ಅನೇಕ ಪ್ರವಾಸಿಗರು(Tourist) ನಮ್ಮೂರಿನ ಅಂದ ಚಂದ ಬಿಟ್ಟು ವಿದೇಶಗಳಿಗೆ(Foreign), ಬೇರೆ ರಾಜ್ಯಗಳಿಗೆ(State) ಪ್ರವಾಸ(Tour) ಹೋಗೋದು ಮಾಮೂಲು. ನಮ್ಮ ಅಕ್ಕ ಪಕ್ಕ ಏನಿದೆ ಅನ್ನೋದು ಕೆಲವರಿಗೆ ಗೊತ್ತಿರಲ್ಲ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಪ್ರಕೃತಿ ಸೌಂದರ್ಯದ ನಾಡು. ಇಲ್ಲೆ ನಮ್ಮ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿವೆ. ಅದೇ ರೀತಿ ಲಕ್ಷದ್ವೀಪಗಳಿಗೇನು ಕಮ್ಮಿ ಇಲ್ಲ. ಮಂಗಳೂರಿನಿಂದ(Mangaluru) 356 ಕಿಮೀ ದೂರದಲ್ಲಿ ಒಂದು ಸುಂದರ ಲಕ್ಷದ್ವೀಪವಿದೆ. ಕೊಚ್ಚಿಯಿಂದ(Kochi) 391 ಕಿಮೀ ದೂರದಲ್ಲಿದೆ. ಲಕ್ಷದ್ವೀಪಕ್ಕೆ ತರಕಾರಿ(Vegetable), ಆಹಾರ(Food) ಸಾಮಾಗ್ರಿಯಿಂದ ಹಿಡಿದು ಕಟ್ಟಡ ಸಾಮಾಗ್ರಿವರೆಗೂ ಮಂಗಳೂರಿನಿಂದಲೇ ಸಾಗಾಟವಾಗುತ್ತದೆ..!
ಪ್ರಧಾನಿ ಮೋದಿ ಮಾಲ್ಡೀವ್ಸ್ ಲಕ್ಷದ್ವೀಪ ಭೇಟಿ ಬಳಿಕ ಲಕ್ಷ ದ್ವೀಪದ ಬಗ್ಗೆ ಕುತೂಹಲ ಹೆಚ್ಚುತ್ತಿದೆ. ಇದೇ ವೇಳೆ ಕರ್ನಾಟಕದ ಮಂಗಳೂರಿನ ಜೊತೆಗೆ ಲಕ್ಷದ್ವೀಪಕ್ಕೆ ಇರುವ ಸಂಬಂಧಗಳು ಸಹ ಮುನ್ನೆಲೆಗೆ ಬರುತ್ತಿವೆ. ಮುನ್ನೂರು ವರ್ಷಗಳಿಂದಲೇ ಲಕ್ಷದ್ವೀಪದ ಜೊತೆ ಮಂಗಳೂರಿಗೆ ಸಂಪರ್ಕವಿತ್ತು, ಇಡೀ ವಿಶ್ವದಲ್ಲೇ ಲಕ್ಷದ್ವೀಪದ ಜೊತೆ ಸಂಪರ್ಕ ಇರೋದು ಕೇರಳ ಕೊಚ್ಚಿ ಮತ್ತು ಮಂಗಳೂರಿಗೆ ಮಾತ್ರ.
ಲಕ್ಷದ್ವೀಪ ಮಂಗಳೂರಿನಿಂದ 356 ಕಿಮೀ ದೂರದಲ್ಲಿದೆ. ಕೊಚ್ಚಿಯಿಂದ 391 ಕಿಮೀ ದೂರದಲ್ಲಿದೆ. ಲಕ್ಷದ್ವೀಪಕ್ಕೆ ತರಕಾರಿ ಆಹಾರ ಸಾಮಾಗ್ರಿಯಿಂದ ಹಿಡಿದು ಕಟ್ಟಡ ಸಾಮಾಗ್ರಿವರೆಗೂ ಮಂಗಳೂರಿನಿಂದಲೇ ಸಾಗಾಟವಾಗುತ್ತದೆ. ಮಂಗಳೂರಿನಿಂದ ಪ್ರತಿದಿನ ಲಕ್ಷದ್ವೀಪಕ್ಕೆ ಐವತ್ತಕ್ಕೂ ಹೆಚ್ಚು ವೆಸೆಲ್ಗಳು ತೆರಳುತ್ತವೆ. ಲಕ್ಷದ್ವೀಪದಲ್ಲಿರುವ 36 ಐಲ್ಯಾಂಡ್ಗಳಲ್ಲಿ ಕೇವಲ ಆರು ಐಲ್ಯಾಂಡ್ಗಳಲ್ಲಿ ಮಾತ್ರ ಜನವಸತಿ ಇದ್ದು, ಇನ್ನೂ ಮೂರು ಐಲ್ಯಾಂಡ್ಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ.
ಲಕ್ಷದ್ವೀಪ ಅಭಿವೃದ್ಧಿಯಾದರೆ ಮಂಗಳೂರಿನ ಪ್ರವಾಸೋದ್ಯಮಕ್ಕೂ ಬೂಸ್ಟ್ ದೊರೆಯಲಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಲಕ್ಷದ್ವೀಪ ಸಂಪರ್ಕಿಸುವ ಜೆಟ್ಟಿಗಳು ನಿಲುಗಡೆಯಾಗುತ್ತವೆ. ಕೋವಿಡ್ ಬರುವ ಮುಂಚೆ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗಿತ್ತು. ಆರು ಸಾವಿರಕ್ಕೆ ಊಟ ವಸತಿ ಸೇರಿದಂತೆ ಮೂರು ದಿನದ ಪ್ಯಾಕೇಜ್ ಇತ್ತು. ಆದರೆ ಕೋವಿಡ್ ಬಳಿಕ ಲಕ್ಷದ್ವೀಪದ ಪ್ರವಾಸಿ ಹಡಗು ಸಂಚಾರ ನಿಲುಗಡೆಯಾಗಿದೆ.
ಲಕ್ಷದ್ವೀಪ ಪ್ರವಾಸಕ್ಕೆ ಕಠಿಣ ನಿಯಮಗಳೇ ಅಡ್ಡಿಯಾಗಿವೆ. ಪರ್ಮಿಟ್ ಪಡೆಯಲು ಹತ್ತಾರು ನಿಬಂಧನೆಗಳಿವೆ. ಪ್ರವಾಸಕ್ಕೆ 20 ದಿನದ ಮೊದಲು ಅರ್ಜಿ ಸಲ್ಲಿಸಬೇಕು. ಪೊಲೀಸ್ ವೆರಿಫಿಕೇಶನ್ ಆಗಬೇಕು. ಪೊಲೀಸ್ ಕ್ಲಿಯರೆನ್ಸ್ ಈ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಬೇಕಿದೆ. ಇಂತಹ ಹರಸಾಹಸದಿಂದ ಪರ್ಮಿಟ್ ಪಡೆಯಬೇಕನ್ನುವ ಕಾರಣದಿಂದ ಪ್ರವಾಸಿಗರು ಲಕ್ಷದ್ವೀಪದ ಪ್ರವಾಸದಿಂದ ದೂರವುಳಿಯುತ್ತಿದ್ದಾರೆ.
– ಅಂತರ್ಜಾಲ ಮಾಹಿತಿ
After Prime Minister Modi’s visit to Maldives Lakshadweep, curiosity about Lakshadweep is increasing. At the same time, relations with Mangalore in Karnataka and Lakshadweep are also coming to the fore. Mangalore has been connected with Lakshadweep for 300 years, Kochi and Mangalore are the only places in the world that have connections with Lakshadweep.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…