ನಮಲ್ಲಿ ಬಹಳಷ್ಟು ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ(Coffee) ಕುಡಿಯದಿದ್ದರೆ ಆಗೋದೇ ಇಲ್ಲ. ತಲೆನೋವಿಗೂ ಕಾಫಿ ಬೇಕು, ನೆಂಟರು ಬಂದರಂತೂ ಕಾಫಿ ಕಡ್ಡಾಯ. ಅಂತಹ ಕಾಫಿ ಹುಡಿಯನ್ನು ಅಂಗಡಿಯಿಂದ ತರುತ್ತೇವೆ. ನಾವು ಅಂಗಡಿಯಿಂದ ತರುವ ಕಾಫಿಗೆ ಚಿಕೋರಿ(Cichorium intybus) ಬೆರೆಸುತ್ತಾರೆ ಎಂಬುದು ನಮಗೆ ಗೊತ್ತು. ಆದರೆ ಚಿಕೋರಿ ಎಂದರೆ ಏನು, ಅದು ಎಲ್ಲಿಂದ ಬರುತ್ತೆ ಎಂದು ತಿಳಿದವರು ಅಪರೂಪ. ಸ್ವಲ್ಪ ತಿಳಿದವರೂ ಕೂಡ ಅಂದುಕೊಂಡಿರುವುದು ಏನೆಂದರೆ ಚಿಕೋರಿ ಒಂದು ಗಿಡದ ಬೀಜದ ಪುಡಿ ಹಾಗೂ ಕಾಫಿ ಪುಡಿ ಅಂಗಡಿಯವರು ಹೆಚ್ಚು ದುಡ್ಡು ಮಾಡಲು ಬೆರೆಸುತ್ತಾರೆ ಎಂದು.
ಚಿಕೋರಿ – Cichorium intybus. Asteraceae ಕುಟುಂಬಕ್ಕೆ ಸೇರಿದ ಸುಮಾರು 3 -5 ಅಡಿ ಎತ್ತರ ಬೆಳೆಯುವ, ದಪ್ಪ ಎಲೆಗಳುಳ್ಳ ಪೊದೆ ಸಸ್ಯ. ಅದಕ್ಕೆ ನೀಲಿ ಬಣ್ಣದ ಹೂವುಗಳು. ಬಹಳ ಅಪರೂಪಕ್ಕೆ ಬಿಳಿ ಹಾಗೂ ತೆಳು ಗುಲಾಬಿ ಬಣ್ಣದ ಹೂವು ಬಿಡುವ ಪ್ರಾಕಾರಗಳನ್ನೂ ನೋಡಬಹುದು. ಯೂರೋಪ್ ಖಂಡದಲ್ಲಿ ರಸ್ತೆಯ ಪಕ್ಕ ಹಾಗೂ ಖಾಲಿ ಜಾಗಗಳಲ್ಲಿ ತಾನಾಗಿಯೇ ಬೆಳೆಯುವ ಹಾಗೂ ನಮ್ಮ ದೇಶದಲ್ಲಿ ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಕಾಫಿಗೆ ಬೆರೆಸುವುದಕ್ಕಾಗಿಯೇ ಬೆಳೆಸುವ ಸಸ್ಯ. ಇತರ ರಾಜ್ಯಗಳಲ್ಲಿ ಹಾಗೂ ನಮ್ಮಲ್ಲಿ ಅಪರೂಪಕ್ಕೆ ಒಂದೆರಡು ಗಿಡ ಬಿಟ್ಟರೆ, ವ್ಯಾಪಾರಕ್ಕಾಗಿ ಬೆಳೆದಿದ್ದನ್ನು ನಾನು ನೋಡಿಲ್ಲ.
ಈಗ ಪುನಃ ಕಾಫಿಯ ವಿಷಯಕ್ಕೆ ಬಂದರೆ, ಅದಕ್ಕೆ ಬೆರೆಸುವುದು ಚಿಕೋರಿ ಬೀಜ ಅಲ್ಲ. ಅದು ಚಿಕೋರಿ ಗಿಡದ ಒಣಗಿಸಿ, ಹುರಿದು, ಪುಡಿಮಾಡಿದ ಅದರ ಬೇರಿನ ಪುಡಿ ಸ್ವಲ್ಪ ಕಹಿ ಮಿಶ್ರಿತ ಒಗಚು ರುಚಿ ಹಾಗೂ ಘಾಡ ಕಂದು ಬಣ್ಣ ಅದರದ್ದು. ನಮ್ಮಲ್ಲಿ ( ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ) ಕಾಫಿ ಪ್ರಚಾರಗೊಳ್ಳುವ ಮೊದಲೇ ಯೂರೋಪ್ ಖಂಡದಾದ್ಯಂತ, ಕಾಫಿ ಬಹು ಜನಪ್ರಿಯ ಪಾನೀಯ, ಅದು ಈಗಲೂ ಸಹ. ಇಸವಿ 1930 ರ ಆಸುಪಾಸು 2 ನೇ ಮಹಾಯುದ್ಧದ ಸಮಯದಲ್ಲಿ ಯೂರೋಪ್ ಆದ್ಯಂತ ಪ್ರಪಂಚದ ಇತರ ಕಾಫಿ ಬೆಳೆಯುವ ದೇಶಗಳಿಂದ ಬರುವ ಕಾಫಿ ಬೀಜದ ಸರಬರಾಜು ನಿಂತುಹೋಗಿ ತೊಂದರೆಯಾದಾಗ ಸಹಾಯಕ್ಕೆ ಬಂದದ್ದೇ ಚಿಕೋರಿ. ಆಗ ಚಿಕೋರಿ ಬೇರಿನ ಪುಡಿಯಿಂದ ಮಾಡಿದ ಕಾಫಿ ( ಕಷಾಯ ) ಕುಡಿಯುವ ಅಭ್ಯಾಸ ಆಯಿತು.
ಕಾಫಿಯಲ್ಲಿರುವ Caffeine ಅಂಶ ಇಲ್ಲದಿದ್ದರೂ ಸಹ, ಹೆಚ್ಚಿ ಕಮ್ಮಿ ಅದೇ ರುಚಿ ಹೊಂದಿರುವ, ಸುಲಭವಾಗಿ ಸಿಗುವ ( ರಸ್ತೆಯಲ್ಲಿ ಕಳೆಯ ರೀತಿ ಬೆಳೆದಿರುತ್ತಿದ್ದ ) ” ಚಿಕೋರಿ ಕಾಫಿ ” ಬಳಕೆಗೆ ಬಂತು. ನಂತರದಲ್ಲಿ ಕಾಫಿ ಪುಡಿಗೆ ಬೆರೆಸುವುದು ಸಹಾ… ಚಿಕೂರಿಯಲ್ಲಿ Lactuin ಮತ್ತು Lactucopirin ಎಂಬ ಅಂಶವಿದ್ದು ಅದರ ವಿಶಿಷ್ಟವಾದ ರುಚಿಗೆ ಕಾರಣ. ಚಿಕೋರಿ ಎಲೆಗಳನ್ನು ನಮ್ಮಲ್ಲಿ ಪಾಲಾಕ್ ಸೊಪ್ಪು ಉಪಯೋಗಿಸುವಂತೆ salad ಮಾಡುವ ಪದ್ಧತಿ ಮೊದಲಿನಿಂದ ಇದೆ. ಜೊತೆಗೆ ಅತಿಯಾದ ನಾರಿನಂಶ ಇದೆ. ನಾವೀಗ Mall ನಲ್ಲಿ ಕೊಳ್ಳುವ ಯಾವುದೇ packed ಆಹಾರದ ಡಬ್ಬದ ಮೇಲೆ ” CONTAINS HIGH FIBRE ” ಅಥವಾ ‘” FIBRE RICH ” ಎಂದು ಇದ್ದರೆ, ಅಂದು ನಿಸ್ಸಂಶಯವಾಗಿ ಚಿಕೋರಿಯ ನಾರು. ನಾರಿನಂಶ ನಮ್ಮ ಜೀರ್ಣ ಹಾಗೂ ವಿಸರ್ಜನಾ ಕ್ರಿಯೆಗೆ ಒಳ್ಳೆಯದು(Digestion and Excretion). ಮಲಬದ್ಧತೆಗೆ ಮದ್ದು.
ತಾಜಾ ಚಿಕೋರಿ ಬೇರಿನಲ್ಲಿ ಅದರ ತೂಕದ ( dry weight ) ಶೇಕಡ 68 % Insulin ಇದೆ. ಇದಕ್ಕೆ ರಕ್ತದಲ್ಲಿನ Glucose ಅಂಶವನ್ನು ಹೀರಿಕೊಳ್ಳುವ ಗುಣವಿದೆ. ಹಾಗಾಗಿ ಸಕ್ಕರೆ ಖಾಯಿಲೆ ಇರುವವರಿಗೆ ( type 2 diabetes ) ಸಕ್ಕರೆ ಇಲ್ಲದ ಕಾಫಿ ಒಳ್ಳೆಯದೆಂದು ವ್ಯಜ್ಞಾನಿಕವಾಗಿ ಸಾಬೀತಾಗಿದೆ. HbA1c ಸಹಾ ಸಾಕಷ್ಟು ಕಮ್ಮಿಯಾಗುತ್ತೆ. ಚಿಕೋರಿಯಲ್ಲಿ Oligofrutose ಅಂಶ ಇರುವುದರಿಂದ ಇದು ಹಸಿವೆಯನ್ನು ಕಡಿಮೆಮಾಡುತ್ತದೆ ಮತ್ತು ದೇಹದ ತೂಕ ಇಳಿಸಲು ಸಹಾಯಕ. ಯೂರೋಪ್ ನ Cancer Research Institute ನ ಪ್ರಯೋಗಗಳಲ್ಲಿ , ಚಿಕೋರಿಯಲ್ಲಿರುವ Quercetin ಅಂಶ Cancer ಜೀವಕೋಶಗಳನ್ನು ನಾಶ ಮಾಡುವುದಲ್ಲದೆ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ ಎಂದು ಸಾಬೀತಾಗಿದೆ. ಅಲ್ಲದೆ…
ಚಿಕೋರಿಯಲ್ಲಿರುವ Lutein ಮತ್ತು Zeaxanthin ಅಂಶಗಳು ಕಣ್ಣಿನ ದೃಷ್ಟಿಗೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲದೇ cataract ಆಗುವುದನ್ನು ತಡೆಯುತ್ತದೆ. ಚಿಕೂರಿಯಲ್ಲಿ ವಿಟಮಿನ್ B1, B2, B3, B5, B6, B9, C ಮತ್ತು E ನಮ್ಮ ನಿತ್ಯದ ಅವಶ್ಯಕತೆಗೆ ಬೇಕಾಗುವಷ್ಟು ಇದೆ. ಜೊತೆಗೆ 100 mg ಅಷ್ಟು Calcium, Iron, Magnesium ಅಲ್ಲದ 8 ಇತರೇ ಅತ್ಯಾವಶ್ಯಕ ನಮಗೆ ಬೇಕಾದ ಖನಿಜಗಳು ಇವೆ. ಅಂದರೆ ದಿನಕ್ಕೆರಡು ಲೋಟ ಚಿಕೂರಿ ಬೆರೆಸಿದ ಕಾಫಿ ಕುಡಿದರೆ ನಮಗೆ ಎಷ್ಟು ಬೇಕೋ ಅಷ್ಟು ವಿಟಮಿನ್ ಮತ್ತು ಖನಿಜಗಳು ಸಿಗುತ್ತದೆ.
ಅಷ್ಟೇ ಅಲ್ಲಾ. ಚಿಕೋರಿ ಕಾಷಾಯದ ಸೇವನೆಯಿಂದ :- ಆತಂಕ ( anxiety ) ನಿವಾರಣೆ ಆಗುತ್ತೆ , ಹೊಟ್ಟೆ ಭಾಗದ ಬೊಜ್ಜು ಕರಗುತ್ತೆ ಹಾಗೂ ತೂಕ ಕಮ್ಮಿಯಾಗುತ್ತೆ , Arthritis ನ ಹಾಗೂ ಮೂಳೆ ಗಂಟುಗಳ ನೋವು ನಿವಾರಕ , ಹೃದಯದ ಆರೋಗ್ಯಕ್ಕೆ ಉತ್ತಮ , ಮೂತ್ರಕೋಶದ ( kidney ) ಆರೋಗ್ಯ , Liver ನ ಸಮಸ್ಯೆಗಳು ನಿವಾರಣೆಗೆ , ಜೀರ್ಣಾಂಗ ಹಾಗೂ ಜೀರ್ಣಕ್ರಿಯೆಗೆ ಸಹಾಯಕ. ಜೀರ್ಣಾಗದಲ್ಲಿ ಸೇರಿರುವ ಕೆಟ್ಟ ಬ್ಯಾಕ್ಟೀರಿಯಾ ನಿವಾರಕ.. ಇತ್ಯಾದಿ.. ಇತ್ಯಾದಿ.. ಹತ್ತು ಹಲವಾರು ಪ್ರಯೋಜನ ಉಂಟು.
ಕಾಫಿ ಪುಡಿ ಅಂಗಡಿಯವರು ಚಿಕೋರಿ ಬೆರೆಸಿ ಖಂಡಿತವಾಗಿಯೂ ಲಾಭ ಜಾಸ್ತಿ ಮಾಡಿಕೊಳ್ಳುತ್ತಿರಬಹುದು. ಆದರೆ ಆ ಚಿಕೋರಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಅಂತಹ ಹಾನಿಯೇನು ಇಲ್ಲ. ಚಿಕೋರಿ ಅಂಶ ಜಾಸ್ತಿಯಾದಷ್ಟು ಕಾಫಿ Strong ಆಗುತ್ತೆ. ಆದರೆ ನಮ್ಮ ಕಾಫಿಪುಡಿಯಲ್ಲಿ ಶೇ 35 % ಕಿಂತಾ ಜಾಸ್ತಿ ಚಿಕೋರಿ ಇದ್ದರೆ, ನಮ್ಮ ಕಾಫಿ ಹೆಚ್ಚು ಕಹಿ ಅವರ ಜೋಬು ಸಿಹಿ. ( ಚಿಕೋರಿಯ ಬೀಜ Amazon /India Mart ನಲ್ಲಿ ಸಿಗುತ್ತೆ. ಬೆಳೆಸುವ ಇಷ್ಟ ಇದ್ದವರು ತರಿಸಿಕೊಳ್ಳಿ )
Chicory – Cichorium intybus. A thick-leaved shrub growing about 3-5 feet tall, belonging to the Asteraceae family. It has blue flowers. Very rarely white and pale pink flowered varieties are also seen. It is a plant that grows by itself in roadsides and empty spaces in Europe and in our country it is cultivated for mixing with coffee in Uttar Pradesh and Gujarat states. In other states and in ours, I have never seen any grown for trade, except for a few plants.