ಪಿತ್ತದ ಹರಳು/ಕಲ್ಲು ಏಕೆ ಉಂಟಾಗುತ್ತವೆ? | ಇದರ ಪರಿಹಾರ ಹೇಗೆ..?

December 15, 2023
11:16 AM

ಯಕೃತ್ತು(liver) ದೇಹದ(Body) ಬಲಭಾಗದಲ್ಲಿದೆ. ಯಕೃತ್ತಿನ ಕೆಳಗೆ ಪಿತ್ತ ಸಂಗ್ರಾಹಕ ಅಂಗ/ಚೀಲವಿದೆ. ಇದನ್ನು ಪಿತ್ತಕೋಶ(gall bladder) ಎಂದು ಕರೆಯಲಾಗುತ್ತದೆ. ಪಿತ್ತಜನಕಾಂಗದಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಈ ಚೀಲದಿಂದ ಸಣ್ಣ ಕರುಳಿನಲ್ಲಿ( small intestine) ಹರಿಯುತ್ತದೆ. ಕೊಬ್ಬಿನ ಪದಾರ್ಥಗಳ(fatty substances) ಜೀರ್ಣಕ್ರಿಯೆಗೆ(digestion) ಪಿತ್ತರಸ ಅಗತ್ಯ. ಬ್ಯಾಕ್ಟೀರಿಯಾದ ಉರಿಯೂತದ ನಂತರ ಪಿತ್ತಕೋಶದ ಕಲ್ಲುಗಳು(Gallstones) ಹೆಚ್ಚಾಗಿ ರೂಪುಗೊಳ್ಳುತ್ತವೆ.

Advertisement
Advertisement
Advertisement

ಈ ಕಲ್ಲುಗಳಲ್ಲಿ ಎರಡು ವಿಧಗಳಿವೆ. 70% ಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ಕೊಲೆಸ್ಟ್ರಾಲ್ ಕಲ್ಲುಗಳು ಮೊದಲನೆಯದು ಮತ್ತು 10% ಕ್ಕಿಂತ ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ವರ್ಣದ್ರವ್ಯದ ಕಲ್ಲುಗಳು ಎರಡನೆಯದು. ಬ್ಯಾಕ್ಟೀರಿಯಾದ ಸೋಂಕು ಪಿತ್ತಕೋಶದಲ್ಲಿ ಪ್ರೋಟೀನೇಸಿಯಸ್ ವಸ್ತುವನ್ನು ನಿರ್ಮಿಸಲು ಕಾರಣವಾಗುತ್ತದೆ (ಕೋಶ ನಾಶದಿಂದಾಗಿ). ಈ ಪ್ರೋಟೀನೇಶಿಯಸ್ ಪದಾರ್ಥಗಳ ಸಹಾಯದಿಂದ, ಇತರ ಲವಣಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಂತರ ಕಲ್ಲುಗಳು ರೂಪುಗೊಳ್ಳುತ್ತವೆ. ಟೈಫಾಯಿಡ್ ಜ್ವರ ಹೊಂದಿರುವ ರೋಗಿಯಲ್ಲಿ ಕಾಲಾನಂತರದಲ್ಲಿ ಪಿತ್ತಗಲ್ಲುಗಳು ಉಂಟಾಗುತ್ತವೆ.

Advertisement

ಎರಡು ಅಥವಾ ಮೂರು ಮಕ್ಕಳನ್ನು ಹೊಂದಿರುವ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಸ್ಥೂಲಕಾಯದ ಮಹಿಳೆಯರಲ್ಲಿ ಪಿತ್ತಗಲ್ಲು ಹೆಚ್ಚಾಗಿ ಕಂಡುಬರುತ್ತದೆ. ಪಿತ್ತಗಲ್ಲು ಹೆಚ್ಚಾಗಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದರೆ ಕೆಲವೊಮ್ಮೆ ಜ್ವರ, ತುಂಬಾ ಮಾರಣಾಂತಿಕ ನೋವು, ಚಳಿ ನಡುಕ ತುಂಬಿದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನೋವು ತುಂಬಾ ತೀವ್ರವಾಗಿರುತ್ತದೆ ಮತ್ತು ಅಸಹನೀಯವಾಗಿರುತ್ತದೆ. ಆದ್ದರಿಂದ, ತಕ್ಷಣ ತಜ್ಞರನ್ನು ಸಂಪರ್ಕಿಸಿ. ಆಸ್ಪತ್ರೆಗಳಲ್ಲಿ ವೇದನೆಯನ್ನು ನಿಲ್ಲಿಸಲು ಮಾರ್ಫಿನ್ ಅಥವಾ ಪೆಂಟೊಜೊಕೇನ್ ಚುಚ್ಚುಮದ್ದನ್ನು ನೀಡುತ್ತಾರೆ. ಕೆಲವು ಔಷಧಗಳನ್ನು ಬಳಸಿ ಈ ಕಲ್ಲುಗಳನ್ನು ಕರಗಿಸಬಹುದು. ಆದರೆ ಮತ್ತೆ ಕಲ್ಲುಗಳು ಬೀಳುವ ಸಾಧ್ಯತೆ ಇದೆ. ಪಿತ್ತಕೋಶ ತೆಗೆಯುವ ಶಸ್ತ್ರಕ್ರಿಯೆಯು ಇದರಲ್ಲಿ ಬಹಳ ಸಹಾಯಕವಾಗಿದೆ. ಪಿತ್ತಕೋಶವನ್ನು ತೆಗೆದುಹಾಕಿದರೂ ಸಹ, ಒಬ್ಬ ವ್ಯಕ್ತಿಯು ಸಾಮಾನ್ಯ ಜೀವನವನ್ನು ನಡೆಸಬಹುದು.

ಇಲ್ಲಿ ಅಲೋಪತಿ ಚಿಕಿತ್ಸಾ ವಿಧಾನದ ಪ್ರಕಾರ ಮಾಹಿತಿಯನ್ನು ಕೊಡಲಾಗಿದೆ. ಆದರೆ ಹೋಮಿಯೋಪತಿ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಗಳಿಂದ ಪಿತ್ತದ ಹರಳುಗಳನ್ನು ನೈಸರ್ಗಿಕವಾಗಿ ಕರಗಿಸಿ ಪುನಃ ಹರಳುಗಳು ಸಂಭವಿಸದಂತೆ ಚಿಕಿತ್ಸೆ ಲಭ್ಯವಿರುತ್ತದೆ. ಪಿತ್ತಕೋಶವನ್ನು ತೆಗೆದುಹಾಕುವುದು ಸರಿಯಾದ ಚಿಕಿತ್ಸೆ ಅಲ್ಲ. ಇದರಿಂದ ರೋಗದ ಸ್ವರೂಪ ಬದಲಾಗಿ ಬೇರೆ ಕಾಯಿಲೆಗಳು ಸಂಭವಿಸುತ್ತದೆ.

Advertisement

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

The liver is located on the right side of the body. Beneath the liver is the gall bladder. It is called gall bladder. Bile produced in the liver drains from this pouch into the small intestine. Bile is necessary for the digestion of fatty substances. Gallstones are often formed after bacterial inflammation.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror