ತರಕಾರಿ ಬೀಜಗಳನ್ನು ಯಾವ ತಿಂಗಳು, ವಾರಗಳಲ್ಲಿ ಬಿತ್ತನೆ ಮಾಡಬೇಕು | ಪಿ.ಶಿವಪ್ರಸಾದ, ವರ್ಮುಡಿ ಹೇಳುತ್ತಾರೆ… |

May 5, 2023
8:32 PM

ರೈತ ಬಂಧುಗಳೇ, ಈಗ ಪಾರಂಪರಿಕ ಕೃಷಿ ಬಿಟ್ಟು ತಾಂತ್ರಿಕ ಕೃಷಿ  ಮಾಡುವ ಸಮಯ ಬಂದಿದೆ, ಇದರಿಂದ ಉತ್ಪಾದನೆಯ ಜೊತೆಗೆ ಲಾಭವೂ ಹೆಚ್ಚಬಹುದು.ಯಾವ ತಿಂಗಳು ಯಾವ ತರಕಾರಿಯನ್ನು ಬೆಳೆಯಬಹುದು ಎಂಬುದನ್ನು ಶಿವಪ್ರಸಾದ್ ವರ್ಮುಡಿ ಅವರು ತಿಳಿಸಿಕೊಟ್ಟಿದ್ದಾರೆ.

ನಿರ್ವಿಷ ನಿರಂತರ ತರಕಾರಿ ಕ್ಯಾಲಂಡರ್.

1. April ತಿಂಗಳ 20 ನೇ ತಾರೀಕಿನ ನಂತ್ರ ಬರುವ ಅಮಾವಾಸ್ಯೆಯ ಹಿಂದೆ ಮುಂದಾಗಿ ಶನಿವಾರ/ಬುಧವಾರ,ಮಿ/ ತಿಥಿ ಬಿಟ್ಟು ಗೊಬ್ರಗಳಿಂದ ಮಣ್ಣು ಹದಮಾಡಿದ ಏರು ಮಡಿಗಳಲ್ಲಿ ಎರಡಿಂದ ಮೂರು ಇಂಚು ಆಳದಲ್ಲಿ ಈ ಕೆಳಗಿನ ತರಕಾರಿ ಬೀಜಗಳನ್ನು ಬಿತ್ತುವುದು. ನೀರು ಖಂಡಿತಾ ಹಾಕಲೇಬಾರದು. ಮಳೆ ಬಂದು ಅದರಷ್ಟಕ್ಕೆ ಸ್ವಾಭಾವಿಕವಾಗಿ ಹುಟ್ಟಬೇಕು.
1.ಸೊರೆ.2.ಪಡುವಲ. 3.ದಾರಳೆ. 4.ಋಷಿಕೇಶದಾರಳೆ. 5.ಹಾಗಲ. 6.ಅಳಸಂಡೆ. 7.ಕುಂಬಳ. 8.ಚೀನಿಕಾಯಿ.
ಬೆಂಡೆ ಹಾಕಬೇಡಿ.
2. May ತಿಂಗಳ ಕೊನೆಗೆ ಬರುವ ಅಮವಾಸ್ಯೆ ಯ ಅಕ್ಕ ಪಕ್ಕ , ಮಿ/ ತಿಥಿ ಬಿಟ್ಟು ಶನಿವಾರ/ ಬುಧವಾರ ದಂದು ಬೆಂಡೆ ಬೀಜ ಬಿತ್ತಿ.
3. ಮಳೆಗಾಲ ಬಂದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ ಸಾಲುಬಿಡಿಸಿ ಗೊಬ್ರ ಕೊಡಿ,ಸಮೃದ್ಧ ಬೆಳೆ.
4.June Last week/ July First week ಬರುವ ಅಮವಾಸ್ಯೆ (ಆರ್ಧ್ರಾ ನಕ್ಷತ್ರ ) ಮುಳ್ಳು ಸೌತೆ,ಬೀಜ ಹಾಕುದು.
5. July last week/ August first week ಬರುವ ಆಟಿ ಅಮವಾಸ್ಯೆ ಹತ್ರ ಸೌತೆ,ಕುಂಬಳ ಚೀನಿಕಾಯಿ ಬೀಜ ಬಿತ್ತುವುದು.
ಬಸಾಳೆ ನಡುವುದು.
6. ಮೇಲಿನ ದಿನವೇ ಬದನೆ ಬೀಜ ಬಿತ್ತುವುದು. Oct ನಲ್ಲಿ ನಡಲು ತಯಾರಿಗಾಗಿ.
7.August last ಗೆ ತೊಂಡೆ ಬಳ್ಳಿ ನಡುವುದು,/ ಬಳ್ಳಿ ಕತ್ತರಿಸುವುದು.

8. Oct 20 ರಿಂದ 30 ರ ಅಂದಾಜು ಬದನೆ ಗಿಡ ನಡುವುದು.
9. Nov last week ಬೆಂಡೆ ಬೀಜ ಹಾಕುವುದು.
10. Nov last week/Dec first week ಆಟಿಸೌತೆ ಮಾಡಿದ ಸಾಲನ್ನು ಹರಡಿ , ಕೊಚ್ಚಿ ಹರಿವೆ ಬೀಜ ಬಿತ್ತುವುದು.
11.Dec last week ಅಳಸಂಡೆ, ಪಡುವಲ,ಹಾಗಲ,ದಾರಳೆ ಸಾಲು ಕಣಿ ಮಾಡಿವಬೀಜ ಬಿತ್ತುವುದು.
12.Feb 25/30 ಅಂದಾಜು ಸೌತೆಕಾಯಿ, ಕುಂಬಳ,ಸೊರೆ,ಚೀನಿಕಾಯಿ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು.
13.April last week/Mayfirst week ಅಳಸಂಡೆ,ಮುಳ್ಳುಸೌತೆ, ಸೌತೆ, ಬೆಂಡೆ ಬೀಜ ಬಿತ್ತುವುದು.

ವಿ.ಸೂ: ಎಲ್ಲಾಬೀಜ ಬಿತ್ತುವ ದಿನ ಮಿ ಯಿಂದ ಅಂತ್ಯಗೊಳ್ಳುವ ತಿಥಿ ಬಿಡಿ.( ಸಪ್ತಮಿ,ಅಷ್ಟಮಿ,ನವಮಿ……..)
ವಾರ : ಶನಿವಾರ,ಬುಧವಾರ, ಬೀಜ ಬಿತ್ತನೆಗೆ ಅತ್ಯಂತ ಯೋಗ್ಯ. ಇವಿಷ್ಟು ಅನುಸರಿಸಿದರೆ ಬೆಳೆ ಸಮೃದ್ಧ. ರೋಗಭಾದೆ ಕಡಿಮೆ. ನೆಲಬಸಾಳೆ, ಗಡ್ಡೆ ತರಕಾರಿ ಜೊತೆಯಲ್ಲಿರಲಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror