ನಮ್ಮಲ್ಲಿ ಅಡಿಕೆಯ ಕೃಷಿಯನ್ನು ಅನಾದಿ ಕಾಲದಿಂದಲೇ ನಮ್ಮ ಪೂರ್ವಜರು ಕೈಗೊಳ್ಳುತ್ತಾ ಬಂದಿದ್ದು, ಇದು ಇಂದು ಒಂದು ವ್ಯವಸ್ಥಿತ ರೀತಿಯ ಕೃಷಿಯಾಗಿ ಮಾರ್ಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಇದರ ಕೃಷಿ ವ್ಯಾಪಕವಾಗಿ ವಿಸ್ತರಿಸುತ್ತಿದೆ.ಇದಕ್ಕೆ ಮುಖ್ಯ ಕಾರಣ ಇದರ ಬೆಲೆಯಲ್ಲಿ ಕಂಡು ಬರುತ್ತಿರುವ ಆಕರ್ಷಣೆ.
ನಮ್ಮಲ್ಲಿ ಇಂದು ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಇದೊಂದು ಪ್ರಮುಖ ಬೆಳೆಯಾಗಿದ್ದು, ಇವುಗಳೊಂದಿಗೆ ಮೇಘಾಲಯ, ತಮಿಳುನಾಡು, ಪಶ್ಚಿಮ ಬಂಗಾಳ, ಮಿಜೋರಾಂ, ಮಹಾರಾಷ್ಟ್ರ, ಆಂಧ್ರಪ್ರದೇಶ, ತ್ರಿಪುರ, ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ, ಗೋವಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬೆಳೆಸಲಾಗುತ್ತಿದೆ.
ರಾಜ್ಯವಾರು ಅಡಿಕೆ ಕೃಷಿ ಹೀಗಿದೆ :
1. ಕರ್ನಾಟಕ : ಇಲ್ಲಿ ಅಡಿಕೆ ಕೃಷಿ ವ್ಯಾಪಕವಾಗಿ ವಿಸ್ತರಿಸುತ್ತಿದೆ.ರಾಜ್ಯದ 28 ಜಿಲ್ಲೆಗಳಲ್ಲಿ ಇದು ಇದ್ದು , ಇಲ್ಲಿನ ವಿಸ್ತರಣೆಯ ವೇಗ ಇಡೀ ದೇಶದ ಅಡಿಕೆ ಕೃಷಿಯ ದೃಷ್ಟಿಯಿಂದ ಅತೀ ಹೆಚ್ಚು ಆಗಿದೆ. 2015 ರ ಸಮಯದಲ್ಲಿ ಕರ್ನಾಟಕದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಸುಮಾರು 2,75,504 ಹೆಕ್ಟೇರ್ ಆಗಿದ್ದರೆ ಈಗ ಇದು ಸುಮಾರು 8 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ. ಉತ್ಪಾದನೆ ದೃಷ್ಟಿಯಿಂದ ನೋಡುವುದಾದರೆ ಇದೇ ಅವಧಿಯಲ್ಲಿ ಅದು ಸುಮಾರು 4.3 ಲಕ್ಷ ಟನ್ ಗಳಿಂದ ಹತ್ತಿರ ಹತ್ತಿರ 12 ಲಕ್ಷ ಟನ್ ಆಗಿದೆ. ಈ ರೀತಿಯಾದ ವಿಸ್ತರಣೆ ಮತ್ತು ಉತ್ಪಾದನೆಗೆ ಮುಖ್ಯ ಕಾರಣ ಅಡಿಕೆಗೆ ಇಂದು ದೊರಕುತ್ತಿರುವ ಹೆಚ್ಚಿನ ಧಾರಣೆ ಮತ್ತು ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚುತ್ತಿರುವ ವೆಚ್ಚ.
ಜಿಲ್ಲೆಗಳಲ್ಲಿ ಅಡಿಕೆ ಕೃಷಿ :
ಇನ್ನುಳಿದಂತೆ ಇದರ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ವೇಗವಾದ ಬೆಳವಣಿಗೆಯನ್ನು ತೋರಿಸುತ್ತಿರುವ ಜಿಲ್ಲೆಗಳು ಕ್ರಮವಾಗಿ ಚಿತ್ರದುರ್ಗ, ಕೊಡಗು, ಉಡುಪಿ,ಹಾವೇರಿ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ,ಮಂಡ್ಯ, ವಿಜಯನಗರ, ರಾಮನಗರ,ಚಾಮರಾಜನಗರ, ಬೆಂಗಳೂರು ಪಟ್ಟಣ, ಚಿಕ್ಕಬಳ್ಳಾಪುರ, ಧಾರವಾಡ, ಬಳ್ಳಾರಿ, ಬೆಳಗಾವಿ ಇತ್ಯಾದಿಗಳಿವೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲಾ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಗರಿಷ್ಟ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ.
ಮೇಲೆ ತಿಳಿಸಿದ ಅಂಕಿ ಅಂಶಗಳು ಮತ್ತು ಬೆಳವಣಿಗೆಯ ಗತಿ ದೇಶ ಮಾತ್ರವಲ್ಲದೆ ಅಡಿಕೆ ಬೆಳೆಯುವ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ ಕರ್ನಾಟಕದ್ದು ಅತೀ ವೇಗದ್ಧಾಗಿದೆ. ಒಟ್ಟಾರೆಯಾಗಿ ಕರ್ನಾಟಕ ಇಂದು ದೇಶದ ಒಟ್ಟು ಉತ್ಪಾದನೆಯ ಶೇಕಡಾ 75 ರಷ್ಟು ಉತ್ಪಾದನೆ ಮಾಡುತ್ತಿದೆ.
2. ಕೇರಳ : ಇಲ್ಲಿನ 14 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ಆಗುತ್ತಿದ್ದು, ವಿಸ್ತೀರ್ಣ ಮತ್ತು ಉತ್ಪಾದನೆ ದೃಷ್ಟಿಯಿಂದ ಕ್ರಮವಾಗಿ ಕಾಸರಗೋಡು, ಮಲಪ್ಪುರಂ, ವಯನಾಡ್,ಕೊಝಿಕ್ಕೋಡ್,ಪಾಲಕ್ಕಾಡ್, ಕಣ್ಣೂರು ಇತ್ಯಾದಿ ಜಿಲ್ಲೆಗಳಿವೆ.ಇವುಗಳ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಾಗುತ್ತಿದೆ.ಕೇರಳದಲ್ಲಿ ಒಟ್ಟಾಗಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ಆಗುತ್ತಿದ್ದು,ಉತ್ಪಾದನೆ ಸುಮಾರು ಒಂದು ಲಕ್ಷ ಟನ್ ಆಗಿದೆ.
3.ಅಸ್ಸಾಂ : ಈ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಅಡಿಕೆ ವ್ಯವಸಾಯ ಆಗುತ್ತಿದ್ದರೂ ಕಮರೂಪ್ ಮತ್ತು ಶಿಭಾಸಾಗರ್ ಜಿಲ್ಲೆಗಳಲ್ಲಿ ಇದು ಅಧಿಕ ಆಗಿದೆ. ಅಸ್ಸಾಂನಲ್ಲಿ ಇದರ ವಿಸ್ತೀರ್ಣ ಸುಮಾರು 68 ಸಾವಿರ ಹೆಕ್ಟೇರ್ ಆಗಿದ್ದು ಉತ್ಪಾದನೆ ಸುಮಾರು 51 ಸಾವಿರ ಟನ್ ಆಗಿದೆ.
4. ಮೇಘಾಲಯ : ಈ ರಾಜ್ಯದಲ್ಲಿ ಇದರ ವಿಸ್ತೀರ್ಣ ಸುಮಾರು 19000 ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದ್ದು, ಉತ್ಪಾದನೆ ಸುಮಾರು 25,000 ಟನ್ ಆಗಿದೆ.
5. ಮಿಜೋರಾಂ : ಇಲ್ಲಿ ಅಡಿಕೆಯನ್ನು 13,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿ ಸುಮಾರು 10,000 ಟನ್ ಉತ್ಪಾದಿಸಲಾಗುತ್ತಿದೆ.
ಇನ್ನುಳಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಸುಮಾರು 24,000 ಟನ್, ತ್ರಿಪುರಾದಲ್ಲಿ 16000 ಟನ್,ಪಶ್ಚಿಮ ಬಂಗಾಳದಲ್ಲಿ 20,000 ಟನ್ ಪಾಂಡಿಚೇರಿ 11,000 ಟನ್ ಮತ್ತು ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳಲ್ಲಿ ತಲಾ 4,000 ಟನ್ ಉತ್ಪಾದನೆ ಆಗುತ್ತಿದೆ. ಒಟ್ಟಾರೆಯಾಗಿ ದೇಶದಲ್ಲಿ ಇಂದು ಸುಮಾರು ಎಂಟು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ಆಗುತ್ತಿದ್ದು,ಇದರಿಂದಾಗಿ ಸುಮಾರು ಹದಿನಾರು ಲಕ್ಷ ಟನ್ ಅಡಿಕೆ ಉತ್ಪಾದನೆ ಆಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರ ಬೆಳವಣಿಗೆ ನಿರೀಕ್ಷೆಗಿಂತ ವೇಗವಾಗಿ ಕಂಡು ಬರುತ್ತಿದ್ದು,ಮುಂದೆ ಇದು ಇನ್ನಷ್ಟು ವೇಗವಾಗಿ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಭಾರತದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಾದಂತೆ ಇದಕ್ಕಿರುವ ಬೇಡಿಕೆ ಕೂಡಾ ಹೆಚ್ಚಾಗುತ್ತಾ ಹೋಗಿದೆ.ಆಂತರಿಕ ಪೂರೈಕೆ ಸಾಕಾಗದ ಕಾರಣ ಆಮದು ಆಗುತ್ತಿದೆ.ಹೀಗಿದ್ದಲ್ಲಿ ಈಗ ಆಗುತ್ತಿರುವ ವಿಸ್ತರಣೆ ಭವಿಷ್ಯದ ದೃಷ್ಟಿಯಿಂದ ಪೂರಕವೋ ಅಲ್ಲ ಮಾರಕವೋ ಎಂಬ ಪ್ರಶ್ನೆ ಮೂಡುವುದು ಸಹಜ. 1970 ರ ದಶಕದಿಂದ ಹಿಡಿದು ಈ ತನಕ ಇಲಾಖೆಗಳು,ಸರಕಾರಗಳು,ಹಿರಿಯರು ಹೇಳುತ್ತಾ ಬಂದದ್ದು ವಿಸ್ತರಣೆ ಸಾಕು ಎಂಬುದಾಗಿ.ಈ ಮಾತುಗಳು ಯಾಕಾಗಿ ಕೇಳಿ ಬಂದವು ಮತ್ತು ಬರುತ್ತಿವೆ ಎಂಬ ಬಗ್ಗೆ ನೋಡುವುದಾದರೆ….
ಭಾರತದಲ್ಲಿ ಯಾವುದೇ ಉತ್ಪನ್ನಗಳನ್ನು ನಿಷೇಧ ಮಾಡುವುದು ಅಷ್ಟು ಸುಲಭವಲ್ಲ.ಈ ಮೊದಲು ಗುಟ್ಕವನ್ನು ಒಮ್ಮೆ ನಿಷೇಧ ಮಾಡಿದ್ದಾಗ ಅದು ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂತು. ಇಂತಹ ಉತ್ಪನ್ನಗಳ ಮಾರಾಟಗಾರರು ಯಾವತ್ತೂ ಬದಲೀ ಉತ್ಪನ್ನಗಳ ತಯಾರಿಗೆ ಸಾಕಷ್ಟು ಸಂಶೋಧನೆ ಮಾಡಿಯೇ ಇರುತ್ತಾರೆ. ಪ್ರಕೃತಿ,ಹವಾಮಾನ ಇವೆಲ್ಲಾ ಉತ್ಪಾದನೆಯ ಏರುಪೇರು ನಿರ್ಧರಿಸುತ್ತವೆ.ಹೀಗಿದ್ದರೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಉತ್ಪಾದನೆ ಹೆಚ್ಚಾಗಿ ಧಾರಣೆ ಕುಸಿಯಬಹುದು ಎಂಬ ಪ್ರಶ್ನೆ ಬೆಳೆಗಾರರಲ್ಲಿ ಕಾಡುವುದು ಸಹಜ.ಇದರೊಂದಿಗೆ ಸರಕಾರದ ಆಂತರಿಕ ಮತ್ತು ಬಾಹ್ಯ ನೀತಿಗಳು ಅಡಿಕೆ ಬೆಳೆಯ ದೃಷ್ಟಿಯಿಂದ ಪೂರಕ ಆಗಿರದ ಕಾರಣ, ಜೀವನೋಪಾಯಕ್ಕಾಗಿ ಅನಾದಿಕಾಲದಿಂದ ಇದನ್ನೇ ಅವಲಂಬಿಸಿರುವ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಲ್ಲಿ ಆತಂಕ ಮೂಡುವುದು ಸರ್ವೇ ಸಾಮಾನ್ಯ ಸಂಗತಿ ಆಗಿದೆ.
Currently, arecanut is a significant agricultural commodity in the states of Karnataka, Kerala, and Assam, and it is also cultivated in Meghalaya, Tamil Nadu, West Bengal, Mizoram, Maharashtra, Andhra Pradesh, Tripura, Pondicherry, the Andaman and Nicobar Islands, Goa, and Nagaland. What is the anticipated future production of arecanut in India, and what prospects does arecanut cultivation hold?
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…