು ಇನ್ನಿತರ ಉಪಕರಣಗಳನ್ನು ನೀಡಲಾಗಿದೆ. ಸ್ಥಳೀಯ ದೇವಾಲಯಗಳಿಗೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಪ್ರತಿ ವರ್ಷ ಮಾಡಿಕೊಡಲಾಗುತ್ತದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ
ಈ ತಿಂಗಳ ಅಂತ್ಯದೊಳಗೆ 6 ರಾಶಿಯವರಿಗೆ ಉತ್ತಮ ಶುಭ ಫಲ | ಕೆಲವು ವಿಧಿ ವಿಧಾನಗಳನ್ನು ಅನುಸರಿಸಿದರೆ ಯಶಸ್ಸು |
May 7, 2025
7:02 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ
May 7, 2025
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group