ಚಿಂತನ ಮಂಥನ | ಗೋಶಾಲೆಗಳೇಕೆ ಧನ ಸಹಾಯಕ್ಕೆ ಸಮಾಜವನ್ನು “ಯಾಚಿಸುತ್ತವೆ…!?” |

January 9, 2024
1:34 PM

ಈ ಎಲೆಚುಕ್ಕಿ(leaf spot disease) ಸಂವತ್ಸರದಲ್ಲಿ ಎಲ್ಲಾ ಅಡಿಕೆ ಬೆಳೆಗಾರರೂ(Arecanut Growers) ತಮ್ಮ ಅಡಿಕೆ ತೋಟದ ಮರಕ್ಕೆ ಕೇವಲ ನೂರು ನೂರು ಗ್ರಾಮ್ ಸಗಣಿ ಗೊಬ್ಬರ(Cow dung Manure) ಹಾಕ್ತೀವಿ ಅಂತ ಮನಸು ಮಾಡಿದರೆ ಈಗಿರುವ ಗೋಶಾಲೆಗಳ(Goshala), ಗೋ ಸಂವರ್ಧನಾ ಕೇಂದ್ರದ ಹಸುಗಳೂ ಸ್ವಾವಲಂಬಿ ಆಗ್ತಾವೆ. ಆದರೆ ನಮ್ಮ ರೈತ(Farmer) ಬಂಧುಗಳು ಸಗಣಿ ಅತಿ ಕಡಿಮೆ ಬೆಲೆಗೆ ಸಿಗಬೇಕು ಎನ್ನುವ ಧೋರಣೆ ಹೊಂದಿರುತ್ತಾರೆ.

Advertisement

ನಮ್ಮ ತಯಾರಿಕೆಯ ಸಗಣಿ ಕಾಂಪೋಸ್ಟ್ ಗೊಬ್ಬರ+ ಸೂಕ್ಷ್ಮಾಣು ಜೀವಿಗಳ ಸಂಯೋಜನೆಯ ಗೊಬ್ಬರ ಟನ್ ಗೆ ಹನ್ನೆರಡು ಸಾವಿರ ಎಂದು ಗ್ರಾಹಕರಿಗೆ ಹೇಳಿದರೆ ಅವರು ನೋಡೋಣ ಮುಂದಿನ ತಿಂಗಳು ಹೇಳ್ತೀನಿ ಎಂದವರು ಸೊಸೈಟಿಗೆ ಹೋಗಿ “ಕಾಸಿನ ಬೆಲೆ ಇಲ್ಲದ” ಪ್ರೆಸ್ ಮಡ್ ನ್ನ ಕೊಂಡು ತಂದು ತೋಟಕ್ಕೆ ಹಾಕ್ತಾರೆ. ಪ್ರೆಸ್ ಮಡ್ ಗೊಬ್ಬರ ಖಂಡಿತವಾಗಿಯೂ ಕೃಷಿಗೆ ಹಾನಿ‌ ಎಂದು ವಿಜ್ಞಾನಿಗಳೇ ಹೇಳಿದರೂ ಕಿಲೋಗೆ ಎಂಟು ರೂಪಾಯಿಗೆ ಸಿಗುತ್ತದೆ ಕಡಿಮೆ ಬೆಲೆ ಅಂತ ಕೊಂಡು ಅಡಿಕೆ ಮರದ ಬುಡಕ್ಕೆ ಹಾಕಿ ಪರಮ ಪುನೀತರಾಗ್ತಾರೆ.‌‌‌

ಎಂತಹ ದುರಂತ ನೋಡಿ : ನಮಗೆ ಒಂದು ಕೆಜಿ ಗೊಬ್ಬರ ತಯಾರಾಗಲು ಸುಮಾರು ಹದಿನೆಂಟು ರೂಪಾಯಿ ಬೀಳುತ್ತದೆ. ಹದಿನೆಂಟು ರೂಪಾಯಿ ಗೊಬ್ಬರನ ನಾವು ಗ್ರಾಹಕರಿಗೆ ಹೊರೆಯಾಗಬಾರದು ಎಂದು ಹನ್ನೆರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಈ ಅಮೂಲ್ಯ ಸೂಕ್ಷ್ಮಾಣು ಜೀವಿಯುಕ್ತ ಗೊಬ್ಬರ ತಯಾರಿಕಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕೊಂಡು ಗೋವುಳಿಸುವ ನಮ್ಮ ಪ್ರಯುಕ್ತಕ್ಕೆ ಪ್ರೋತ್ಸಾಹ ಮಾಡಿ ತಮ್ಮ ಅಡಿಕೆ ಮರವನ್ನೂ ಸುಫುಷ್ಠಿ ಮಾಡಿ ತಮಗೂ ಗೋವುಗಳಿಗೂ ಒಳ್ಳೆಯದು ಮಾಡಿಕೊಳ್ಳಬಹುದು ಮತ್ತು ಒಳ್ಳೆಯದು ಮಾಡಬಹುದು…

ಈ ಬೆಂಕಿಬಿದ್ದ ಪ್ರೆಸ್ ಮಡ್ ನಮ್ಮ ಗೋವುಗಳನ್ನ ಸಾಕಲಾಗದಂತ ಅಸಹಾಯಕ ಪರಿಸ್ಥಿತಿಗೆ ತಂದು ನೂಕಿದೆ.
ಈ ಪ್ರೆಸ್ ಮಡ್ ಮತ್ತು ಅತಿ ರಾಸಾಯನಿಕ ಗೊಬ್ಬರ ಬಳಕೆ ಇನ್ನ ಹತ್ತು ವರ್ಷಗಳಲ್ಲಿ ಈ ಕೃಷಿ ಭೂಮಿಯ ಸಾರ ನಿಸ್ಸಾರ ಮಾಡಿ ಎಲ್ಲಾ ಬಗೆಯ ಕೃಷಿ ಯನ್ನೂ ನಾಶ ಮಾಡಲಿದೆ. ಈ ಪ್ರೆಸ್ ಮಡ್ ಗೊಬ್ಬರದ ರೂಪದಲ್ಲಿ ಮಾರುಕಟ್ಟೆಗೆ ಬರದಿದ್ದರೆ ನಮ್ಮ ಗೋವುಗಳ ಸಗಣಿಗೆ ಉತ್ತಮ ಬೆಲೆ ಇರುತ್ತಿತ್ತು… ಗೋವುಗಳಿಗೆ ಈ ಪರಿಸ್ಥಿತಿ ಇರುತ್ತಿರಲಿಲ್ಲ.. ‌!!

ರೈತರು ಕೃಷಿ ಉಳಿಸಿಕೊಳ್ಳಲು ಸಗಣಿ ಗೊಬ್ಬರ ಹಾಕಲೇಬೇಕು: ಬಣ್ಣದ ಚೀಲದ ಪ್ರೆಸ್ ಮಡ್ ಗೊಬ್ಬರ ಹಾಕ್ತಾ ಕೂತರೆ ಅಡಿಕೆ ತೋಟವನ್ನು ಇನ್ನ ನಾಲ್ಕೈದು ವರ್ಷಗಳಲ್ಲಿ ಎಲೆಚುಕ್ಕಿ ಶಿಲೀಂಧ್ರ ತಿಂದು ಬಿಸಾಡುತ್ತವೆ. ರೈತರು ಉತ್ತಮ ಬೆಲೆಗೆ ಸಗಣಿ ಗೊಬ್ಬರ ವನ್ನು ಖರೀದಿಸುವ ಮನಸು ಮಾಡಿದರೆ ಗೋವುಗಳಿಗೆ ಹೀಗೆ ದಾನ ಮಾಡಿ ಎಂದು ಬೇಡುವ ದುಸ್ಥಿತಿಗೆ ಗೋಶಾಲೆಗಳು ಬರೋಲ್ಲ… ಇವತ್ತು ಎಂಟು ಹತ್ತು ಎಕರೆ ಅಡಿಕೆ ತೋಟ ಇರುವವರೂ ಒಂದು ಎರಡು ಹಸು ಕೂಡ ಸಾಕರು. ಯಾರಿಗೂ ಗೋವು ಬೇಡವಾಗಿದೆ. ಬದಲಾದ ಕಾಲದಲ್ಲಿ ಎಲ್ಲರಿಗೂ ಗೋವು ಸಾಕಲು ಕಷ್ಟ ಇರಲಿ ‌.. ಆದರೆ ಕನಿಷ್ಠ ಇಂತಹ ಗೊಬ್ಬರ ಮೌಲ್ಯವರ್ಧನೆ ಪ್ರಯತ್ನ ಕ್ಕೆ ರೈತರು ಪ್ರೋತ್ಸಾಹ ಮಾಡಿದರೆ ಖಂಡಿತವಾಗಿಯೂ ಗೋವು ಉಳಿತಾವೆ…

ಕೊನೆಯ clarification…. ಗೋಶಾಲೆ ಮತ್ತು ಡೈರಿ ಫಾರ್ಮ್ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಗೋಶಾಲೆಗೆ ಸಗಣಿ ಗೊಬ್ಬರವೇ ಆಧಾರ. ಡೈರಿ ಫಾರ್ಮ್ ನವರಿಗೆ ಸಗಣಿ ಉಪಉತ್ಪನ್ನ. ಡೈರಿ ಫಾರ್ಮ್ ನವರು ಮೂರು ರೂಪಾಯಿ ಕೆಜಿಗೆ ಸಗಣಿ ಮಾರಾಟ ಮಾಡಿದರೆ ಗಿಟ್ಟತ್ತದೆ. ಆದರೆ ಗೋಶಾಲೆಯವರಿಗೆ ಮೂರು ರೂಪಾಯಿ ಸಿಕ್ಕರೆ ನಷ್ಟ. ಸಾಮಾನ್ಯವಾಗಿ ಡೈರಿಯವರು ಸಾಕುವುದು ಹೆಚ್ ಎಫ್ ಮತ್ತು ಜೆರ್ಸಿ ಹಸುಗಳು. ಈ ಹೆಚ್ ಎಫ್ ಮತ್ತು ಜೆರ್ಸಿ ಹಸುಗಳ ಒಂದು ಮಿಲಿ ಸಗಣಿಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕೇವಲ ಐವತ್ತು ಲಕ್ಷವಾದರೆ ಅದೇ ದೇಸಿ ತಳಿ ಹಸುಗಳ ಸಗಣಿ ಯ ಒಂದು ಮಿಲಿಗ್ರಾಂ ಸಗಣಿಯಲ್ಲಿ ಐನೂರು ಕೋಟಿ ಸೂಕ್ಷ್ಮಾಣು ಜೀವಿಗಳು ಲಭ್ಯತೆ ಇರುತ್ತದೆ.

ಸಾಮಾನ್ಯವಾಗಿ ಎಲ್ಲಾ ಗೋಶಾಲೆಗಳಲ್ಲೂ ದೇಸಿ ತಳಿ ಹಸುಗಳೇ ಇರುವುದು. ದೇಸಿ ತಳಿ ಹಸುಗಳ ಸಗಣಿ ಖಂಡಿತವಾಗಿಯೂ ಶ್ರೇಷ್ಠ ಮೌಲ್ಯಯುತ. ಇಷ್ಟೆಲ್ಲಾ ಅನುಕೂಲ calculation ಇದ್ದರೂ ರೈತರು ಇದನ್ನು ಅರ್ಥ ಮಾಡಿ ಕೊಳ್ಳದೇ ಈ ಗೊಬ್ಬರ ಮೌಲ್ಯವರ್ಧನೆ ಯ ನಮ್ಮಂಥ ವರಿಗೆ ಪ್ರೋತ್ಸಾಹ ಮಾಡದಿದ್ದರೆ ಹೀಗೆ ದೇಸಿ ತಳಿ ಹಸುಗಳ ಸಾಕಿ ಸಲಹುವ ನಮ್ಮಂಥವರು ಬೀದಿಯಲ್ಲಿ ನಿಂತು ದನ ಸಾಕಲು ಸಹಾಯ ಮಾಡಿ ಎಂದು ಜೋಳಿಗೆ ಹಿಡಿದು ಬೇಡಬೇಕಾಗುತ್ತದೆ.. ಎಲ್ಲಾ ರೈತ ಬಾಂಧವರಲ್ಲಿ ದೇಸಿ ತಳಿ ಸಾಕುವ ಗೋಶಾಲೆ ಗೋ ಸಂವರ್ಧಕ ಸಮೂಹದ ಎಲ್ಲರ ಪರವಾಗಿ ಕಳಕಳಿಯಿಂದ ಬೇಡಿ ಕೊಳ್ಳುತ್ತಿದ್ದೇವೆ‌… ದಯಮಾಡಿ ನಮ್ಮ ದೇಸಿ ತಳಿ ಹಸುಗಳ ಸಗಣಿ ಗೊಬ್ಬರ ಮೌಲ್ಯವರ್ಧನೆ ಯ ಪ್ರಯತ್ನವನ್ನು ಪ್ರೋತ್ಸಾಹಿಸಿ.. ನಮ್ಮ ದೇಸಿ ತಳಿ ಹಸುಗಳು ಸ್ವಾವಲಂಬಿಯಾಗಲಿ.

All Arecanut growers to their Arecanut plantation trees this leaf spot disease. If we think that only one hundred grams of dung can be used as fertilizer, the cows of the existing cowsheds and cow breeding centers will also become self-sufficient. But our farmer brothers have the attitude that dung should be available at a very low price.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ
ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ
March 29, 2025
9:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group