ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸುವಾಗ ಮಾಧ್ಯಮ ಪ್ರತಿನಿಧಿಗಳು ರಾಜೀನಾಮೆ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭ ನಳಿನ್ ಅವರು ನೀಡುರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಮಾಧ್ಯಮಗಳೇ ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸಿವೆ ಎಂಬ ಆರೋಪ ಬಂದಿದೆ. ಹಾಗಿದ್ದರೆ ಅವರು ನಿಜಕ್ಕೂ ಹೇಳಿದ್ದೇನು ಎಂಬುದೇ ಪ್ರಶ್ನೆ.
ಖಾಸಗಿ ವಾಹಿನಿ ಟಿವಿ9 ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿರುವ ವಿಡಿಯೋ ಪ್ರಸಾರ ಮಾಡಿದೆ. ಅದರ ತುಣುಕು ಇಲ್ಲಿದೆ..
#NalinKumarKateel ಅವರು ಸುದ್ದಿ ಗೋಷ್ಟಿಯಲ್ಲಿ ಮಾತನಾಡಿರುವುದು. ಟಿವಿ9 ವಿಡಿಯೋ. pic.twitter.com/ynZoW7EOF8
— theruralmirror (@ruralmirror) June 24, 2023
Advertisement
ಸುದ್ದಿಗೋಷ್ಟಿಯಲ್ಲಿ ಹೇಳಿರುವ ಪ್ರಕಾರ, ವಿಧಾನಸಭೆ ಚುನಾವಣೆ ಸೋಲಿನ ನೈತಿನ ಹೊಣೆ ಹೊತ್ತು ತಾನು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಮೌಖಿಕವಾಗಿಯೂ , ಲಿಖಿತವಾಗಿಯೂ ನೀಡಿದ್ದೇನೆ ಎಂದು ಹೇಳಿದ್ದಾರೆ. ಅದಾದ ಬಳಿಕದ ಕೆಲ ಹೊತ್ತಿನಲ್ಲಿ, ರಾಜೀನಾಮೆ ಹೇಳಿಕೆ ತಪ್ಪಾಗಿ ವರದಿಯಾಗುತ್ತಿದೆ ಎಂದು ಹೇಳಿದ್ದರು.ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ರಾಜಿನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ‘ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜಿನಾಮೆ ನೀಡಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ಕುರಿತ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಕಟೀಲ್ ತಿಳಿಸಿದ್ದಾರೆ.
ವಿಡಿಯೋ ಪ್ರಕಾರ, ವಿಧಾನಸಭೆ ಚುನಾವಣೆ ಸೋಲಿನ ನೈತಿನ ಹೊಣೆ ಹೊತ್ತು ತಾನು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಮೌಖಿಕವಾಗಿಯೂ , ಲಿಖಿತವಾಗಿಯೂ ನೀಡಿದ್ದೇನೆ ಎಂದು ಸ್ವತಃ ನಳಿನ್ ಕುಮಾರ್ ಅವರು ಎರಡು ಬಾರಿ ಹೇಳಿದ್ದಾರೆ. ಅಂದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಬಳಿಕವೂ ರಾಷ್ಟ್ರೀಯ ನಾಯಕರು, ವಿಳಂಬವಾದ ಆತ್ಮಾವಲೋಕನ ನಡೆಸುತ್ತಿರುವುದು ಏಕೆ?. ರಾಜ್ಯಾಧ್ಯಕ್ಷರ ರಾಜೀನಾಮೆ ಏಕೆ ಅಂಗೀಕಾರ ಮಾಡಲಿಲ್ಲ ? ಹೀಗೇ ಹಲವಾರು ಪ್ರಶ್ನೆಗಳು ಎದ್ದಿವೆ. ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಸಂಸದರ ವಿರುದ್ಧ ಆಕ್ರೋಶಗಳು ಇದ್ದರೂ, ರಾಜ್ಯಾಧ್ಯಕ್ಷರಾದ ಬಳಿಕವೂ ಈ ಆಕ್ರೋಶ ಈಗಲೂ ಇರುವಾಗಲೂ ಏಕೆ ರಾಷ್ಟ್ರೀಯ ನಾಯಕರು ಮೌನವಹಿಸುತ್ತಿದ್ದಾರೆ ? .
ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಎಂಬ ಹೇಳಿಕೆಗಳು ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿ, ಬಿಜೆಪಿ ಸುಸ್ಥಿತಿಗೆ ಬರಲಿ ಎಂಬ ಹಾರೈಕೆಗಳು ಬಿಜೆಪಿ ಕಾರ್ಯಕರ್ತರಿಂದಲೇ ಬರುತ್ತಿರುವುದನ್ನೂ ಬಿಜೆಪಿ ನಾಯಕತ್ವಗಳು ಗಮನಿಸುವುದಿಲ್ಲವೇ ? ಇದೆಲ್ಲಾ ಪ್ರಶ್ನೆಗಳ ನಡುವೆಯೂ ಕೇಡರ್ ಹಿನ್ನಲೆಯ ಬಿಜೆಪಿ ಮಾತ್ರಾ ಯಾವುದೂ ಕೇಳದಂತೆ ಕುಳಿತಿದೆ. ಎಲ್ ಕೆ ಅಡ್ವಾಣಿ ಅವರಂತಹ ನಾಯಕರನ್ನೇ ರಾಜೀನಾಮೆ ಪಡೆದಿರುವ ಒಂದು ಕಾಲದ ಬಿಜೆಪಿ ಈಗ ಕಾರ್ಯಕರ್ತರ ಆಕ್ರೋಶ, ಅಸಮಾಧಾನಗಳು ಇದ್ದರೂ ಮೌನವಾಗಿರುವುದರ ಅರ್ಥ ಬಿಜೆಪಿ ಆಂತರಿಕವಾಗು ಕುಸಿದಿದೆ ಎಂಬುದು ಸ್ಪಷ್ಟವಾಗುತ್ತಿದೆ.