ಮಲೆನಾಡು ತಪ್ಪಲಲ್ಲಿ ಮೇಘಸ್ಫೋಟ- ಭಾರೀ ಮಳೆ ಯಾಕಿರಬಹುದು ?| ವಾಯವ್ಯ ಮೋಡಗಳು ಏನು ಮಾಡುತ್ತವೆ…? | ಮೋಡಗಳ ವಿಸ್ತರಣೆಗೆ ಅವಕಾಶ ಏಕಿಲ್ಲ…? |

August 30, 2022
10:05 PM
 ಮಲೆನಾಡು ತಪ್ಪಲು ಪ್ರದೇಶದಲ್ಲಿ ಭಾರೀ ಮಳೆ. ಮೇಘಸ್ಫೋಟ-ಭಾರೀ ಮಳೆ.ಈ ಕಾರಣದಿಂದ ಭೂಕುಸಿತ. ಇದೆಲ್ಲಾ ಒಂದಕ್ಕೊಂದು ಲಿಂಕ್‌ ಆಗುತ್ತಿವೆ. ಇದಕ್ಕೂ ಮೊದಲು ಭೂಕಂಪನ. ಒಟ್ಟಾರೆ ತಪ್ಪಲು ಪ್ರದೇಶ ಜನರಿಗೆ ಭಯ. ಹಾಗಿದ್ದರೆ ಏನು ಕಾರಣ? ಮೋಡಗಳ ಚಲನೆ ಏನು ? ಈ ಬಗ್ಗೆ ಹವಾಮಾನ ವೀಕ್ಷಣೆ ಮಾಡುವ ಹಾಗೂ ವಿಶ್ಲೇಷಣೆ ಮಾಡುವ ಕೃಷಿಕರುಗಳಾ ಸಾಯಿಶೇಖರ್‌ ಕರಿಕಳ ಹಾಗೂ ರಘುರಾಮ ಕಂಪದಕೋಡಿ ಹೀಗೆ ಅಂದಾಜಿಸಿದ್ದಾರೆ….

ಈ ಸಲ ನೈರುತ್ಯ ಮುಂಗಾರು ಅಂತ ಹೆಸರು ಮಾತ್ರ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬೆರಳೆಣಿಕೆಯಷ್ಟು ದಿನಗಳಲ್ಲಿ ಮಾತ್ರ ಮೋಡ ನೈರುತ್ಯದಿಂದ ಈಶಾನ್ಯಕ್ಕೆ ಸಂಚರಿಸಿದೆ. ಹೆಚ್ಚಿನ ದಿನಗಳಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆ.ಈಗಿನ  ಪರಿಸ್ಥಿತಿಗೆ ಈ ವೈಪರೀತ್ಯ ಕಾರಣ ಇರಬಹುದಾದರೂ, ವಾಯವ್ಯ ಮೋಡಗಳಿಂದ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದೆ. ಈ ಮೋಡಗಳು ಘಟ್ಟದ ತಪ್ಪಲ ಭಾಗಕ್ಕೆ ತಲುಪಿದಾಗ ಒತ್ತಡ ಹೆಚ್ಚಾಗಿ ಮಳೆಯಾಗುತ್ತಿದೆ. ಸುರಿಯುತ್ತಿದೆ.

ಮೊದಲು ಮುಂಗಾರು ದುರ್ಬಲಗೊಂಡಾಗ ಮೋಡಗಳು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುತ್ತಿತ್ತು. ಆಗ ಸಾಮಾನ್ಯವಾಗಿ ಮಡಿಕೇರಿಯಿಂದ ಧರ್ಮಸ್ಥಳದ ತನಕ ವಿಶಾಲತೆ ಸಿಕುತ್ತಿತ್ತು. ಪೂರ್ವದಲ್ಲಿ ಶೇಖರಣೆಗೊಂಡ ಮೋಡಗಳ ಒತ್ತಡದಿಂದ ಗಾಳಿ ಬೀಸುತ್ತಿತ್ತು. ಮೋಡಗಳು ಚದುರಿ ಮಳೆ ಹಂಚಿಕೆಯಾಗುತ್ತಿತ್ತು. ವಾಯವ್ಯ ಮೋಡಗಳಿಗೆ ವಿಸ್ತರಣೆಗೆ ಅವಕಾಶ ಕಡಿಮೆಯಾದಂತಿದೆ. ಇನ್ನು ಮುಂದೆ ಸರಿಯಾಗಲಿ ಎಂದು ನಂಬೋಣ.

ಇದರ ಜೊತೆಗೆ  ಶಿರಾಡಿ ಘಾಟಿಯ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳ ಫಲವಾಗಿ ಅರಣ್ಯ ಕಡಿಮೆಯಾಗಿದೆ. ಉಷ್ಣಾಂಶ ಏರಿಕೆಯಿಂದ ಬಿಸಿ ಗಾಳಿಯ ಜೊತೆಗೆ ಮೋಡಗಳು ತಂಪಾದ ಅರಣ್ಯದ ಕಡೆಗೆ ಸೆಳೆಯಲ್ಪಡುತ್ತಿದೆ. ಅಂದರೆ ಹರಿಹರ, ಕೊಲ್ಲಮೊಗ್ರ, ಸಂಪಾಜೆ, ಮಡಿಕೇರಿ ಬೆಟ್ಟದ ಸಾಲುಗಳ ಕಡೆಗೆ. ಹೀಗಾದಾಗ ಮೋಡಗಳು ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆಂತೆ ಭಾಸವಾಗುತ್ತದೆ. ಮೋಡಗಳ ವಿಸ್ತರಣೆಗೆ ಅವಕಾಶವಿಲ್ಲದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮೇಘಸ್ಪೋಟದಂತಹ ಮಳೆಗೆ ಕಾರಣವಾಗುವಾಗಿರಬಹುದು. ಇದು ಈಗಿನ ಸ್ಥಿತಿಗೆ ಕಾರಣವಿರಲೂಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror