ಕಳೆದ ಕೆಲವು ವಾರಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಅಂತಾರಾಷ್ಟಿಯ ಕರೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರಲ್ಲಿ ಅಡಿಯೋ ಮತ್ತು ವಿಡಿಯೋ ಕರೆಗಳು ಸೇರಿವೆ. ಸರ್ಕಾರವೂ ಇದರ ಬಗ್ಗೆ ಕ್ರಮ ಕೈಗೊಂಡಿದೆ.
ಈ ಅಂತಾರಾಷ್ಟಿಯ ವಂಚನೆ ಕರೆಗಳ ಹಾಗೂ ಸಂದೇಶಗಳ ಫೋನ್ ನಂಬರ್ +84,+60,+62,+251,+254ಇತ್ಯಾದಿ ಸಂಖ್ಯೆಗಳಿಂದ ಪ್ರಾರಂಭವಾಗುತ್ತದೆ. ಇಂತಹ ಕರೆಗಳು ಒಂದು ವೇಳೆ ಬಂದರೆ ನಗ್ನ ವಿಡಿಯೋ ಕರೆ ಮಾಡಿ ಬ್ಲಾಕ್ ಮೇಲ್ ಮಾಡುವುದು, ಯೂಟ್ಯಬ್ ವಿಡಿಯೋಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಇಷ್ಟಪಡುವ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತಹ ಸರಳವಾದ ವಿಷಯಗಳು ಸಹ ಮಾಡುತ್ತಾರೆ. ಈ ಕರೆಗಳಿಗೆ ಆರಂಭದಲ್ಲಿ ಇಂತಹ ವಿಡಿಯೋ ಗಳಿಗಾಗಿ ಇತಿಷ್ಟು ಎಂಬಂತೆ ಹಣ ಕೇಳುತ್ತಾರೆ. ತದನಂತರ ಸರಣಿ ಕೆಲಸಗಳನ್ನು ನೀಡಿ ಬಲೆ ಹಾಕುವುದರೊಂದಿಗೆ ಹೆಚ್ಚಿನ ಹಣದ ಬೇಡಿಕೆಯನ್ನು ಇಡುತ್ತಾರೆ.
ಆದುದರಿಂದ ವ್ಯಾಟ್ಸ್ಆ್ಯಪ್‌ನಲ್ಲಿ ಅಪರಿಚಿತ ಅಂತಾರಾಷ್ಟಿಯ ಸಂಖ್ಯೆ ಗಳಿಂದ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಲು ಹೋಗಬೇಡಿ. ಇಂತಹ ಸಂಖ್ಯೆಗಳಿಂದ ಬರುವ ಸಂದೇಶಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ವಂಚನೆ ಅಥವಾ ಮೋಸ ಹೋಗುವುದನ್ನು ತಡೆಯಲು ಇರುವ ಉತ್ತಮ ಮಾರ್ಗವಾಗಿದೆ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…