ಹಲಸಿನ ಕೃಷಿಯು ಈಚೆಗೆ ಹೆಚ್ಚು ಪ್ರಸಿದ್ಧಿಯನ್ನು ಹೊಂದುತ್ತಿದೆ. ಬೇರೆ ಬೇರೆ ಕಾರಣಗಳಿಂದ ಹಲಸು ಕೃಷಿಯತ್ತ ಕೃಷಿಕರು ಮನಸ್ಸು ಮಾಡಿದ್ದಾರೆ. ಆದರೆ ಹಲಸು ಬೆಳೆಯುವ ಕರ್ನಾಟಕದಂತಹ ಕಡೆಗಳಲ್ಲಿ ಹಲಸು ಇಂದಿಗೂ ವಾಣಿಜ್ಯ ಬೆಳೆಯಾಗಿಲ್ಲ. ವಿದೇಶಗಳಲ್ಲಿ ಹಲಸು ಆಹಾರ ಬೆಳೆಯಾಗಿಯೂ ಗಮನ ಸೆಳೆಯುತ್ತಿದೆ. ಜಾಗತಿಕ ಹಲಸಿನ ಬೀಜದ ಮಾರುಕಟ್ಟೆ ಬಗ್ಗೆ ನಡೆಸಿದ ಅಧ್ಯಯನದ ಪ್ರಕಾರ ಹಲಸಿನ ಬೀಜದ ಹಿಟ್ಟಿನ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ 520 ಮಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆ ಇದೆ. ವಿಶೇಷವಾಗಿ ಈ ಬೆಳವಣಿಗೆಯು ಆಹಾರ, ಔಷಧೀಯ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಹಲಸಿನ ಬೀಜದ ಹಿಟ್ಟು ಬಳಕೆಯಾಗುವ ಸಾಧ್ಯತೆ ಇದೆ.
ಹಲಸಿನ ಬೀಜದ ಹುಡಿಯು ಸಾವಯವ ಮತ್ತು ಸಾಂಪ್ರದಾಯಿಕ ಆಹಾರವಾಗಿ ರೂಪಾಂತರವಾಗುತ್ತಿದೆ. ಅಷ್ಟೇ ಅಲ್ಲದೆ. ಕೀಟನಾಶಕ-ಮುಕ್ತ, ರಾಸಾಯನಿಕ-ಮುಕ್ತ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ಹುಡುಕುತ್ತಿರುವ ಗ್ರಾಹಕರಲ್ಲಿ ಸಾವಯವ ಹಲಸಿನ ಬೀಜದ ಹುಡಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಉತ್ತರ ಅಮೆರಿಕಾ ಮತ್ತು ಯುರೋಪ್‌ನಂತಹ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಸಾವಯವ ವಿಭಾಗವು ವಿಶೇಷವಾಗಿ ಬಲಗೊಳ್ಳುತ್ತಿದೆ. ಇನ್ನು ಬೇಕರಿ ಮತ್ತು ತಿಂಡಿಗಳು, ಪೌಷ್ಟಿಕಾಂಶದ ಪೂರಕಗಳು, ಆಹಾರ ಮತ್ತು ಪಾನೀಯ, ಪಶು ಆಹಾರ ಮತ್ತು ಇತರ ಬಳಕೆಗಳು ಸೇರಿವೆ. ಇವುಗಳಲ್ಲಿ, ಗ್ಲುಟನ್-ಮುಕ್ತ ಮತ್ತು ಪ್ರೋಟೀನ್-ಅಂಶವುಳ್ಳ ಬೇಕರಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಅಲ್ಲೂ ಹಲಸಿನ ಬೀಜದ ಹುಡಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೇಕ್, ಕುಕೀಸ್ ಮತ್ತು ಪೇಸ್ಟ್ರಿಗಳಲ್ಲಿ ಗೋಧಿ ಹುಡಿ ಬದಲಿಸಲು ಹಲಸಿನ ಬೀಜದ ಹುಡಿ ಹೆಚ್ಚಾಗಿ ಬಳಸಲಾಗುತ್ತಿದೆ, ಜೊತೆಗೆ ಪೌಷ್ಟಿಕಾಂಶದ ಪೂರಕಗಳ ವರ್ಗದಲ್ಲಿ ಪ್ರೋಟೀನ್ ಬಾರ್‌ಗಳು ಮತ್ತು ಶೇಕ್‌ಗಳಲ್ಲಿಯೂ ಸಹ ಹಲಸಿನ ಬೀಜದ ಹುಡಿ ಬಳಕೆಯಾಗುತ್ತಿದೆ. ಕೃಷಿ ವಲಯದಲ್ಲೂ ಕೂಡಾ ಜಾನುವಾರು ಆಹಾರದಲ್ಲಿ ವೆಚ್ಚ-ಪರಿಣಾಮಕಾರಿ ಮತ್ತು ಪೌಷ್ಟಿಕ ಪರ್ಯಾಯವನ್ನು ಒದಗಿಸುವುದರಿಂದ ಪಶು ಆಹಾರ ವಿಭಾಗವು ಬೇಡಿಕೆ ವ್ಯಕ್ತಪಡಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಹಲಸು ಹೆಚ್ಚಾಗಿ ಭಾರತ, ಬಾಂಗ್ಲಾದೇಶ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಹೇರಳವಾದ ಹಲಸಿನಹಣ್ಣು ಲಭ್ಯವಾಗುತ್ತದೆ. ಇಲ್ಲಿ ಗುಣಮಟ್ಟದ ಕಡೆಗೂ ಆದ್ಯತೆ ಬೇಕಾಗಿರುತ್ತದೆ. ಅನೇಕ ಕಡೆ ಹಲಸು ಇನ್ನೂ ಕೃಷಿಯಾಗಿ ಬದಲಾಗಿಲ್ಲ. ಹಲಸಿನ ಎಲ್ಲಾ ವಸ್ತುಗಳೂ ಉಪಯೋಗವಾಗುತ್ತವೆ. ಹೀಗಾಗಿ ಹಲಸು ಕೃಷಿಯಾಗಿ ಬದಲಾಗಬೇಕಿದೆ. ಉತ್ತರ ಅಮೆರಿಕಾ ಮತ್ತು ಯುರೋಪ್ ಕಡೆಗೆ ಹೆಚ್ಚುತ್ತಿರುವ ಗ್ರಾಹಕರ ಒಲವಿನಿಂದಾಗಿ ತ್ವರಿತ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.

