WHO ಹೇಳಿದ್ದೇ ಅಂತಿಮ ಸತ್ಯವೇ..? | ವಿಜ್ಞಾನ, ಪ್ರಶ್ನೆ ಮತ್ತು ಪ್ರಜ್ಞಾವಂತ ನಾಗರಿಕ

February 5, 2026
9:49 PM

ದ್ವಿತೀಯ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸಮಸ್ಯೆಗಳು ರಾಷ್ಟ್ರಗಳ ಗಡಿಯನ್ನು ಮೀರಿ ವ್ಯಾಪಿಸುತ್ತಿದ್ದವು. ಮಹಾಮಾರಿಗಳು, ಸಾಂಕ್ರಾಮಿಕ ರೋಗಗಳು, ಪೋಷಣಾಹೀನತೆ ಮುಂತಾದ ಸಮಸ್ಯೆಗಳು ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಸಂಯುಕ್ತ ರಾಷ್ಟ್ರ ಸಂಸ್ಥೆ ಅಡಿಯಲ್ಲಿ ಒಂದು ಸ್ವತಂತ್ರ ಜಾಗತಿಕ ಆರೋಗ್ಯ ಸಂಸ್ಥೆಯ ಅಗತ್ಯ ಎದುರಾಯಿತು.

Advertisement
Advertisement

ಈ ಅಗತ್ಯದಿಂದಲೇ World Health Organization (WHO) ಅನ್ನು 1948ರ ಏಪ್ರಿಲ್‌ 7ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು. ಈ ದಿನವನ್ನು ಇಂದಿಗೂ World Health Day ಆಗಿ ಆಚರಿಸಲಾಗುತ್ತಿದೆ.  WHO ಸಂವಿಧಾನ ರೂಪಿಸುವಲ್ಲಿ ಚೀನಾದ Szeming Sze, ಭಾರತದ ಡಾ. ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಮಹತ್ವದ ಪಾತ್ರ ವಹಿಸಿದ್ದರು. ಸಂಸ್ಥೆಯ ಕೇಂದ್ರ ಕಚೇರಿ Geneva, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇದೆ.

“ಎಲ್ಲಾ ಜನರು ಅತ್ಯುತ್ತಮ ಆರೋಗ್ಯ ಮಟ್ಟವನ್ನು ಪಡೆಯಬೇಕು” ಎಂಬ ತತ್ವದ ಮೇಲೆ WHO ಕಾರ್ಯನಿರ್ವಹಿಸುತ್ತದೆ. ಜಾಗತಿಕ ಆರೋಗ್ಯ ಸಮಸ್ಯೆಗಳಿಗೆ ಸಂಯೋಜಿತ ಪರಿಹಾರ ನೀಡುವುದು ಇದರ ಮೂಲ ಗುರಿ.

WHOಯ ಉನ್ನತ ನೀತಿ ರೂಪಿಸುವ ಅಂಗವಾಗಿರುವ World Health Assembly (WHA) ಯಲ್ಲಿ 194 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. Executive Board ನೀತಿಗಳ ಅನುಷ್ಠಾನ ಮೇಲ್ವಿಚಾರಣೆ ವಹಿಸಿಕೊಳ್ಳುತ್ತದೆ. Director-General ನೇತೃತ್ವದ Secretariat ದೈನಂದಿನ ಕಾರ್ಯಾಚರಣೆ ನಿರ್ವಹಿಸುತ್ತದೆ. WHOಗೆ 6 ಪ್ರಾದೇಶಿಕ ಕಚೇರಿಗಳು ಮತ್ತು 150ಕ್ಕೂ ಹೆಚ್ಚು ದೇಶೀಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

WHO ಏನು ಮಾಡುತ್ತದೆ? :  WHOಯ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ ಜಾಗತಿಕ ಆರೋಗ್ಯದಲ್ಲಿ ನಾಯಕತ್ವ, ಆರೋಗ್ಯ ಸಂಶೋಧನೆಗೆ ದಿಕ್ಕು ನಿರ್ಧಾರ, ನಿಯಮಗಳು ಮತ್ತು ಮಾನದಂಡಗಳ ರೂಪಣೆ, ಸರ್ಕಾರಗಳಿಗೆ ವೈಜ್ಞಾನಿಕ ಆಧಾರಿತ ನೀತಿ ಸಲಹೆ, ಮಹಾಮಾರಿ ಮತ್ತು ಪ್ರಕೃತಿ ವಿಪತ್ತುಗಳಿಗೆ ಪ್ರತಿಕ್ರಿಯೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ, ತಾಯಿ–ಮಕ್ಕಳ ಆರೋಗ್ಯ, ಪರಿಸರ ಮತ್ತು ಆರೋಗ್ಯ ರಕ್ಷಣೆ ಇವೆಲ್ಲ ಸೇರಿವೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, WHO ಒಂದು ಆಡಳಿತ ಸಂಸ್ಥೆ ಅಲ್ಲ. ಇದು ಸರ್ಕಾರಗಳಿಗೆ ಆದೇಶ ನೀಡುವ ಸಂಸ್ಥೆಯೂ ಅಲ್ಲ. WHO ಮಾರ್ಗಸೂಚಿಗಳು binding law ಅಲ್ಲ; ಅವು ವೈಜ್ಞಾನಿಕ ಸಾಕ್ಷ್ಯಾಧಾರಿತ ಮಾರ್ಗದರ್ಶನ ಮಾತ್ರ.

WHO ನೀತಿಗಳು ಜಾಗತಿಕ ಮತ್ತು ಸ್ಥಳೀಯ ಸಂಶೋಧನೆ, systematic reviews, meta-analysis, Global Health Observatory ಅಂಕಿಅಂಶಗಳು, ತಜ್ಞ ಸಮಿತಿಗಳ ಶಿಫಾರಸುಗಳು ಹಾಗೂ Evidence-Informed Policy Network (EVIPNet) ಮೂಲಕ ರೂಪುಗೊಳ್ಳುತ್ತವೆ. ಅಂದರೆ WHO ನಿರ್ಧಾರಗಳು ಮನಬಂದಂತೆ ಅಲ್ಲ; evidence-informed ಆಗಿರುತ್ತವೆ.

WHO ಪ್ರಕಟಿಸುವ World Health Statistics ಹಾಗೂ Health System Performance Indicators ಸೇರಿದಂತೆ ವಿವಿಧ ಆರೋಗ್ಯ ಸೂಚ್ಯಂಕಗಳು ಸರ್ಕಾರಗಳು, ಸಂಶೋಧಕರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮಾರ್ಗದರ್ಶಕ ಸಾಧನಗಳಾಗಿವೆ. ಆದರೆ ಇವು ಅಂತಿಮ ತೀರ್ಮಾನಗಳಲ್ಲ.

ಪ್ರತಿ ರಾಷ್ಟ್ರವೂ ತನ್ನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ WHO ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬಹುದು, ತಿದ್ದುಪಡಿ ಮಾಡಬಹುದು ಅಥವಾ ನಿರಾಕರಿಸಬಹುದು. WHO ಸದಸ್ಯತ್ವವೂ ಸ್ವೈಚ್ಛಿಕವಾಗಿದೆ. ಅಗತ್ಯವಿದ್ದರೆ ಯಾವುದೇ ರಾಷ್ಟ್ರ ಸಂಸ್ಥೆಯಿಂದ ಹೊರಬರುವ ಸ್ವಾತಂತ್ರ್ಯವೂ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ WHO ಸದಸ್ಯತ್ವದಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದು ಇದಕ್ಕೆ ಉದಾಹರಣೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

WHO ಹೇಳುವುದೆಲ್ಲಾ ಶಾಶ್ವತ ಸತ್ಯವೇ ಆಗಬೇಕೆಂದಿಲ್ಲ. ವಿಜ್ಞಾನ ಸ್ಥಿರವಲ್ಲ; ಹೊಸ ಸಾಕ್ಷ್ಯ ಬಂದಂತೆ ಮಾರ್ಗಸೂಚಿಗಳು ಬದಲಾಗುತ್ತವೆ. WHO ತಾನೇ ತನ್ನ ನೀತಿಗಳನ್ನು ಮರುಪರಿಶೀಲಿಸುತ್ತದೆ. ಆದ್ದರಿಂದ WHO ನೀತಿಗಳನ್ನು ಪ್ರಶ್ನಿಸುವುದು ವಿಜ್ಞಾನ ವಿರೋಧವಲ್ಲ; ಅದು ವಿಜ್ಞಾನಿಯ ಕರ್ತವ್ಯವೂ ಹೌದು, ಪ್ರಜ್ಞಾವಂತ ನಾಗರಿಕನ ಜವಾಬ್ದಾರಿಯೂ ಹೌದು.

ಇದನ್ನೂ ಓದಿ….

ಅಮೆರಿಕ ತೆರಿಗೆ ಇಳಿಕೆ : ಭಾರತದ ತೆಂಗಿನ ನಾರು ರಫ್ತುಗಳಿಗೆ ಹೊಸ ಬಲ

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ನೇಪಾಳದಲ್ಲಿಅಡಿಕೆ ಜೀವನದ ಭಾಗ | ನಿಯಂತ್ರಣಕ್ಕೆ ಶಾಲಾ ಶಿಕ್ಷಣ–ನೀತಿ ಕಡ್ಡಾಯ | WHO ವೆಬಿನಾರ್‌ನಲ್ಲಿ ಪ್ರೊ. ರಿಂಕಿ ಸಲಹೆ
February 5, 2026
10:55 AM
by: ದ ರೂರಲ್ ಮಿರರ್.ಕಾಂ
ಅಮೆರಿಕ ತೆರಿಗೆ ಇಳಿಕೆ : ಭಾರತದ ತೆಂಗಿನ ನಾರು ರಫ್ತುಗಳಿಗೆ ಹೊಸ ಬಲ
February 5, 2026
10:36 AM
by: ದ ರೂರಲ್ ಮಿರರ್.ಕಾಂ
ಪಶು ಸಂಗೋಪನೆ ವಲಯಕ್ಕೆ ಉತ್ತೇಜನ : ಹೈನುಗಾರರ ಆದಾಯ ಹೆಚ್ಚಿಸಲು ಕೇಂದ್ರದ ಕ್ರಮ
February 5, 2026
10:24 AM
by: ಮಿರರ್‌ ಡೆಸ್ಕ್
ಬಳ್ಳಾರಿ–ವಿಜಯನಗರದಲ್ಲಿ ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕ್ಕಿಂಗ್ ಅವಧಿ ವಿಸ್ತರಣೆ
February 5, 2026
10:18 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror