ನಿರಂತರ ಹೆಡ್ ಫೋನ್ ಬಳಸುವುದರಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು…?

January 14, 2026
6:48 AM

ನಿರಂತರವಾಗಿ ಇಯರ್ ಫೋನ್ ಬಳಸಿ ಹಾಡುಗಳನ್ನು ಕೇಳುತ್ತಾ ಇರುವವರಿಗೆ ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ ನಿರಂತರವಾಗಿ ಇಯರ್ ಫೋನ್ ಬಳಸುವುದರಿಂದ ಮುಂದಿನ ದಿನಗಳಲ್ಲಿ ಶ್ರವಣ ದೋಷಕ್ಕೆ ಕಾರಣವಾಗಬಹುದು, ಜೊತೆಗೆ ಕಿವಿಗೆ ಸಂಬಂಧಪಟ್ಟ ಇತರ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Advertisement

ಇಯರ್ ಫೋನ್ ಗಳಲ್ಲಿ ಜೋರಾದ ಧ್ವನಿಯನ್ನು ನಿರಂತರವಾಗಿ ಕೇಳುವುದರಿಂದ ಕಿವಿಯೊಳಗಿನ ಸೂಕ್ಷ್ಮ ಕೂದಲಿನ ಕೋಶಗಳ ಮೇಲೆ ಒತ್ತಡ ಉಂಟಾಗುತ್ತದೆ. ಕಿವಿಯು ದೀರ್ಘಾಕಾಲದವರೆಗೆ 85 ಡೆಸಿಬಲ್ ಗಳಿಗಿಂತ ಹೆಚ್ಚಿ ಶಬ್ದಗಳಿಗೆ ಒಡ್ಡಿ ಕೊಂಡಾಗ ಶಬ್ದ-ಪ್ರೇರಿತ ಶ್ರವಣ ನಷ್ಟ ಸಂಭವಿಸುತ್ತದೆ. ಈ ಕೂದಲಿನ ಕೋಶಗಳು ಹಾನಿಗೊಳಗಾದ ನಂತರ, ಅವು ತಮ್ಮನ್ನು ತಾವು ಸರಿಪಡಿಸಿ ಕೊಳ್ಳುವುದಿಲ್ಲ. ಆರಂಭದಲ್ಲಿ, ಸಮಸ್ಯೆ ತಾತ್ಕಾಲಿಕವಾಗಿ ಕಾಣಿಸಬಹುದು, ಆದರೆ ಕಾಲಾ ನಂತರದಲ್ಲಿ ಅದು ಶಾಶ್ವತವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಹೆಡ್ ಫೋನ್ ಗಳ ಬಳಕೆಯಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ..?

  •  ಹೆಡ್ ಫೋನ್ ಮತ್ತು ಇಯರ್ ಫೋನ್ ಗಳನ್ನು ಅತಿಯಾಗಿ ಬಳಸುವುದರಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
  •  ಹೆಡ್ ಫೋನ್ ಗಳು ಹೂರಸೂಸುವ ವಿದ್ಯುತ್ಕಾಂತೀಯ ಅಲೆಗಳು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ತಲೆನೋವು ಮತ್ತು ಮೈಗ್ರೇನ್ ಗೆ ಕಾರಣವಾಗುತ್ತದೆ.
  •  ಇದು ಹೃದಯದ ಬಡಿತವನ್ನು ಹೆಚ್ಚಿಸುತ್ತದೆ, ಇದರಿಂದ ಹೃದಯಕ್ಕೆ ಹಾನಿ
  •  ಇಯರ್ ಫೋನ್ ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಕಿವಿ ಕಾಲುವೆಯಲ್ಲಿ ಶಾಖ ಮತ್ತು ತೇವಾಂಶ ಹೆಚ್ಚಾಗುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶೀಲೀಂಧ್ರಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.
  •  ಇದು ಕಿವಿ ತುರಿಕೆ, ಕಿವಿಯಲ್ಲಿ ಮೇಣದ ಸಂಗ್ರಹ, ಅಡಚಣೆಗಳು ಮತ್ತು ಆಗಾಗ್ಗೆ ಕಿವಿ ಸೋಂಕುಗಳಿಗೆ ಕಾರಣವಾಗುತ್ತದೆ.
  •  ಇದು ಹೆಚ್ಚಿದ ಒತ್ತಡ, ಕಿರಿಕಿರಿ, ಕೇಂದ್ರೀಕರಿಸುವಲ್ಲಿ ತೊಂದರೆ ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
  •  ಇದು ಆತಂಕ ಅಥವಾ ಒತ್ತಡಕ್ಕೆ ಕಾರಣವಾಗಬಹುದು.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಜ.30 ರಿಂದ ಮೂಡಬಿದ್ರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ : | 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ
January 16, 2026
9:37 PM
by: ದ ರೂರಲ್ ಮಿರರ್.ಕಾಂ
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ
ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸ್ಮಾರ್ಟ್ ಬೋರ್ಡ್‌
January 16, 2026
7:01 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಕುರಿ ಸಾಕಾಣಿಕೆ | ಕೃಷಿ ಜತೆ ಲಾಭದಾಯಕ ಉಪಕಸುಬು
January 16, 2026
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror