ಹುಟ್ಟಿದ್ದು ಕೃಷಿ ಕುಟುಂಬದಲ್ಲಿ.ಕೃಷಿ ಹೊರತಾಗಿ ಇತರ ಆದಾಯ ಇಲ್ಲದ ಮನೆ.1960ರ ಉತ್ತರಾರ್ಧದ ದಶಕದಲ್ಲಿ ನನ್ನ ಜನ್ಮ.ಈ ಕಾಲಘಟ್ಟದಲ್ಲಿ ಮತ್ತು ಮುಂದಕ್ಕೆ 1990ರ ದಶಕದ ತನಕವೂ ಕೃಷಿ ಆದಾಯದ ಮುಂದೆ ಇತರ ಉದ್ಯೋಗಗಳಿಂದ ಸಿಗುವ ಸಾಮಾನ್ಯ ಆದಾಯ ಕಡಿಮೆ ಇದ್ದ ಕಾಲಘಟ್ಟ.
ಹಾಗಾಗಿ ಏನೇ ವಿದ್ಯಾಭ್ಯಾಸ ಇದ್ದರೂ ಕೊನೆಗೆ ಜೀವನ ಕೃಷಿಯಲ್ಲೇ ಅಂತ ಹೆತ್ತವರ ನಿರ್ಧಾರ.ಅದಕ್ಕೆ ಪೂರಕವಾಗಿ ನನ್ನ ಮನಸ್ಥಿತಿಯೂ ಹೊಂದಿಕೊಂಡಿತ್ತು. ನನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದದ್ದು 1987ನೇ ಇಸವಿಯಲ್ಲಿ. ಅಂದಿನಿಂದ ಕೃಷಿಯೇ ನನ್ನ ಉದ್ಯೋಗ.
ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ಆದಾಯ ಕೊಡುತ್ತದೆ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಕನಿಷ್ಟ ಶ್ರಮದಾಯಕ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ನೆಮ್ಮದಿ ಕೊಡುವಂತಹದ್ದು ಅಂತ.
ಹೌದು ,ನನ್ನ ಆದಾಯ ಸಂಪೂರ್ಣವಾಗಿ ಕೃಷಿ ಕ್ಷೇತ್ರದಿಂದಲೇ.ನನ್ನ ಎಲ್ಲಾ ಆಸೆ,ಬಯಕೆಗಳನ್ಬೂ ಪೂರೈಸಿಕೊಳ್ಳಲು ಪ್ರಯತ್ನಿಸ ಬೇಕಾದ್ದೂ ಇದೇ ಕೃಷಿ ಕ್ಷೇತ್ರದ ಆದಾಯದಿಂದಲೇ.ಇದಕ್ಕಾಗಿ ಕೃಷಿಯಿಂದ ನನಗೆ ಹಣ ಬೇಕು,ಮತ್ತಷ್ಟು ಬೇಕು.
ನನಗೂ ಆಸೆಗಳಿವೆ.ಸ್ವಂತಕ್ಕೊಂದು ನನ್ನದೇ ಆದ , ನನ್ನ ಸೈಟಿನ ಮನೆ ಇರಬೇಕು.ಕನಿಷ್ಟ ಇನ್ನೋವಾ ಲಕ್ಷುರಿ ಕಾರು ಕೊಂಡು ಕೊಳ್ಳಲು ಸಾಧ್ಯವಾಗಬೇಕು.
ಆಗಿಲ್ಲ ಇನ್ನೂ,ಪೂರೈಸಿಲ್ಲ ಇನ್ನೂ.ಅಷ್ಟೊಂದು ಹಣ ನನಗಿನ್ನೂ ಕೃಷಿಯಿಂದ ದೊರಕಿಲ್ಲ. ಅಷ್ಟು ಸಾಕಾ? ಖಂಡಿತಾ ಸಾಲದು.ಸಾಧ್ಯ ಆದರೆ ಸ್ವಂತಕ್ಕೊಂದು ಹೆಲಿಕಾಪ್ಟರ್ ಖರೀದಿಸ ಬೇಕು.ಖಾಸಾಗಿ ಜೆಟ್ ವಿಮಾನ ಇಟ್ಟುಕೊಳ್ಳ ಬೇಕು.ಆಸೆ ತಪ್ಪಾ?
ನನ್ನ ಉತ್ಪನ್ನಗಳನ್ಬು ನಾನು ಮುಕ್ತ ಮಾರುಕಟ್ಟೆ ಬೆಲೆಯಲ್ಲಷ್ಟೇ ಮಾರಬೇಕಾದ ಅನಿವಾರ್ಯತೆ ನನಗಿದೆ.ನನ್ನ ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು ದರ ಕೊಟ್ಟು ಖರೀದಿಸುವ ಗಿರಾಕಿಗಳು ನನಗಿಲ್ಲ. ಅದೆಲ್ಲ ಪೂರೈಸಿದ ಬಳಿಕ ಇನ್ನುಳಿದ ವಿಷಯಗಳತ್ತ ಗಮನ ಕೊಡೋಣ.ಅಲ್ಲಿ ತನಕ ನನ್ನ ನೀತಿಗಳಲ್ಲಿ ಯಾವ ಬದಲಾವಣೆಯೂ ಇಲ್ಲ.