ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದ WHO ನಿರ್ಧಾರ | ಬೆಳೆಗಾರರ ಮುಂದೆ ಉಳಿದಿರುವ ಏಕೈಕ ಮಾರ್ಗ ಏನು?

January 26, 2026
10:31 PM

ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತೆ WHO ಪ್ರಾಯೋಜಿತ ವೆಬಿನಾರ್‌ನಲ್ಲಿ ನಡೆಯುತ್ತಿರುವ ಚರ್ಚೆ ಆತಂಕ ಮೂಡಿಸಿದೆ. ಅಲ್ಲಿ ಮುಖ್ಯ ವಿಷಯವೇ ಅಡಿಕೆಯನ್ನು ಯಾವ ವಿಧಾನದ ಮೂಲಕ ನಿಯಂತ್ರಿಸಬಹುದು ಎಂಬುದಾಗಿದ್ದು, ಅಡಿಕೆಯನ್ನು “ಕ್ಯಾನ್ಸರ್ ಕಾರಕ” ಎಂದು ನಿರ್ಧರಿಸಲಾಗಿದೆ ಎಂಬ ಹಿನ್ನೆಲೆ ಈಗಾಗಲೇ ರೂಪುಗೊಂಡಿದೆ.

Advertisement
Advertisement

ಈ ಕಾರಣದಿಂದ ಆ ವೇದಿಕೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಸಮರ್ಥವಾಗಿ ವಾದಿಸುವ ಅವಕಾಶ ಬಹುತೇಕ ಇಲ್ಲದಂತಾಗಿದೆ. WHO ಜೊತೆಗೆ ಅಂತಹ ವಿಚಾರ ಚರ್ಚೆ ಮಾಡುವ ಅವಕಾಶವನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಮುಂದೆ ಅದು ದೊರಕುವುದು ಸಂದೇಹಾಸ್ಪದ.

ಭಾರತದೊಳಗೂ ಅವಕಾಶ ಕಡಿಮೆ: ಇದರಿಂದ ಭಾರತದೊಳಗೂ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸುವ ಅವಕಾಶ ಕುಗ್ಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿರುವ ಅಫಿಡವಿಟ್ ಬದಲಾಯಿಸುವ ಸಾಧ್ಯತೆಯೂ ಬಹಳ ಕಡಿಮೆ.  ಈ ಹಂತದಲ್ಲಿ ಬೆಳೆಗಾರರು ಮತ್ತು ಸಂಸ್ಥೆಗಳ ಮುಂದೆ ಉಳಿಯುವ ಅವಕಾಶ ಎಂದರೆ – “ಯಾವ ಮಾದರಿಯ ನಿಯಂತ್ರಣಗಳು ಬರಬಹುದು?” ಎಂಬುದನ್ನು ಗಮನಿಸಿ, ಅದಕ್ಕೆ ಪ್ರತಿತಂತ್ರ ರೂಪಿಸುವುದು ಮಾತ್ರ.

ವೆಬಿನಾರ್‌ನಲ್ಲಿ ಭಾಗವಹಿಸುವುದು ಅಗತ್ಯ : ನಮ್ಮ ಕಡೆಯಿಂದ ಯಾರಾದರೂ ಆ ವೆಬಿನಾರ್‌ನಲ್ಲಿ ಭಾಗವಹಿಸಿದರೆ, WHO ಯಾವ ಮಾದರಿಯ ನಿಯಂತ್ರಣ ಹೇರಲು ತಯಾರಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಬಹುದು. ಆದರೆ ಚರ್ಚಿಸಲು ಬೇಕಾದ ಮಾಹಿತಿ ಮತ್ತು ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂಬುದು ಕಟು ವಾಸ್ತವ.

ನಾವು ಈಗ ಮಾಡಬಹುದಾದ ಏನು? – ಡೇಟಾ ಆಧಾರಿತ ಪ್ರತಿತಂತ್ರ:

  1.  ಬಾಯಿ ಕ್ಯಾನ್ಸರ್ ಕುರಿತ ವಿಸ್ತೃತ ಅಂಕಿಅಂಶ ಸಂಗ್ರಹ : ಮೊದಲ ಹೆಜ್ಜೆಯಾಗಿ ಬಾಯಿ ಕ್ಯಾನ್ಸರ್ ಪ್ರಕರಣಗಳ ಕುರಿತ ಸಮಗ್ರ statistical data ತಯಾರಿಸಬೇಕಾಗಿದೆ. ಅದರೊಳಗೆ ಬಾಯಿ ಕ್ಯಾನ್ಸರ್ ರೋಗಿಗಳ ಸಂಖ್ಯೆ, ಅವರಲ್ಲಿ ಅಡಿಕೆ ಬಳಕೆದಾರರ ಸಂಖ್ಯೆ, ಅಡಿಕೆ ಜೊತೆಗೆ ತಂಬಾಕು ಸೇರಿದ ಬಳಕೆದಾರರ ಸಂಖ್ಯೆ, ತಂಬಾಕು ಇಲ್ಲದೆ ಅಡಿಕೆ ಮಾತ್ರ ಬಳಕೆದಾರರ ಸಂಖ್ಯೆ . ಈ ವಿಭಾಗವಾರು ಡೇಟಾ ಸಿಕ್ಕಾಗ ನಿಖರವಾದ ಸತ್ಯ ಬಹಿರಂಗವಾಗಲಿದೆ.
  2. ತಂಬಾಕು ಮುಕ್ತ ಅಡಿಕೆ ಬಳಕೆಯ ಪ್ರಚಾರ : ಬಹುತೇಕ ಅಡಿಕೆ ಬಳಕೆದಾರರು ತಂಬಾಕು ಕೂಡ ಬಳಸುವವರೇ. ಆದ್ದರಿಂದ ತಂಬಾಕು ರಹಿತ ಅಡಿಕೆ ಬಳಕೆ ಅಪಾಯಕಾರಿಯಲ್ಲ ಎಂಬುದನ್ನು ಡೇಟಾ ಆಧಾರದಲ್ಲಿ ಹೇಳುವ ಅವಕಾಶ ಸಿಗಬಹುದು.
  3. ಅಡಿಕೆಯಲ್ಲಿ ಔಷಧೀಯ ಅಂಶಗಳ ಸಂಶೋಧನೆ ಅಗತ್ಯ
  4. ಅಡಿಕೆಯ ರಾಸಾಯನಿಕ ಸಂಯುಕ್ತಗಳ ಪಟ್ಟಿ : ಅಡಿಕೆಯಲ್ಲಿ ಇರುವ ರಾಸಾಯನಿಕಗಳನ್ನು ಗುರುತಿಸಿ, ಅವುಗಳಲ್ಲಿ ಔಷಧೀಯ ಗುಣ ಇರುವ ಅಂಶಗಳನ್ನು ಪತ್ತೆಹಚ್ಚಬೇಕು. ಆದರೆ,  ಇದು ಕೇವಲ ಆಯುರ್ವೇದದ ಉಲ್ಲೇಖದಲ್ಲಿ ಅಲ್ಲ, modern evidence-based medical science ಪ್ರಕಾರ ನಡೆಯಬೇಕಾಗಿದೆ. ಆಗ ಮಾತ್ರ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗುತ್ತದೆ.
  5. ಕ್ಯಾನ್ಸರ್ ವಿರೋಧಿ ಅಂಶಗಳ ಹುಡುಕಾಟ : ಅಡಿಕೆಯಲ್ಲಿ carcinogenic ವಿರೋಧಿ ಅಂಶಗಳಿದೆಯೇ ಎಂಬುದು ಸಂಶೋಧನೆಗೆ ಒಳಪಡಬೇಕು.  ಅಡಿಕೆ ವೀಳ್ಯದೆಲೆ ಮತ್ತು ಸುಣ್ಣದೊಂದಿಗೆ ಸೇರಿದಾಗ ಕ್ಯಾನ್ಸರ್ ವಿರೋಧಿ ಗುಣ ಉಂಟಾಗುತ್ತದೆಯೇ ಎಂಬುದನ್ನೂ ಪ್ರಯೋಗಾಲಯ ಮಟ್ಟದಲ್ಲಿ ಪರಿಶೀಲಿಸಬೇಕು.

Safe Limit ನಿರ್ಧಾರ ಅತ್ಯಂತ ಮುಖ್ಯ :  WHOಗೆ ವರದಿ ನೀಡಿದ ತಜ್ಞರು ಬಳಸಿದ arecoline ಪ್ರಮಾಣವನ್ನು ಪರಿಶೀಲಿಸಬೇಕು.  ಅವರ ಪ್ರಯೋಗವನ್ನು ಭಾರತದಲ್ಲೇ ಪುನರಾವರ್ತಿಸಿ, ಕಡಿಮೆ ಪ್ರಮಾಣದಲ್ಲಿ ಪರೀಕ್ಷಿಸಿದರೆ ಒಂದು ಹಂತದಲ್ಲಿ ಕ್ಯಾನ್ಸರ್ trigger ನಿಲ್ಲುತ್ತದೆ. ಆ ಪ್ರಮಾಣವೇ safe limit ಆಗಿ ಸ್ಥಾಪಿತವಾದರೆ, “ನಿಯಂತ್ರಿತ ಪ್ರಮಾಣದ ಅಡಿಕೆ ಬಳಕೆ ಕ್ಯಾನ್ಸರ್ ಕಾರಕ ಅಲ್ಲ” ಎಂಬ ವೈಜ್ಞಾನಿಕ ಆಧಾರ ನಿರ್ಮಾಣವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Clinical Trial – ದುಬಾರಿ ಆದರೆ ಅತ್ಯಂತ ಪರಿಣಾಮಕಾರಿ. Clinical trial ಮಾಡುವುದು ಬಹು ವೆಚ್ಚದ ಕೆಲಸ.  ಆದರೂ ಇದು ಮಾನವರ ಮೇಲೆ ನೇರವಾಗಿ ನಡೆಯುವ ಪ್ರಯೋಗವಾಗಿರುವುದರಿಂದ ಅತ್ಯಂತ ವಿಶ್ವಾಸಾರ್ಹ ವರದಿ ನೀಡಬಲ್ಲದು. ಗುಣಾತ್ಮಕ ವರದಿ ದೊರೆತರೆ ಅಡಿಕೆ ಕುರಿತ ಜಾಗತಿಕ ಚರ್ಚೆಯ ದಿಕ್ಕನ್ನೇ ಬದಲಾಯಿಸಬಹುದಾದ ಸಾಧ್ಯತೆ ಇದೆ.

ನಾವು ಕಳೆದುಕೊಂಡ golden opportunity time ಅನ್ನು ಮತ್ತೆ ಹಿಂದಕ್ಕೆ ತರಲು ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ವೈಜ್ಞಾನಿಕ ಡೇಟಾ, ಸಂಶೋಧನೆ ಮತ್ತು ತಂತ್ರ ರೂಪಿಸುವ ಮೂಲಕ ಅಡಿಕೆ ಬೆಳೆಗಾರರ ಹಿತ ರಕ್ಷಿಸಬೇಕಾಗಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror