Advertisement
Opinion

ಮಣ್ಣು ಅಂದರೆ ಮಣ್ಣು ಅಷ್ಟೊಂದು ಮಹತ್ವ ಏಕೆ? ಎಂಬ ಪ್ರಶ್ನೆ..?

Share

ಜಗತ್ತಿನ ಎಲ್ಲ ಜೀವಿಗಳ(creature)ಆಸ್ತಿತ್ವಕ್ಕೆ ಕಾರಣವೇ ಮಣ್ಣು(Soil).  ಆದರೆ ಅತ್ಯಂತ ಹೆಚ್ಚು ಪೆಟ್ಟು ತಿನ್ನುವ ವಸ್ತು ಜಗತ್ತಿನಲ್ಲಿ “ಮಣ್ಣು” ಮಾತ್ರ. ಅಗೆಯುತ್ತೇವೆ, ಕೊಚ್ಚುತ್ತೇವೆ, ಗೀರುತ್ತೇವೆ , ತೋಡುತ್ತೇವೆ, ತಳ್ಳುತ್ತೇವೆ, ಸುಡುತ್ತೇವೆ, ಗಣಿಗಾರಿಕೆ ಮಾಡುತ್ತೇವೆ. ಅದರ ಮೇಲೆ ಕಸ(Waste) ಸುರಿಯುತ್ತೇವೆ. ಬಿಸಿ(Heat) ಸುರಿಯುತ್ತೇವೆ, ವಿಕಿರಣ ಸುರಿಯುತ್ತೇವೆ ವಿಷ(Poisson) ತುಂಬುತ್ತೇವೆ. ಆದರೆ ಜೀವ ತುಂಬುವವರು ಬಹಳ ಕಡಿಮೆ.

ಜೀವ ತುಂಬುವುದು ಹೇಗೆ?: ಕಲ್ಲು ಮಣ್ಣಾಗಲು ಕೊಟ್ಯಾಂತರ ವರ್ಷಗಳು ಬೇಕು. ಮಣ್ಣು ಎಂದರೆ ಅದು ನಿರ್ಜೀವ ವಸ್ತು ಅಲ್ಲ. ಜೀವ ಖಜಾನೆ. ಮಣ್ಣಿದ್ದಲ್ಲಿ ಜೀವ ಸೃಷ್ಟಿ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಬದುಕಿದ್ದರೆ ಮಾತ್ರ ನಮ್ಮ ಬದುಕು .ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ನಮ್ಮ ಆಹಾರ, ಜೀವದ್ರವ ಶುದ್ದ ನೀರು ಲಭ್ಯ. ನಾವು ಅಭಿವೃದ್ಧಿ ಕಾರ್ಯಗಳ ನಿಮಿತ್ತ ಅರಣ್ಯ ನಾಶ, ಗಣಿಗಾರಿಕೆ, ರಾಸಾಯನಿಕ ಗೊಬ್ಬರ ಉಪಯೋಗ, ಕೆಮಿಕಲ್ ಉತ್ಪಾದನಾ ಘಟಕಗಳು, ಗೊಮಾಳಗಳ ನಾಶ, ತೈಲ ಸಂಸ್ಕರಣೆ ಘಟಕಗಳು, ಇನ್ನಿತರ ನೂರಾರು ಚಟುವಟಿಕೆಗಳಿಂದ ಮಣ್ಣಿನ ಸಾರಸತ್ವ ನಿಸ್ಸಾರವಾಗಿದ್ದು ನಮ್ಮ ಭವಿಷ್ಯ ಸಂಕಟಕ್ಕೆ ಸಿಲುಕಿದೆ.

ಜಲಚಕ್ರ, ಇಂಗಾಲಚಕ್ರ , ಸಾರಜನಕ ಚಕ್ರ , ಜೀವಚಕ್ರ ಸಂಕಟಕ್ಕೆ ಸಿಲುಕುತ್ತಿದೆ. ಹಾಗಾಗಿ ಮಣ್ಣಿನ ರಕ್ಷಣೆ ಇಂದಿನ , ಮುಂದಿನ, ಎಂದೆಂದಿನ ಆದ್ಯತೆ. ಮಣ್ಣು ಆರೋಗ್ಯವಾಗಿದ್ದರಷ್ಟೆ ಜೀವ ಜಗತ್ತು ಸಮೃದ್ಧವಾಗಿರಲು ಸಾಧ್ಯ. ಮಣ್ಣು ತೀರ ಕ್ಷುಲ್ಲಕ, ಅದರಲ್ಲೇನಿದೆ ಮಣ್ಣು, ಅವನಿಗೇನು ಗೊತ್ತು ” ಮಣ್ಣಾಂಗಟ್ಟಿ ” ಎಂಬ ಉಡಾಫೆಯಿಂದ ಸಂರಕ್ಷಣೆ ಮಾಡದಿದ್ದರೆ ಜೀವಸಂಕುಲ ಮಣ್ಣಿನಲ್ಲಿ ಲೀನವಾಗುವುದು ಅಷ್ಟೇ ಸತ್ಯ

ನಾಗೇಶ್ ಹೆಗಡೆಯವರ ” ಮಣ್ಣೆಂಬ ಪುಣ್ಯ ಕಾಲ್ಕೆಳಗೆ” ಲೇಖನ ಆಧರಿಸಿದ ಸಂಕ್ಷಿಪ್ತ ರೂಪ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

3 minutes ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

21 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

1 day ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

1 day ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

1 day ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

1 day ago