ವಿವಿಧ ವಾಹನಗಳಲ್ಲಿ(Vehicle) ಪ್ರಯಾಣಿಸುವಾಗ(Travel) ಅನೇಕ ಜನರು ಸಂಕಟವನ್ನು ಅನುಭವಿಸುತ್ತಾರೆ ವಾಕರಿಕೆ, ವಾಂತಿ(Vomiting), ತಲೆ ಸುತ್ತುವುದು(Nausea) ಇತ್ಯಾದಿ ಲಕ್ಷಣಗಳಿಂದ ಬಳಲುತ್ತಾರೆ. ಕಾರು, ಬಸ್ಸು, ವಿಮಾನ ಮತ್ತು ಹಡಗುಗಳಲ್ಲಿ ಪ್ರಯಾಣಿಸುವಾಗ ಸಾಕಷ್ಟು ಜನರು ಇಂಥ ತೊಂದರೆಗಳನ್ನು ಎದುರಿಸುತ್ತಾರೆ. ದ್ವಿಚಕ್ರ ವಾಹನಗಳು ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ಈ ಸಮಸ್ಯೆ ಅಷ್ಟೊಂದು ಕಂಡುಬರುವುದಿಲ್ಲ. ಮನರಂಜನಾ ಮೇಳ (amusement park) ಗಳಲ್ಲೂ ಉಯ್ಯಾಲೆಗಳು, ತಿರುಗು ತೊಟ್ಟಿಲಗಳಲ್ಲಿ(Joint wheel) ವಿಹರಿಸುವಾಗ ಈ ಸಮಸ್ಯೆ ಕಂಡು ಬರುತ್ತದೆ. ಇದೊಂದು ಕಾಯಿಲೆಯೊಂದು ಪರಿಗಣಿಸಬಹುದು ಹಾಗೂ ಇದನ್ನು ಒಟ್ಟಾರೆ “ಚಲನೆಯ ಕಾಯಿಲೆ (Motion sickness)” ಎಂದು ಗುರುತಿಸಲಾಗುತ್ತದೆ.
ಚಲನೆಯ ಕಾಯಿಲೆ ಏಕಾಗುತ್ತದೆ? ಈ ಕಾಯಿಲೆ ಉಂಟಾಗಲು ಎರಡು ಮೂರು ಅಂಶಗಳು ಕಾರಣವಾಗಿರುತ್ತವೆ.
1. ಒಳ ಕಿವಿಯಲ್ಲಿ ಗೊಂದಲ: ಚಲನೆಯ ಕಾಯಿಲೆಗೆ ಪ್ರಮುಖ ಕಾರಣ ಅಥವಾ ಕೇಂದ್ರ ಸ್ಥಾನ ಎಂದರೆ ಒಳ ಕಿವಿಯ ರಚನೆ. ನಮ್ಮ ಒಳ ಕಿವಿಯಲ್ಲಿ ವೆಸ್ಟ್ಯುಬುಲ್ ಮತ್ತು ಕೊಕ್ಲಿಯ ಎಂಬ ಶಂಖಾಕೃತಿಯ ನಾಳಗಳ ರಚನೆ ಇರುತ್ತದೆ. ಇದರಲ್ಲಿ ಒಂದು ವಿಶಿಷ್ಟ ದ್ರವ ಪದಾರ್ಥ ತುಂಬಿರುತ್ತದೆ. ಇದು ನಮ್ಮ ದೇಹದ ಚಲನೆಗೆ ಅನುಗುಣವಾಗಿ ನಮ್ಮ ಸರ್ಮತೋಲನವನ್ನು ಕಾಯ್ದುಕೊಳ್ಳಲು ಮೆದುಳಿಗೆ ಸಹಾಯ ಮಾಡುತ್ತದೆ. ಈ ಅಂಗಾಂಗಕ್ಕೆ ದೇಹದ ಚಲನೆಯನ್ನು ನಿಖರವಾಗಿ ಗ್ರಹಿಸಲು ಗೊಂದಲ ಉಂಟಾದಾಗ ಇದು ಗೊಂದಲಮಯ ಸಂದೇಶಗಳನ್ನು ಕಳುಹಿಸುತ್ತದೆ. ಇದರಿಂದ, ಮೆದುಳು ದೇಹದ ನಿಖರವಾದ ಸ್ಥಿತಿಯ ತಿಳಿಯದೆ ಗೊಂದಲಕ್ಕೀಡಾಗುತ್ತದೆ. ಈ ಸಂದೇಶ ರವಾನೆಯ ಕೆಲಸದಲ್ಲಿ ವೇಗಸ್ ಎಂಬ ವಿಶೇಷ ನರವು ಪ್ರಮುಖ ಪಾತ್ರ ವಹಿಸುತ್ತದೆ. ಈ ವೇಗಸ್ ನರದ ಕವಲುಗಳು ನಮ್ಮ ಕಣ್ಣುಗಳು, ಮೂಗು, ಕೆಲ ಸ್ನಾಯುಗಳು ಮತ್ತು ಜಠರದ ಕಾರ್ಯಗಳಲ್ಲೂ ಭಾಗವಹಿಸುತ್ತವೆ. ಆದ್ದರಿಂದ, ಕಿವಿಯ ಮೂಲಕ ಗೊಂದಲ ಉಂಟಾದಾಗ ಈ ನರವು ಆ ಗೊಂದಲದ ಸಂಕೇತಗಳನ್ನು ಕಣ್ಣುಗಳು ಮತ್ತು ಜಠರಕ್ಕೂ ರವಾನಿಸುತ್ತದೆ. ಪ್ರಯಾಣದ ಸಮಯದಲ್ಲಿ ಕಣ್ಣುಗಳು ಮತ್ತು ಒಳ ಕಿವಿಯು ತೀವ್ರವಾದ ಚಲನೆಯನ್ನು ಗ್ರಹಿಸುತ್ತವೆ ಆದರೆ ಜಠರ, ಸ್ನಾಯುಗಳು ಮತ್ತು ಕೀಲುಗಳು ಸ್ಥಿರತೆಯನ್ನು ಅನುಭವಿಸುತ್ತವೆ. ಈ ಒಟ್ಟಾರೆ ಗೊಂದಲಗಳಿಂದ ತಲೆ ಸುತ್ತುವುದು ಹೊಟ್ಟೆಯಲ್ಲಿ ಸಂಕಟ ವಾಕರಿಕೆ ವಾಂತಿ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದ ಚಲನೆಯ ಕಾಯಿಲೆಯೂ ತಿರುವುಗಳಲ್ಲಿ ಮತ್ತು ಅಲೆಗಳ ಮೇಲೆ ಪ್ರಯಾಣಿಸುವಾಗ ತೀವ್ರವಾಗಿರುತ್ತದೆ.
2. ಪ್ರಾಣವಾಯುವಿನ ಕೊರತೆ: ಮುಚ್ಚಿದ ವಾಹನಗಳಲ್ಲಿ ಗಾಳಿಯ ಚಲನೆ ತೀರ ಕಡಿಮೆಯಾಗುತ್ತದೆ. ಇದರಿಂದ ಆಮ್ಲಜನಕದ ಹರಿವು ಕುಂಠಿತಗೊಳ್ಳುತ್ತದೆ. ಇದು ಒಳ ಕಿವಿಯ ಗೊಂದಲದಿಂದ ಸೃಷ್ಟಿಯಾದ ಸಮಸ್ಯೆಗಳನ್ನು ಉಲ್ಬನಗೊಳಿಸುತ್ತದೆ. ಅದೇ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಈ ಸಮಸ್ಯೆ ಇರುವುದಿಲ್ಲ.
3. ವಾಸನೆಗಳು: ಈ ಗೊಂದಲಮಯ ಸ್ಥಿತಿಯಲ್ಲಿ ಮೂಗು ಸಹ ಸಂವೇದನಶೀಲವಾಗಿರುತ್ತದೆ ಆದ್ದರಿಂದ ಯಾವುದೇ ತೀವ್ರ ಅಥವಾ ಉಗ್ರ ವಾಸನೆ ಮೂಗಿಗೆ ತಾಗಿದಾಗ ಚಲನೆಯ ಕಾಯಿಲೆಯ ಸಂಕಟ ತೀವ್ರವಾಗುತ್ತದೆ.
ಚಲನೆಯ ಕಾಯಿಲೆಯ ಲಕ್ಷಣಗಳು:
• ತಲೆತಿರುಗುವಿಕೆ • ಅನಾರೋಗ್ಯದ ಭಾವನೆ (ವಾಕರಿಕೆ) • ಅನಾರೋಗ್ಯ • ತಲೆನೋವು • ತಣ್ಣನೆಯ ಭಾವನೆ ಮತ್ತು ತೆಳುವಾಗುತ್ತಿದೆ • ಬೆವರುವುದು
ತೊಂದರೆಯನ್ನು ಕಡಿಮೆ ಮಾಡಲು ನೀವು ಏನು ಮಾಡಬೇಕು?
• ಚಲನೆಯನ್ನು ಕಡಿಮೆ ಮಾಡಿ – ಬಸ್ಸು, ಕಾರಿನ ಮುಂಭಾಗದಲ್ಲಿ ಅಥವಾ ದೋಣಿಯ ಮಧ್ಯದಲ್ಲಿ ಕುಳಿತುಕೊಳ್ಳಿ. • ದಿಗಂತದಂತಹ ಸ್ಥಿರ ಬಿಂದುವಿನಲ್ಲಿ ನೇರವಾಗಿ ಮುಂದೆ ನೋಡಿ • ಸಾಧ್ಯವಾದರೆ ತಾಜಾ ಗಾಳಿಯನ್ನು ಉಸಿರಾಡಿ – ಉದಾಹರಣೆಗೆ, ಕಾರಿನ ಕಿಟಕಿಯನ್ನು ತೆರೆಯುವ ಮೂಲಕ. ಇದು ವಾಸನೆಗಳನ್ನು ಕೂಡ ಕಡಿಮೆ ಮಾಡಲು ಸಹಾಯಕವಾಗುತ್ತದೆ • ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವಾಗ ನಿಧಾನವಾಗಿ ದೀರ್ಘ ಉಸಿರು ತೆಗೆದುಕೊಳ್ಳಿ • ಮಕ್ಕಳನ್ನು ಮಾತನಾಡುವ ಮೂಲಕ, ಸಂಗೀತವನ್ನು ಕೇಳುವ ಅಥವಾ ಹಾಡುಗಳನ್ನು ಹಾಡುವ ಮೂಲಕ ಗಮನವನ್ನು ಸೆಳೆಯಿರಿ • ಸತತವಾದ ದೀರ್ಘ ಪ್ರಯಾಣವನ್ನು ಮಾಡದೆ ಸಾಧ್ಯವಿದ್ದಷ್ಟು ಅಲ್ಲಲ್ಲಿ ನಿಂತು ತುಂಡು ಪ್ರಯಾಣಗಳನ್ನು ಮಾಡಿ • ಶುಂಠಿಯನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಬಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ.
ಹೀಗೆ ಮಾಡಬಾರದು: • ಓದಬೇಡಿ, ಚಲನಚಿತ್ರಗಳನ್ನು ನೋಡಬೇಡಿ ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬೇಡಿ • ಚಲಿಸುವ ವಸ್ತುಗಳನ್ನು ನೋಡಬೇಡಿ, ಉದಾಹರಣೆಗೆ ವಾಹನಗಳನ್ನು ಗಿಡಗಳನ್ನು ಅಥವಾ ಅಲೆಗಳನ್ನು ನೋಡುತ್ತಾ ಕೂರಬೇಡಿ • ಪ್ರಯಾಣದ ಸ್ವಲ್ಪ ಸಮಯದ ಮೊದಲು ಅಥವಾ ಸಮಯದಲ್ಲಿ ಭಾರೀ ಊಟ, ಮಸಾಲೆಯುಕ್ತ ಆಹಾರ ಧೂಮಪಾನ ಅಥವಾ ಮದ್ಯಪಾನ ಮಾಡಬೇಡಿ • ಮನರಂಜನ ಮೇಳಗಳಲ್ಲಿ ದೈತ್ಯ ಚಕ್ರಗಳು, ತೂಗು / ತಿರುಗು ತೊಟ್ಟಿಲುಗಳು, ಜಾರು ಬಂಡೆಗಳ, ಸವಾರಿ ಮಾಡಬೇಡಿ • ಚಲನೆಯ ಕಾಯಿಲೆಯ ಇಂಗ್ಲಿಷ್ ಮಾತ್ರೆಗಳನ್ನು ಪದೇಪದೇ ಸೇವಿಸಬೇಡಿ. ಇವುಗಳು ಅನೇಕ ತರಹದ ಅಡ್ಡ ಪರಿಣಾಮಗಳನ್ನು ಬೀರುತ್ತವೆ.
ಮನೆಮದ್ದುಗಳು: ಪ್ರಯಾಣದ ಮೊದಲು ಹಾಗೂ ಪ್ರಯಾಣದ ಸಮಯದಲ್ಲಿ ಶುಂಠಿಯ ತುಂಡು, ಸೋಂಪಿನ ಕಾಳುಗಳು, ಏಲಕ್ಕಿ, ಇತ್ಯಾದಿಗಳನ್ನು ನಿಧಾನವಾಗಿ ಅಗಿಯಿರಿ. ನಿಂಬೆರಸ, ಕಿತ್ತಳೆ ರಸ, ಮೋಸಂಬಿಯ ರಸ, ಇತ್ಯಾದಿಗಳನ್ನು ಆಗಾಗ ನೆಕ್ಕುವುದರಿಂದಲೂ ಸ್ವಲ್ಪ ಆರಂಭವಾಗುತ್ತದೆ ನಿಂಬೆ, ಕಿತ್ತಳೆ, ಏಲಕ್ಕಿ, ಇವುಗಳ ವಾಸನೆಯನ್ನು ತೆಗೆದುಕೊಳ್ಳಿ.
ಚಿಕಿತ್ಸೆ: ಚಲನೆಯ ಕಾಯಿಲೆಯಿಂದ ಮುಕ್ತಿ ಪಡೆಯಲು ಹೋಮಿಯೋಪತಿ ಚಿಕಿತ್ಸೆ ಸರ್ವ ಶ್ರೇಷ್ಠ ಆಯ್ಕೆಯಾಗಿದೆ. ಸೂಕ್ತವಾದ ಹೋಮಿಯೋಪತಿ, ಚಿಕಿತ್ಸೆಯ ಮೂಲಕ ಚಲನೆಯ ಕಾಯಿಲೆಯಿಂದ ಸಂಪೂರ್ಣ ಹಾಗೂ ಶಾಶ್ವತ ಮುಕ್ತಿಯನ್ನು ಪಡೆಯುವುದು ಸಾಧ್ಯವಿದೆ. ವಿಪರೀತ ಸಮಸ್ಯೆ ಇರುವವರು ಪ್ರಯಾಣಕ್ಕೆ ಮುಂಚೆ ಕೂಡ ಆಯ ವ್ಯಕ್ತಿಗೆ ಸೂಕ್ತವಾದ ಹೋಮಿಯೋಪತಿ ಮಾತ್ರೆಗಳನ್ನು ಉಪಯೋಗಿಸಬಹುದು ಇದನ್ನು ವೈದ್ಯರ ಸಲಹೆ ಮೇರೆಗೆ ಬಳಸಬೇಕು.
ಬರಹ : ಡಾ. ಪ್ರ. ಅ. ಕುಲಕರ್ಣಿ
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…