MIRROR FOCUS

Arecanut | ಅಡಿಕೆಗೆ ಪರ್ಯಾಯ ಬೆಳೆ ಯಾವುದು…? | ಗಿಡಗಳಿಗೆ ಬೇಕಾದ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಬೆಳೆಗೆ ಪರ್ಯಾಯ ಎಂದರೆ ಎಲ್ಲರೂ ಸೂಚಿಸುವ ಬೆಳೆಗಳೆಂದರೆ ಕಾಫಿ, ಕಾಳುಮೆಣಸು. ನಮ್ಮ ಮಲೆನಾಡಿನೆಲ್ಲೆಡೆ ಕನಿಷ್ಠ ಮನೆ ಖರ್ಚಿಗಾದರೂ ಕಾಫಿ ಬೆಳೆಯುತ್ತಾರೆ , ಅಲ್ಲಲ್ಲಿ ಕಾಳುಮೆಣಸು ಇದೆ. ಆದರೆ ಕಾಫಿ ಮತ್ತು ಕಾಳುಮೆಣಸು ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಂದಂತೆ ಮಲೆನಾಡಿನ ಇತರೆ ತಾಲೂಕಿನಲ್ಲಿ ಮತ್ತು ಕರಾವಳಿಯಲ್ಲಿ ಬರದು… ಹಾಗಿದ್ದರೆ ಪರ್ಯಾಯ ಏನು..?

Advertisement

ದರೆ ಹತ್ತಿ ಉರಿದೊಡೆ……, ಎಂಬ ಪದ್ಯದ ಸಾಲು ನೀವು ಕೇಳಿರಬಹುದು.‌ಅಡಿಕೆಯೇ ಸರ್ವ ನಾಶವಾಗಿ ಹೋದರೆ ಅಡಿಕೆಯ ಆಂಶಿಕ ನೆರಳು ಮತ್ತು ಅಡಿಕೆಯ ಅವಲಂಬಿತವಾಗಿ ಬೆಳೆಯುವ ಬೆಳೆಗಳಾದ ಕಾಫಿ, ಕಾಳುಮೆಣಸು ಬೆಳೆ ಹೇಗೆ ಬೆಳೆಯಲು ಸಾಧ್ಯ…?,  ಎಲ್ಲಾಕಡೆ ಎಲ್ಲಾ ಬೆಳೆ ಸಾಧ್ಯವಿಲ್ಲ. ನಾವು ಬುಡಕ್ಕೆ ಎಷ್ಟಾದರೂ ಗೊಬ್ಬರ ನೀರು ಕೊಡಬಹುದು ಆದರೆ ಹೊರಗಿನ ವಾತಾವರಣವನ್ನು ಹೇಗೆ ಸೃಷ್ಟಿಸೋಣ…?.

ಕಾಫಿ ಸೂಕ್ತ ಸಮಯದಲ್ಲಿ ಹೂ ಬಿಡಲು , ಕಾಯಿ ಕಟ್ಟಲು ಸೂಕ್ತ ವಾತಾವರಣ ಹೇಗೆ ಸೃಷ್ಟಿಸುವುದು…?,ಹೆಚ್ಚು ಕಡಿಮೆ ಸಮಾನ ವಾತಾವರಣವಿರುವ ಕೊಪ್ಪದ ಪಕ್ಕದ ತೀರ್ಥಹಳ್ಳಿ ತಾಲೂಕಿನಲ್ಲಿ ಕೊಪ್ಪದ ಕಾಫಿ ಇಳುವರಿ ಬೆಳೆ ಬರುತ್ತಿಲ್ಲ.ಪ್ರಕೃತಿ ಬಹಳ ಮುಖ್ಯ.

ಆಸಕ್ತರು ಯಾವ ಬೆಳೆಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಆದರೆ ಅದರ ಮೂಲ ನೆಲೆಯಲ್ಲಿ ಬರುವ ಇಳುವರಿ ಬೇರೆ ಜಾಗದಲ್ಲಿ ತಿಪ್ಪರಲಾಗ ಹೊಡೆದರೂ ಬರುವುದಿಲ್ಲ.ಕೆಲವು ಕಡೆಯಲ್ಲಿ ಚಿಕ್ಕ ಮಗಳೂರು ಜಿಲ್ಲೆಯ ಕಾಫಿ ಇಳುವರಿಗಿಂತಲೂ ಹೆಚ್ಚು ಇಳುವರಿ ಪಡೆದಿದ್ದಾರೆ. ಆದರೆ ಅದು ತಾತ್ಕಾಲಿಕ ಮಾತ್ರ.

ನಮ್ಮ ಅಡಿಕೆ ಕೂಡ ಅಷ್ಟೇ.., ಇವತ್ತು ಬಯಲು ಸೀಮೆ ದಾಟಿ ಪರ ರಾಜ್ಯ ದಾಟಿ ಮುಂದೊಮ್ಮೆ ರಾಜಸ್ಥಾನದ ಮರುಭೂಮಿಗೂ ವ್ಯಾಪ್ತಿಸಬಹುದು‌ . ಆದರೆ ಅತಿ ಶೀಘ್ರದಲ್ಲಿ ತನ್ನದಲ್ಲದ ವಾತಾವರಣದ ಜಾಗದಲ್ಲಿ ಬೆಳೆದ ಬೆಳೆ ನಾಶವಾಗಿ ಹೋಗುತ್ತದೆ.
ಇದು ಇತಿಹಾಸವಾಗಿದೆ.

ಹೊಸದಾಗಿ ಕಾಫಿ ಬೆಳೆ ಬೆಳೆಯುವವರು ಗಿಡ ಮಾಡಲು ಉತ್ತಮ ಇಳುವರಿ ನೀಡುತ್ತಿರುವ ಕಾಫಿ ಗಿಡದಿಂದ ಬೀಜ ಆರಿಸಿ ಉತ್ತಮ ಇಳುವರಿ ಗಿಡಗಳನ್ನು ಮಾಡಿ ನೆಡಬೇಕು. ಇದೆಲ್ಲಾ ಬಹಳ ಕಷ್ಟ. Gemination ಇಳುವರಿ ಇವೆಲ್ಲ ಹಲವಾರು ವರ್ಷಗಳಿಂದ ಬೆಳೆಯುವ ನುರಿತ ಕಾಫಿ ಬೆಳೆಗಾರರಿಗೂ ಇವತ್ತಿಗೂ ಸಂಕೀರ್ಣವಾದರೆ ಇನ್ನು ಹೊಸದಾಗಿ ಈ ಬೆಳೆ ಆಯ್ಕೆ ಮಾಡಿಕೊಳ್ಳುವ ವರಿಗೆ ಈ ತಳಿ ಉತ್ತಮ ಇಳುವರಿಯ ಗಿಡದ ಆಯ್ಕೆ ಕಬ್ಬಿಣದ ಕಡಲೆಯೇ ಸರಿ….

ಪ್ರತಿ ವಲಯಕ್ಕೂ ಅದರದ್ದೇ ಆದ ಬೆಳೆ ಇರುತ್ತದೆ. ರೈತರು ಮತ್ತು ಕೃಷಿ ಇಲಾಖೆ ಅದರ ಬಗ್ಗೆ ಗಮನ ಕೊಡಬೇಕು. ನಮ್ಮದಲ್ಲದ ಬೆಳೆ ಒಂದಲ್ಲ ಒಂದು ದಿನ ಕೈ ಕೊಡುತ್ತದೆ.

ಇವತ್ತು ಮಲೆನಾಡು ಕರಾವಳಿಯ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿರುವುದು ನಮ್ಮ ಭಾಗದಲ್ಲಿ ಲಗಾಯ್ತಿನಿಂದ ಬೆಳೆಯುತ್ತಿದ್ದ “ಸಾಂಪ್ರದಾಯಿಕ ವಾತಾವರಣ” ಬಿಟ್ಟು ಗುಡ್ಡದ ಇಳಿಜಾರು, ಗದ್ದೆ ಬಯಲು, ಕಾಡುಜಾಗ ಇತರೆ ಜಾಗದಲ್ಲಿ ಒತ್ತಾಯ ಮಾಡಿ ಅಡಿಕೆ ಕೃಷಿ ಮಾಡಿದ್ದೇ ಕಾರಣ.

ರೈತರು ಪರ್ಯಾಯದ ಸಾಧಕ ಬಾಧಕದ ಬಗ್ಗೆ ಚಿಂತನೆ ಮಾಡಿ ಮುಂದಡಿಯಿಡಬೇಕು.ಕಾಫಿಯೋ-ಕಾಳುಮೆಣಸೋ ಯಾವುದೇ ಬೆಳೆ ಬೆಳೆಯುವುದಾದಲ್ಲಿ ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬೆಳೆಯುವುದೊಳಿತು. ಯಾರನ್ನೋ ಅನುಕರಿಸುವುದು ಅಪಾಯ. ಆಯಾ ಪ್ರದೇಶದ ಬೆಳೆಯೇ ಸೂಕ್ತ ಹೊರತು, ಇನ್ಯಾವುದೋ ವಾತಾವರಣದ ಬೆಳೆಯನ್ನು ಬೆಳೆಯಲು ಹೊರಡುವುದಕ್ಕಿಂತ ಎಚ್ಚರ ವಹಿಸುವುದು ಸೂಕ್ತ.  ರೈತರು ಜಾಗೃತರಾಗಿ ಮುಂದಡಿಯಿಡಲಿ ಎಂಬುದು ಆಶಯ….

Farmers should think about alternative crop. If any crop is grown, it should be studied and grown. Imitating someone is dangerous. The crop of the respective region is suitable.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

1 hour ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

1 hour ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

2 hours ago

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |

ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…

2 hours ago

ಅಡಿಕೆ ಬೆಳೆಗಾರರಿಗೆ ನಿಜವಾದ ಸಮಸ್ಯೆ ಯಾವುದು ? ಮುಂದೆ ಇರುವ ಸವಾಲುಗಳು ಯಾವುದು ?

ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…

11 hours ago

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…

18 hours ago