ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

May 18, 2024
12:28 PM

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ(Richest man). ಹಾಗೆ ಮುಕೇಶ್ ಅಂಬಾನಿ, ವಿಶ್ವದ ಅಗ್ರ ಧನಿಕರ ಪಟ್ಟಿಯಲ್ಲಿ 11ನೇ ಶ್ರೀಮಂತ ವ್ಯಕ್ತಿ ಕೂಡ ಹೌದು. ಬಿಡುಗಡೆಯಾದ ವರದಿವೊಂದರ ಪ್ರಕಾರ 106 ಬಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು ರೂ. 9,15,405 ಕೋಟಿ) ಸಂಪತ್ತು ಹೊಂದಿರುವ ಅಂಬಾನಿ, ದಿನವೊಂದರ ಗಳಿಕೆ ಎಷ್ಟು ಗೊತ್ತಾ?

Advertisement
Advertisement

ಗಂಟೆಗೆ 90 ಕೋಟಿ ರೂ. ಗಳಿಕೆ..!: 2020ರಲ್ಲಿ IIFL ವೆಲ್ತ್ ಹುರುನ್ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ಪ್ರಕಾರ ಮುಖೇಶ್ ಅಂಬಾನಿ ಅವರ ಪ್ರತಿ ಗಂಟೆಯ ಗಳಿಕೆ ಸರಿಸುಮಾರು 90 ಕೋಟಿ ರೂ. ಅಂತೆ. ಆಕ್ಸ್‌ ಫ್ಯಾಮ್ ವರದಿ ಕೂಡ ಇದೇ ಅಂಕಿ – ಅಂಶವನ್ನು ಉಲ್ಲೇಖಿಸಿದೆ. ಲಾಕ್​ಡೌನ್​ ಹಾಗೂ ಕೊರೊನಾದಂತಹ ಸಂದಿಗ್ಧ ಸಮಯದಲ್ಲೂ ಇದೇ ರೀತಿಯ ಆರ್ಥಿಕ ಸ್ಥಿತಿಗತಿ ಹೊಂದಿದ್ದರು ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ಮತ್ತೊಂದು ವರದಿ ಪ್ರಕಾರ ದೇಶದ ಶೇ.24 ರಷ್ಟು ಜನರ ತಿಂಗಳ ಗಳಿಕೆ ಕೇವಲ 3000 ರೂ. ಮಾತ್ರವಂತೆ!.

Advertisement

ನಾವು ಸಹ ಗಳಿಸಬಹುದೇ?: ಅಂಕಿ – ಅಂಶಗಳ ಪ್ರಕಾರ, ಒಂದು ಗಂಟೆಯಲ್ಲಿ ಅಂಬಾನಿ ಗಳಿಸುವಷ್ಟು ಹಣವನ್ನು ಗಳಿಸಲು ಒಬ್ಬ ಸರಾಸರಿ ಭಾರತೀಯನಿಗೆ ಕನಿಷ್ಠ 17.4 ಮಿಲಿಯನ್ ವರ್ಷಗಳು ಬೇಕಂತೆ!. ವಿವರಿಸಿ ಹೇಳುವುದಾದರೆ, ವಾರ್ಷಿಕ 4 ಲಕ್ಷ ರೂ. (ತಿಂಗಳಿಗೆ ಸರಿಸುಮಾರು ರೂ.33 ಸಾವಿರ) ಗಳಿಸುವ ಓರ್ವ ವ್ಯಕ್ತಿ, 90 ಕೋಟಿ ರೂ. ಗಳಿಸಲು ಸುಮಾರು 1.74 ಕೋಟಿ ವರ್ಷಗಳೇ ಬೇಕಂತೆ!. ಮನುಷ್ಯ 100 ವರ್ಷಗಳ ಕಾಲ ಬದುಕುವುದೇ ವಿರಳ. ಲಕ್ಷಾಂತರ ವರ್ಷಗಳ ಕಾಲ ದುಡಿದು ಯಾರಾದರೂ ಹಾಗೆ ಹಣ ಗಳಿಸಲು ಸಾಧ್ಯವೇ? ಇನ್ನೂ ಸರಳವಾಗಿ ಹೇಳಬೇಕಂದರೆ, ಅಂಬಾನಿ ಓರ್ವ ಸಾಮಾನ್ಯ ವ್ಯಕ್ತಿ ತನ್ನ ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಗಳಿಸುತ್ತಾರೆ. ಅಷ್ಟು ಸಂಪತ್ತು ಸಹ ಅವರ ಬಳಿ ಇದೆ.

ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?: ರಿಲಯನ್ಸ್ ಇಂಡಸ್ಟ್ರೀಸ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮುಕೇಶ್ ಅಂಬಾನಿ ತಮ್ಮ ವಾರ್ಷಿಕ ವೇತನದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ವಾರ್ಷಿಕ ವೇತನವನ್ನು 15 ಕೋಟಿ ರೂ.ಗೆ ಸೀಮಿತಗೊಳಿಸಿಕೊಂಡಿರುವುದಾಗಿ ಅವರೇ ಈ ಹಿಂದೆ ಹೇಳಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.

Advertisement
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇಂದು ಕಾರ್ಗಿಲ್ ವಿಜಯೋತ್ಸವ ದಿನ : ನೂರಾರು ಸೈನಿಕರ ಪ್ರಾಣ ತ್ಯಾಗಕ್ಕೊಂದು ನಮನ
July 26, 2024
11:51 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ ಮಾತು ನಡೆಯುತ್ತಿಲ್ಲ : ರೈತರು ಇಂತ ಕಡೆ ಪ್ರಶ್ನಿಸುವಂತಾಗಬೇಕು
July 26, 2024
11:35 PM
by: The Rural Mirror ಸುದ್ದಿಜಾಲ
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಕೋರಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ : ಕೇಂದ್ರ ಸರ್ಕಾಕ್ಕೆ ಕೋರಿಕೆ
July 26, 2024
3:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 26-07-2024 | ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ | ಜುಲೈ 31 ರ ತನಕವೂ ಗಾಳಿ ಸಹಿತ ಮಳೆ ಸಾಧ್ಯತೆ |
July 26, 2024
12:40 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror