Advertisement
ಸುದ್ದಿಗಳು

ಯಾಕಿಷ್ಟು ಮಳೆಯಾಗುತ್ತಿದೆ….? | ನಮ್ಮಲ್ಲಷ್ಟೇ ಅಲ್ಲ, ಪ್ರಪಂಚದ ಈ ಸಮಸ್ಯೆಗೆ ಕಾರಣವೇನು..?

Share

ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಭಾರಿ ಮಳೆಯಾಗಿದೆ. ಈಗಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಪಂಜಾಬ್, ಹರಿಯಾಣ, ಹಿಮಾಚಲ ಮತ್ತು ಜಮ್ಮುವಿನ ನದಿಗಳು ಅಪಾಯದ ಮಟ್ಟ ಮೀರಿ ಹರಿದವು. ಪೂರ್ವ ಪಾಕಿಸ್ತಾನದಲ್ಲಿ ವಾಯುಭಾರ ಕುಸಿತದಿಂದಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ತಿಳಿಸಿತ್ತು. ಅದಾದ ಬಳಿಕ ಮತ್ತೊಂದು ವಾಯುಭಾರ ಕುಸಿತದಿಂದ ಮಳೆ ಮುಂದುವರಿದಿದೆ. ಈ ಬಾರಿ ಇಲಾಖೆಯ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ಕೆಲವು ಕಡೆ ಸುರಿದ ಮಳೆ ಭೀಕರವಾಗಿದೆ. ಶೇ.1000 ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿತ್ತು.  ಕಾರಣ ಏನು..?

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ತಾಪಮಾನವು ವಾಯುವ್ಯ ಭಾರತದಲ್ಲಿ ಮಳೆಯನ್ನು ಹೆಚ್ಚುಗೊಳಿಸುತ್ತಿದೆ. ಇದರ ಪರಿಣಾಮದಿಂದ ಭಾರತದ ಹಲವು ಕಡೆ ಮಳೆ ಈಚೆಗೆ ಹೆಚ್ಚಾಗುತ್ತಿದೆ. ಜಾಗತಿಕ ಸರಾಸರಿಗಿಂತ ವೇಗವಾಗಿ ಪಶ್ಚಿಮ ಏಷ್ಯಾದಲ್ಲಿ ಭೂ ತಾಪಮಾನ ಏರಿಕೆಯಾಗುತ್ತಿದ್ದು, ಭೂಮಿ ಮತ್ತು ಅರೇಬಿಯನ್ ಸಮುದ್ರದ ನಡುವೆ ಒತ್ತಡ ಸೃಷ್ಟಿಯಾಗುತ್ತಿದ್ದು, ಇದು ತೇವಾಂಶ ತುಂಬಿದ ನೈಋತ್ಯ ಗಾಳಿಯನ್ನು ಹಿಮಾಲಯದ ತಪ್ಪಲಿನಲ್ಲಿ, ಪಶ್ಚಿಮ ಭಾರತ ಮತ್ತು ಪಾಕಿಸ್ತಾನದ ಕಡೆಗೆ ಎಳೆಯುತ್ತಿದೆ. ಇದರ ಪರಿಣಾಮವಾಗಿ ತೀವ್ರ ಮಳೆ ಮತ್ತು ಪ್ರವಾಹ ಉಂಟಾಗುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಮುಂಬೈನಲ್ಲಿ, ಅರೇಬಿಯನ್ ಸಮುದ್ರದ ಸರಾಸರಿಗಿಂತ ವೇಗವಾಗಿ ತಾಪಮಾನ ಏರಿಕೆಯಾಗುವುದರಿಂದ ತೀವ್ರ ಮಳೆ ಸಂಭವಿಸುತ್ತಿದೆ, ಇದು ಭೂಮಿಯ ಕಡೆಗೆ ತೇವಾಂಶದ ಉಲ್ಬಣಕ್ಕೆ ಕಾರಣವಾಗುತ್ತಿದೆ, ಇದರ ಪರಿಣಾಮವಾಗಿ ತೀವ್ರ ಮಳೆಯು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅಧ್ಯಯನಗಳನ್ನು ಉಲ್ಲೇಖಿಸಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಇದೇ ವೇಳೆ  ಈಶಾನ್ಯ ಭಾರತದಿಂದ ಮಾನ್ಸೂನ್ ಮಾದರಿಗಳು ಪಶ್ಚಿಮಕ್ಕೆ ಸ್ಥಳಾಂತರಗೊಳ್ಳುತ್ತಿವೆ ಎಂದು  ಹೇಳುವ ಅಧ್ಯಯನಗಳು ಇವೆ,   ಪಶ್ಚಿಮ ಮತ್ತು ವಾಯುವ್ಯ ಭಾರತದಲ್ಲಿ ಸರಾಸರಿ ಮಳೆಯಲ್ಲಿ ಶೇ. 10 ರಷ್ಟು ಇಳಿಕೆಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವಿಶ್ವದಲ್ಲಿ ತಾಪಮಾನ ಏರಿಕೆಗೆ ವಿವಿಧ ಕಾರಣಗಳು ಇವೆ. ಈಚೆಗೆ ಕಾಡ್ಗಿಚ್ಚು ಕೂಡಾ ಹೆಚ್ಚುತ್ತಿದೆ. ಸ್ಪೇನ್‌ನಲ್ಲಿ 400,000 ಹೆಕ್ಟೇರ್‌ಗಳಿಗೂ ಹೆಚ್ಚು ಪ್ರದೇಶ ಕಾಡ್ಗಿಚ್ಚಿಗೆ  ಸುಟ್ಟುಹೋಗಿದೆ.  ಯುರೋಪಿಯನ್ ಒಕ್ಕೂಟವು ದಾಖಲೆಯ ಭೀಕರ ಕಾಡ್ಗಿಚ್ಚಿ ಈ ಋತುವಿನಲ್ಲಿ ಅನುಭವಿಸುತ್ತಿದೆ, 1 ಮಿಲಿಯನ್ ಹೆಕ್ಟೇರ್‌ಗಳನ್ನು ಮೀರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೆಲ್ಜಿಯಂನ  ಮೂರನೇ ಒಂದು ಭಾಗದಷ್ಟು 1,016,000 ಹೆಕ್ಟೇರ್ ಪ್ರದೇಶವನ್ನು ಬೆಂಕಿ ಸುಟ್ಟುಹಾಕಿದೆ ಎಂದು ಯುರೋಪಿಯನ್ ಫಾರೆಸ್ಟ್ ಫೈರ್ ಇನ್ಫರ್ಮೇಷನ್ ಸಿಸ್ಟಮ್‌ನ ಮಾಹಿತಿ ಹೇಳಿಕೊಂಡಿದೆ. ಪೋರ್ಚುಗಲ್‌ನಲ್ಲಿ, ಬೆಂಕಿಯು 270,000 ಹೆಕ್ಟೇರ್‌ಗಳನ್ನು  ಸುಟ್ಟುಹಾಕಿದೆ. 1960 ರ ದಶಕದಷ್ಟು ಹಿಂದಿನ ದಾಖಲೆಗಳನ್ನು ಹೊಂದಿರುವ ಸ್ಪೇನ್‌ನಲ್ಲಿ, ಸರ್ಕಾರಿ ಅಂಕಿಅಂಶಗಳ ಪ್ರಕಾರ, ಈ ವರ್ಷ 1994 ರ ನಂತರದ ಅತ್ಯಂತ ಕೆಟ್ಟ  ಋತುವಾಗಿದೆ. ಕಾಡ್ಗಿಚ್ಚು ಕೂಡಾ ಹವಾಮಾನ ಬದಲಾವಣೆಯ ಅಪಾಯವನ್ನು ಒಡ್ಡುತ್ತಿದೆ.  ಆಗಾಗ್ಗೆ ಮತ್ತು ತೀವ್ರವಾದ ಶಾಖದ ಅಲೆಗಳು ಮತ್ತು ಬರಗಾಲಗಳನ್ನು ತರಲು ಕಾರಣವಾಗುತ್ತಿದೆ ಎಂದು ವರದಿಗಳು ಹೇಳಿವೆ. ತಾಪಮಾನ ಹೆಚ್ಚಾದಂತೆ ತೇವಾಂಶ ಕಡಿಮೆಯಾಗುತ್ತದೆ. ಇಂದು ಅರಣ್ಯದಲ್ಲೂ ತೇವಾಂಶ ಕೊರತೆ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಮಳೆಯಲ್ಲೂ ಏರುಪೇರಾಗುತ್ತಿದೆ. ತಾಪಮಾನದಲ್ಲೂ ಏರಿಕೆ ಕಾಡುತ್ತಿದೆ. ಇದು ಕೃಷಿ ಸಹಿತ ಎಲ್ಲಾ ಕ್ಷೇತ್ರದಲ್ಲೂ ಗಂಭೀರವಾದ ಪರಿಣಾಮ ಉಂಟು ಮಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

(ವಿವಿಧ ಅಧ್ಯಯನ ವರದಿಗಳ ಸಂಗ್ರಹ)

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

7 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

7 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

8 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

8 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

8 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

8 hours ago