Arecanut Market | ಕಾಯಿರಿ, ಅಡಿಕೆ ಧಾರಣೆ ಸ್ಥಿರವಾಗುತ್ತದೆ…! | ಬರ್ಮಾ ಅಡಿಕೆಗೆ ಬೀಳಲಿ ಬ್ರೇಕ್..‌ | ಬೆಳೆಗಾರರೇ ಎಚ್ಚರ ವಹಿಸಿ…. |

October 17, 2023
12:29 PM
ಚಾಲಿ ಅಡಿಕೆ ಧಾರಣೆ ಇಳಿಕೆಯ ಹಾದಿಗೆ ತಾತ್ಕಾಲಿಕ ಬ್ರೇಕ್‌ ಸಿಕ್ಕಿದೆ. ಹೊಸ ಚಾಲಿ ಅಡಿಕೆ ಏರಿಕೆಯ ಲಕ್ಷಣದಲ್ಲಿದೆ. ಈಗ ಬೆಳೆಗಾರರೇ ಎಚ್ಚರ ವಹಿಸಿದರೆ ಮುಂದಿನ 15 ದಿನದಲ್ಲಿಅಡಿಕೆ ಧಾರಣೆ ಮತ್ತೆ ಏರಿಕೆಯಾಗುತ್ತದೆ.

ಅಡಿಕೆ ಧಾರಣೆ ಏರಿಕೆಯಾಗುತ್ತದಾ…?. ಈ ಪ್ರಶ್ನೆ ಅನೇಕ ಬೆಳೆಗಾರರಲ್ಲಿದೆ. ಕಾಯಿರಿ, ಈಗ ಅಡಿಕೆ ಧಾರಣೆ ಇಳಿಕೆಯ ವೇಳೆ ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಡಿ. ಬರ್ಮಾ ಸೇರಿದಂತೆ ಕಳಪೆ ಅಡಿಕೆ ಮಾರುಕಟ್ಟೆ ಪ್ರವೇಶವಾಗದಂತೆ ಬೆಳೆಗಾರರೇ ಎಚ್ಚರ ವಹಿಸಿ. ಅಡಿಕೆ ಧಾರಣೆ ಮುಂದಿನ 15 ದಿನದಲ್ಲಿ ಮತ್ತೆ ಏರಿಕೆಯಾಗುತ್ತದೆ. ಇದೀಗ ಕಳೆದ ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಮತ್ತೆ ಕುಸಿತವಾಗುವುದು ನಿಂತಿದೆ.

Advertisement
Advertisement

ಚಾಲಿ ಅಡಿಕೆ ಧಾರಣೆ ಇಳಿಕೆಯ ಹಾದಿಗೆ ತಾತ್ಕಾಲಿಕ ಬ್ರೇಕ್‌ ಸಿಕ್ಕಿದೆ. ಹೊಸ ಚಾಲಿ ಅಡಿಕೆ ಏರಿಕೆಯ ಲಕ್ಷಣದಲ್ಲಿದೆ. ಹಳೆ ಅಡಿಕೆ ಧಾರಣೆ ಸದ್ಯ ಸ್ಥಿರತೆಯಲ್ಲಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಹೊಸ ಅಡಿಕೆ 350-370 , ಹಳೆ ಅಡಿಕೆ 415-422 ಹಾಗೂ ಚೋಲ್‌ ಅಡಿಕೆ 455-462 ರೂಪಾಯಿಗೆ ಇದೆ.  ಕಳೆದ ಎರಡು ವಾರಗಳಿಂದ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿತ್ತು. ಇದೀಗ ಕಳೆದ ಎರಡು ದಿನಗಳಿಂದ ಸ್ಥಿರತೆಯ ಕಡೆಗೆ ಬಂದಿದೆ. ಧಾರಣೆ ಇಳಿಕೆಯ ಕಾರಣದಿಂದ ಅಡಿಕೆಯು ಮಾರುಕಟ್ಟೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಸಹಜವಾಗಿಯೇ ಮಾರುಕಟ್ಟೆ ಕುಸಿತವೂ ನಿಲುಗಡೆಯಾಗಿದೆ. ಇದೇ ಟ್ರೆಂಡ್‌ ಮುಂದುವರಿದರೆ ಮುಂದಿನ 15 ದಿನಗಳಲ್ಲಿ ಮತ್ತೆ ಚಾಲಿ ಅಡಿಕೆ ಧಾರಣೆ ಏರಿಕೆ ಕಾಣಬಹುದು.

ಈ ನಡುವೆ ಬರ್ಮಾ ಅಡಿಕೆ ಗ್ರಾಮೀಣ ಭಾಗದವರೆಗೂ ಬಂದಿದೆ ಎಂಬ ಮಾಹಿತಿ ಇದೆ.  ಹೀಗಾಗಿ ಈ ಅಡಿಕೆಯು ಇಲ್ಲಿನ ಅಡಿಕೆ ಜೊತೆ ಸೇರಿ ಕ್ಯಾಂಪ್ಕೋ ಸಹಿತ ಇತರ ಸಹಕಾರಿ ಸಂಸ್ಥೆಗಳ ಮೂಲಕ ಹಾಗೂ ಪ್ರಮುಖ ಖಾಸಗಿ ವ್ಯಾಪಾರಿಗಳಿಗೂ ಮಾರಾಟ ಮಾಡುವ ಕೆಲವೊಂದು ದಂಧೆಗಳೂ ಇರುವ ಬಗ್ಗೆ ಗುಮಾನಿ ಇದೆ. ಹೀಗಾಗಿ ಅಡಿಕೆ ಬೆಳೆಗಾರರು ಕೂಡಾ ಈಗ ಎಚ್ಚರಿಕೆ ವಹಿಸಿ, ಅಂತಹ ಪ್ರಕರಣಗಳ ಸಂದೇಹ ಇದ್ದರೆ ಪ್ರತಿಭಟಿಸಬೇಕಾದ ಅಗತ್ಯ ಇದೆ. ಧಾರಣೆ ಸ್ಥಿರೀಕರಣಹಾಗೂ ಅಡಿಕೆ ಮಾರುಕಟ್ಟೆ ಉಳಿಸುವ ನಿಟ್ಟಿನಲ್ಲಿ ಈಗ ಬೆಳೆಗಾರರ ಪಾತ್ರವೂ ಮುಖ್ಯವಾಗಿದೆ. ಧಾರಣೆ ಕುಸಿತದ ಕಾರಣದಿಂದ ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆ ಬಿಡದೇ ಇರುವುದು ಹಾಗೂ ಅಕ್ರಮಗಳ ಬಗ್ಗೆ ಗುಮಾನಿ ಇದ್ದರೆ ತಕ್ಷಣವೇ ಪ್ರತಿಭಟಿಸಬೇಕಾದ ಅಗತ್ಯವೂ ಇದೆ. ಹೀಗಾದರೆ ಮುಂದಿನ 15 ದಿನಗಳಲ್ಲಿ ಮತ್ತೆ ಅಡಿಕೆ ಮಾರುಕಟ್ಟೆ ಸ್ಥಿರತೆ ಕಂಡು ಏರಿಕೆ ಸಾಧ್ಯತೆ ಇದೆ. (ಅಡಿಕೆ ಧಾರಣೆ ಏನಾದೀತು ಎಂದು ರೂರಲ್‌ ಮಿರರ್‌ ಈ ತಿಂಗಳ ಆರಂಭದಲ್ಲಿ ಮಾಡಿರುವ ವರದಿ ಇಲ್ಲಿದೆ…)

Advertisement

ಈ ನಡುವೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಕೊಂಚ ಪ್ರಮಾಣದಲ್ಲಿ  ಕುಸಿತ ಕಂಡಿದೆ. 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಸ್ಥಿರತೆಯತ್ತ ಬಂದಿದೆ. ತುಮಕೂರಿನಲ್ಲಿ ಅಡಿಕೆ ಧಾರಣೆ 44,800 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ
July 28, 2025
10:30 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ
July 28, 2025
10:23 PM
by: ದ ರೂರಲ್ ಮಿರರ್.ಕಾಂ
ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ
July 28, 2025
8:34 PM
by: The Rural Mirror ಸುದ್ದಿಜಾಲ
ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು
July 28, 2025
8:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group