ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

June 21, 2025
9:08 PM
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ ಔಷಧಿ ಸಿಂಪಡಣೆಗೆ ತೆರಳುವ ಮುನ್ನ ಹವಾಮಾನ ಮಾಹಿತಿಯ "ವೆದರ್‌ ಆಪ್"‌ ಮೂಲಕ ಯಾವಾಗ ಮಳೆಯಾಗುತ್ತದೆ ಎನ್ನುವುದನ್ನು ಗಮನಿಸಿ ಸಿಂಪಡಣೆಗೆ ತೆರಳುತ್ತಾರೆ.‌ ಈ ಬಗ್ಗೆ ಕೃಷಿಕ ರಾಜಗೋಪಾಲ ಕೈಪಂಗಳ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಡಿಕೆ ಬೆಳೆಗಾರರಿಗೆ ಈಗ ಸವಾಲಿನ ದಿನಗಳು. ಮಳೆಗಾಲ ಆರಂಭವಾದ ಬಳಿಕ ಅಡಿಕೆಗೆ ಔಷಧಿ ಸಿಂಪಡಣೆ ಮಾಡಬೇಕು, ಕೊಳೆರೋಗ ಬಾರದಂತೆ ತಡೆಯಬೇಕು. ಆದರೆ  ಮಳೆ ಯಾವಾಗ ಬರುತ್ತದೆ..? ಯಾವಾಗ ಕಡಿಮೆಯಾಗುತ್ತದೆ ಎನ್ನುವುದೇ ತಿಳಿಯದ ಕಾರಣ ಅಡಿಕೆ ಬೆಳೆಗಾರರಿಗೆ ಸವಾಲು. ಅದರ ಜೊತೆಗೇ ಕಾರ್ಮಿಕರಿಗೂ ಸಂಕಷ್ಟ. ಇಂತಹ ಸಮಸ್ಯೆಗೆ ಕೃಷಿ ಕಾರ್ಮಿಕ ಹವಾಮಾನ ಮಾಹಿತಿಯನ್ನು ವೆದರ್‌ ಆಪ್‌ ಮೂಲಕ ಪಡೆದು ಔಷಧಿ ಸಿಂಪಡಣೆಗೆ ತೆರಳುವ ಬಗ್ಗೆ ಕೃಷಿಕ ರಾಜಗೋಪಾಲ ಕೈಪಂಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕೂಡಾ ಇದೆ.

Advertisement
ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ

ಕೃಷಿಗೆ ಈಗ ತಂತ್ರಜ್ಞಾನ ಏಕೆ ಬೇಕು? ಅದೂ ಸಾಮಾನ್ಯ ಕೃಷಿಕರಿಗೂ, ಕೃಷಿ ಕಾರ್ಮಿಕರಿಗೂ ಲಭ್ಯವಾಗುವಂತೆ ಇರಬೇಕು ?. ಇದಕ್ಕೊಂದು ಉದಾಹರಣೆಯಾಗಿ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು.ಅಡಿಕೆಗೆ ಔಷಧಿ ಸಿಂಪಡಣೆಗೆ ತೆರಳುವ ಮುನ್ನ ಹವಾಮಾನ ಮಾಹಿತಿಯ “ವೆದರ್‌ ಆಪ್”‌ ಮೂಲಕ ಯಾವಾಗ ಮಳೆಯಾಗುತ್ತದೆ ಎನ್ನುವುದನ್ನು ಗಮನಿಸಿ ಸಿಂಪಡಣೆಗೆ ತೆರಳುತ್ತಾರೆ.ಕೃಷಿಕ ರಾಜಗೋಪಾಲ ಕೈಪಂಗಳ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈಗ ಎಲ್ಲರ ಬಳಿಯೂ ಆಧುನಿಕ ತಂತ್ರಜ್ಞಾನಗಳು ಒಳಗೊಂಡ ಮೊಬೈಲ್‌ ಇದೆ. ಈ ಮೊಬೈಲ್‌ ಮೂಲಕ ಲಭ್ಯವಾಗುವ ಹವಾಮಾನ ಮಾಹಿತಿ ಪಡೆದು ಔಷಧಿ ತಯಾರಿಸುವುದು ಹಾಗೂ ಔಷಧಿ ಸಿಂಪಡಣೆಗೆ ಅನುಕೂಲವಾಗುತ್ತದೆ. ಇದರಿಂದ ಕಾರ್ಮಿಕರಿಗೂ ಇಡೀ ದಿನ ವ್ಯರ್ಥವಾಗುವುದಿಲ್ಲ, ಮಾನವ ಶ್ರಮವೂ ಸರಿಯಾಗಿ ಬಳಕೆಯಾಗುತ್ತದೆ. ಕೃಷಿಕನಿಗೂ ನಷ್ಟವೂ ಇಲ್ಲ, ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆಯೂ ಸಾಧ್ಯವಾಗುತ್ತದೆ. ಕೃಷಿಕರು ಈಗಾಗಲೇ ಹವಾಮಾನ ಮಾಹಿತಿಯನ್ನು ಪಡೆಯುತ್ತಾರೆ. ಆದರೆ ಕೃಷಿ ಕಾರ್ಮಿಕರು ಕೂಡಾ ಇಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವೂ ಇದೆ. ಗ್ರಾಮೀಣ ಭಾಗಕ್ಕೂ ತಂತ್ರಜ್ಞಾನಗಳು ಎಷ್ಟು ಅಗತ್ಯ ಎನ್ನುವುದಕ್ಕೂ ಕೂಡಾ ಇದೊಂದು ಸಂದೇಶವಾಗಿದೆ.

ಕೃಷಿ ಕಾರ್ಮಿಕ ರಾಮಕೃಷ್ಣ ಅವರ ಈ ಪ್ರಯತ್ನವು ಮಾದರಿಯಾಗಿದೆ. ಅಷ್ಟೇ ಅಲ್ಲ, ಕೃಷಿ ತಂತ್ರಜ್ಞಾನಗಳು ಅತ್ಯಂತ ಸಾಮಾನ್ಯ ಜನರೂ ಬಳಕೆ ಮಾಡಿದಾಗ ಮಾನವ ಶ್ರಮವೂ ಸರಿಯಾಗಿ ಬಳಕೆಯಾಗುತ್ತದೆ ಎನ್ನುವುದಕ್ಕೆ ಇದೊಂದು ಮಾದರಿಯಾಗಿದೆ.

Why do we need technology in farming these days? It’s important that everyday farmers have access to it too. Take Ramakrishna Ilanthodi, for example, an agricultural worker near Nettanige in the Kasaragod district. Before he heads out to spray pesticides on  arecanut crops, he checks the “Weather App” to see if it’s going to rain, so he can plan his day better.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ
July 16, 2025
7:51 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ
July 16, 2025
7:17 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror