Advertisement
ಧಾರ್ಮಿಕ

#Culture | ಮನೆಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದು ಏಕೆ..? | ಪೈಂಟಿನಿಂದ ಶಾಶ್ವತ ರಂಗೋಲಿ ಹಚ್ಚಿದಿರಿ ಜೋಕೆ…!

Share

ಸೂರ್ಯೋದಯಕ್ಕೂ ಮುನ್ನ ಎದ್ದು ಗೃಹಿಣಿಯರು ಮನೆ ಅಂಗಳದ ಕಸ ಗುಡಿಸಿ, ಹೊಸ್ತಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಅರಿಶಿನ, ಕುಂಕುಮ ಹಚ್ಚಿ ಹೂಗಳನ್ನು ಇಡುವುದು  ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾರು ಅಷ್ಟು ಬೇಗ ಎದ್ದು ಇದೆಲ್ಲಾ ಮಾಡ್ತಾರೆ ಅಂತಾ ಶಾಶ್ವತವಾಗಿ ಹೊಸ್ತಿಲಿಗೆ ಹಳದಿ ಪೇಂಟ್ ಬಳಸ್ತಾರೆ. ಅದರ ಮೇಲೆ ಬಿಳಿ ಪೇಂಟ್‌ನಿಂದ ರಂಗೋಲಿ ಗೆರೆಗಳನ್ನು ಹಾಕಿಸ್ತಾರೆ.

Advertisement
Advertisement
Advertisement
Advertisement

ಕೆಂಪು, ಹಳದಿ ಪೇಂಟ್‌ನಿಂದ ಅರಿಶಿನ, ಕುಂಕುಮ ಇಡುವಂತೆ ವೃತ್ತಾಕಾರದ ಚುಕ್ಕೆಗಳನ್ನು ಇಡಲಾಗಿರುತ್ತೆ. ಹೀಗೆ ಮಾಡೋದು ಶುದ್ಧ ತಪ್ಪು. ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾದ್ರೆ ಪ್ರತಿನಿತ್ಯ ನೀವೂ ಈ ಆಚರಣೆಯನ್ನು ಪಾಲಿಸೋಕೆ ಆರಂಭಿಸ್ತೀರಾ. ನಿಮಗೆ ಗೊತ್ತಾ? ಮನೆಯ ಬಾಗಿಲು ಆಕರ್ಷಕವಾಗಿದ್ರೆ ಪಾಸಿಟಿವ್ ಎನರ್ಜಿಯು ಹೆಚ್ಚು ಅನುಭವವಾಗುತ್ತೆ. ಮನೆಯ ಮುಂಬಾಗಿಲು ಆಕರ್ಷಕವಾಗಿದ್ರೆ ಮನೆಗೆ ಶುಭವಾಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

Advertisement

ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಹೀಗಾಗೇ ಮನೆಯ ಮುಂದೆ ಹಾಗೂ ಹೊಸ್ತಿಲ ಮೇಲೆ ರಂಗೋಲಿ ಬಿಡೋದು. ಅರಿಶಿನ, ಕುಂಕುಮ ಹಾಕೊದು ಶುಭದ ಸಂಕೇತ. ಹೊಸ್ತಿಲು ಬರಿದಾಗಿದ್ರೆ ಅದು ಅಶುಭ ಎಂಬ ನಂಬಿಕೆ ಇದೆ. ಮನೆಯ ಹೊಸ್ತಿಲು ಸಾಕ್ಷಾತ್ ಮಹಾಲಕ್ಷ್ಮೀ ಸ್ವರೂಪ ಎನ್ನಲಾಗುತ್ತೆ. ಮನೆಯ ಮುಖ್ಯದ್ವಾರದ ಹೊಸ್ತಿಲಲ್ಲಿ ಸಾಕ್ಷಾತ್ ಲಕ್ಷ್ಮೀ ಇರ್ತಾಳೆ. ಇನ್ನು ಹೊಸ್ತಿಲ ಮೇಲ್ಬಾಗದಲ್ಲಿ ಗೌರಿ ನೆಲೆಸಿರ್ತಾಳೆ. ರಂಗೋಲಿ, ಅರಿಶಿನ-ಕುಂಕುಮ ಇಲ್ಲದ ಮನೆಗೆ ದೇವತೆಗಳ ಪ್ರವೇಶಿಸೋದಿಲ್ಲ ಅಂತಾ ನಮ್ಮ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆ ಬಾಗಿಲಿಗೆ ಏಕೆ ಮಂಗಳದ್ರವ್ಯಗಳನ್ನು ಹಚ್ಚಬೇಕು. ಇದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೆ -ಮನೆಯ ಶುಚಿತ್ವ ಕಾಪಾಡುತ್ತೆ. ಹೊಸ್ತಿಲಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ -ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳಿರೋದ್ರಿಂದ ಮನೆಯೊಳಗೆ ಕ್ರಿಮಿಕೀಟಗಳು ಪ್ರವೇಶಿಸಲ್ಲ.

Advertisement

ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗುವವರಿಗೆ ಇದ್ರಿಂದ ಒಳಿತಾಗುತ್ತೆ, ಮನೆಯ ಬಾಗಿಲು ಸುಂದರವಾಗಿ ಕಾಣುತ್ತೆ, – ಮನೆಯವರಲ್ಲಿ ನಕಾರಾತ್ಮಕ ಚಿಂತನೆಗಳು ಬಾರದಂತೆ ತಡೆಯುತ್ತೆ,  ಮನೆಯಲ್ಲಿ ಸದಾ ಪಾಸಿಟಿವ್ ವೈಬ್ರೇಷನ್ ಉಂಟಾಗಲು ಸಹಕಾರಿಯಾಗುತ್ತೆ, ಮನೆಯಲ್ಲಿರುವವರ ಆಯಸ್ಸು ಹೆಚ್ಚುತ್ತೆ,  ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸುತ್ತದೆ.

ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದು ಮೂಢನಂಬಿಕೆಯಲ್ಲ. ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಪುರಾತನ ಕಾಲದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮಗೆ ಆರೋಗ್ಯದ ರಕ್ಷಾ ಕವಚವಿದ್ದಂತೆ. ಇಂತಹ ಆಚರಣೆಗಳ ಬಗ್ಗೆ ಅರಿತು ಆಚರಿಸಿದ್ರೆ ಸುಂದರ, ಸ್ವಾಸ್ಥ್ಯ ಜೀವನ ನಮ್ಮದಾಗುತ್ತದೆ.

Advertisement

(ಕೃಪೆ : ಅಂತರ್ಜಾಲ ) 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

12 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago