ಚೀನಾ ಏಕಾಏಕಿಯಾಗಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಏಕೆ..?

October 26, 2024
11:44 PM
ಚೀನಾದಲ್ಲಿ, ಅಡಿಕೆಯನ್ನು  ಜೀರ್ಣಕಾರಿ, ಚೂಯಿಂಗ್ ಗಮ್, ಎನರ್ಜಿ ಡ್ರಿಂಕ್ಸ್, ತಿಂಡಿಗಳು... ಸೇರಿದಂತೆ ಕೆಲವು ಉತ್ಪನ್ನಗಳ ತಯಾರಿಕೆ ಬಳಕೆ ಮಾಡಲಾಗುತ್ತಿದೆ. ಅದೆಲ್ಲವೂ ಈಗ ಬೇಡಿಕೆಯ ವಸ್ತುವಾಗಿದೆ. ಹೀಗಾಗಿ ಚೀನಾ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ

ಚೀನಾವು ಕಳೆದ ಕೆಲವು ಸಮಯಗಳಿಂದ ಎಳೆ ಅಡಿಕೆಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದೆ. ವಿಯೆಟ್ನಾಂನಂತಹ ಪ್ರದೇಶದಲ್ಲೂ ಈಗ ಅಡಿಕೆ ಜನಪ್ರಿಯವಾಗಲು ತೊಡಗಿದೆ. ಅಡಿಕೆ ಎನ್ನುವುದು ಚಿನ್ನದ ಬೆಳೆ ಎಂಬ ಮಟ್ಟಿಗೆ ಬರುತ್ತಿದೆ. ಅಷ್ಟಕ್ಕೂ ಚೀನಾ ಏಕೆ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎನ್ನುವುದು ಬಹಳ ಕುತೂಹಲದ ವಿಷಯವಾಗಿದೆ.

ವಿಯೆಟ್ನಾಂನಲ್ಲಿ ಅಡಿಕೆ ಧಾರಣೆ ಏರಿಕೆಯಾಗಿದೆ. ಅಲ್ಲಿನ ವ್ಯಾಪಾರಿಗಳ ಪ್ರಕಾರ, ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಅಡಿಕೆ ಬೆಲೆ ತೀವ್ರವಾಗಿ ಹೆಚ್ಚಾಗಿದೆ. ಅಡಿಕೆಗಳನ್ನು ಚೀನಾಕ್ಕೆ ರಫ್ತು ಮಾಡುವ ಕಾರಣದಿಂದಲೇ ಅಡಿಕೆ ಧಾರಣೆ ಏರಿಕೆಯಾಗಿದೆ. ಆದರೆ ಚೀನಾವು ಆ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಚೀನಾದಲ್ಲಿಅಡಿಕೆಯ ಉತ್ಪನ್ನಗಳು ಹೆಚ್ಚಾಗಿ ಈಗ ತಯಾರಿಕೆ ಆರಂಭವಾಗಿದೆ. ಆದರೆ ಅಡಿಕೆ ಬೆಳೆಯುವ ಚೀನಾದಲ್ಲಿ ಕೂಡಾ ಈಗ ಅಡಿಕೆ ಹಲವು ಕಾರಣಗಳಿಂದ ಇಳುವರಿ ನಷ್ಟ ಹಾಗೂ ರೋಗಗಳಿಗೆ ತುತ್ತಾಗಿದೆ.

ಚೀನಾದಲ್ಲಿ, ಸುಮಾರು 95% ಅಡಿಕೆ ಉತ್ಪಾದನೆಯನ್ನು ಹೈನಾನ್ ದ್ವೀಪದಲ್ಲಿ ಬೆಳೆಯಲಾಗುತ್ತದೆ. 2021 ರಲ್ಲಿ, ಹೈನಾನ್‌ನ ಅಡಿಕೆ ಬೆಳೆಯುವ ಪ್ರದೇಶವು 2,5 ಮಿಲಿಯನ್ ಎಕರೆಗಳಷ್ಟಿತ್ತು, ಇದು 276.200 ಟನ್‌ಗಳ ಉತ್ಪಾದನೆಗೆ ಕಾರಣವಾಗಿತ್ತು. ಹೈನಾನ್‌ನಲ್ಲಿನ ಅಡಿಕೆಗಳನ್ನು ವಾನ್ನಿಂಗ್ ಸಿಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನರು  ಅಡಿಕೆ ಬೆಳೆಗಾರರು ಇದ್ದಾರೆ.ಇತ್ತೀಚಿನ ವರ್ಷಗಳಲ್ಲಿ, ಹಳದಿ ಎಲೆ ರೋಗದಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಸ್ಥಳೀಯ ಅಡಿಕೆ ಉತ್ಪಾದನೆಯು ತೀವ್ರವಾಗಿ ಕುಸಿದಿದೆ. ಈ ಬಾರಿ ಹೈನಾನ್ ದ್ವೀಪವನ್ನು ಅಪ್ಪಳಿಸಿದ ಚಂಡಮಾರುತ ಕಾರಣದಿಂದಲೂ ಅಡಿಕೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಆದರೆ ಅಡಿಕೆಯನ್ನು ಉಪಯೋಗಿಸಿ ಹಲವು ಉತ್ಪನ್ನಗಳಿಗೆ ಈಗ ಅಡಿಕೆಯ ಕೊರತೆ ಇದೆ. ಈ ಕಾರಣದಿಂದ ಅಡಿಕೆ ಧಾರಣೆ ಏರಿಕೆಯಾಗಿದೆ. ಚೀನಾದಲ್ಲಿ, ಅಡಿಕೆಯನ್ನು  ಜೀರ್ಣಕಾರಿ, ಚೂಯಿಂಗ್ ಗಮ್, ಎನರ್ಜಿ ಡ್ರಿಂಕ್ಸ್, ತಿಂಡಿಗಳು… ಸೇರಿದಂತೆ ಕೆಲವು ಉತ್ಪನ್ನಗಳ ತಯಾರಿಕೆ ಬಳಕೆ ಮಾಡಲಾಗುತ್ತಿದೆ. ಅದೆಲ್ಲವೂ ಈಗ ಬೇಡಿಕೆಯ ವಸ್ತುವಾಗಿದೆ. ಹೀಗಾಗಿ ಚೀನಾ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಹೆಚ್ಚಾಗಿ ಬಳಕೆಯನ್ನೂ ಮಾಡುತ್ತಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಅಡಿಕೆ ಕೃಷಿಗೆ ಎಲೆಚುಕ್ಕಿ ಸಂಕಷ್ಟ | ಬೆಳೆಸಾಲ ಮನ್ನಾ ಮಾಡಲು ಆಗ್ರಹ – ಸಮೀಕ್ಷೆಗೆ ಸಹಕರಿಸುವಂತೆ ಕೃಷಿಕರಿಗೆ ಮನವಿ
January 10, 2026
8:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10-01-2026 | ತುಂತುರು ಮಳೆ ಇದೆ..! ಎಲ್ಲೆಲ್ಲಿ ಮಳೆ ಇದೆ…?
January 10, 2026
8:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror