#NipahVirus | ಕೇರಳದ ಕೆಲವು ಪ್ರದೇಶದಲ್ಲಿ ಏಕೆ ನಿಫಾ ಹೆಚ್ಚಾಗಿ ಕಾಣಿಸುತ್ತಿದೆ… ? | ದಕ್ಷಿಣ ಕನ್ನಡದಲ್ಲೂ ಮುಂಜಾಗ್ರತಾ ಕ್ರಮ |

September 14, 2023
8:30 PM
ಕೇರಳದಲ್ಲಿ ಬಾವಲಿಗಳಿಂದ ನಿಫಾ ವೈರಸ್‌ ಹರಡುತ್ತಿದೆ ಎಂದು ಈ ಹಿಂದಿನ ಅಧ್ಯಯನ ಹೇಳಿತ್ತು. ಈಗ ಮತ್ತೆ ಅಧ್ಯಯನ ಆರಂಭವಾಗಿದೆ. ಬಾವಲಿಗಳು ಮತ್ತು ಹಣ್ಣಿನ ಮರಗಳಿಂದ ದ್ರವದ ಮಾದರಿಗಳನ್ನು ಸಂಗ್ರಹಿಸಲು ತಜ್ಞರು  ಕೇರಳದಲ್ಲಿ ಕಾರ್ಯಾರಂಭ ಮಾಡಿದ್ದಾರೆ. ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಬಾವಲಿಗಳಿಂದ ನಿಫಾ ವೈರಸ್‌ ಹರಡುತ್ತಿದೆ ಎಂದು ಈ ಹಿಂದಿನ ಅಧ್ಯಯನ ಹೇಳಿತ್ತು. ಈಗ ಮತ್ತೆ ಅಧ್ಯಯನ ಆರಂಭವಾಗಿದೆ. ಮಾರಣಾಂತಿಕ ನಿಫಾ ವೈರಸ್‌ನಿಂದ ಇಬ್ಬರು ಸಾವನ್ನಪ್ಪಿದ ಮತ್ತು ಇನ್ನೂ ಮೂವರಿಗೆ ಪಾಸಿಟಿವ್‌ ಫಲಿತಾಂಶ ಬಂದ ಬಳಿಕ ಮತ್ತೆ ಅಧ್ಯಯನ ಆರಂಭವಾಗಿದೆ. ಬಾವಲಿಗಳು ಮತ್ತು ಹಣ್ಣಿನ ಮರಗಳಿಂದ ದ್ರವದ ಮಾದರಿಗಳನ್ನು ಸಂಗ್ರಹಿಸಲು ತಜ್ಞರು  ಕೇರಳದಲ್ಲಿ ಕಾರ್ಯಾರಂಭ ಮಾಡಿದ್ದಾರೆ. 

Advertisement
Advertisement

ಈ ನಡುವೆಯೇ ಕೇರಳದ ಕೆಲವು ಕಡೆಗಳಲ್ಲಿ ಈ ವೈರಸ್‌ ಕಾಣಿಸಿಕೊಳ್ಳುವುದಕ್ಕೆ ಹಾಗೂ ಬಹುಬೇಗನೆ ವಿಸ್ತರಣೆಯಾಗುವುದು ಪ್ರಾಣಿಗಳೊಂದಿಗಿನ ನಿಕಟ ಸಂಪರ್ಕ ಎಂದು ವರದಿ ಹೇಳುತ್ತದೆ.  ಮೇ ತಿಂಗಳಲ್ಲಿ, ರಾಯಿಟರ್ಸ್ ಸುದ್ದಿ ಸಂಸ್ಥೆಯ ತನಿಖೆಯು ಕೇರಳದ ಕೆಲವು ಭಾಗಗಳನ್ನು  ವೈರಸ್‌ಗಳು ಏಕಾಏಕಿ ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ಅಪಾಯದ ಸ್ಥಿತಿಯಲ್ಲಿದೆ ಎಂದು ವರದಿ ಮಾಡಿತ್ತು. ಇದಕ್ಕೆ ಕಾರಣವನ್ನೂ ಹೇಳಿತ್ತು, ಅಭಿವೃದ್ಧಿಗಾಗಿ ಅರಣ್ಯಗಳನ್ನು ತೆರವುಗೊಳಿಸುವುದರಿಂದ ಜನರು ಮತ್ತು ವನ್ಯಜೀವಿಗಳನ್ನು ನಿಕಟ ಸಂಪರ್ಕಕ್ಕೆ ಕಾರಣವಾಗುತ್ತದೆ ಎಂದು ಹೇಳಿತ್ತು, ಇದೀಗ ರಾಯಿಟರ್ಸ್‌ ಈ ವರದಿಯನ್ನು ಉಲ್ಲೇಖಸಿದೆ.

ಯಾವುದೇ ಲಸಿಕೆ ಇಲ್ಲದ ವೈರಸ್‌ ವಿರುದ್ಧ 2018 ರಿಂದ ಕೇರಳದಲ್ಲಿ  ನಾಲ್ಕನೇ ಬಾರಿ ಹೋರಾಟ ನಡೆಯುತ್ತಿದೆ.  ಇದು ಸೋಂಕಿತ ಬಾವಲಿಗಳು, ಹಂದಿಗಳು ಅಥವಾ ಜನರ ದೇಹದ ದ್ರವಗಳ ಸಂಪರ್ಕದ ಮೂಲಕ ಹರಡುತ್ತದೆ.  ನಾವು ಮನುಷ್ಯರನ್ನು ಪರೀಕ್ಷಿಸುತ್ತಿದ್ದೇವೆ ಮತ್ತು ಅದೇ ಸಮಯದಲ್ಲಿ ತಜ್ಞರು ಅರಣ್ಯ ಪ್ರದೇಶಗಳಿಂದ ದ್ರವ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಅದು ಹರಡುವಿಕೆಗೆ ಕಾರಣ ಇರಲೂ ಬಹುದು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಲ್ಲಿ ಸುಮಾರು 800 ಜನರನ್ನು ಪರೀಕ್ಷಿಸಲಾಗಿದ್ದು, ಇಬ್ಬರು ವಯಸ್ಕರು ಮತ್ತು ಮಗುವಿನಲ್ಲಿ ಪಾಸಿಟಿವ್‌ ವರದಿಯಾಗಿತ್ತು.

ಕೋಝಿಕೋಡ್  ಜಿಲ್ಲೆಯ ಒಂಬತ್ತು ಗ್ರಾಮಗಳಲ್ಲಿ ಸಾರ್ವಜನಿಕ ಕಚೇರಿಗಳು, ಸರ್ಕಾರಿ ಕಟ್ಟಡಗಳು, ಶೈಕ್ಷಣಿಕ ಕೇಂದ್ರಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಅಪಾಯದಲ್ಲಿರುವ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.‌ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ಭಾಗದಿಂದ ಬರುವವರ ತಪಾಸಣೆ ನಡೆಸಲಾಗುತ್ತಿದೆ.

Advertisement

ಕೇರಳದಲ್ಲಿ ಮೊದಲ ಬಾರಿಗೆ ನಿಫಾ ವೈರಸ್‌ ಕಾರಣದಿಂದ 23 ಸೋಂಕಿತರಲ್ಲಿ 21 ಮಂದಿ ಸಾವನ್ನಪ್ಪಿದ್ದರೆ, ನಂತರದ  2019 ಮತ್ತು 2021 ರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಇದೀಗ ಬಹಳ ಗಂಭೀರವಾಗಿ ನಿಫಾ ಬಗ್ಗೆ ಅಧ್ಯಯನ ಹಾಗೂ ಮುಂಜಾಗ್ರತಾ ಕ್ರಮಕ್ಕಾಗಿ ಸಿದ್ಧತೆ ನಡೆಯುತ್ತಿದೆ.

ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ  ಎಚ್ಚರಿಕೆ ವಹಿಸಲಿ ಸೂಚಿಸಲಾಗಿದೆ. ಜನರಲ್ಲಿ ಜ್ವರದ ಬಗ್ಗೆ ನಿಗಾ ವಹಿಸಲು ತಿಳಿಸಲಾಗಿದೆ.

ನಿಫಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ದ ಕ ಜಿಲ್ಲೆಗೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳ ತಪಾಸಣೆಗಾಗಿ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆಯುವಂತೆ ಆರೋಗ್ಯ ಇಲಾಖೆ ಪೊಲೀಸರಿಗೆ ಮನವಿ ಮಾಡಿದೆ. ಇದಲ್ಲದೆ, ಕೇರಳದಿಂದ ರಾಜ್ಯಕ್ಕೆ ಬರುವ ಹಣ್ಣುಗಳನ್ನು ಪರಿಶೀಲಿಸುವಂತೆಯೂ ಪೊಲೀಸರಿಗೆ ಮನವಿ ಮಾಡಲಾಗಿದೆ.

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ
May 16, 2025
12:40 PM
by: ದ ರೂರಲ್ ಮಿರರ್.ಕಾಂ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group