ಕೆಲ ಅಭ್ಯಾಸಗಳು ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯವನ್ನು(premature) ತರುತ್ತವೆ, ದೇಹವು(Body) ರೋಗಗಳಿಗೆ(decease) ನೆಲೆಯಾಗುತ್ತದೆ. ಜನರು ಹೆಚ್ಚು ಕಾಲ ಬದುಕಲು ಬಯಸುತ್ತಾರೆ, ಆದರೆ ಅವರು ತಮ್ಮ ಕೆಟ್ಟ ಅಭ್ಯಾಸಗಳನ್ನು(Bad Habits) ತ್ಯಜಿಸಲು ಮನಸ್ಸು ಮಾಡುವುದಿಲ್ಲ. ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಅನೇಕ ಅಭ್ಯಾಸಗಳಿವೆ. ಈ ಅಭ್ಯಾಸಗಳು ತುಂಬಾ ಹಾನಿಕಾರಕ(Dangerous). ಆದರೆ, ಜನರು ಅದರ ಬಗ್ಗೆ ಚಿಂತಿಸುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ(Young age) ಜನರು ಮುದುಕರಾಗಿ(Aged) ಕಾಣಲು ಇದು ಕಾರಣ. ಅನೇಕರು ಗಂಭೀರ ಕಾಯಿಲೆಗಳಿಂದ ಬಳಲುತ್ತಾರೆ ಮತ್ತು ಅನೇಕರು ಅಕಾಲಿಕ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಈ ಅಭ್ಯಾಸಗಳನ್ನು ಬಿಟ್ಟು ಚೆನ್ನಾಗಿ ಬದುಕುವ ಬಗ್ಗೆ ಯೋಚಿಸಬೇಕು.
ನಿದ್ರೆಯ ಕೊರತೆ : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನುಗಳು ಮತ್ತು ಇಂಟರ್ನೆಟ್ ಯುಗದಲ್ಲಿ ಜನರು ನಿದ್ರೆ ಕಳೆದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದ ಮತ್ತು ಸಮಯಕ್ಕೆ ಏಳದ ಅನೇಕ ಜನರಿದ್ದಾರೆ. ಅಲ್ಲದೆ, ಇತ್ತೀಚೆಗೆ ಯುವಕ ಯುವತಿಯರಲ್ಲಿ ವಿನಾಕಾರಣ ತಡರಾತ್ರಿಯವರೆಗೂ ಕಾಲಹರಣ ಮಾಡುವ ಅಭ್ಯಾಸ ಬೆಳೆದಿದೆ. ನಿದ್ರೆಯ ಕೊರತೆಯು ಮೊದಲಿಗೆ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಆದರೆ ಕೆಲ ಕಾಲದ ನಂತರ ಸಮಸ್ಯೆಗಳು ಪ್ರಾರಂಭವಾಗುತ್ತವೆ. ದೇಹಕ್ಕೆ ವಿಶ್ರಾಂತಿ ಬೇಕು, ಅದು ನಿದ್ರೆಯ ಮೂಲಕ ಪೂರೈಸಲ್ಪಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
ರಾಸಾಯನಿಕ ಮುಕ್ತ ಮತ್ತು ಸಂಸ್ಕರಿಸದ ಆಹಾರ : ಫಿಟ್ ಮತ್ತು ಆರೋಗ್ಯಕರವಾಗಿರಲು ರಾಸಾಯನಿಕ ಮುಕ್ತ ಮತ್ತು ಸಂಸ್ಕರಿಸದ (ನೈಸರ್ಗಿಕ ರೂಪದಲ್ಲಿರುವ) ಆಹಾರವನ್ನು ಉಪಯೋಗಿಸಬೇಕು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ತುಂಬಾ ಹಾನಿಕಾರಕವಾಗಿವೆ. ನೀವು ನಿಮ್ಮನ್ನು ಯೌವನದಲ್ಲಿ ಇರಿಸಿಕೊಳ್ಳಲು ಬಯಸಿದರೆ, ಆರೋಗ್ಯಕರ ಆಹಾರವನ್ನು ಸೇವಿಸುವುದು ಸಹ ಅಗತ್ಯ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು. ಮಾಂಸವನ್ನು ಬಿಟ್ಟುಬಿಡಿ. ಹೆಚ್ಚು ಕರಿದ ಮತ್ತು ಬೇಯಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ಪ್ರತಿದಿನ ದೈಹಿಕ ಚಟುವಟಿಕೆಯನ್ನು ಮಾಡುವುದು: ನೀವು ಸೋಮಾರಿಯಾಗಿದ್ದರೆ ಮತ್ತು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದಿದ್ದರೆ ಈ ಅಭ್ಯಾಸವು ನಿಮಗೆ ಒಳ್ಳೆಯದಲ್ಲ. ನೀವು ಪ್ರತಿದಿನ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯನ್ನು ಮಾಡಿದರೆ, ನೀವು ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇದರೊಂದಿಗೆ ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ, ಪ್ರತಿದಿನ ವ್ಯಾಯಾಮ ಮತ್ತು ಧ್ಯಾನ ಮಾಡಿ.
ಮದ್ಯ ಮತ್ತು ಸಿಗರೇಟ್ ಸೇವನೆ : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಸೇವನೆ ಸಾಮಾನ್ಯವಾಗಿದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ನೀವು ದೀರ್ಘಕಾಲದವರೆಗೆ ಆಲ್ಕೋಹಾಲ್ ಮತ್ತು ಸಿಗರೇಟ್ ಸೇವಿಸಿದರೆ, ನಿಮ್ಮ ಜೀವಕ್ಕೆ ಅಪಾಯವಾಗಬಹುದು.
ಡಾ. ಸುನೀಲ್ ಇನಾಮದಾರ, ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.
ನಿದ್ರೆ ಸಾಕಷ್ಟು ಮಾತ್ರವಲ್ಲ, ಸಮಯೋಚಿತವಾಗಿರಬೇಕು. ಸಹಜವಾಗಿ, ಉತ್ತಮ ರಾತ್ರಿಯ ನಿದ್ರೆ ಮುಖ್ಯವಾಗಿದೆ ಮತ್ತು ಮಧ್ಯರಾತ್ರಿಯ ಮೊದಲು ನೀವು ಎಷ್ಟು ಸಮಯ ನಿದ್ರಿಸುತ್ತೀರಿ ಎಂಬುದು ಅತ್ಯಂತ ಮುಖ್ಯವಾಗಿದೆ. ಮಧ್ಯರಾತ್ರಿಗೆ ಕನಿಷ್ಠ ಒಂದೂವರೆ ಗಂಟೆಗಳ ಮೊದಲು ಮಲಗಬೇಕು. ಅನೇಕ ಜನರು ಈ ಅಂಶವನ್ನು ಅರಿತುಕೊಳ್ಳುವುದಿಲ್ಲ ಮತ್ತು ಎದ್ದ ನಂತರ ನಾಲ್ಕರಿಂದ ನಾಲ್ಕು ಗಂಟೆಗಳ ಕಾಲ ಮಲಗುತ್ತಾರೆ ಮತ್ತು ಸಾಕಷ್ಟು ನಿದ್ರೆ ಮಾಡಿದೆ ಎಂದು ಭ್ರಮೆಯಲ್ಲಿರುತ್ತಾರೆ. ರಾತ್ರಿಯಲ್ಲಿ ಏಳುವುದು ಅಥವಾ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಹಾನಿಕಾರಕ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಬೇಕಾಬಿಟ್ಟಿಯಾಗಿ ವ್ಯಸನಿಗಳಾಗುತ್ತಿದ್ದಾರೆ. ಇದು ಇನ್ನೂ ಗಂಭೀರವಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ದುಶ್ಚಟಗಳಿಗೆ ಒಳಗಾಗಿರುವ ಮಹಿಳೆಯರು ಸ್ವಂತ ಆರೋಗ್ಯವನ್ನಂತು ಹಾಳು ಮಾಡಿಕೊಳ್ಳುತ್ತಾರಲ್ಲದೆ ಗರ್ಭಧಾರಣೆ, ಪ್ರಸೂತಿ ಹಾಗೂ ಮಕ್ಕಳ ಆರೋಗ್ಯವನ್ನು ಅನೇಕ ರೀತಿಯ ಸಂಕಟಗಳಿಗೆ ಸಂಕಷ್ಟಗಳಿಗೆ ಒಡ್ಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಭವಿಷ್ಯದ ಇಡೀ ಪೀಳಿಗೆಯನ್ನೇ ಹಾಳು ಮಾಡುತ್ತದೆ.
ಡಾ. ಕುಲಕರ್ಣಿ ಪಿ. ಎ.
some bad habits of youths leads to premature. People want to live longer, but they do not want to give up their bad habits. There are many common habits among people. These practices are very harmful. But, people do not worry about it. This is the reason why people appear mature at a young age. Many suffer from serious diseases and many even lose their lives prematurely. One should leave these habits and think about living a good life.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…