ಕೃಷಿಯನ್ನು ಬಲಗೊಳಿಸುವ ದೃಷ್ಟಿಯಿಂದ ಸರ್ಕಾರವು ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಅದೇ ರೀತಿ ಗ್ರಾಮೀಣ ಭಾಗದ ಯುವ ಕೃಷಿಕರು ತಮ್ಮ ಕುಲಕಸುಬುಗಳನ್ನು ಮುನ್ನೆಡೆಸಿಕೊಂಡು ಹೋಗಬೇಕೆಂಬ ನಿಟ್ಟಿನಲ್ಲೀ ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ ಎಂಬ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯ ಮೂಲಕ ಹಂದಿ ತಳಿ ಸಂವರ್ಧನಾ, ರಸಮೇವು ಉತ್ಪಾದನಾ ಘಟಕ, ಕುರಿ-ಮೇಕೆ ತಳಿ ಸಂವರ್ಧನಾ ಘಟಕ, ಗ್ರಾಮೀಣ ಕೋಳಿ ಉದ್ದಿಮೆ ಅಭಿವೃದ್ಧಿ ಇತ್ಯಾದಿಗಳಿಗಳನ್ನು ಪ್ರಾರಂಭಿಸಲು ಶೇ.50% ಸಹಾಯಧನವನ್ನು ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ: ರಾಷ್ಟ್ರೀಯ ಜಾನವಾರು ಮಿಷನ್ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ನಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯಲ್ಲಿರುವ ತಾಲ್ಲೂಕಿನ ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಬೇಕಾಗಿರುವ ಅಗತ್ಯ ದಾಖಲೆಗಳು:
• ಅರ್ಜಿದಾರರ ಆಧಾರ್ ಕಾರ್ಡ್
• ಪಾನ್ ಕಾರ್ಡ್
• ವೋಟರ್ ಐಡಿ
• ರೇಶನ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ರದ್ದುಗೊಳಿಸಿದ ಚೆಕ್
• 6 ತಿಂಗಳ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್
• ಜಾತಿ ಪ್ರಮಾಣ ಪತ್ರ
• ವಿದ್ಯಾರ್ಹತೆ ಪ್ರಮಾಣ ಪತ್ರ
• ವಿದ್ಯುತ್ ಬಿಲ್
• ಯೋಜನೆ ಘಟಕ ಸ್ಥಾಪನ್ ಜಾಗದಲ್ಲಿ ನಿಂತು ಜಿಪಿಎಸ್ ಫೋಟೋ
• ಪಹಣಿ
• ಹೈನುಗಾರಿಕೆಯಲ್ಲಿ ಅನುಭವ ಪತ್ರ ( ಪಶುವೈದ್ಯರಿಂದ)


