ರಾಜ್ಯ, ದೇಶ, ಪ್ರಪಂಚದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದಂತೆ ನಮ್ಮ ರಾಜ್ಯದ ಶ್ರೀಮಂತ ದೇವರ ಅಂದರೆ ದೇವಸ್ಥಾನಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ರಾಜ್ಯದ ಟಾಪ್ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. 2022-23ರ ಅವಧಿಯಲ್ಲಿ ದೇವಾಲಯ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಯಾವ ದೇವಸ್ಥಾನದ ಆದಾಯ ಎಷ್ಟು?
1. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಆದಾಯ : 123.64 ಕೋಟಿ ರೂ.
ವೆಚ್ಚ : 63.77 ಕೋಟಿ ರೂ.
2. ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು
ಆದಾಯ : 59.47 ಲಕ್ಷ ರೂ.
ವೆಚ್ಚ: 33.32 ಲಕ್ಷ ರೂ.
3. ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು
ಆದಾಯ: 52.40 ಲಕ್ಷ ರೂ.
ವೆಚ್ಚ: 52.40 ಲಕ್ಷ ರೂ.
4. ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಎಡೆಯೂರು
ಆದಾಯ: 36.48 ಲಕ್ಷ ರೂ.
ವೆಚ್ಚ: 35.68 ಲಕ್ಷ ರೂ.
5. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು
ಆದಾಯ: 32.10 ಕೋಟಿ ರೂ.
ವೆಚ್ಚ: 25.97 ಕೋಟಿ ರೂ.
6. ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ನಂಜನಗೂಡು
ಆದಾಯ: 26.71 ಕೋಟಿ ರೂ.
ವೆಚ್ಚ: 18. 74 ಕೋಟಿ ರೂ.
7. ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ
ಆದಾಯ: 22.52 ಕೋಟಿ ರೂ.
ವೆಚ್ಚ: 11.51 ಕೋಟಿ ರೂ.
8. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ
ಆದಾಯ: 14 .55 ಕೋಟಿ ರೂ.
ವೆಚ್ಚ: 13.02ಕೋಟಿ ರೂ.
9 . ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರ
ಆದಾಯ : 12.25 ಕೋಟಿ ರೂ.
ವೆಚ್ಚ: 7.40 ಕೋಟಿ ರೂ.