ದಕ್ಷಿಣ ಕನ್ನಡ ಬುದ್ದಿವಂತರ ಜಿಲ್ಲೆ ಯಾಕಾಯ್ತು..? ಯಾಕಾಗಿತ್ತು…? ಈಗ ಹೇಗಿದೆ..? | ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರ ಜೊತೆ ಮಾತುಕತೆ |

April 21, 2024
5:13 PM
ಹಿಂದೆಲ್ಲಾ ಚುನಾವಣೆಯ ಸಮಯದಲ್ಲಿ ಸಾಹಿತ್ಯ ವಲಯವೂ ಬಹಳ ಪ್ರಭಾವಿಯಾಗಿತ್ತು. ಅಭಿವೃದ್ಧಿ, ಸೌಹಾರ್ದತೆ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಸಾಹಿತ್ಯ ವಲಯದ ಮಾತುಗಳನ್ನು ಬಹಳ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.ಹೀಗಾಗಿ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರ ಜೊತೆ ಮಾತುಕತೆ...

ಈಗ ಚುನಾವಣೆಯ ಕಾಲ. ಚುನಾವಣೆಯ ಕಾವು ಏರುತ್ತಿದೆ. ಇಂತಹ ಚುನಾವಣಾ ಪ್ರಕ್ಷುಬ್ದ ಸ್ಥಿತಿಯಲ್ಲಿ ಈ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರ ಜೊತೆ ಮಾತನಾಡಿದಾಗ, ಅವರು ಹೀಗೆ ಹೇಳುತ್ತಾರೆ….

Advertisement
Advertisement
ದಕ್ಷಿಣ ಕನ್ನಡ ಹಾಗೂ ಉಡುಪಿ ಸಂಯೋಜಿತವಾದ ಜಿಲ್ಲೆಗಳ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ,ಪರಿಸರದ ಬಗ್ಗೆ ಕಂಡವನು ನಾನು. ಸಾಹಿತ್ಯಿಕವಾಗಿ ಗೋವಿಂದ ಪೈ ,ಅಡಿಗರಿಂದ ತೊಡಗಿ ತೋಳ್ಪಾಡಿವರೆಗಿನ  ಎಲ್ಲಾ ಸಾಂಸ್ಕೃತಿಕ ವ್ಯಕ್ತಿಗಳನ್ನು ಕಂಡವರಲ್ಲಿ ನಾನೂ ಒಬ್ಬ. ಎಲ್ಲರಲ್ಲೂ ಸಾಮಾಜಿಕ ಕಾಳಜಿಯೂ ಇತ್ತು. ಶಿವರಾಮ ಕಾರಂತ, ಕಾರ್ನಾಡ್ ಸದಾಶಿವ ರಾವ್‌, ಕುದ್ಮಲ್ ರಂಗರಾವ್‌, ಶ್ರೀನಿವಾಸ ಮಲ್ಯ, ಕೆ ಎಸ್‌ ಹೆಗ್ಡೆ ಮೊದಲಾದವರು ಕರ್ನಾಟಕಕ್ಕೆ ಸಾಂಸ್ಕೃತಿಕ, ಭೌಗೋಳಿಕ ಎಚ್ಚರವನ್ನು ತಂದುಕೊಟ್ಟವರು, ಬೆಳೆಸಲು ಕಾರಣರಾದವರು. ಅದಕ್ಕೆ ಸಾಹಿತ್ಯಿಕ  ಬೆಂಬಲವೂ ಇತ್ತು. ಡಾ.ಶಿವರಾಮ ಕಾರಂತರು ಪರಿಸರ ಪರವಾಗಿದ್ದವರು, ಹೋರಾಡಿದವರು, ಚುನಾವಣೆಗೂ ಸ್ಫರ್ಧಿಸಿದವರು.

Advertisement
ಸುಬ್ರಾಯ ಚೊಕ್ಕಾಡಿ
ದ ಕ ಜಿಲ್ಲೆಗೆ ಸಾಂಸ್ಕೃತಿಕ ಎಚ್ಚರ ತಂದವರು, ತಂದುಕೊಟ್ಟವರನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಇಂದು ದ ಕ ಜಿಲ್ಲೆಗೆ ಇವರೆಲ್ಲಾ ಏನು ಮಾಡಿದ್ದಾರೆ ಎಂದು ಕೇಳವವರೇ ಹೆಚ್ಚಾಗಿದ್ದಾರೆ. ಶ್ರೀನಿವಾಸ ಮಲ್ಯ, ಕೆ ಎಸ್‌ ಹೆಗಡೆ ಅವರು , ಕೆಎಸ್‌ ರಾವ್‌ ಅವರದೆಲ್ಲಾ ಕೊಡುಗೆ ಅಪಾರ. ಈಗ ಅವರೇನು ಮಾಡಿದ್ದಾರೆ ಎಂದು ಕೇಳವ ಹಾಗೆ ಆಗಬಾರದು.  ದ ಕ ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದು ಹೆಸರುವಾಸಿಯಾಗಲು ಇಂತಹವರು ಕೂಡಾ ಪ್ರಮುಖ ಕಾರಣ. ಅವರ ಹಿಂದೆ ಆಳವಾದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಕಾಳಜಿ ಇತ್ತು. ಶ್ರೀಮಂತವಾದ  ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದ ಪ್ರದೇಶ ಇದು.
ಇದು ನಿಧಾನಕ್ಕೆ ಕಡಿಮೆಯಾಗಿ ಬಂತು. ಅಡಿಗರ ನಂತರ ಸಾಹಿತ್ಯಿಕವಾಗಿ ಅಂತಹ ದೊಡ್ಡವರು ಬೆಳೆದಿಲ್ಲ. ಈಗ ಹೊಸತಲೆಮಾರಿನ ಜನ ಇಲ್ಲದ ಹಾಗಿದೆ. ರಾಜಕೀಯವಾಗಿಯೂ  ಜನರು ಇಲ್ಲ. 5 ವರ್ಷದ ನಂತರ ಮರೆತೇ ಹೋಗುತ್ತದೆ. ಶಾಸಕರುಗಳೂ ಹಾಗೇ, ಬಹಳ ಸರಳವಾಗಿ ಇದ್ದವರು. ಮೊದಲಿನ ಶಾಸಕ ವೆಂಕಟ್ರಮಣ ಗೌಡ ಅವರೂ ಹಾಗೆ ಬಹಳ ಸರಳವಾಗಿ ಬದುಕಿದವರು. ಬಹಳ ಕೆಲಸ ಮಾಡಿದವರು, ಇಂದು ಸಣ್ಣ ಮೋರಿ ಮಾಡಿದವರು ಹೆಸರೂ ನೆನಪಿರುತ್ತದೆ, ಅಂದು ಮಾಡಿರುವ ದೊಡ್ಡ ಕೆಲಸಗಳು ಎಷ್ಟು..?
ಇಂದು ಏನಾಗಿದೆ ಎಂದರೆ, ಸೌಹಾರ್ದವಾಗಿ ಬಾಳಿದ ಜನರು , ದಕ ಜಿಲ್ಲೆಯ ಜನರು ಇಂದು ಈ ಸೌಹಾರ್ದತೆಯನ್ನು ಕಳೆದುಕೊಂಡಿದೆ. ಈಗ ಗಲಭೆಗಳು ನಡೆಯುತ್ತದೆ, ಬಹಳ ಕುಬ್ಜ ವ್ಯಕ್ತಿತ್ವದ ರಾಜಕೀಯ ವ್ಯಕ್ತಿಗಳು ಬರುತ್ತಿದ್ದಾರೆ. ಇದು ಬಹಳ ಬೇಸರವಾಗುತ್ತದೆ. ಆದರೆ ಹೇಳುವ ಹಾಗೆ ಇಲ್ಲ, ಹೀಗೆ ಹೇಳಿದರೆ ಬೇರೆ ಬೇರೆ ರೀತಿಯ ಆಕ್ರಮಣಗಳು ನಡೆಯುತ್ತದೆ. ಇದಕ್ಕಾಗಿ ಈಗ ಮೌನವೇ ಹೆಚ್ಚು ಮತ್ತು ಈ ಉಸಾಬರಿಗಳು ನಮಗ್ಯಾಕೆ ಎಂದು ಅನಿಸಿ, ಕತೆ-ಕವಿತೆಯೇ ಹೆಚ್ಚು ಮುಖ್ಯ ಅಂತ ಅನಿಸಿ ಅದರಲ್ಲೇ ತಲ್ಲೀನತೆಯಲ್ಲಿದ್ದೇನೆ ಎನ್ನುತ್ತಾರೆ ಸುಬ್ರಾಯ ಚೊಕ್ಕಾಡಿ.

 

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror