ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಟೀಚರ್ ಗಳಿಗೆ ಸರಕಾರ ಗಣತಿ ಆದೇಶ ಹೊರಡಿಸಿದರೆ ಕನಸಲೆಲ್ಲ ದುಸ್ವಪ್ನಗಳೇ ಕಾಡುತ್ತವೆ. ಕಿಲೋಮೀಟರ್ ಗಟ್ಟಲೆ ನಡೆದರೆ ಕಾಡಿನ ಮಧ್ಯೆ, ರಬ್ಬರ್ ತೋಪುಗಳ ಮಧ್ಯೆ ಸಿಗುವ ಒಂಟಿ ಮನೆಗಳು, ಓಡಿಸಿಕೊಂಡು ಬರುವ ನಾಯಿಗಳು, network coverage ಇಲ್ಲದ ಜಾಗಗಳು, ಕಣ್ಣಲೇ ತಿನ್ನುವಂತೆ ನೋಡುವ ಒಂಟಿ ಕುಡುಕರು ಇರುವ ಮನೆಗಳು, ಅತೀ ಬುದ್ದಿವಂತ ಶ್ರೀಮಂತ ಮನೆಯವರ ತಾತ್ಸರದ ನೋಟಗಳು ಹಾಗೂ ಮಾಹಿತಿ ಕೇಳಿದರೆ ತಮ್ಮ ಅಸ್ತಿಯಲ್ಲಿ ಪಾಲು ಕೇಳಿದರೋ ಎಂಬಂತೆ ಆಡುವ ಧಣಿಗಳು.. ಒಂದು ಎರಡೇ….
ಒಂದೆರಡು ಕಹಿ ಅನುಭವದ ನಂತರ ನನ್ನವಳಿಗೆ ಗಣತಿಗೆ ಹೋಗಲು ನನ್ನ ಜೊತೆ ಬೇಕೇ ಬೇಕು. ಇದರಲ್ಲಿ ಆವಳಿಗೆ ಎರಡು ಲಾಭ. ಒಂದು driver ಆಯ್ತು, ಹಾಗೆಯೇ ಸೆಕ್ಯುರಿಟಿ ಕೂಡ. ಈಗ್ಗೆ ಕಳೆದ ಬೇಸಗೆ ರಜೆಯಲ್ಲಿ ಅವಳ ಜೊತೆ ಒಂದು ಸಮೀಕ್ಷೆ ಮುಗಿಸಿದ್ದೇನೆ. ನನ್ನ ಎಲ್ಲಾ ಕೃಷಿ ಚಟುವಟಿಕೆ ಬದಿಗಿಟ್ಟು, ಅಲೆದಾಟದ ಕೆಲಸ. ಈ ಕಹಿ ಅನುಭವಗಳ ನಂತರ ಹಲವು ಬಾರಿ ನನ್ನವಳಿಗೆ ನಾನು ಹೇಳಿದ್ದೇನೆ, Resignation ಕೊಡಬೇಡ, ಆ “ವಿದ್ಯಾವಂತ” ಮಂತ್ರಿಯ ಮುಸಿಡಿ ಮೇಲೆ ಎಸೆದು ಬಾ ಅಂತ. ಒಮ್ಮೆ ದೃಢ ನಿರ್ಧಾರ ಮಾಡಿದರೂ, ಮತ್ತೊಮ್ಮೆ ಈ ಕೆಲಸ ಪುಣ್ಯದ ಕೆಲಸ ಅಂತ ಹೇಳಿಕೊಂಡು ಮುಂದಡಿ ಇಡುವವಳು ನನ್ನವಳು.
ಈ ಬಾರಿ ಗಣತಿಯಂತು ಗೊಜಲುಮಯ. Technical glitch ಗಳಿಂದ ನನ್ನವಳಿಗೆ app enable ಆಗಾಲು ತಾರೀಕು 26 ಆಯಿತು. ಅಲ್ಲಿಯವರೆಗೆ doom scroolling. ವಾಟ್ಸಪ್ಪ್ ನಲ್ಲಿ ರಾಶಿ ರಾಶಿ message. ಅಧಿಕಾರಿಗಳ ಬೆದರಿಕೆಯ ಸಂದೇಶಗಳು, ಬೆಳಗ್ಗೆ 7 ಗಂಟೆಗೆ field ಗೆ ಹೋಗಿ, ರಾತ್ರಿ 8 ಗಂಟೆಯವರೆಗೆ ಹೋಗಿ ಎಂಬ ತಲೆ ಕೆಟ್ಟವರ ಆಜ್ಞೆಗಳು, ಅಷ್ಟು ಮಾಡಿ ಇಷ್ಟು ಮಾಡಿ.. ಇತ್ಯಾದಿ ಇತ್ಯಾದಿಗಳಿಗೆ ಗಳಿಗೆ ಇದಕ್ಕೆ ಆಜ್ಞೆ ಕೊಟ್ಟವರಿಗೆ/ಈ ಆಪ್ ಮಾಡಿದವರಿಗೆ, ಅವರ ಕುಟುಂಬಸ್ಥರಿಗೆಲ್ಲ ಶಾಪ ಹಾಕುವುದೊಂದೇ ನನ್ನವಳ ಚಾಳಿಯಾಯಿತು.
ನಿನ್ನೆ, ಅಂದರೆ 26ರಂದು ಸುಮಾರು 11am ಗಂಟೆಗೆ ಗಣತಿ ಕೆಲಸ field ನಲ್ಲಿ ಶುರು ಹಚ್ಚಿಕೊಂಡಳು. ಶುರು ಮಾಡಲು navigation ಆಪ್ ನಂಬಿಕೊಂಡು ಹೋದರೆ, ಅದರೆ ನೀಚ ಬುದ್ದಿ ತೋರಿಸಿತು. ಇದಾಗದು ಎಂದು ಗೂಡು ಅಂಗಡಿಯವರ ಎದುರು print ತೆಗೆದ master list ಕೊಟ್ರೆ ಎಲ್ಲೆಲ್ಲಿ ಯಾವ ಯಾವ ಮನೆಯಿದೆ ಎಂದು ತಲೆಯಲ್ಲಿ ನಿಲ್ಲದಷ್ಟು ಮಾಹಿತಿ ಕೊಟ್ಟರು. ಆ ಮಾಹಿತಿಯನ್ನು ಆಧರಿಸಿ ನಮ್ಮ ಕಾರ್ಯಕ್ರಮ ಶುರು ಮಾಡಿಕೊಂಡರೆ, server ತನ್ನ ಬುದ್ದಿ ತೋರಿಸಿತು. ಸುಮಾರು 4 ಗಂಟೆ ಆ ಮನೆಯಿಂದ ಈ ಮನೆ, ಈ ಮನೆಯಿಂದ ಆ ಮನೆಯೆಂದು ಅಲೆದರೂ, ಫಲಿತಾಂಶ ಮಾತ್ರ ಸೊನ್ನೆ. ಇನ್ನು ಈ ದಿನ ನನ್ನವಳ ವಟ ವಟ ಗ್ಯಾರಂಟಿ ಎಂದು ಮನೆಗೆ ಹಿಂತಿರುಗಿದೆ. 4 ಗಂಟೆಗೆ ಮನೆಗೆ ತಲುಪದಿದ್ದರೆ, ಹಾಲು ಇಳಿಸಿ ಕಾಯುತ್ತಿರುವ ದನದ ಒದೆ ಗ್ಯಾರಂಟೀ ಎಂಬದು ಖಾತರಿ ಇತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಈ ದಿನ ಬೆಳಗ್ಗೆ 27 ರಂದು ನನ್ನವಳು ಬೇಗ ಎಬ್ಬಿಸಿ, ಹಟ್ಟಿ ಕೆಲಸ ಮುಗಿಸಿ 7.30 ಗೆ ಹೊರಟರೆ ಒಳ್ಳೆ ಮಳೆ.. ಹೊಳೆ ತುಂಬಾ ನೀರು, ನನ್ನವಳು ಹೇಳಿದಳು ಗಣತಿದಾರರ ಜೀವನ ನೋಡಿ ಸೈನಿಕರ ಹಾಗೆ ಎಷ್ಟು ರಿಸ್ಕ್ ಅಂದಳು. ನಾನು ಹೇಳಿದೆ, ಸೈನಿಕರು ದೇಶಕ್ಕಾಗಿ ದುಡೀತಾರೆ, ಗಣತಿದಾರರು ರಾಜಕಾರಣದ ತೆವಲಿಗೆ ಬಲಿಪಶು ಅಷ್ಟೇ.. ನಿಟ್ಟುಸಿರು ಬಿಟ್ಟಳು.
ಇವತ್ತು ಗಣತಿದಾರರ list ನಲ್ಲಿ ಅಲ್ಲದೇ ಮಂಜೂರಾದ ಪ್ರದೇಶದ ಸುಟ್ಟುಮತ್ತಲಿನ ಎಲ್ಲಾ ಮನೆಗಳ ಗಣತಿ ಮಾಡಲು ಬಂದ ಆಜ್ಞೆಯ ಪ್ರಕಾರ, ಸಿಕ್ಕಿದ್ದೇ ಅವಕಾಶವೆಂದು ನನ್ನವಳು ಹುರುಪಿನಲ್ಲಿ ಶುರು ಮಾಡಿದ್ದೇ, ಏನಾಶ್ಚರ್ಯ 35 ನಿಮಿಷದಲ್ಲೇ ಬೋಣಿ ಆಯಿತು.. ಹಾಗೆಯೇ momentum ಉಳಿಸಿಕೊಳ್ಳಲು ನಾನು ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಎಲ್ಲರಿಗೂ ಬೇಕಾದ ತಯಾರಿಯ ಬಗ್ಗೆ ತಿಳಿಸಿ ನನ್ನವಳಿಂದ ಶಹಭಾಶ್ ಗಿರಿ ಗಿಟ್ಟಿಸಿಕೊಂಡೆ…
ನಮ್ಮನ್ನು ನೋಡಿ, ನಾವು ಗಣತಿಗೆ ಬಂದಿದ್ದೇವೆ ಎಂದು ಹೇಳಿದರೂ, ಕೆಲವು ಮನೆಗಳಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ನಮ್ಮಲ್ಲಿ ಹೇಳಿ, ಸರಕಾರದಿಂದ ಏನಾದರೂ ಪರಿಹಾರ ಸಿಗಬಹುದೇನೋ ಎಂಬ ನಿರೀಕ್ಷೆ ಇಟ್ಟು ಕೊಂಡದ್ದು ಮತ್ತು ಅವರಿಗೆ ಏನೂ ಪರಿಹಾರ ಕೊಡಲು ನಾವು ಶಕ್ತರಲ್ಲದು ಒಂದು ನಿರಾಸೆಯೇ ಸರಿ.. ಇದೆಲ್ಲದರ ಮಧ್ಯೆ ಇಲ್ಲೇ, ಇದೇ ಊರಲ್ಲಿ ಹುಟ್ಟಿ ಬೆಳೆದ ಕುಟುಂಬದಲ್ಲಿಯೂ ರೇಷನ್ ಕಾರ್ಡ್ ಇಲ್ಲದೇ ಇರುವುದು ಕಳೆದ ಬಾರಿಯಂತೆ ಈ ಬಾರಿಯು ನನ್ನನ್ನು ಅಚ್ಚರಿ ಗೊಳಿಸಿತು. ಬಹುಷಃ ಈ ದಿನ 10-15 ಮನೆಗಳ ಗಣತಿ ಮುಗಿಸುವ ಉಮೇದಿನಲ್ಲಿ ನನ್ನವಳಿದ್ದಾಳೆ.. ನೋಡೋಣ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…