ಮಣ್ಣು(Soil) ಸಸ್ಯಗಳ(Plant) ಬೆಳವಣಿಗೆಗೆ ಅಗತ್ಯವಾಗಿದೆ. ಈ ಸಸ್ಯಗಳು ಜೀವಿಗಳಿಗೆ(living things) ಆಹಾರವನ್ನು(Food) ಒದಗಿಸುತ್ತವೆ. ನೈಸರ್ಗಿಕ ಪ್ರಕ್ರಿಯೆಗಳಿಂದ(natural processes) ಭೂಮಿಯ(Earth) ಮೇಲೆ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಗಿದೆ. ಆದರೆ ಮಾನವನ ನಿರ್ಲಕ್ಷ್ಯದಿಂದಾಗಿ(human neglect) ಈ ಮಣ್ಣು ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗಿದೆ. ಮಣ್ಣಿನ ಸವಕಳಿಯನ್ನು(soil erosion) ತಡೆದು, ಮಣ್ಣಿನ ಫಲವತ್ತತೆಯನ್ನು(soil fertility) ಕಾಪಾಡುವುದೇ ಮಣ್ಣಿನ ಸಂರಕ್ಷಣೆ(Soil conservation).
1. ಕಾಂಪೋಸ್ಟ್ ಎಲ್ಲಾ ಬಗೆಯ ಬೆಳೆ ಉಳಿಕೆಗಳು – ಹಸಿ ಮತ್ತು ಒಣಗಿದ ಹುಲ್ಲು – ಹಸಿ ಮತ್ತು ಒಣಗಿದ ಎಲೆಗಳು – ಬಳಸಿದ ತರಕಾರಿ – ಹಣ್ಣು – ಸೊಪ್ಪು ತ್ಯಾಜ್ಯಗಳು ಇವೆಲ್ಲವನ್ನೂ ಪರಿಪೂರ್ಣ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಬಹುದು. ಈ ಗೊಬ್ಬರ ಮಣ್ಣಿಗೆ ವೈವಿಧ್ಯ ಪೋಷಕಾಂಶಗಳನ್ನು ಪೂರೈಸುತ್ತದೆ. ಜೊತೆಗೆ ಮಣ್ಣಲ್ಲಿ ತೇವಾಂಶವನ್ನೂ ಸಹ ನಿರ್ವಹಿಸುತ್ತದೆ. ಈ ಬಗೆಯ ಕಾಂಪೋಸ್ಟ್ ಗೊಬ್ಬರಗಳನ್ನು ಕೊಳ್ಳಬಹುದು. ಹೆಚ್ಚು ಶ್ರಮವಿಲ್ಲದೆ ನಾವೇ ತಯಾರಿಸಬಹುದು. ಪರಿಪಕ್ವವಾಗಿ ತಯಾರಾಗಿರುವ ಕಾಂಪೋಸ್ಟ್ ಜೀವಾಣುಗಳನ್ನು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ.
2. ತಿಪ್ಪೆಗೊಬ್ಬರ ನಮ್ಮ ಹಿರಿಯರು ತಿಪ್ಪೆಗೊಬ್ಬರವನ್ನು “ಕಪ್ಪುಚಿನ್ನ” ಎಂದು ಕರೆಯುತ್ತಿದ್ದರು. ಇದೂ ಸಹ ಒಂದು ಅದ್ಭುತವಾದ ಗೊಬ್ಬರ. ಮಣ್ಣಲ್ಲಿ ತಿಪ್ಪೆಗೊಬ್ಬರ ಬೆರೆತಾಗ, ಮಣ್ಣು ಬಗೆಬಗೆಯ ಪೋಷಕಾಂಶಗಳಿಂದ ಸಮೃದ್ಧಗೊಳ್ಳುತ್ತದೆ. ಮಣ್ಣಿನ ಕಣಕಣಗಳು ಬೆರೆಯುತ್ತವೆ. ಮಣ್ಣಿನ ರಚನೆ ಸುಧಾರಿಸುತ್ತದೆ. ಹಾಗೆಯೇ ಮಣ್ಣಲ್ಲಿ ಜೀವಜಂತುಗಳ ಹರಿದಾಟ ದ್ವಿಗುಣಗೊಳ್ಳುತ್ತದೆ. ಕೋಳಿಗೊಬ್ಬರ – ದನಕರುಗಳ ಸಗಣಿ – ಮೇಕೆ – ಕುರಿಗಳ ಹಿಕ್ಕೆ ಇವೂ ಸಹ ಮಣ್ಣಿಗೆ ಅತ್ಯುತ್ತಮವಾದ ಗೊಬ್ಬರಗಳೇ.
3. ಮಣ್ಣು ಹೊದಿಕೆ (Mulch) ಮಣ್ಣು ಹೊದಿಕೆ ಮಾಡುವುದರಿಂದ ಮಣ್ಣಲ್ಲಿನ ತಾಪಮಾನ ಮತ್ತು ವಾತಾವರಣ ಏರುಪೇರಾಗದೆ ಒಂದೇ ರೀತಿಯಲ್ಲಿರುತ್ತದೆ. ಇದರಿಂದ ಮಣ್ಣುಲೋಕದ ಹವಾಮಾನ ಸುಸ್ಥಿತಿಯಲ್ಲಿರುತ್ತದೆ. ಇಂತಹ ವಾತಾವರಣವಿರುವ ಮಣ್ಣನ್ನು ಇಷ್ಟಪಡುವ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಈಗನ ಸಂದರ್ಭದಲ್ಲಿ ಮಣ್ಣು ಹೊದಿಕೆ ಕ್ರಮವನ್ನು ಅತ್ಯಗತ್ಯವಾಗಿ ಅಳವಡಿಸಿಕೊಳ್ಳಲೇಬೇಕು. ಏಕೆಂದರೆ ಮಣ್ಣ ಮೇಲೆ ಹೊದಿಕೆಯಿರುವ ಪರಿಣಾಮವಾಗಿ ಮಣ್ಣಲ್ಲಿನ ತೇವಾಂಶ ಸುಧಾರಿಸುತ್ತದೆ. ಮಣ್ಣಲ್ಲಿನ ತಾಪಮಾನ ಸಮಸ್ಥಿತಿಗೆ ಬರುತ್ತದೆ. ಇಂತಹ ಆಹ್ಲಾದಕರ ವಾತಾವರಣ ಮಣ್ಣಲ್ಲಿ ಸೃಷ್ಟಿಯಾದಾಗ, ಮಣ್ಣುಜೀವಾಣುಗಳಿಗೆ ಅಂತಹ ಮಣ್ಣು ಸ್ವರ್ಗವಿದ್ದಂತೆ.
4. ಹೊದಿಕೆ ಬೆಳೆಗಳು – ಬಹುಬೆಳೆಗಳು ಬಹುಬೆಳೆ ಪದ್ಧತಿಯ ದೊಡ್ಡ ಋಣಾತ್ಮಕ ಪರಿಣಾಮವೆಂದರೆ ಮಣ್ಣಿನ ಸವೆತ. ಮಣ್ಣನ್ನು ಸಂರಕ್ಷಿಸುವ ಕೆಲವು ವಿಧಾನಗಳೆಂದರೆ ಹೊದಿಕೆ ಬೆಳೆಗಳು, ಸ್ಟ್ರಿಪ್ ಕ್ರಾಪಿಂಗ್, ಬಾಹ್ಯರೇಖೆ ಸ್ಟ್ರಿಪ್ ಕ್ರಾಪಿಂಗ್, ಗಾಳಿ ವಿರಾಮಗಳು, ಹುಲ್ಲು ಜಲಮಾರ್ಗಗಳು, ಟೆರೇಸಿಂಗ್, ಬೆಳೆದ ಬೆಳೆಗಳ ಆಯ್ಕೆ ಮತ್ತು ಸಂರಕ್ಷಣೆ ಬೇಸಾಯವನ್ನು ಒಳಗೊಂಡಿವೆ. ಮಣ್ಣಿನ ಗುಣಗಳ ಮುಖ್ಯ ಅಂಶಗಳೆಂದರೆ ರಚನೆ, ವಿನ್ಯಾಸ, ತಾಪಮಾನ, ತೇವಾಂಶ, ಗಾಳಿ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ಒಳಗೊಂಡಿವೆ. ಸರಿಯಾದ ಮಣ್ಣಿನ ರಚನೆಯನ್ನು ನಿರ್ವಹಿಸಲು ಅವುಗಳನ್ನು ಪರಿಗಣಿಸುವುದು ಬಹಳ ಮುಖ್ಯ. ಮಣ್ಣಿನ ರಕ್ಷಣೆಗಾಗಿ ಹೊದಿಕೆ ಬೆಳೆಗಳು ಕೃಷಿ ಪರಿಸರ ವ್ಯವಸ್ಥೆಯಲ್ಲಿ ಬಹು ಕಾರ್ಯಗಳನ್ನು ನಿರ್ವಹಿಸುತ್ತವೆ. ಮಣ್ಣಿನ ಸವೆತವನ್ನು ತಡೆಗಟ್ಟುವ ಏಕೈಕ ಉದ್ದೇಶಕ್ಕಾಗಿ ಅವುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹೊದಿಕೆ ಬೆಳೆಗಳು ಮಣ್ಣಿನ ರಚನೆಯನ್ನು ಸುಧಾರಿಸುವ ಮೂಲಕ ಮತ್ತು ಒಳನುಸುಳುವಿಕೆಯನ್ನು ಹೆಚ್ಚಿಸುವ ಮೂಲಕ ಮಣ್ಣಿನ ನಷ್ಟವನ್ನು ಕಡಿಮೆ ಮಾಡುತ್ತದೆ.
ಗಮನಿಸಬೇಕಾದ ಅಂಶಗಳು: ಕಾಂಪೋಸ್ಟ್ ಕಳೆಗಿಡಗಳನ್ನು ನಿಯಂತ್ರಿಸುವುದಿಲ್ಲ. ಮಣ್ಣು ಹೊದಿಕೆ ವಿಧಾನದಿಂದ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಕಾಂಪೋಸ್ಟ್ ನಿಂದ ಮಣ್ಣು ಬಹುಬೇಗ ಫಲವತ್ತತೆ ಹೊಂದುತ್ತದೆ. ಹಸಿರೆಲೆ ಗೊಬ್ಬರ ಮಣ್ಣಲ್ಲಿ ನಿಧಾನವಾಗಿ ಬೆರೆಯುತ್ತದೆ ಹಾಗೂ ಮಣ್ಣಿಗೆ ತಾಕತ್ತು ಕೊಡುತ್ತದೆ. ಈ. ಮಣ್ಣು ಹೊದಿಕೆಯ ಮೇಲೆ ಗಂಜಲದ ನೀರನ್ನು ಸಿಂಪಡಿಸಿದ್ದಲ್ಲಿ, ಮಣ್ಣಿಗೆ ನಿಧಾನವಾಗಿ ಪೋಷಕಾಂಶಗಳನ್ನು ಸೇರಿಸುತ್ತದೆ.
ಮಾಹಿತಿ ಮೂಲ : ಡಿಜಿಟಲ್ ಮೀಡಿಯಾ
Soil is necessary for the growth of plants. These plants provide food for living things. It takes thousands of years for soil to form on Earth through natural processes. But due to human neglect, this soil has been degraded within a few years. Soil conservation is to prevent soil erosion and maintain soil fertility.