ಅದೊಂದು ತಾಲ್ಲೂಕು ಕೇಂದ್ರ. ಅಲ್ಲಿನ ಬ್ಯಾಂಕ್(Bank) ವೊಂದಕ್ಕೆ ಕೇಂದ್ರ ಕಚೇರಿಯಿಂದ(Office) ಲೆಕ್ಕ ಪರಿಶೋಧನೆಗೆ ಅಧಿಕಾರಿಗಳೊಬ್ಬರು ಬಂದಿದ್ದರು. ಮಧ್ಯಾಹ್ನ ಊಟದ(Meal) ಸಮಯದಲ್ಲಿ ಆ ಮೇಲಾಧಿಕಾರಿಗಳು ‘ ಈ ಊರಿನಲ್ಲಿ ಅತ್ಯಂತ ರುಚಿಕರ ಊಟ ಯಾವ ಹೋಟೆಲ್(Hotel) ನಲ್ಲಿ ಸಿಗುತ್ತದೆ ..? ‘ ಎಂದು ಕೇಳಿದರು. ಬ್ರಾಂಚ್ ಮ್ಯಾನೇಜರ್(Branch Manager) ಊರಿನ ಪ್ರಮುಖ ಊಟದ ಹೋಟೆಲ್ ಗಳ ಮಾಹಿತಿಯನ್ನು ನೀಡಿದರು. ನಂತರ ಆ ಮೇಲಾಧಿಕಾರಿಗಳು ಕಡಿಮೆ ರುಚಿಯ ಹೋಟೆಲ್ ಯಾವುದೆಂದು ಕೇಳಿ ಮದ್ಯಾಹ್ನದ ಊಟಕ್ಕೆ ಆ ಕಡಿಮೆ ರುಚಿಯ ಹೋಟೆಲ್ ಗೆ ಮ್ಯಾನೆಜರ್ ರನ್ನು ಕರೆದುಕೊಂಡು ಹೋಗಿ ಉಂಡು ಬಂದರು.
ಬ್ಯಾಂಕ್ ಲೆಕ್ಕಪತ್ರ ಸಂಜೆಯೊರೆಗೂ ಆಯಿತು. ಸಂಜೆ ಕಾರ್ಯ ಕಲಾಪ ಮುಗಿಸಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿ ಗಳನ್ನು ಊರಿನ ಚಾಟ್ ಸೆಂಟರ್ ಗೆ ಕರೆದುಕೊಂಡು ಹೋಗಿ ಪಾನಿ ಪುರಿ ಗೋಭಿ ಮಂಚೂರಿ ತಿನ್ನುವುದೆಂದಾಯಿತು. ಮತ್ತೆ ಆ ಮೇಲಾಧಿಕಾರಿಗಳು ಊರಿನ ಚಾಟ್ ಸೆಂಟರ್ ನಲ್ಲಿ ಒಮ್ಮೆ ತಿಂದರೆ ಮತ್ತೆ ಮತ್ತೆ ಅದೇ ಚಾಟ್ ಗೆ ಹೋಗಿ ಗೋಬಿ ಪಾನಿ ಪೂರಿ ತಿನ್ನುವ ಆಸೆ ಮೂಡಿಸುವ ಚಾಟ್ ಸೆಂಟರ್ ಯಾವುದಿದೆ …? ಎಂದು ಕೇಳಿದರು. ಅವರು ಒಂದೆರಡು ಚಾಟ್ ಸೆಂಟರ್ ನ ಹೆಸರು ಹೇಳಿದರು. ಮತ್ತೆ ಆ ಮೇಲಾಧಿಕಾರಿಗಳು “ಕಡಿಮೆ ರುಚಿಯ ಚಾಟ್ಸ್ ಸೆಂಟರ್” ಹೋಗೋಣ ಎಂದರು.
ಇದನ್ನು ಕೇಳಿ ಬ್ರಾಂಚ್ ಮ್ಯಾನೇಜರ್ ಗೆ ಅಚ್ಚರಿ ಯಾಯಿತು. ಅವರು ಆ ಮೇಲಾಧಿಕಾರಿಗೆ “ಸಾರ್ ಎಲ್ಲರೂ ಎಲ್ಲಿ ಹೆಚ್ಚು ರುಚಿಯಾದ ಊಟ ಉಪಹಾರ ದೊರೆಯುತ್ತದೆ ಎಂದು ಹುಡುಕಿ ಕೊಂಡು ಹೋದರೆ ನೀವು ಕಡಿಮೆ ರುಚಿಯ ಊಟ ಉಪಹಾರ ಎಲ್ಲಿ ಸಿಗುತ್ತದೆ ಎಂದು ಕೇಳು ತ್ತಿದ್ದೀರ…!? ಎಂದು ಪ್ರಶ್ನಿಸಿದರು.
ಅದಕ್ಕೆ ಆ ಮೇಲಾಧಿಕಾರಿಗಳು ” ಇತ್ತೀಚಿನ ದಿನಗಳಲ್ಲಿ ಮಾಮೂಲಿಗಿಂತ ಹೆಚ್ಚು ರುಚಿ ಆಹಾರ ತಿನಸು ಗಳು ಹಲವೆಡೆ ಲಭ್ಯ ವಾಗುತ್ತಿದೆ. ಅಲ್ಲಿ ನೀವು ಒಮ್ಮೆ ಉಪಹಾರ ಮಾಡಿದರೆ, ಗೋಭಿ ಮಂಚೂರಿ ಪಾನಿ ಪುರಿ ಇತರೆ ಸ್ನ್ಯಾಕ್ಸ್ ತಿಂದರೆ ಮತ್ತೆ ಮತ್ತೆ ಅಲ್ಲೇ ತಿನ್ನಬೇಕು ಎನಿಸುತ್ತದೆ… ನೀವು ಅಲ್ಲೇ ಹೋಗಿ ತಿನ್ನಲು ಇಚ್ಚೆಪಡುತ್ತೀರ… ನಮ್ಮ ಯುವ ಪೀಳಿಗೆ ಈ ತಿನಿಸು ತಿನ್ನಲು ಮುಗಿ ಬೀಳುತ್ತಿದೆ.
ಈ ಬಾಯಿರುಚಿಯ addiction ಆಹಾರ ತಯಾರಕರು ಬಳಸುವ ಟೇಸ್ಟಿಂಗ್ ಪೌಡರ್ ಅಜಿನೊಮೊಟೋ ಎಂಬ ಅಪಾಯಕಾರಿ ಪೌಡರ್ ನಲ್ಲಿ ರುತ್ತದೆ. ಈ ಪೌಡರ್ ಬಳಕೆಯ ತಿನಿಸು ಗಳನ್ನು ಒಮ್ಮೆ ತಿಂದರೆ ಇನ್ನಷ್ಟು ಮತ್ತಷ್ಟು ತಿನ್ನಬೇಕೆನ್ನಿಸುತ್ತದೆ. ಇದು ನೇರವಾಗಿ ಮನುಷ್ಯ ನ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಿಡ್ನಿ ಹೃದಯ ತೊಂದರೆ ಗೊಳಪಡುತ್ತದೆ. ಯುವ ಪೀಳಿಗೆ ಯ ಲೈಂಗಿಕ ಶಕ್ತಿ ಕುಂದಿಸಿ ಬಂಜೆ ತನ ಇತರೆ ಸಮಸ್ಯೆ ಹೆಚ್ಚಿಸುತ್ತದೆ.
ಚೀನಾ ದಂತಹ ದೇಶಗಳು ಈ “ಟೇಸ್ಟಿಂಗ್ ಪೌಡರ್ ನ್ನ ” ನಮ್ಮ ದೇಶದ ಮೂಲೆ ಮೂಲೆಗೂ ತಲುಪಿಸಿದೆ. “ರುಚಿ ಯ” ಆಸೆಗೆ ನಮ್ಮ ಯುವ ಪೀಳಿಗೆ ಟೇಸ್ಟಿಂಗ್ ಪೌಡರ್ ಹಾಕಿದ ಆಹಾರ ತಿಂದು “ನಿರ್ವೀರ್ಯ” ರಾಗುತ್ತಿರುವುದು ಅತ್ಯಂತ ಕಳವಳಕಾರಿ…. ಆದ್ದರಿಂದ ನೀವುಗಳು ಹೆಚ್ಚು ಟೆಸ್ಟ್ ಇರುವ ಚಾಟ್ಸ್ ಸೆಂಟರ್, ಸ್ಮ್ಯಾಕ್ ಸೆಂಟರ್ ಹೋಟೆಲ್ ಗಳಲ್ಲಿ ತಿನಿಸು ತಿನ್ನಲು ಹೋಗಬೇಡಿ. ಈ ಕಾಲದಲ್ಲಿ “ಹೆಚ್ಚು ರುಚಿ ಅತ್ಯಂತ ಅಪಾಯಕಾರಿ… ”
ನಮ್ಮ ನೆರೆಯ ಶತೃ ದೇಶ ಚೀನಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುತ್ತಿದೆ. ಯಾವುದೇ ಆಯುಧ ವಿಲ್ಲದೆ “ಅಜಿನಮೊಟೊ ಟೇಸ್ಟಿಂಗ್ ಪೌಡರ್”(Ajinamoto Tasting Powder) ನ್ನ ನಮ್ಮ ದೇಶಕ್ಕೆ ಮಾರಿ ನಮ್ಮ ಯುವ ಪೀಳಿಗೆಯ ಬುಡಕ್ಕೆ ಕೈ ಹಾಕಿ ಈ ದೇಶವನ್ನು ನಾಶ ಮಾಡಲು ಯತ್ನಿಸುತ್ತಿದೆ. ಈ ಟೇಸ್ಟಿಂಗ್ ಪೌಡರ್ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ ನಮ್ಮ ಜನರನ್ನು ಜಾಗೃತೆ ಗೊಳಿಸಿ ” ಎಂದರು…..
ಇತ್ತೀಚೆಗೆ ಗೋವಾದಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಇದು ದೇಶದಾದ್ಯಂತ ನಿಷೇಧ ಆಗಬೇಕು. ದಿನ ದಿನಕ್ಕೂ ಟೇಸ್ಟಿಂಗ್ ಪೌಡರ್ ಪ್ರಭುತ್ವದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುವುದು ಅತ್ಯಂತ ಆತಂಕಕಾರಿ. ಇತ್ತಿಚೆಗೆ ಕೆಲವು ಅಡಿಗೆ ತಯಾರಕರು “ಮದುವೆ ಮನೆ ಅಡುಗೆಗೂ” ಕೆಲವು ಕಡೆಯಲ್ಲಿ ಮದುವೆ ಊಟದ ರುಚಿ ಹೆಚ್ಚಿಸಲು ಬಳಸುತ್ತಿದ್ದಾರೆ ಎಂಬ ಸುದ್ದಿ ಇದೆ . “ಮದುವೆ ಮನೆ” ಮಾಡುವವರು ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಅಜಿನಮೊಟೋ ಮಾರಿ ದೇಶ ಬಿಟ್ಟು ತೊಲಗಲಿ… ದೇಶದ ಪ್ರಜೆಗಳು ಆರೋಗ್ಯವಂತರಾಗಲಿ…. ಹೆಚ್ಚು ರುಚಿ ಬೇಡ…. ಕಡಿಮೆ ರುಚಿಯ ಹೆಚ್ಚು ಶುಚಿಯ ಉತ್ತಮ ಆಹಾರ ತಿಂದು ದೀರ್ಘ ಕಾಲ ಆರೋಗ್ಯ ವಾಗಿ ಜೀವನ ಮಾಡೋಣ…