ಅಗತ್ಯ ಆಹಾರ ಉತ್ಪನ್ನಗಳ ಬೆಲೆಏರಿಕೆ | 30 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಲು ಅನುಮೋದನೆ | ಗೋಧಿ ಬೆಲೆ ಇಳಿಕೆ ಸಾಧ್ಯತೆ |

January 27, 2023
9:56 PM

ದೇಶದಲ್ಲಿ ಅಕ್ಕಿ, ಗೋಧಿ, ಗೋಧಿ ಹಿಟ್ಟು ಹಾಗೂ ಹಲವಾರು ಅಗತ್ಯ ಆಹಾರ ಉತ್ಪನ್ನಗಳ ಬೆಲೆಯು ಸಾರ್ವಕಾಲಿಕ ಏರಿಕೆಯಾಗಿದೆ. ಈ ಎಚ್ಚರಿಕೆಯ ಮಧ್ಯೆ ಕೇಂದ್ರ ಸರ್ಕಾರವು ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ಇಳಿಸುವ ನಿಟ್ಟಿನಲ್ಲಿ ಸಂಗ್ರಹಿಸಿದ್ದ 30 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ಇದರಿಂದಾಗಿ ಗೋಧಿ ಹಿಟ್ಟಿನ ಬೆಲೆಯಲ್ಲಿ ಇಳಿಕೆ ಆಗಬಹುದು ಎಂದು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ  ತಿಳಿಸಿದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಆಹಾರ ಸಚಿವಾಲಯವು 30ಲಕ್ಷ ಟನ್ ಗೋಧಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದೆ. ಬೆಲೆ ಹೆಚ್ಚಳವನ್ನು ಕಡಿವಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.ಗೋಧಿ ಮತ್ತು ಅಕ್ಕಿಯನ್ನು ಅಗತ್ಯಕ್ಕೆ ತಕ್ಕಂತೆ ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತು ಖಾಸಗಿ ವ್ಯಾಪಾರಿಗಳಿಗೆ ಈ ಹಿಂದೆಯೇ ತಿಳಿಸಿದ್ದ ಅಥವಾ ತೀರ್ಮಾನ ಮಾಡಿದ್ದ ಬೆಲೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 25-10-2026 | ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತದ ಸೂಚನೆ
October 25, 2026
9:15 PM
by: ಸಾಯಿಶೇಖರ್ ಕರಿಕಳ
ಬರ್ಮಾ ಅಡಿಕೆ ಅಕ್ರಮ ಸಾಗಾಟಕ್ಕೆ ಮತ್ತೊಂದು ಹೊಡೆತ
October 24, 2026
10:17 PM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರದಲ್ಲಿ ರೈತರಿಗೆ 12 ತಿಂಗಳ ಕೃಷಿ ಸಾಲ ಮರುಪಾವತಿ ಮುಂದೂಡಿಕೆ
October 24, 2026
8:09 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.0 ತೀವ್ರತೆಯ ಭೂಕಂಪ ದಾಖಲು
October 23, 2026
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror