ಅಡಿಕೆ ಕೊಳೆರೋಗ | ಅನೇಕ ಕೃಷಿಕರಿಗೆ ಕೊಳೆರೋಗಕ್ಕೆ ಔಷಧಿ ಸಿಂಪಡಣೆಗೆ ಸಾಧ್ಯವಾಗಲಿಲ್ಲ ಏಕೆ…? | ಮುಂದೆ ಯೋಚಿಸಬೇಕಾದ್ದು ಯಾವುದರ ಕಡೆಗೆ..?

September 14, 2025
3:45 PM
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ದ ರೂರಲ್‌ ಮಿರರ್.ಕಾಂ ನಡೆಸಿದ ಸಮೀಕ್ಷಾ ವರದಿ ಇದು... | ಈ ಬಾರಿಯ ಮಳೆಯ ಕಾರಣದಿಂದ ಶೇ.84.1 ರಷ್ಟು ಕೃಷಿಕರಿಗೆ ಔಷಧಿ ಸಿಂಪಡಣೆ ಸಾಧ್ಯವಾಗಲಿಲ್ಲ.  ಶೇ.15.9 ರಷ್ಟು ಕೃಷಿಕರಿಗೆ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗಲಿಲ್ಲ.

ಅಡಿಕೆ ಕೊಳೆರೋಗ ಈ ಸಲದ ವಿಷಯ. ಕೊಳೆರೋಗಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ತಿಳಿದ ವಿಷಯ. ಮಳೆ. ಅದರಲ್ಲೂ ನಿರಂತರವಾಗಿ ಸುರಿದ ಮಳೆ. ಹೀಗಾಗಿ ಸಮೀಕ್ಷೆಯ ವೇಳೆ ಎರಡು ಸರಳ ಪ್ರಶ್ನೆ ಕೇಳಲಾಗಿತ್ತು.

ನಮಗೆ ಸಲಹೆ ನೀಡಿದ ಅರುಣ್‌ ಕುಮಾರ್‌ ಕಾಂಚೋಡು ಅವರು, ಸಮೀಕ್ಷೆಯ ಖಚಿತತೆ ಮತ್ತು ನಿಖರತೆಯ ದೃಷ್ಟಿಯಿಂದ ಈ ಪ್ರಶ್ನೆಯನ್ನು ಕೇಳಲು ಸಲಹೆ ನೀಡಿದ್ದರು. ಔಷಧಿ ಸಿಂಪಡಣೆಗೆ ಆಗದಿರುವ ಕಾರಣವೇನು?  ಹಾಗೂ ಔಷಧಿ ಸಿಂಪಡಿಸುವ ವಿಧಾನದ ಬಗ್ಗೆಯೂ ಮಾಹಿತಿ ಪಡೆಯಲು ಸಲಹೆ ನೀಡಿದರು. ಈ ಮೂಲಕ ಕೃಷಿಕರು ಬದಲಾವಣೆ ಆಗಬೇಕಾದ ಅಂಶಗಳು ಬೆಳಕಿಗೆ ಬಂದಿದೆ.

ನಮ್ಮೆಲ್ಲರ ನಿರೀಕ್ಷೆಯಂತೆ ಹಾಗೂ ತಿಳಿದಿರುವಂತೆ ಈ ಬಾರಿಯ ಮಳೆಯ ಕಾರಣದಿಂದ ಶೇ.84.1 ರಷ್ಟು ಕೃಷಿಕರಿಗೆ ಔಷಧಿ ಸಿಂಪಡಣೆ ಸಾಧ್ಯವಾಗಲಿಲ್ಲ.  ಶೇ.15.9 ರಷ್ಟು ಕೃಷಿಕರಿಗೆ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗಲಿಲ್ಲ.  ನಿರಂತರ ಮಳೆಯ ಕಾರಣದಿಂದ ಔಷಧಿ ಸಿಂಪಡಣೆ ಸಾಧ್ಯವಾಗಲಿಲ್ಲ ಎನ್ನುವ ಇದುವರೆಗಿನ ವಿಶ್ಲೇಷಣೆ ಸರಿಯಾಗಿಯೇ ಇದೆ. ಹೀಗಾಗಿ ಕೊಳೆರೋಗ ಬಾಧಿಸಿರುವುದು ಸುಳ್ಳಲ್ಲ, ಅದೂ ವ್ಯಾಪಕವಾಗಿರುವುದು ಕೂಡಾ ಅಷ್ಟೇ ಸತ್ಯವಾದ ವಿಷಯ ಎನ್ನುವುದು ಖಚಿತವಾಗಿದೆ.

ಆದರೆ, ಎರಡನೇ ಅಂಶ ಬಹಳ ಗಂಭೀರವಾಗಿ ಕೃಷಿಕರು ಯೋಚಿಸಬೇಕಾಗಿದೆ. ಅದಕ್ಕೆ ಪರಿಹಾರದ ನೆಲೆಯಲ್ಲಿ ಹೆಜ್ಜೆಗಳ ಅಗತ್ಯ ಇದೆ.  ಶೇ.15.9 ರಷ್ಟು ಕೃಷಿಕರಿಗೆ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗಲಿಲ್ಲ ಎನ್ನುವುದು ಯೋಚಿಸಬೇಕಾದ ಅಂಶ. ಇದಕ್ಕೆ ಪರಿಹಾರ ಹೇಗೆ..? ಈ ಕೊರತೆಯನ್ನು ಅವಕಾಶವಾಗಿ ಪರಿವರ್ತನೆ ಮಾಡುವ ಯುವಕರ ತಂಡ ಸಿದ್ಧವಾಗಬಹುದೇ? ಎನ್ನುವುದು ಮುಂದಿರುವ ಉದ್ಯೋಗ ಸೃಷ್ಟಿಯ ದಾರಿ. ಅನೇಕ ಯುವಕರು ಉದ್ಯೋಗದ ಕೊರತೆಯ ಬಗ್ಗೆ ಮಾತನಾಡುತ್ತಾರೆ. ಒಂದು ತಂಡವಾಗಿ ತರಬೇತಿ ಪಡೆದು ಏಕೆ ವ್ಯವಸ್ಥಿತ ರೀತಿಯಲ್ಲಿ ಕೃಷಿ ಉಳಿಸುವ ಕೆಲಸಕ್ಕೆ ಮುಂದಾಗಬಾರದು. ಕೃಷಿಕರೂ ಅಷ್ಟೇ ಹಳೆಯದಾದ ತಮ್ಮದೇ ನಿಲುವು, ನಿರ್ಧಾರಗಳಿಂದ ಏಕೆ ಹೊರ ಬರಬಾರದು..? ಈ ಬಗ್ಗೆ ತರಬೇತಿ ನೀಡುವ ಒಂದು ಪುಟ್ಟ ದಾರಿಯ ಅಗತ್ಯ ಇರುವುದು ಇಲ್ಲಿ ಬೆಳಕಿಗೆ ಬಂದಿದೆ.

ಔಷಧಿ ಸಿಂಪಡಿಸುವ ವಿಧಾನದಲ್ಲಿ ಸುಧಾರಣೆಯಾಗಬೇಕಾದ ಅಂಶಗಳು ಇವೆ. ಶೇ.57 ರಷ್ಟು ಕೃಷಿಕರಲ್ಲಿ ಈಗಲೂ ಅಡಿಕೆ ಮರ ಏರಿ ಔಷಧಿ ಸಿಂಪಡಿಸುವ ಬಗ್ಗೆ ಹೇಳಿದ್ದಾರೆ. ಶೆ.9.7 ರಷ್ಟು ಕೃಷಿಕರು ತಾವೇ ಸ್ವತ: ಪೈಬರ್‌ ದೋಟಿಯಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ, ಶೇ.17.4 ರಷ್ಟು ಮಂದಿ ಕಾರ್ಮಿಕರ ಮೂಲಕ ಪೈಬರ್‌ ದೋಟಿಯಲ್ಲಿ ಔಷಧಿ ಸಿಂಪಡಣೆ ನಡೆಸಿದ್ದಾರೆ. ಶೇ.7.3 ರಷ್ಟು ಮಂದಿ ಸುಧಾರಿತ ಯಂತ್ರಗಳ ಮೂಲಕ ಔಷಧಿ ಸಿಂಪಡಣೆ ಮಾಡಿದ್ದಾರೆ, ಶೇ. 8.5 ರಷ್ಟು ಮಂದಿ ಸ್ವತ: ಮರ ಏರಿ ಔಷಧಿ ಸಿಂಪಡಣೆ ಮಾಡಿದ್ದಾರೆ.  ಈಗಲೂ ಅಡಿಕೆ ಮರ ಏರಿಕೆ ಔಷಧಿ ಸಿಂಪಡಣೆ ಮಾಡುವ ವಿಧಾನಗಳಿಂದ ಮುಂದಿನ ಹಂತಕ್ಕೆ ಸಾಗಲು ಅಡಿಕೆ ಬೆಳೆಗಾರರು ಮಾನಸಿಕವಾಗಿ ಸಿದ್ಧರಾಗಬೇಕಾದ ಅಗತ್ಯ ಇರುವುದರ ಬಗ್ಗೆ ಈ ಸಮೀಕ್ಷೆ ಹೇಳುತ್ತದೆ. …… ಮುಂದೆ ಓದಿ……

Advertisement

ಜೊತೆಗೇ, ಪೈಬರ್‌ ದೋಟಿಯನ್ನು  ಸ್ವತ: ಅಥವಾ ಕಾರ್ಮಿಕರ ಮೂಲಕ  ಬಳಕೆ ಮಾಡಿರುವುದು ಅಥವಾ  ಸುಧಾರಿತ ಯಂತ್ರಗಳ ಕಡೆಗೂ ಕೃಷಿಕರು ಗಮನಹರಿಸಿರುವುದು ಬದಲಾವಣೆ ಸಂಕೇತವಾಗಿದೆ. ಈಗಾಗಲೇ ಮರ ಏರಿ ಔಷಧಿ ಸಿಂಪಡಣೆ ಮಾಡುವ ಕಾರ್ಮಿಕರು ದೋಟಿ ಸಿಂಪಡಣೆಗೆ ಒಪ್ಪುವುದಿಲ್ಲ ನಿಜ. ಆದರೆ ಭವಿಷ್ಯದಲ್ಲಿ ದೋಟಿ ಸಿಂಪಡಣೆಯೇ ಅನಿವಾರ್ಯವಾಗಬಹುದು. ಅಂತಹ ಸಮಯಕ್ಕೆ ಕೃಷಿಕರು ಕೂಡಾ ಮಾನಸಿಕವಾಗಿ ಸಿದ್ಧರಾಗಬೇಕು. ಹಿಂದೆ ಅಡಿಕೆ ಮರ ಏರಿ ಸಣ್ಣ ಕಂಟ್ರೋಲ್‌ ಮೂಲಕ ಸಿಂಪಡಣೆ ನಡೆಯುತ್ತಿದ್ದರೆ ಈಗ ದೋಟಿಯ ಮೂಲಕ ಮರ ಏರಿ ಔಷಧಿ ಸಿಂಪಡಣೆ ನಡೆಯುತ್ತಿದೆ. ಇನ್ನೀಗ ಅದರಿಂದಲೂ ಮುಂದಿನ ಹಂತ, ದೋಟಿಯ ಮೂಲಕ ಅಡಿಕೆ ಮರದ ಕೆಳಗಿನಿಂದಲೇ ಔಷಧಿ ಸಿಂಪಡಣೆಯ ದಿನಗಳ ಬರಬಹುದು. ಯುವಕರು ಈ ಉದ್ಯೋಗಕ್ಕೆ ಬರಬೇಕಾದರೆ ಇಂತಹ  ಕೆಲವು ಬದಲಾವಣೆಗಳನ್ನೂ ಕೃಷಿಕರೂ ಮಾಡಿಕೊಳ್ಳಬೇಕು. …… ಮುಂದೆ ಓದಿ……

ಸರ್ಕಾರ ಅಥವಾ ಇಲಾಖೆಗಳು ಕೂಡಾ ಪೈಬರ್‌ ದೋಟಿ ಅಥವಾ ಸುಧಾರಿತ ಯಂತ್ರಗಳಿಗೆ ಸಹಾಯಧನಗಳನ್ನು ಸುಲಭ ರೀತಿಯಲ್ಲಿ ಲಭ್ಯವಾಗುವ ಹಾಗೆ ಮಾಡಬೇಕಾಗಿದೆ. ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಕೊಳೆರೋಗ ಅಥವಾ ರೋಗಗಳಿಗೆ ಪರಿಹಾರ ನೀಡುವುದರ ಜೊತೆಗೇ ಅಥವಾ ಭವಿಷ್ಯದಲ್ಲಿ ಇಂತಹ ರೋಗಗಳಿಗೆ ಪರಿಹಾರವನ್ನೇ ನೀಡುತ್ತಲೇ ಇರುವುದರ ಬದಲಾಗಿ ರೋಗಗಳ ತೀವ್ರತೆ ಕಡಿಮೆ ಮಾಡಲು ಯಂತ್ರಗಳ ಬಳಕೆಗೆ ಕೃಷಿಕರಿಗೆ ನೆರವಾಗಬೇಕಿದೆ. (ನಾಳೆ ಮುಂದುವರಿಯುತ್ತದೆ…. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ದ ರೂರಲ್‌ ಮಿರರ್.ಕಾಂ ಸಮೀಕ್ಷಾ ವರದಿ) ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ಅಡಿಕೆ ಕೊಳೆರೋಗ | ಈ ಬಾರಿ ಅಡಿಕೆ ನಳ್ಳಿಗೆ ಔಷಧಿ ಸಿಂಪಡಿಸಿದವರಲ್ಲಿ ಏನಾಗಿದೆ..?

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror