ವಯನಾಡ್‌ನಲ್ಲಿ ಮುಖವನ್ನು ವಸ್ತ್ರದಿಂದ ಮರೆಮಾಚಿ ಕಾರ್ಯಚರಿಸಿದ ಆ ವ್ಯಕ್ತಿ ಯಾರು..?

August 19, 2024
5:35 PM

ಪ್ರಾಕೃತಿಕ ವಿಕೋಪ ಸಂಭವಿಸಿದ ವಯನಾಡ್‌ನಲ್ಲಿ ಭಾರತೀಯ ಸೈನಿಕರು ತಮ್ಮ ಕಾರ್ಯಾಚರಣೆ ನಡೆಸಿ‌  ಮರಳಿದೆ,‌ ದೇಶದ ವಿವಿಧ ಭಾಗಗಳಿಂದ ಬಂದಂತಹ ಹಲವಾರು ಮಂದಿ ಆ ತಂಡದಲ್ಲಿದ್ದರು. ಆದರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವ್ಯಕ್ತಿಯೋರ್ವರ ಮುಖವು ಮಾಸ್ಕ್‌ನಂತಹ ವಸ್ತ್ರದಿಂದ ಸದಾ ಮರೆಮಾಚಲಾಗಿತ್ತು.. ಆ ಮುಖ ಮರೆಮಾಚಿದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ.

Advertisement
Advertisement
Advertisement
Advertisement

ಮೂಲತ ಕೇರಳದ ಆಲಪುಳ ನಿವಾಸಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ. ಮಾರ್ಚ್ 4, 2017 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದರು. ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡು 23 ಶಸ್ತ್ರಚಿಕಿತ್ಸೆ‌ಗೆ ಒಳಪಟ್ಟು ಮುಖದ ರೂಪವನ್ನೇ ಕಳೆದುಕೊಂಡ ಕಾರಣ ಸದಾ ಮುಖ ಮರೆಮಾಚಿ ಆಗಿದೆ ಇವರ ಜೀವನ. ಎಂಜಿನಿಯರಿಂಗ್ ಪದವಿ ಪಡೆದಿದ್ದ ಇವರು ತಮ್ಮ ವೃತ್ತಿ ಜೀವನ ಶುರುಮಾಡಿದ್ದು ಕೇರಳ ವಿದ್ಯುತ್ ಇಲಾಖೆಯಲ್ಲಿ, ನಂತರ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗ ಪಡೆದ ಇವರು ತಮ್ಮ ಸೈನಿಕನಾಗಬೇಕು ಎಂಬ ಕನಸಿನೊಂದಿದೆ ಭಾರತೀಯ ಸೇನೆಗೆ ಪ್ರವೇಶಿಸಿದ್ದರು.

Advertisement

ಋಷಿ ರಾಜಲಕ್ಷ್ಮಿ ಅವರ ಪತ್ನಿ ಕ್ಯಾಪ್ಟನ್ ಅನುಪಮಾ ಆರ್ಮಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದರು, ತಂದೆ ತಾಯಿ ಮತ್ತು ಪತ್ನಿಯ ಅತೀವ ಕಾಳಜಿಯಿಂದ ಚಿಕಿತ್ಸೆ ಪಡೆದ ಋಷಿ ಗಾಯಗಳಿಂದ ಬದುಕುಳಿದಿದ್ದರೂ ಅವರ ಮುಖ ಅವರಿಗೆ ನಷ್ಟವಾಗಿತ್ತು, ಅಂದಿನಿಂದ ಋಷಿ ಸದಾ ಮುಖಕವಚ ಧರಿಸಿ ದೇಶ ಸೇವೆಯಲ್ಲಿ ನಿರತರಾಗಿದ್ದರು. ತನ್ನ ದೇಶದ ನಾಗರಿಕರಿಗೆ  ಭಯೋತ್ಪಾದಕರಿಂದ ಮಾತ್ರವಲ್ಲದೆ ಪ್ರಕೃತಿ ವಿಕೋಪದಂತಹ ದುರಂತದಿಂದಲೂ ರಕ್ಷಣೆ ನೀಡುವುದೂ ಜವಾಬ್ದಾರಿ ಆಗಿದೆ ಎಂಬ ಸೇನೆಗೆ ಜನರ ಮೇಲಿರುವ ಬದ್ಧತೆಯು ಕರ್ನಲ್ ಋಷಿ ರಾಜಲಕ್ಷ್ಮಿ ಅವರನ್ನು ವಯನಾಡ್‌ ದುರಂತ ಭೂಮಿಗೆ ತಲುಪಿಸಿದ್ದು, ಇದು ತನ್ನ ರಾಜ್ಯ ಕಂಡ ದುರಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ಜನರ ಪ್ರೀತಿಯನ್ನು ಎದೆಯಲ್ಲಿರಿಸಿ ಋಷಿ ರಾಜಲಕ್ಷ್ಮಿ, ಮತ್ತು ಭಾರತೀಯ ಸೈನಿಕರು ವಯನಾಡಿನಿಂದ ಮರಳಿದ್ದಾರೆ.

Source : keralakaumudi

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ
ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
February 19, 2025
11:16 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಕಾಡ್ಗಿಚ್ಚು | 25 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
February 19, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror