ಅಡಿಕೆ ಮಾರುಕಟ್ಟೆಯಲ್ಲಿ ಏನಿದು “ಡಿಸೆಂಬರ್‌ ಡಿಪ್‌” ? | ಮಾರುಕಟ್ಟೆ ಚೇತರಿಕೆ ಯಾವಾಗ..? ಬೆಳೆಗಾರರು ಏನು ಮಾಡಬಹುದು..?

December 18, 2025
10:11 PM

ಅಡಿಕೆ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಕಂಡುಬರುವ ಈ ‘ಡಿಪ್’ ಅಥವಾ ಬೆಲೆ ಕುಸಿತವು ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸುತ್ತದೆ.  ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ (Single Chol) ಮತ್ತು ಡಬಲ್ ಚೋಲ್ (Double Chol) ಅಡಿಕೆ ದರಗಳು ಇಳಿಕೆಯಾಗಲು ಹಲವಾರು ಮಾರುಕಟ್ಟೆ ಮತ್ತು ಹವಾಮಾನದ ಕಾರಣಗಳಿವೆ. ಈ ಕುಸಿತವು ತಾತ್ಕಾಲಿಕವಾಗಿರುತ್ತದೆ. ನವೆಂಬರ್ ತಿಂಗಳಿನಲ್ಲಿ ಉತ್ತಮ ಏರಿಕೆ ಕಂಡಿದ್ದ ಅಡಿಕೆ ಧಾರಣೆ, ಡಿಸೆಂಬರ್ ತಿಂಗಳಿನಲ್ಲಿ ದಿಢೀರ್ ಇಳಿಮುಖವಾಗಲು ಪ್ರಮುಖವಾಗಿ ಮಾರುಕಟ್ಟೆಯ ಕೆಲವು ಆರ್ಥಿಕ ಮತ್ತು ಭೌತಿಕ ಕಾರಣಗಳು ಇವೆ. ಈ ಸಮಯದಲ್ಲಿ ಬೆಳೆಗಾರರು ಗಾಬರಿಯಾಗದೆ, ವ್ಯವಸ್ಥಿತವಾಗಿ ನಿರ್ಧಾರ ತೆಗೆದುಕೊಂಡರೆ ನಷ್ಟವನ್ನು ತಪ್ಪಿಸಬಹುದು, ಅಥವಾ ಮಾನಸಿಕವಾಗಿ ಮೊದಲೇ ಸಿದ್ಧರಾಗುವುದು ಕೂಡಾ ಅವಶ್ಯವಾಗಿದೆ.

ಪ್ರಮುಖವಾಗಿ ಈ ಕೆಳಗಿನ ಅಂಶಗಳು ದರ ಕುಸಿತಕ್ಕೆ ಕಾರಣವಾಗಿವೆ:

1. ಹೊಸ ಅಡಿಕೆಯ ಆವಕ (Arrival of New Stocks) :  ಸಾಮಾನ್ಯವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹೊಸ ಅಡಿಕೆ (Hosa Adike/Chali) ಮಾರುಕಟ್ಟೆಗೆ ಬರಲು ಪ್ರಾರಂಭವಾಗುತ್ತದೆ. ಮಾರುಕಟ್ಟೆಗೆ ಹೊಸ ಸರಕು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾದಾಗ, ಹಳೆಯ ದಾಸ್ತಾನುಗಳಾದ ಸಿಂಗಲ್ ಮತ್ತು ಡಬಲ್ ಚೋಲ್ ಅಡಿಕೆಗಳ ಬೇಡಿಕೆ ಮತ್ತು ಬೆಲೆಯ ಮೇಲೆ ಪ್ರಭಾವ ಬೀರುತ್ತದೆ.

2. ಉತ್ತರ ಭಾರತದ ಬೇಡಿಕೆಯಲ್ಲಿನ ಏರಿಳಿತ :  ಮಂಗಳೂರು ಭಾಗದ ಚಾಲಿ ಅಡಿಕೆಗೆ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಪಾನ್ ಮಸಾಲಾ ಕಂಪನಿಗಳಿಂದ ಹೆಚ್ಚಿನ ಬೇಡಿಕೆ ಇರುತ್ತದೆ. ಡಿಸೆಂಬರ್ ತಿಂಗಳಲ್ಲಿ ಚಳಿ ಹೆಚ್ಚಿರುವುದರಿಂದ ಅಥವಾ ಅಲ್ಲಿನ ಮಾರುಕಟ್ಟೆಯಲ್ಲಿನ ಸ್ಥಳೀಯ ಬದಲಾವಣೆಗಳಿಂದ ಬೇಡಿಕೆ ತಾತ್ಕಾಲಿಕವಾಗಿ ಕುಸಿಯಬಹುದು.

3. ಕಳ್ಳಸಾಗಣೆ ಮತ್ತು ಆಮದು (Illegal Import) : ಇತ್ತೀಚಿನ ವರದಿಗಳ ಪ್ರಕಾರ, ವಿದೇಶಗಳಿಂದ (ವಿಶೇಷವಾಗಿ ಭೂತಾನ್ ಮತ್ತು ಮ್ಯಾನ್ಮಾರ್) ಕಡಿಮೆ ದರಕ್ಕೆ ಅಡಿಕೆ ಅಕ್ರಮವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುವುದು ದೇಶೀಯ ಮಾರುಕಟ್ಟೆಯಲ್ಲಿ ದರ ಕುಸಿಯಲು ಪ್ರಮುಖ ಕಾರಣವಾಗಿದೆ. ಇದು ಸ್ಥಳೀಯ ಗುಣಮಟ್ಟದ ಚೋಲ್ ಅಡಿಕೆಗಳ ಬೆಲೆಯನ್ನು ಕೆಳಕ್ಕೆ ಇಳಿಸುತ್ತದೆ. ಸಾಮಾನ್ಯವಾಗಿ ಮಳೆಗಾಲದ ನಂತರ ಅಂದರೆ ನವೆಂಬರ್‌ ಆರಂಭದಿಂದ ಈ ಆಮದು ಅಥವಾ ಕಳ್ಳಸಾಗಾಣಿಕೆ ಹೆಚ್ಚಾಗಿರುತ್ತದೆ. …… ಮುಂದೆ ಓದಿ……

Advertisement

4. ಮಾರುಕಟ್ಟೆ ದಾಸ್ತಾನು (Stock Pile-up) :  ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಮತ್ತು ವರ್ತಕರು ಅಡಿಕೆಯನ್ನು (Stocking) ಸಂಗ್ರಹಿಸಿಡುತ್ತಾರೆ. ಹೀಗಾಗಿ ನವೆಂಬರ್‌ ನಂತರ ಮಾರುಕಟ್ಟೆಗೆ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದ ಹಳೆಯ ದಾಸ್ತಾನು ಬಿಡುಗಡೆಯಾಗುತ್ತಿರುವುದು ದರ ಕುಸಿತಕ್ಕೆ ದಾರಿಯಾಗಿದೆ. ಅಥವಾ ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಏರಿಳಿತವಾದಾಗ ಒಮ್ಮೆಲೇ ದಾಸ್ತಾನು ಖಾಲಿ ಮಾಡಲು ಬೆಳೆಗಾರರು ಹಾಗೂ ವರ್ತಕರು ಮುಗು ಬೀಳುತ್ತಾರೆ.

5. ಇಡೀ ವರ್ಷ ಸಂಸ್ಥೆಗಳಿಗೆ ಅಥವಾ ಮಾರುಕಟ್ಟೆ ಸ್ಥಿರತೆ ನೀಡುವ ಸಂಸ್ಥೆಗಳಿಗೆ ನಿಗದಿತ ಗುರಿಯಷ್ಟು ಅಡಿಕೆ ಬಾರದೇ ಇದ್ದರೆ, ಮಾರುಕಟ್ಟೆಯಲ್ಲಿ ಒಂಚೂರು ವ್ಯತ್ಯಾಸ ಮಾಡಿದರೆ ತಕ್ಷಣವೇ ದಾಸ್ತಾನು ತುಂಬಲು ಸಾಧ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಹಿಡಿತ ಸಾಧ್ಯವಾಗುತ್ತದೆ. ಹೀಗಾಗಿ ಡಿಸೆಂಬರ್‌ ಒಳಗೆ ನಿಗದಿತ ಪ್ರಮಾಣದ ದಾಸ್ತಾನು ಮಾಡಿ ನಂತರ ಹೊಸ ಅಡಿಕೆಯ ಖರೀದಿ ಜೋರಾಗುತ್ತದೆ.

6. ಸಗಟು ವ್ಯಾಪಾರಿಗಳ ‘ವೇಯ್ಟ್ ಅಂಡ್ ವಾಚ್’ ತಂತ್ರ : ​ಮಾರುಕಟ್ಟೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬರುತ್ತಿರುವುದನ್ನು ಕಂಡು, ದೊಡ್ಡ ಮಟ್ಟದ ವರ್ತಕರು ಮತ್ತು ಕಂಪನಿಗಳು ಬೆಲೆ ಇನ್ನೂ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಖರೀದಿ ಪ್ರಕ್ರಿಯೆಯನ್ನು ಸ್ವಲ್ಪ ನಿಧಾನಗೊಳಿಸುತ್ತಾರೆ. ಈ ಕೃತಕ ಬೇಡಿಕೆಯ ಕೊರತೆಯೂ ದರ ಇಳಿಕೆಗೆ ಕಾರಣವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಇಂತಹ ಧಾರಣೆ ಕುಸಿತದ ಸಮಯದಲ್ಲಿ ಬೆಳೆಗಾರರು ಗಾಬರಿಯಾಗದೆ, ವ್ಯವಸ್ಥಿತವಾಗಿ ನಿರ್ಧಾರ ತೆಗೆದುಕೊಂಡರೆ ನಷ್ಟವನ್ನು ತಪ್ಪಿಸಬಹುದು ಹಾಗೂ ಮಾರುಕಟ್ಟೆ ಸ್ಥಿರತೆಯನ್ನೂ ಮಾಡಬಹುದು. ಈ ಸಂದರ್ಭ ​ಬೆಳೆಗಾರರು ಅನುಸರಿಸಬೇಕಾದ ಪ್ರಮುಖ ಕ್ರಮಗಳು ಏನು..?

​1. ಗಾಬರಿ ಮಾರಾಟವನ್ನು ತಪ್ಪಿಸಿ (Avoid Panic Selling) :  ​ಮಾರುಕಟ್ಟೆಯಲ್ಲಿ ದರ ಇಳಿಕೆಯಾದಾಗ ಇನ್ನಷ್ಟು ಇಳಿಯಬಹುದು ಎಂಬ ಭಯದಿಂದ ರೈತರು ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆಗೆ ತರುತ್ತಾರೆ. ಇದರಿಂದ ಪೂರೈಕೆ ಹೆಚ್ಚಾಗಿ ಬೆಲೆ ಮತ್ತಷ್ಟು ಕುಸಿಯುತ್ತದೆ. ನಿಮಗೆ ತೀರಾ ಹಣದ ಅವಶ್ಯಕತೆ ಇಲ್ಲದಿದ್ದರೆ, ಜನವರಿ ಅಂತ್ಯದವರೆಗೆ ಕಾಯುವುದು ಉತ್ತಮ. …… ಮುಂದೆ ಓದಿ……

Advertisement

​2. ವೈಜ್ಞಾನಿಕ ದಾಸ್ತಾನು (Scientific Storage) :  ​ಅಡಿಕೆಯನ್ನು ಸರಿಯಾಗಿ ಒಣಗಿಸಿ (ತೇವಾಂಶ 10-11% ಕ್ಕಿಂತ ಕಡಿಮೆ ಇರುವಂತೆ) ಪ್ಲಾಸ್ಟಿಕ್ ಲೈನಿಂಗ್ ಇರುವ ಚೀಲಗಳಲ್ಲಿ ಸಂಗ್ರಹಿಸಿ.  ​ಅಡಿಕೆಗೆ ಶಿಲೀಂಧ್ರ (Fungus) ತಗುಲದಂತೆ ಗಾಳಿಯಾಡುವ ಮತ್ತು ತೇವಾಂಶವಿಲ್ಲದ ಜಾಗದಲ್ಲಿ ದಾಸ್ತಾನು ಮಾಡಿ. ​ಹಳೆಯ ಅಡಿಕೆ ಮತ್ತು ಹೊಸ ಅಡಿಕೆಯನ್ನು ಬೇರೆಬೇರೆಯಾಗಿ ಇರಿಸಿ.

​3. ಕ್ಯಾಂಪ್ಕೋ ದಾಸ್ತಾನು ಸೌಲಭ್ಯ ಬಳಸಿ :   ​ನಿಮಗೆ ತಕ್ಷಣ ಹಣದ ಅವಶ್ಯಕತೆ ಇದ್ದರೆ, ಅಡಿಕೆಯನ್ನು ಕಡಿಮೆ ದರಕ್ಕೆ ಮಾರುವ ಬದಲು ಕ್ಯಾಂಪ್ಕೋ (CAMPCO) ಅಥವಾ ಸಹಕಾರಿ ಸಂಘಗಳಲ್ಲಿ ದಾಸ್ತಾನು ಮಾಡಿ.  ​ಅಲ್ಲಿ ನಿಮ್ಮ ಅಡಿಕೆಯ ಮೇಲೆ ಶೇ. 60-70 ರಷ್ಟು ಮುಂಗಡ ಸಾಲ (Warehouse Loan) ಪಡೆಯಬಹುದು. ಇದರಿಂದ ನಿಮ್ಮ ತುರ್ತು ಅಗತ್ಯಗಳೂ ತೀರುತ್ತವೆ ಮತ್ತು ಬೆಲೆ ಏರಿಕೆಯಾದಾಗ ಅಡಿಕೆ ಮಾರಾಟ ಮಾಡುವ ಅವಕಾಶವೂ ಇರುತ್ತದೆ.

4. ಗುಣಮಟ್ಟಕ್ಕೆ ಆದ್ಯತೆ ನೀಡಿ : ​ಬೆಲೆ ಇಳಿಕೆಯ ಸಮಯದಲ್ಲಿ ವರ್ತಕರು ಗುಣಮಟ್ಟದ ನೆಪ ಹೇಳಿ ದರ ಕಡಿತ ಮಾಡುತ್ತಾರೆ. ​ನಿಮ್ಮ ಅಡಿಕೆಯನ್ನು ಚೆನ್ನಾಗಿ ಗ್ರೇಡಿಂಗ್ ಮಾಡಿ.​ಕಪ್ಪು ಅಡಿಕೆ, ಸಿಪ್ಪೆ ಅಡಿಕೆ ಮತ್ತು ಉತ್ತಮ ರಾಶಿಯನ್ನು ವಿಂಗಡಿಸಿ ಮಾರುಕಟ್ಟೆಗೆ ಒಯ್ಯಿರಿ. ಉತ್ತಮ ಗುಣಮಟ್ಟದ ಅಡಿಕೆಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಕನಿಷ್ಠ ಸ್ಥಿರ ದರ ಸಿಗುತ್ತದೆ.

​5. ಮಾರುಕಟ್ಟೆ ಮಾಹಿತಿಯ ಮೇಲೆ ಕಣ್ಣಿರಲಿ :  ​ಕೇವಲ ಸ್ಥಳೀಯ ವರ್ತಕರು ಹೇಳುವ ದರ ನಂಬಬೇಡಿ.  ​ಶಿವಮೊಗ್ಗ, ಸಿರಸಿ, ಮಂಗಳೂರು ಮತ್ತು ಚನ್ನಗಿರಿ ಮಾರುಕಟ್ಟೆಗಳ ದೈನಂದಿನ ದರಗಳನ್ನು ಗಮನಿಸಿ. ​ಉತ್ತರ ಭಾರತದ ಗುಟ್ಕಾ ಕಂಪನಿಗಳ ಬೇಡಿಕೆ ಮತ್ತು ಪೂರೈಕೆ ಬದಲಾವಣೆಯ ಸುದ್ದಿಗಳ ಬಗ್ಗೆ ಜಾಗೃತರಾಗಿರಿ. ಮಧ್ಯವರ್ತಿಗಳಿಂದ ಮೋಸ ಹೋಗದಂತೆ ಕ್ಯಾಂಪ್ಕೋದ ಅಧಿಕೃತ ದರ ಪಟ್ಟಿ ಅಥವಾ ಮೊಬೈಲ್ ಆಪ್ ಮೂಲಕ ದೈನಂದಿನ ಬೆಲೆಗಳನ್ನು ಪರಿಶೀಲಿಸಿ.

6. ಕ್ಯಾಂಪ್ಕೋ ನೇರ ಖರೀದಿ ವ್ಯವಸ್ಥೆಯ ಲಾಭ ಪಡೆಯಿರಿ : ಖಾಸಗಿ ವ್ಯಾಪಾರಿಗಳು ಕೃತಕವಾಗಿ ಬೆಲೆ ಇಳಿಸಲು ಪ್ರಯತ್ನಿಸಿದಾಗ, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಶಕ್ತಿಯಾಗಿ ಕೆಲಸ ಮಾಡುತ್ತದೆ. …… ಮುಂದೆ ಓದಿ……

Advertisement

7. ದೀರ್ಘಕಾಲೀನ ನಿರ್ವಹಣೆ: ಮಿಶ್ರ ಬೆಳೆ ಕೃಷಿ ಅಗತ್ಯ – ಅಡಿಕೆ ಬೆಲೆಯ ಮೇಲಿನ ಸಂಪೂರ್ಣ ಅವಲಂಬನೆಯನ್ನು ಕಡಿಮೆ ಮಾಡಲು ಕ್ಯಾಂಪ್ಕೋ ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡುತ್ತದೆ.  ಅಡಿಕೆ ತೋಟದಲ್ಲಿ ಕೋಕೋ (ಇದನ್ನು ಕೂಡ ಕ್ಯಾಂಪ್ಕೋ ಖರೀದಿಸುತ್ತದೆ), ಜಾಯಿಕಾಯಿ ಅಥವಾ ಮೆಣಸು ಬೆಳೆಯುವುದರಿಂದ ಉಪ ಆದಾಯ ಪಡೆಯಬಹುದು. ಡಿಸೆಂಬರ್‌ನಲ್ಲಿ ಅಡಿಕೆ ಬೆಲೆ ಕುಸಿದರೂ, ಈ ಇತರ ಬೆಳೆಗಳ ಆದಾಯವು ನಿಮ್ಮ ತೋಟದ ನಿರ್ವಹಣಾ ವೆಚ್ಚವನ್ನು ಸರಿದೂಗಿಸುತ್ತದೆ.

​ಸಂಕ್ಷಿಪ್ತವಾಗಿ: ಈಗಿನ ಇಳಿಕೆ ಕೇವಲ ‘ಆವಕ’ (Arrival) ಹೆಚ್ಚಾಗಿರುವುದರಿಂದ ಆಗಿರುವಂತದ್ದು. ಕೃಷಿ ಮಾರುಕಟ್ಟೆಯ ತಜ್ಞರ ಪ್ರಕಾರ, ಇದು ತಾತ್ಕಾಲಿಕ ಕುಸಿತವಾಗಿದ್ದು, ಸಂಕ್ರಾಂತಿ ಹಬ್ಬದ ನಂತರ ಅಥವಾ ಮಾರುಕಟ್ಟೆಗೆ ಆವಕ ಸ್ಥಿರಗೊಂಡ ಮೇಲೆ ಬೆಲೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅರುಣ್‌ ಕುಮಾರ್ ಕಾಂಚೋಡು

ಅರುಣ್‌ ಕುಮಾರ್‌ ಕಾಂಚೋಡು ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪದವೀಧರರು. ಸದ್ಯ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳಿಗೆ ಆದ್ಯತೆ ನೀಡುವ ಯುವ ಕೃಷಿಕ. Arun Kumar Kanchodu is an MSc graduate in Botany. He is currently engaged in farming. He is a young farmer who prefers scientific methods in farming.

ಇದನ್ನೂ ಓದಿ

ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ
ಮಾತೃ ವಂದನಾ ಯೋಜನೆ – ಗರ್ಭಿಣಿಯರಿಗೆ 6000 ಜಮೆ
January 6, 2026
10:10 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಪ್ರತ್ಯೇಕಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ
January 6, 2026
9:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror