#Diabetes | ಮಧುಮೇಹ ರೋಗಿಗಳು ಯಾವೆಲ್ಲಾ ಹಣ್ಣುಗಳನ್ನು ಸೇವಿಸಬಹುದು..? ಹಣ್ಣುಗಳ ಸೇವನೆಯ ಮಹತ್ವವೇನು..?

October 12, 2023
1:47 PM
ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ.  ಬಾಳೆಹಣ್ಣು ಪೊಟಾಸಿಯಂ ಮತ್ತು  tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.  ನಾರಿನಂಶ /ಫೈಬರ್ ಸಮೃದ್ಧ ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯಕಾರಿ. ಫೈಬರ್ ಸಮೃದ್ಧವಾಗಿರುವ ಆಹಾರ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ  ಹಸಿವನ್ನು ಕಡಿಮೆ ಮಾಡುತ್ತದೆ.

ಹಣ್ಣುಗಳು.. ಕಾರ್ಬೋಹೈಡ್ರೇಟ್ಗಳು, ಅಗತ್ಯವಾದ ಜೀವಸತ್ವಗಳು ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧಿ ಮೂಲವಾಗಿದೆ.ಕೆಲವು ಪೋಷಕಾಂಶ ಹಣ್ಣುಗಳಲ್ಲಿ ಮಾತ್ರದೊರೆಯುತ್ತದೆ. ಹೀಗಾಗಿ ಸಮತೋಲನ ಹಾಗೂ ಆರೋಗ್ಯಕರ ಆಹಾರವನ್ನು ಹೊಂದಲು ಹಣ್ಣುಗಳು ನಮಗೆ ಅತ್ಯಗತ್ಯ.  ಹಣ್ಣುಗಳು ನೈಸರ್ಗಿಕ ಸಕ್ಕರೆ ಪ್ರಕ್ಟೊಸನ್ನು ಹೊಂದಿರುತ್ತದೆ.

ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ.  ಬಾಳೆಹಣ್ಣು ಪೊಟಾಸಿಯಂ ಮತ್ತು  tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ನಾರಿನಂಶ /ಫೈಬರ್ ಸಮೃದ್ಧ ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯಕಾರಿ. ಫೈಬರ್ ಸಮೃದ್ಧವಾಗಿರುವ ಆಹಾರ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.  ಹಸಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.  ಟೈಪ್ ಟು ಮಧುಮೇಹಕ್ಕೆ ಸ್ತೂಲಕಾಯ ಒಂದು ಕಾರಣವಾಗಿದೆ. ಫೈಬರ್ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ತೂಕವನ್ನು ನಿಯಂತ್ರಿಸುವ ಮೂಲಕ ಮಧುಮೆಹವನ್ನು ತಡೆಗಟ್ಟಬಹುದು.

Low Glycemic Index(LGI) ಅಂದರೆ ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಗ್ಲುಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುವಂಥದ್ದು  ಈ ಕಡಿಮೆ glycemic index ಇರುವ ಎಲ್ಲಾ ಹಣ್ಣುಗಳು ಮಧುಮೇಹ ರೋಗಿಗಳು ಉಪಯೋಗಿಸಬಹುದು ಅವುಗಳು ಯಾವುವೆಂದರೆ. ಸೇಬು, ಪಪ್ಪಾಯ, ಕಿತ್ತಳೆ, ಮರಸೇಬು, ಚೆರ್ರಿ, ನೇರಳೆ, ಪೇರಳೆ, ಡ್ರಾಗನ್ ಫ್ರೂಟ್, ಕಿವಿಹಣ್ಣು, ಅವಕಾಡೋ.

ಪಪ್ಪಾಯಿ: ಕಡಿಮೆ ಕ್ಯಾಲೋರಿಇದೆ  hypoglycemic effect..ಎಲ್ಲಾ ವಿಟಮಿನ್ ಗಳು   ಫೈಬರ್ ಅಂಶ ಜಾಸ್ತಿ ಇರವುದರಿಂದ  ಮಧುಮೆಹ ರೋಗದಲ್ಲಿ  ಬಳಸಬಹುದು.

ಚೆರ್ರಿ : ಸ್ವಾಭಾವಿಕವಾಗಿ ಸಿಗುವ ಚೆರ್ರಿ ಹಣ್ಣು antioxidents.ಇದ್ದು ರೋಗ ನಿರೋಧಕ  ಶಕ್ತಿ ಹೆಚ್ಚಿಸುವಲ್ಲಿ ಸಹಾಯಕಾರಿ. ಕೃತಕ ಚೆರ್ರಿಯಲ್ಲಿ ಸಕ್ಕರೆ ಅಂಶ  ಇರುವುದರಿಂದ ಸೇವಿಸುವುದು ಒಳ್ಳೇದಲ್ಲ.

ಕಿವಿಹಣ್ಣು : ಬಿಳಿರಕ್ತ ಕಣಗಳನ್ನು ಹೆಚಿಸುತ್ತದೆ  ಫೈಬರ್, ಪೊಟಾಸಿಯಂ ವಿಟಮಿನ್ಸ್ ಸಮೃದ್ಧವಾಗಿದ್ದು ಕಡಿಮೆ ಕ್ಯಾಲೋರಿ ಯನ್ನು ಹೊಂದಿದೆ.

ಡ್ರ್ಯಾಗನ್ ಫ್ರೂಟ್ : ಕೆಡಿಮೆ ಕ್ಯಾಲರಿ,ಆಂಟಿ ಆಕ್ಸಿಡೆಂಟ್ ಹಾಗೂ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಈ ಎಲ್ಲಾ ಹಣ್ಣುಗಳನ್ನು ಮಿತವಾಗಿ ಸೇವಿಸಿ. ಮಧುಮೆಹ ರೋಗಿಗಳು  ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಇವುಗಳಲ್ಲಿ ಸಕ್ಕರೆಯ ಪ್ರಮಾಣ (High Glycemic Index ) ಅಧಿಕವಿರುವುದರಿಂದ  ಸೇವಿಸದೆ ಇರುವುದು ಉತ್ತಮ. ಉತ್ತಮ ಆಹಾರಪದ್ದತಿ  ವ್ಯಾಯಾಮ  ಯೋಗ   ವಾಕ್   ಉತ್ತಮ ಜೀವನಶೈಲಿ  ಇವುಗಳಿಂದ ಮಧುಮೇಹ ನಿಯಂತ್ರಿಸಬಹುದು.

( ಸಂಗ್ರಹ ಮಾಹಿತಿ)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು
March 3, 2026
10:34 PM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್
ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ
March 3, 2026
9:28 PM
by: ಮಿರರ್‌ ಡೆಸ್ಕ್
ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ
March 3, 2026
2:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror