MIRROR FOCUS

#MirrorFocus | ಮಣಿಪುರದಲ್ಲಿ ಹಿಂಸಾಚಾರ ಏಕೆ ನಿಂತಿಲ್ಲ.. ? | 50 ದಿನಗಳ ಹಿಂಸಾಚಾರಕ್ಕೆ 100 ಕ್ಕೂ ಹೆಚ್ಚು ಜನರು ಬಲಿ…! |

Share

ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುವ ಊರುಗಳ ಸಾಲಿನಲ್ಲಿ ಮಣಿಪುರವೂ ಇದೆ. ಪುಟ್ಟ ರಾಜ್ಯವಾದರೂ ಸುಂದರ ಪರಿಸರದಿಂದ ಮನಸ್ಸಿಗೆ ಖುಷಿ ನೀಡುವ ಊರಾಗಿತ್ತು. ಇಂತಹ ನಾಡಲ್ಲಿ ಕಳೆದ 50 ದಿನಗಳಿಂದ ಹಿಂಸಾಚಾರ ನಡೆಯುತ್ತಿದೆ. ಜೂನ್ 21 ರ ಹೊತ್ತಿಗೆ, ಈ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಸುಮಾರು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 5000 ಮನೆಗಳು ನಾಶವಾಗಿವೆ. 60000 ಜನರು ನಿರಾಶ್ರಿತರಾಗಿದ್ದಾರೆ. 100 ಕ್ಕೂ ಹೆಚ್ಚು ಚರ್ಚ್‌ ಹಾಗೂ ದೇವಸ್ಥಾನಗಳಿಗೆ ಹಾನಿಯಾಗಿದೆ. ಏಕೆ ಹೀಗೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ ? ಸರ್ಕಾರ ಏಕೆ ನಿಯಂತ್ರಣ ಮಾಡುತ್ತಿಲ್ಲ… ?. ಇದೀಗ ಧಾರ್ಮಿಕ ಮುಖಂಡರು, ಆರ್‌ ಎಸ್‌ ಎಸ್‌ ಹಾಗೂ ರಾಜಕೀಯ ಪಕ್ಷಗಳು ಶಾಂತಿ ಕಾಪಾಡಲು ಮನವಿ ಮಾಡುತ್ತಲೇ ಇದ್ದಾರೆ.

ಪ್ರಶಾಂತವಾದ ಊರು ಮಣಿಪುರದಲ್ಲಿ  ಹಿಂಸಾಚಾರ ಆರಂಭವಾಗಿ 50 ಕ್ಕೂ ಹೆಚ್ಚು ದಿನಗಳು ಆದವು. ಆರಂಭದಲ್ಲಿ  ಮೀಸಲಾತಿಗೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ ತಿಂಗಳಲ್ಲಿ ಮಣಿಪುರದ ಬುಡಕಟ್ಟು ಜನಾಂಗ ‘ಕುಕಿ’ ಮತ್ತು ಮಣಿಪುರ ಪ್ರದೇಶದ ಕಣಿವೆಗಳಲ್ಲಿ ವಾಸಿಸುವ ಇನ್ನೊಂದು ಸಮುದಾಯ ‘ಮೇಟಿ’ಗಳ ನಡುವೆ ಆರಂಭವಾದ ಘರ್ಷಣೆ ಮುಂದುವರಿದಿದೆ.

ಕುಕಿ ಜನರು ಈಶಾನ್ಯ ಭಾರತದ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ಹಾಗೂ ನೆರೆಯ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳಲ್ಲಿ  ಹಲವಾರು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯ.

ಆಡಿಯೋ ರೂಪ:

ಮೇಟಿ ಎಂದು ಕರೆಯುವ  ಅಥವಾ ಮಣಿಪುರಿ ಜನರು ಅಥವಾ ಮೀಟೆಯಿ ಎಂದೂ ಕರೆಯಲ್ಪಡುವ ಜನರು ಈಶಾನ್ಯ ಭಾರತದಲ್ಲಿ ಮಣಿಪುರದ ಜನಾಂಗೀಯ ಗುಂಪುಗಳಲ್ಲಿ ಒಂದಾಗಿದೆ. ಅವರು ಮೀಟಿ ಭಾಷೆಯನ್ನು ಮಾತನಾಡುತ್ತಾರೆ. ಹೆಚ್ಚಾಗಿ ಕಣಿವೆ ಪ್ರದೇಶ ಪ್ರದೇಶಗಳಲ್ಲಿ ವಾಸಿಸುತ್ತಾರೆ.

ಈಗ ಮೇಟಿ ಸಮುದಾಯವನ್ನು  ಬುಡಕಟ್ಟು ಪಟ್ಟಿಗೆ ಸೇರಿಸಿದರೆ ಕುಕಿ ಬುಡಕಟ್ಟು ಸಮುದಾಯದ ಮೀಸಲಾತಿಯ ರದ್ದಾಗಬಹುದು, ಅವರು ವಾಸಿಸುವ ಗುಡ್ಡಗಾಡು ಪ್ರದೇಶಗಳಲ್ಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಅವರನ್ನು ಹೊರಹಾಕಬಹುದು ಎಂದು ಕುಕಿ ಬುಡಕಟ್ಟು ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ ಘರ್ಷಣೆ ಆರಂಭವಾಗಿ ಅದು ವ್ಯಾಪಕವಾಗಿದೆ. ಇಲ್ಲಿ,  ಅಕ್ರಮ ವಲಸಿಗರನ್ನು ಗುರುತಿಸುವ ಪ್ರಯತ್ನದ ಹೆಸರಿನಲ್ಲಿ ಮಣಿಪುರ ಸರ್ಕಾರವು ಭಾರತೀಯ ನಾಗರಿಕರಿಗೆ ಕಿರುಕುಳ ನೀಡುತ್ತಿದೆ ಎಂದು ಕುಕಿ ಗುಂಪುಗಳು ಆರೋಪಿಸಿವೆ. ಕುಕಿಗಳು ಮಣಿಪುರದ ಬೆಟ್ಟಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದಾರೆ ಮತ್ತು ಈಗ ಆಂಗ್ಲೋ-ಕುಕಿ ಯುದ್ಧ (1917-1919) ಎಂದು ಕರೆಯಲ್ಪಡುವ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಎಂದು ಅವರು ಹೇಳುತ್ತಾರೆ.

ಈ ಚರ್ಚೆ ಜೋರಾಗುತ್ತಿದ್ದಂತೆಯೇ, ಅಲ್ಲಿ ಮಣಿಪುರದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಅಲ್ಲಿನ ರಾಜ್ಯಪಾಲರು, ಕುಕಿಗಳಿಗೆ ಪ್ರತ್ಯೇಕ ಆಡಳಿತಕ್ಕಾಗಿ ಒತ್ತಾಯಿಸುತ್ತಿರುವ 10 ಶಾಸಕರಲ್ಲಿ ಒಬ್ಬರಾದ ಬುಡಕಟ್ಟು ವ್ಯವಹಾರಗಳು ಮತ್ತು ಗುಡ್ಡಗಾಡು ಅಭಿವೃದ್ಧಿ ಸಚಿವರ ನೇತೃತ್ವದ ಕ್ಯಾಬಿನೆಟ್ ಉಪಸಮಿತಿಯು ಸಮೀಕ್ಷೆಯನ್ನು ಮೇಲ್ವಿಚಾರಣೆ ಮಾಡಿದ್ದರು. ಅವರಲ್ಲಿ,  ಆಡಳಿತಾರೂಢ ಬಿಜೆಪಿ ಹಾಗೂ ಇತರರನ್ನೂ ನೇಮಕ ಮಾಡಿ ಮಣಿಪುರ ರಾಜ್ಯಪಾಲರು ಸಮಿತಿ ರಚನೆ ಮಾಡಿದ್ದರು. ಆ ಬಳಿಕ ಅಧ್ಯಯನ ನಡೆಸಲಾಗುತ್ತಿತ್ತು.

ಸಮಿತಿಯ ಅಧ್ಯಯನ ನಡೆಸಿ , ಜೂನ್ 6 ರಂದು ಸರ್ಕಾರಕ್ಕೆ ಸಲ್ಲಿಸಿದ ಸಮೀಕ್ಷಾ ವರದಿಯಲ್ಲಿ ಮ್ಯಾನ್ಮಾರ್‌ ಪ್ರಜೆಗಳೂ ಇಲ್ಲಿದ್ದಾರೆ, ಈ ಕಾರಣದಿಂದಲೂ ಇಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದು ಪರೋಕ್ಷವಾಗಿ ಉಲ್ಲೇಖ ಮಾಡಿತ್ತು. ಮ್ಯಾನ್ಮಾರ್‌ನಿಂದ 2,000 ಅಕ್ರಮ ವಲಸಿಗರು ನಾಲ್ಕು ಜಿಲ್ಲೆಗಳಲ್ಲಿ 41 ಸ್ಥಳಗಳಲ್ಲಿದ್ದಾರೆ ಎಂದು ಮಣಿಪುರ ಸರ್ಕಾರದ ಅಧಿಕೃತ ಸಮೀಕ್ಷೆ ಹೇಳಿದೆ. ಗಡಿಯಾಚೆಯಿಂದ ನುಸುಳುಕೋರರು ಮತ್ತು ಉಗ್ರಗಾಮಿಗಳು ರಾಜ್ಯದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದರು.

ಕಳೆದ 50 ದಿನಗಳ ಹಿಂಸಾಚಾರವೂ ಈ ಕಾರಣದಿಂದಲೇ ನಡೆಯುತ್ತಿದೆ, ರಾಜಕೀಯವೂ ಬೆರೆತುಕೊಂಡಿದೆ. ಹಿಂಸಚಾರ ವ್ಯಾಪಿಸಿಕೊಂಡಿದೆ. ವರದಿಗಳ ಪ್ರಕಾರ, ಇದುವರೆಗೆ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಲ್ಲದೆ, 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ, 60,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.  ಈ ನಡುವೆ  ಪಕ್ಷಗಳ ನಡುವೆ ನಡೆಯುತ್ತಿರುವ ಘರ್ಷಣೆ ಹಿಂಸಾಚಾರಕ್ಕೆ ತುಪ್ಪ ಸುರಿದಿದೆ.ಈ ಹಿಂಸಾಚಾರಾದಲ್ಲಿ ಮನೆಗಳು, ಚರ್ಚ್‌ಗಳು, ಶಾಲೆಗಳು, ದೇವಾಲಯಗಳು, ವಾಣಿಜ್ಯ ಸಂಕೀರ್ಣಗಳು, ಕೃಷಿ ಭೂಮಿಗಳಿಗೆ ಹಾನಿಯಾಗಿವೆ. ಕಳೆದ 50 ದಿನಗಳ ಘರ್ಷಣೆಯ ಕಾರಣದಿಂದ  ಉದ್ಯೋಗ, ಆರ್ಥಿಕತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ.

50 ದಿನಗಳ  ಎರಡು ಸಮುದಾಯಗಳ ನಡುವಿನ ಜಗಳ, ಹಿಂಸಾಚಾರವು  ಇದೀಗ ಧಾರ್ಮಿಕ ಗಲಭೆಯಾಗಿ ಮಾರ್ಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಮಣಿಪುರದಲ್ಲಿ ಮೀಟೆ,  ನಾಗಾಗಳು ಮತ್ತು ಕುಕಿಗಳ ಹೆಚ್ಚಿನ ಜನಸಂಖ್ಯೆಯಿದೆ. ಅವರೆಲ್ಲರೂ ಹಿಂದೆ ಒಂದಾಗಿದ್ದರು. ಅವರ ನಡುವೆ ಯಾವುದೇ ಸಂಘರ್ಷ ಇರಲಿಲ್ಲ. ಆದರೆ ಇತ್ತೀಚಿನ ಹಿಂಸಾಚಾರದ ಹಿಂದೆ ಒಂದು ಶಕ್ತಿ ಇದೆ. ಅದು ಈ ಸಮುದಾಯವನ್ನು ಧಾರ್ಮಿಕವಾಗಿ ಅಥವಾ ಜಾತಿವಾರು ಪ್ರೇರೇಪಿಸಿದೆ ಎಂದು ಮಣಿಪುರದ ರಾಜಕೀಯ ಮುಖಂಡ ಹೇಳುತ್ತಾರೆ.

ಬೆಟ್ಟಗಳಲ್ಲಿ ವಾಸಿಸುವ ಕುಕಿ ಬುಡಕಟ್ಟು ಜನರು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು. ಮೀಸಲಾತಿಯಲ್ಲಿ ರಿಯಾಯ್ತಿ ಪಡೆದವರು ಅವರೇ. ಕಣಿವೆಗಳಲ್ಲಿ ವಾಸಿಸುವ ಮೀಟೆಗಳಲ್ಲಿ ಕೆಲವರು ಪರಿಶಿಷ್ಟ ಪಂಗಡದವರು ಮತ್ತು ಇತರರು ಹಿಂದುಳಿದವರು. ಅವರು ಹೆಚ್ಚಾಗಿ ಹಿಂದೂ ಧರ್ಮದ ಅನುಯಾಯಿಗಳು. ಈ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಇದರ ವಿರುದ್ಧ ಕುಕಿ ಜನರು ಹೋರಾಟ ನಡೆಸುತ್ತಿದ್ದಾರೆ. ಇದು ಮೀಟೆ ಮತ್ತು ಕುಕಿ ಜನರ ನಡುವಿನ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಅಲ್ಲಿ ಹಿಂದೂ-ಕ್ರಿಶ್ಚಿಯನ್ ಧಾರ್ಮಿಕ ಸಂಘರ್ಷ ಭುಗಿಲೆದ್ದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಈ ನಡುವೆ ಮಣಿಪುರ ಸರ್ಕಾರದ ಡ್ರಗ್ಸ್ ವಿರುದ್ಧದ ಅಭಿಯಾನವು ರಾಜ್ಯದಲ್ಲಿ ಮ್ಯಾನ್ಮಾರ್ ಪ್ರಜೆಗಳು ನಡೆಸುತ್ತಿರುವ ಗಸಗಸೆ ಕೃಷಿ ಮತ್ತು ಮಾದಕ ವ್ಯಸನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಕಾರಣದಿಂದ ರಾಜಕೀಯವಾಗಿಯೂ ಮಣಿಪುರದಲ್ಲಿ ಇತ್ತೀಚಿನ ಹಿಂಸಾಚಾರವನ್ನು ಪ್ರಭಾವಿ ಅಕ್ರಮ ಗಸಗಸೆ ಬೆಳೆಗಾರರು ಮತ್ತು ಮ್ಯಾನ್ಮಾರ್‌ನ ಡ್ರಗ್ ಮಾಫಿಯಾಗಳೂ ಕೈಜೋಡಿಸಿವೆ ಎಂದು ವರದಿಗಳು ಹೇಳುತ್ತವೆ.

ಈ ಎಲ್ಲದರ ನಡುವೆಯೂ ರಾಜಕೀಯ ಪಕ್ಷಗಳು ಮೌನವಾಗಿದ್ದವು. ಇದೀಗ ಎಲ್ಲಾ ವಿಪಕ್ಷಗಳು ಧ್ವನಿ ಎತ್ತಲು ಆರಂಭಿಸಿವೆ. ಅಸ್ಸಾಂ ರೈಫಲ್ಸ್‌ ತಂಡವು ಇದೀಗ ಗಲಭೆ ನಿಯಂತ್ರಣಕ್ಕೆ ಇಳಿದಿದ್ದು, ಗುಂಡಿನ ಚಕಮಕಿಯೂ ನಡೆದಿದೆ.ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಗಲಭೆಕೋರರನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

(News Source)

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

16 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

16 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

16 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

16 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

23 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

24 hours ago