ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

June 14, 2025
2:43 PM
ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಅಡಿಕೆ,ತಾಂಬೂಲ,ಪಾನ್ ಮಸಾಲ,ಸಿಹಿ ಸುಪಾರಿ,ಗುಟ್ಕಾ ಇತ್ಯಾದಿಗಳಿಗೆ ಬೇಡಿಕೆ ಇದೆ.

ಭೌಗೋಳಿಕವಾಗಿ ನೋಡಿದಾಗ ವಿಶ್ವದ ಪೂರ್ವ ಪಶ್ಚಿಮ ಅಭಿಮುಖ ಆಗಿ ಸುಮಾರು 11,000 ಕಿ. ಮೀ ಮತ್ತು ಉತ್ತರ ದಕ್ಷಿಣ ಆಗಿ ಸುಮಾರು 6,000 ಕೀ. ಮೀ ರಸ್ಟ್ಟು ಪ್ರದೇಶದಲ್ಲಿ ಅಡಿಕೆಯ ಬಳಕೆ ಮಾಡುತ್ತಾರೆ. ಇದರಲ್ಲಿ ಭಾರತ,ಶ್ರೀಲಂಕಾ ಮತ್ತಿತರ ದಕ್ಷಿಣ ಪೂರ್ವದ ಏಷ್ಯಾ ರಾಷ್ಟ್ರಗಳು ಅಲ್ಲದೆ ಆಫ್ರಿಕಾ ,ಮಡಗಾಸ್ಕರ್,ಸಾಂತಾಕ್ರುಜ್ ದ್ವೀಪ ಸಮೂಹ,ಚೀನಾದ ದಕ್ಷಿಣ ಬಾಗ,ಪಶ್ಚಿಮದ ಪೆಸಿಫಿಕ್ ಪ್ರದೇಶ ಇತ್ಯಾದಿಗಳು ಸೇರಿವೆ. ಇಲ್ಲೆಲ್ಲಾ ಅಡಿಕೆ ಜಗಿಯುವುದು ಒಂದು ಹವ್ಯಾಸ ಆಗಿದೆ. ಇಲ್ಲಿ ಅಡಿಕೆಯನ್ನು ಹಸಿಯಾಗಿ,ಒಣಗಿಸಿದ ರೂಪದಲ್ಲಿ ಇಡಿಯಾಗಿ,ತುಂಡಾಗಿ ವೀಳ್ಯದ ಎಲೆ ಯೊಂದಿಗೆ ಸೇವಿಸುತ್ತಾರೆ.ಇದಕ್ಕೆ ಸುಣ್ಣ,ತಂಬಾಕು ಮತ್ತು ಸಂಬಾರ ಪದಾರ್ಥಗಳನ್ನು ಸೇರಿಸಿ ತಿನ್ನುವುದು ರೂಢಿ.ಚೀನಾ,ತೈವಾನ್ ಪ್ರದೇಶಗಳಲ್ಲಿ ಎಳೆ ಅಡಿಕೆ ಬಳಕೆ ಅಧಿಕ.

Advertisement

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಅಡಿಕೆ,ತಾಂಬೂಲ,ಪಾನ್ ಮಸಾಲ,ಸಿಹಿ ಸುಪಾರಿ,ಗುಟ್ಕಾ ಇತ್ಯಾದಿಗಳಿಗೆ ಬೇಡಿಕೆ ಇದೆ. ವಿಯೆಟ್ನಾಮ್ ನಲ್ಲಿ ವೀಳ್ಯದೆಲೆ ಅಡಿಕೆಯ ರಸವನ್ನು ಒಟ್ಟಾಗಿ ಮದುವೆ ಸಮಾರಂಭಗಳಲ್ಲಿ ಧಾರಾಳವಾಗಿ ಬಳಸಲಾಗುತ್ತಿದೆ.ಇಲ್ಲಿ ಇದು ಪ್ರೇಮ ಮತ್ತು ಮದುವೆಯ ಸಂಕೇತವಾಗಿದೆ. ಇದೇ ದೃಷ್ಟಿಯಿಂದ ಅಡಿಕೆಯನ್ನು ಮಲಯ ಮತ್ತು ಥೈಲ್ಯಾಂಡಗಳಲ್ಲೂ ಬಳಸಲಾಗುತ್ತಿದ್ದು ಇಲ್ಲೆಲ್ಲಾ ಇದು ಸರ್ವೇ ಸಾಮಾನ್ಯ ಆಗಿದೆ.

ಮಾಲ್ಡೀವ್ಸ್ ಅಲ್ಲಿ ಅಡಿಕೆ ಜಗಿಯುವ ಪ್ರವೃತ್ತಿ ಒಂದು ಸಾಮಾನ್ಯ ಮತ್ತು ವಿಶಿಷ್ಟ ರೀತಿಯದ್ದಾಗಿದೆ.ಇಲ್ಲಿನ ಜನರು ಒಣಗಿದ ಮತ್ತು ಹುರಿದ ಅಡಿಕೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಜಾಗಿಯುತ್ತಾರೆ.ಇಲ್ಲಿ ಮನೆಯಲ್ಲಿ ತಯಾರಿಸಿದ ಪೇಪರ್ನಲ್ಲಿ ತುಂಬಿಸಿದ ಅಡಿಕೆ,ವೀಳ್ಯದೆಲೆ,ಲವಂಗ,ಏಲಕ್ಕಿ ಮತ್ತು ಸಕ್ಕರೆಯ ಮಿಶ್ರಣ ಕಿಲಿ ಎಂದು ಜನಪ್ರಿಯ ಆಗಿದೆ.

ಪಪ್ಪನ್ಯೂ ಜೀನಿಯ ಮತ್ತು ಸೋಲಮಾನ್ ದ್ವೀಪ ಸಮೂಹಗಳ ರಸ್ತೆ ಬದಿಯಲ್ಲಿ ಹಸಿ ಅಡಿಕೆ,ವೀಳ್ಯದ ಎಲೆ ಮತ್ತು ಸುಣ್ಣ ಮಾರಾಟ ಮಾಡುತ್ತಾರೆ. ಗೌಮಾ ದಲ್ಲಿ ಅಡಿಕೆ ಜಗಿಯುವುದು ಒಂದು ಸಾಮಾಜಿಕ ಚಟ ಆಗಿದ್ದು ಇದು ಸ್ನೇಹ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಇಂಡೋನೇಷ್ಯಾದಲ್ಲಿ ಅಡಿಕೆ ಜಗಿಯುವ ಹವ್ಯಾಸ ಗಂಡು,ಹೆಣ್ಣು ಎಂಬ ಬೇಧ ಭಾವ ಇಲ್ಲದೇ ಇದೆ.ಇತ್ತೀಚಿನ ವರ್ಷಗಳಲ್ಲಿ ಸಿಗರೇಟಿನ ಸೇವನೆ ಗಂಡಸರಲ್ಲಿ ಹೆಚ್ಚು ಆಗುತ್ತಿದೆ.

ಥಾಯ್ಲೆಂಡ್ ಅಲ್ಲಿ ಅಡಿಕೆಯ ಬಳಕೆ ಹೆಚ್ಚಾಗಿ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದು,ಇಲ್ಲಿ ಐವತ್ತರ ಪ್ರಾಯಕ್ಕಿಂತ ಹೆಚ್ಚಿನವರು ಇದರ ಬಳಕೆ ಹೆಚ್ಚಾಗಿ ಮಾಡುತ್ತಾರೆ.ಇಲ್ಲಿ ವೀಳ್ಯದ ಎಲೆ ಮತ್ತು ಅಡಿಕೆಯ ತುಂಡುಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ.

Advertisement

ಅಮೆರಿಕದಲ್ಲಿರುವ ಏಶಿಯಾದ ಜೀನಸು ಅಂಗಡಿಗಳಲ್ಲಿ,ಇಂಗ್ಲೆಂಡಿನ ಜೀನಸು ಅಂಗಡಿಗಳಲ್ಲಿ,ಬಜಾರುಗಲ್ಲಿ ಅಡಿಕೆ ಮಾರಾಟ ಮಾಡುತ್ತಾರೆ. ಇದೇ ರೀತಿ ದಕ್ಷಿಣ ಪೂರ್ವ ಆಸ್ಟ್ರೇಲಿಯಾ ಪ್ರದೇಶದ ನೈಟ್ ಕ್ಲಬ್ ಅಲ್ಲೂ ಅಡಿಕೆಯನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ.

ತೈವಾನ್ ನ ದಕ್ಷಿಣ ಮತ್ತು ಪೂರ್ವ ಬಾಗಗಳಲ್ಲಿ ಅಡಿಕೆ ಜಗಿಯುವ ಹವ್ಯಾಸ ಸಾಮಾನ್ಯ ಆಗಿದ್ದು, ಇಲ್ಲಿಯ ಜನ ಅಡಿಕೆ, ವೀಳ್ಯದ ಎಲೆ ಮತ್ತು ತಂಬಾಕನ್ನು ಸೇರಿಸಿಕೊಂಡು ಬಳಸುತ್ತಾರೆ.ಇದರ ಬಳಕೆಯಿಂದ ಶರೀರವನ್ನು ಸಮತೋಲನದಲ್ಲಿ ಇಟ್ಟು ಕೊಳ್ಳಲು ಸಾಧ್ಯ ಎಂಬುದು ಅವರ ಅನುಭವ ಆಗಿದೆ.ಇಲ್ಲಿ ಅಡಿಕೆ,ಸುಣ್ಣ, ವೀಳ್ಯದ ಎಲೆ ಮತ್ತು ತಂಬಾಕನ್ನು ಒಂದು ಕವಚದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ.

ತೈವಾನ್ ಪ್ರದೇಶಗಳಲ್ಲಿ ಬೀಡಾದ ಮಾರಾಟ ವ್ಯವಸ್ಥೆ ಒಂದು ವಿಶಿಷ್ಟ ರೀತಿಯದ್ದಾಗಿದ್ದು ಇಲ್ಲಿ ಇದರ ಮಾರಾಟವನ್ನು ಹದಿ ಹರೆಯದ ಹುಡುಗಿಯರು ರಸ್ತೆ ಬದಿಯಲ್ಲಿ ಒಂದು ಆಕರ್ಷಕ ಅಂಗಡಿಯಲ್ಲಿ ಮಾರುತ್ತಾರೆ.ಇಲ್ಲಿ ಇವರು ಗ್ರಾಹಕರನ್ನು ಸೆಳೆಯುತ್ತಾರೆ.ಇವರನ್ನು ಅಲ್ಲಿ ಅಡಿಕೆಯ ಅಂದಗಾರ್ತಿ ಎನ್ನುತ್ತಾರೆ.

ಈ ಎಲ್ಲಾ ರಾಷ್ಟ್ರಗಳಲ್ಲಿ ಇಂದು ಅಡಿಕೆಯೊಂದಿಗೆ ವಿವಿಧ ಮೌಲ್ಯ ವರ್ಧಿತ ಉತ್ಪನ್ನಗಳ ರೂಪದ ಆಟಿಕೆಯೂ ಮಾರಾಟ ಆಗುತ್ತಿದ್ದು,ಕೆಲವು ರಾಷ್ಟ್ರಗಳಲ್ಲಿ ಇವುಗಳ ಬಳಕೆ ಮೇಲೆ ನಿಷೇಧ ಹೇರುವ ಪ್ರಯತ್ನಗಳೂ ನಡೆದಿವೆ. ಇನ್ನು ಹಲವು ಪ್ರದೇಶಗಳಲ್ಲಿ ಇದನ್ನು ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧಿಸುವುದರೊಂದಿಗೆ ಅಪ್ರಬುದ್ದರಿಗೆ ನೀಡಬಾರದೆಂದು ಕಾನೂನುಗಳನ್ನು ಮಾಡಿದ್ದಾರೆ.

ಈ ನಿಷೇಧಗಳಿಗೆ ಮುಖ್ಯ ಕಾರಣ ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಅಧ್ಯಯನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ಅಲ್ಲದೆ ಸಂಶೋಧಕರ ಅಭಿಪ್ರಾಯ ಪ್ರಕಾರ ಆಗಿದೆ.ಹೀಗಿದ್ದರೂ ಇಲ್ಲೆಲ್ಲಾ ಅಡಿಕೆಯ ಬಳಕೆ ಇನ್ನೂ ಇದೆ. ವಿಶ್ವ ಆರೋಗ್ಯ ಸಂಸ್ಥೆ ಅಲ್ಲದೆ ವಿಶ್ವ ಕ್ಯಾನ್ಸರ್ ಸಂಸ್ಥೆಗಳ ಅಧ್ಯಯನ ಅಡಿಕೆ ಮತ್ತು ತಂಬಾಕ್ಯುಕ್ತ ಅಡಿಕೆ ಮೇಲೆ ಪಶ್ಚಿಮದ ಪೆಸಿಫಿಕ್ ಪ್ರದೇಶ,ತೈವಾನ್ ಥಾಯ್ಲೆಂಡ್ ಮುಂತಾದ ಅಡಿಕೆ ಬಳಕೆ ಪ್ರದೇಶಗಳಲ್ಲಿ ಆಗಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಹಣೆಪಟ್ಟಿಯನ್ನು ಇಟ್ಟಿದೆ.

Advertisement

ಹೀಗಿದ್ದರೂ ಅಡಿಕೆಯ ಬಗ್ಗೆ ಇನ್ನಷ್ಟು ಅಧ್ಯಯನ ಮತ್ತು ಸಂಶೋಧನೆ ಆಗಬೇಕಿದೆ.ಅಡಿಕೆಯಲ್ಲಿ ಹಲವು ರೀತಿಯ ಔಷದೀಯ ಗುಣಗಲಿದ್ದು ಇವುಗಳ ಬಗ್ಗೆ ಆದುನಿಕ ಅಧ್ಯಯನ ಮತ್ತು ಸಂಶೋಧನೆ ಆಗಬೇಕಿವೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!
July 3, 2025
2:58 PM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ
ಹಾಸನದಲ್ಲಿ ಹೃದಯಾಘಾತ ಪ್ರಕರಣ | ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ
July 2, 2025
9:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group