Advertisement
ಸುದ್ದಿಗಳು

ಭಾರತ ಹಾಗೂ ಅಮೇರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮ ಪ್ರಸ್ತಾಪವೇನು?

Share

ಈಗಾಗಲೇ ಭಾರತದ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಭಾರತವು ತನ್ನ ಅಂತಿಮ ಪ್ರಸ್ತಾಪವನ್ನು ಅಮೆರಿಕದ ಮುಂದಿಟ್ಟಿದೆ.
ರಷ್ಯನ್ ತೈಲವನ್ನು ಖರೀದಿಸುತ್ತಿರುವುದಕ್ಕೆ ಶಿಕ್ಷೆಯಾಗಿ ಭಾರತದ ಮೇಲೆ ಅಮೇರಿಕ ಶೇ.25ರಷ್ಟು ಹೆಚ್ಚು ಹಾಕುತ್ತಿದೆ. ಇದನ್ನು ತೆಗೆದುಹಾಕುವಂತೆ ಭಾರತವು ತನ್ನ ಟ್ರೇಡ್ ಡೀಲ್ ಪ್ರಸ್ತಾಪದಲ್ಲಿ ಕೋರಿಕೊಂಡಿದೆ. ದಂಡ ರೂಪದ ಶೇ.25 ಸುಂಕವೂ ಸೇರಿದಂತೆ ಒಟ್ಟು ಶೇ.50ರಷ್ಟು ಸುಂಕವನ್ನು ಅಮೇರಿಕ ಹಾಕುತ್ತಿದೆ. ಇದನ್ನು ಶೇ.15ಕ್ಕೆ ಇಳಿಸಬೇಕೆಂದು ಭಾರತ ಬೇಡಿಕೆ ಇರಿಸಿರುವುದು ತಿಳಿದುಬಂದಿದೆ.

ಇದರೊಂದಿಗೆ ಕೋಟ್ಯಂತರ ಭಾರತೀಯ ರೈತರನ್ನು ರಕ್ಷಿಸುವ ದೃಷ್ಟಿಯಿಂದ ಅಮೆರಿಕದ ಡೈರಿ ಉತ್ಪನ್ನಗಳ ಹಾಗೂ ಕುಲಾಂತರಿ ಬೆಳೆ ಉತ್ಪನ್ನಗಳು ಭಾರತಕ್ಕೆ ಬೇಡ ಎಂದು ಸರ್ಕಾರ ಗಟ್ಟಿ ನಿಲುವು ತೆಗೆದುಕೊಂಡಿದೆ. ಆದರೆ ಈ ಪ್ರಸ್ತಾಪಕ್ಕೆ ಅಮೇರಿಕದಿಂದ ಇನ್ನೂ ಪತ್ರಿಕ್ರಿಯೆ ಸಿಕ್ಕಿಲ್ಲ.  ಎರಡೂ ದೇಶಗಳ ನಡುವೆ ಸುದೀರ್ಘ ಕಾಲದಿಂದ ಒಪ್ಪಂದಕ್ಕಾಗಿ ಮಾತುಕತೆಗಳು ನಡೆಯುತ್ತಿವೆಯಾದರೂ ಕೃಷಿ ಉತ್ಪನ್ನಗಳ ವಿಚಾರವು ಪ್ರಮುಖ ತೊಡಕಾಗಿದೆ. ಭಾರತ ಈಗ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ ಅಮೆರಿಕ ಮುಂದಿನ ನಡೆ ಏನು ಎಂಬುದು ನೋಡಬೇಕು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

5 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

5 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

5 hours ago

ಹವಾಮಾನ ವರದಿ | 10-10-2026 | ರಾಜ್ಯದಲ್ಲಿ ಇಂದಿನಿಂದ ಮಳೆ ಇಳಿಕೆ ; ಅ.16ರಿಂದ ಹಿಂಗಾರು ಮಳೆ ಆರಂಭದ ಮುನ್ಸೂಚನೆ

ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…

8 hours ago

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

1 day ago