ಪಿಎಂ ಕಿಸಾನ್‌ ಯೋಜನೆ ಮುಂದಿನ ಕಂತು ಯಾವಾಗ..?

July 11, 2024
11:48 AM

ಕೇಂದ್ರ ಸರ್ಕಾರವು(Central Govt) ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು(PM Kissan yojan) ರೈತರಿಗಾಗಿ(Farmers) ಪ್ರಾರಂಭಿಸಿರುವ ಯೋಜನೆಯಾಗಿದೆ(Scheme). ದೇಶದ ಕೋಟ್ಯಾಂತರ ರೈತರು ಈ ಯೋಜನೆಯ  ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯನ್ನು 2019ರ ಫೆಬ್ರವರಿಯಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಬೆಳೆ ಸಹಾಯಕ್ಕಾಗಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಈ 6 ಸಾವಿರ ರೂಪಾಯಿಯನ್ನು ರೈತರ ಖಾತೆಗೆ(Account) ಮೂರು ಕಂತುಗಳಲ್ಲಿ ಅಂದರೆ, ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಪ್ರತಿ ಕಂತಿನಲ್ಲಿ ಎಕರೆಗೆ 2 ಸಾವಿರದಂತೆ ಜಮಾ ಮಾಡುತ್ತದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17 ನೇ ಕಂತು ಬಿಡುಗಡೆ ಮಾಡಿದರು. ಈ ಹಣವನ್ನು 18 ಜೂನ್ 2024 ರಂದು ರೈತರ ಖಾತೆಗೆ ಜಮಾ ಮಾಡಲಾಗಿದೆ. ಈ ಯೋಜನೆಯ ಭಾಗವಾಗಿ ಒಟ್ಟು 9 ಕೋಟಿಗೂ ಅಧಿಕ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ. ಆದರೆ ಈಗ ರೈತರ ಗಮನ 18ನೇ ಕಂತಿನ ಹಣದತ್ತ ನೆಟ್ಟಿದೆ. ಹಾಗಾದ್ರೆ ಈ ನಿಧಿ ಯಾವಾಗ ಬರುತ್ತದೆ ಎಂಬ ಚರ್ಚೆಯೂ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ 18ನೇ ಕಂತಿನ ಪಿಎಂ ಕಿಸಾನ್ ನಿಧಿಯನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಜೆಟ್ ಸಭೆಗಳಲ್ಲಿ ಪಿಎಂ ಕಿಸಾನ್ 18ನೇ ಕಂತಿನ ಹಣದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ರೈತರಿಗೆ ನೀಡಲಾಗುವ ಈ ನೆರವನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಪಾವತಿಸಲು ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡಲಾಗುತ್ತಿದೆಯಂತೆ.

ಈ ಮಧ್ಯೆ, ಇ-ಕೆವೈಸಿಯು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಣವನ್ನು ಪಡೆಯಲು ರೈತರು ಪೂರ್ಣಗೊಳಿಸಬೇಕಾದ ಪ್ರಮುಖ ಕೆಲಸವಾಗಿದೆ. ಇದನ್ನು ಪೂರ್ಣಗೊಳಿಸಿದವರಿಗೆ ಮಾತ್ರ ಪಿಎಂ ಕಿಸಾನ್ ಮೊತ್ತ ಜಮಾ ಆಗುತ್ತದೆ. ನಿಮ್ಮ ಇ-ಕೆವೈಸಿಯನ್ನು ನೀವು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು. PM Kisan E-KYC ಗಾಗಿ PM Kisan ಅಧಿಕೃತ ಪೋರ್ಟಲ್ pmkisan.gov.in ಗೆ ಹೋಗಿ.. ಅಲ್ಲಿ ರಿಜಿಸ್ಟರ್​ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ ಮತ್ತು ಭೂಮಿಯ ಸಂಪೂರ್ಣ ಮಾಹಿತಿಯನ್ನು ನಮೂದಿಸಿ.

ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ OTP ಅನ್ನು ನಮೂದಿಸಬೇಕು ಮತ್ತು ನೋಂದಣಿಗೆ ಮುಂದುವರಿಯಬೇಕು. ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಅಲ್ಲದೆ ನಿಮ್ಮ ವೈಯಕ್ತಿಕ ವಿವರಗಳನ್ನು ಆಧಾರ್‌ನಲ್ಲಿರುವಂತೆ ಸರಿಯಾಗಿ ನಮೂದಿಸಬೇಕು. ಅದರ ನಂತರ ಸಬ್​ಮಿಟ್​ ಕ್ಲಿಕ್​ ಮಾಡ್ಬೇಕು. ಇದು ಆಧಾರ್ ಅಥೆಂಟಿಕೇಶನ್ ಸಕ್ಸಸ್ ಎಂದು ಹೇಳುತ್ತದೆ. ಇಷ್ಟಾದ್ರೆ ನಿಮ್ಮ ಇ-ಕೆವೈಸಿ ಅಪ್ಡೇಟ್ ಕೆಲಸ ಮುಗಿದಂತೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ
April 7, 2026
11:25 AM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ
April 7, 2026
7:41 AM
by: ಮಿರರ್‌ ಡೆಸ್ಕ್
ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror