ಈಗಾಗಲೇ ಭಾರತದ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಭಾರತವು ತನ್ನ ಅಂತಿಮ ಪ್ರಸ್ತಾಪವನ್ನು ಅಮೆರಿಕದ ಮುಂದಿಟ್ಟಿದೆ.
ರಷ್ಯನ್ ತೈಲವನ್ನು ಖರೀದಿಸುತ್ತಿರುವುದಕ್ಕೆ ಶಿಕ್ಷೆಯಾಗಿ ಭಾರತದ ಮೇಲೆ ಅಮೇರಿಕ ಶೇ.25ರಷ್ಟು ಹೆಚ್ಚು ಹಾಕುತ್ತಿದೆ. ಇದನ್ನು ತೆಗೆದುಹಾಕುವಂತೆ ಭಾರತವು ತನ್ನ ಟ್ರೇಡ್ ಡೀಲ್ ಪ್ರಸ್ತಾಪದಲ್ಲಿ ಕೋರಿಕೊಂಡಿದೆ. ದಂಡ ರೂಪದ ಶೇ.25 ಸುಂಕವೂ ಸೇರಿದಂತೆ ಒಟ್ಟು ಶೇ.50ರಷ್ಟು ಸುಂಕವನ್ನು ಅಮೇರಿಕ ಹಾಕುತ್ತಿದೆ. ಇದನ್ನು ಶೇ.15ಕ್ಕೆ ಇಳಿಸಬೇಕೆಂದು ಭಾರತ ಬೇಡಿಕೆ ಇರಿಸಿರುವುದು ತಿಳಿದುಬಂದಿದೆ.
ಇದರೊಂದಿಗೆ ಕೋಟ್ಯಂತರ ಭಾರತೀಯ ರೈತರನ್ನು ರಕ್ಷಿಸುವ ದೃಷ್ಟಿಯಿಂದ ಅಮೆರಿಕದ ಡೈರಿ ಉತ್ಪನ್ನಗಳ ಹಾಗೂ ಕುಲಾಂತರಿ ಬೆಳೆ ಉತ್ಪನ್ನಗಳು ಭಾರತಕ್ಕೆ ಬೇಡ ಎಂದು ಸರ್ಕಾರ ಗಟ್ಟಿ ನಿಲುವು ತೆಗೆದುಕೊಂಡಿದೆ. ಆದರೆ ಈ ಪ್ರಸ್ತಾಪಕ್ಕೆ ಅಮೇರಿಕದಿಂದ ಇನ್ನೂ ಪತ್ರಿಕ್ರಿಯೆ ಸಿಕ್ಕಿಲ್ಲ. ಎರಡೂ ದೇಶಗಳ ನಡುವೆ ಸುದೀರ್ಘ ಕಾಲದಿಂದ ಒಪ್ಪಂದಕ್ಕಾಗಿ ಮಾತುಕತೆಗಳು ನಡೆಯುತ್ತಿವೆಯಾದರೂ ಕೃಷಿ ಉತ್ಪನ್ನಗಳ ವಿಚಾರವು ಪ್ರಮುಖ ತೊಡಕಾಗಿದೆ. ಭಾರತ ಈಗ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ ಅಮೆರಿಕ ಮುಂದಿನ ನಡೆ ಏನು ಎಂಬುದು ನೋಡಬೇಕು.




