ಅಡಿಕೆ ಧಾರಣೆ ಏರಿಕೆಯಾಗುತ್ತದಾ…?. ಈ ಪ್ರಶ್ನೆ ಅನೇಕ ಬೆಳೆಗಾರರಲ್ಲಿದೆ. ಕಾಯಿರಿ, ಈಗ ಅಡಿಕೆ ಧಾರಣೆ ಇಳಿಕೆಯ ವೇಳೆ ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಡಿ. ಬರ್ಮಾ ಸೇರಿದಂತೆ ಕಳಪೆ ಅಡಿಕೆ ಮಾರುಕಟ್ಟೆ ಪ್ರವೇಶವಾಗದಂತೆ ಬೆಳೆಗಾರರೇ ಎಚ್ಚರ ವಹಿಸಿ. ಅಡಿಕೆ ಧಾರಣೆ ಮುಂದಿನ 15 ದಿನದಲ್ಲಿ ಮತ್ತೆ ಏರಿಕೆಯಾಗುತ್ತದೆ. ಇದೀಗ ಕಳೆದ ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಮತ್ತೆ ಕುಸಿತವಾಗುವುದು ನಿಂತಿದೆ.
ಚಾಲಿ ಅಡಿಕೆ ಧಾರಣೆ ಇಳಿಕೆಯ ಹಾದಿಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಹೊಸ ಚಾಲಿ ಅಡಿಕೆ ಏರಿಕೆಯ ಲಕ್ಷಣದಲ್ಲಿದೆ. ಹಳೆ ಅಡಿಕೆ ಧಾರಣೆ ಸದ್ಯ ಸ್ಥಿರತೆಯಲ್ಲಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಹೊಸ ಅಡಿಕೆ 350-370 , ಹಳೆ ಅಡಿಕೆ 415-422 ಹಾಗೂ ಚೋಲ್ ಅಡಿಕೆ 455-462 ರೂಪಾಯಿಗೆ ಇದೆ. ಕಳೆದ ಎರಡು ವಾರಗಳಿಂದ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿತ್ತು. ಇದೀಗ ಕಳೆದ ಎರಡು ದಿನಗಳಿಂದ ಸ್ಥಿರತೆಯ ಕಡೆಗೆ ಬಂದಿದೆ. ಧಾರಣೆ ಇಳಿಕೆಯ ಕಾರಣದಿಂದ ಅಡಿಕೆಯು ಮಾರುಕಟ್ಟೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಸಹಜವಾಗಿಯೇ ಮಾರುಕಟ್ಟೆ ಕುಸಿತವೂ ನಿಲುಗಡೆಯಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದಿನ 15 ದಿನಗಳಲ್ಲಿ ಮತ್ತೆ ಚಾಲಿ ಅಡಿಕೆ ಧಾರಣೆ ಏರಿಕೆ ಕಾಣಬಹುದು.
ಈ ನಡುವೆ ಬರ್ಮಾ ಅಡಿಕೆ ಗ್ರಾಮೀಣ ಭಾಗದವರೆಗೂ ಬಂದಿದೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಅಡಿಕೆಯು ಇಲ್ಲಿನ ಅಡಿಕೆ ಜೊತೆ ಸೇರಿ ಕ್ಯಾಂಪ್ಕೋ ಸಹಿತ ಇತರ ಸಹಕಾರಿ ಸಂಸ್ಥೆಗಳ ಮೂಲಕ ಹಾಗೂ ಪ್ರಮುಖ ಖಾಸಗಿ ವ್ಯಾಪಾರಿಗಳಿಗೂ ಮಾರಾಟ ಮಾಡುವ ಕೆಲವೊಂದು ದಂಧೆಗಳೂ ಇರುವ ಬಗ್ಗೆ ಗುಮಾನಿ ಇದೆ. ಹೀಗಾಗಿ ಅಡಿಕೆ ಬೆಳೆಗಾರರು ಕೂಡಾ ಈಗ ಎಚ್ಚರಿಕೆ ವಹಿಸಿ, ಅಂತಹ ಪ್ರಕರಣಗಳ ಸಂದೇಹ ಇದ್ದರೆ ಪ್ರತಿಭಟಿಸಬೇಕಾದ ಅಗತ್ಯ ಇದೆ. ಧಾರಣೆ ಸ್ಥಿರೀಕರಣಹಾಗೂ ಅಡಿಕೆ ಮಾರುಕಟ್ಟೆ ಉಳಿಸುವ ನಿಟ್ಟಿನಲ್ಲಿ ಈಗ ಬೆಳೆಗಾರರ ಪಾತ್ರವೂ ಮುಖ್ಯವಾಗಿದೆ. ಧಾರಣೆ ಕುಸಿತದ ಕಾರಣದಿಂದ ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆ ಬಿಡದೇ ಇರುವುದು ಹಾಗೂ ಅಕ್ರಮಗಳ ಬಗ್ಗೆ ಗುಮಾನಿ ಇದ್ದರೆ ತಕ್ಷಣವೇ ಪ್ರತಿಭಟಿಸಬೇಕಾದ ಅಗತ್ಯವೂ ಇದೆ. ಹೀಗಾದರೆ ಮುಂದಿನ 15 ದಿನಗಳಲ್ಲಿ ಮತ್ತೆ ಅಡಿಕೆ ಮಾರುಕಟ್ಟೆ ಸ್ಥಿರತೆ ಕಂಡು ಏರಿಕೆ ಸಾಧ್ಯತೆ ಇದೆ. (ಅಡಿಕೆ ಧಾರಣೆ ಏನಾದೀತು ಎಂದು ರೂರಲ್ ಮಿರರ್ ಈ ತಿಂಗಳ ಆರಂಭದಲ್ಲಿ ಮಾಡಿರುವ ವರದಿ ಇಲ್ಲಿದೆ…)
ಈ ನಡುವೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಕೊಂಚ ಪ್ರಮಾಣದಲ್ಲಿ ಕುಸಿತ ಕಂಡಿದೆ. 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಸ್ಥಿರತೆಯತ್ತ ಬಂದಿದೆ. ತುಮಕೂರಿನಲ್ಲಿ ಅಡಿಕೆ ಧಾರಣೆ 44,800 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…
ತೆಲಂಗಾಣ ಹಾಗೂ ಹೈದ್ರಾಬಾದ್ ಪ್ರದೇಶದಲ್ಲಿ ಹೀಟ್‌ವೇವ್ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…