ಕೆಲವು ವರ್ಷಗಳ ಹಿಂದೆ ಗುಜರಾತಿನ ಕೋಟ್ಯಾಧೀಶ ವಜ್ರದ ವ್ಯಾಪಾರಿಯೊಬ್ಬ ತನ್ನ ಮಗನಿಗೆ ಒಂದೆರಡು ಸಾವಿರ ರೂಪಾಯಿ ಕೊಟ್ಟು ಅದನ್ನು ಮೂಲಧನವಾಗಿಟ್ಟುಕೊಂಡು ಸಮಾಜದಲ್ಲಿ ಸಾಮಾನ್ಯ ಮನುಷ್ಯನಂತೆ ಒಂದು ವರ್ಷ ಬದುಕಿ ಬಾ … ಎಂದು ಕಳಿಸಿದ್ದರಂತೆ. ಆತ ಒಂದು ವರ್ಷದ ತನಕ ಕಡು ಕಷ್ಟ ಪಟ್ಟು ಸಾಮಾನ್ಯರ ಜೊತೆಯಲ್ಲಿ ಸಾಮಾನ್ಯ ಜನರಂತೆ ಸಾಮಾನ್ಯನಾಗಿ ಬದುಕಿ ನಂತರ ತನ್ನ ತಂದೆಯ ಬಳಿಗೆ ಹೋದನಂತೆ. ಇದು ನೆಡೆದ ಕಥೆಯಂತೆ….
ಇದರ ಪಾಠ ಏನೆಂದರೆ ರಾಜ ವ್ಯಾಪಾರಿ ಮುಂತಾದವರಿಗೆ ಸಮಾಜದ ತುತ್ತ ತುದಿಯ ತನಕವೂ ಅರಿವಿರಬೇಕು. ಮತ್ತು ಮುಖ್ಯವಾಗಿ “ದುಡಿಮೆಯ ಬೆಲೆ ” ಗೊತ್ತಿರಬೇಕು.ಇಲ್ಲಿ ವ್ಯಾಪಾರಿಗೆ ನೇರವಾಗಿ “ಹಣ” ದುಡಿಮೆಯಾದರೆ ರಾಜಕಾರಣಿ ಗೆ ಜನರ ಸಂಪರ್ಕ ಪ್ರೀತಿ ಅಭಿಮಾನ ಗಳಿಸುವುದೇ ದುಡಿಮೆ…
ನೀವು ಗಮನಿಸಿ, ಬಹುತೇಕ ರಾಜಕೀಯ ಉದ್ಯಮ ಸೇರಿ ಎಲ್ಲಾ ರಂಗದಲ್ಲೂ “ಅಪ್ಪ” ನ ಮೀರಿಸುವ ಮಕ್ಕಳು ತೀರಾ ಕಡಿಮೆ.
ಒಬ್ಬ ಜನಪ್ರಿಯ ಸಂಗೀತ ಗಾರನ ಮಗ ಅಪ್ಪನ ಸಾಧನೆ ಸರಿಗಟ್ಟಿದ ನಿದರ್ಶನ ಕಡಿಮೆ. ಒಬ್ಬ ಸೂಪರ್ ಸ್ಟಾರ್ ನಟ ನ ಮಗ ತನ್ನ ಅಪ್ಪನ ನೆರಳಿಟ್ಟುಕೊಂಡರೂ ಅಪ್ಪನ ಸರಿ ಸಮನಾಗಿ ಅಥವಾ ಮೀರಿ ಬೆಳೆದ ನಿದರ್ಶನ ಬಹುತೇಕ ತೀರಾ ಕಡಿಮೆ…
ನಾನು ನೋಡಿದಂತೆ , ಉದ್ಯಮ ರಂಗದಲ್ಲಿ ದಿವಂಗತ ಧೀರೂಭಾಯಿ ಅಂಬಾನಿಯವರ ಮಗ ಮುಖೇಶ್ ಅಂಬಾನಿ ಅಪ್ಪನ ಉದ್ಯಮವನ್ನು ನೂರಾರು ಪಟ್ಟು ಹೆಚ್ಚಿನದಾಗಿ ಕಟ್ಟಿ ಸಾಧಿಸಿದ್ದಾರೆ. ಇನ್ನೂ ಕೆಲವು ಖಾಸಗಿ ಉದ್ಯಮಗಳ ಮಾಲಿಕರ ಮಕ್ಕಳು ತಮ್ಮ ಪೋಷಕರ ಉದ್ಯಮ ವನ್ನು ಕಾಲಕ್ಕೆ ತಕ್ಕಂತೆ ಪೋಷಿಸಿ ಬೆಳೆಸಿ ದ್ದಾರೆ. ಆದರೆ ಶ್ರೀ ಮುಖೇಶ್ ಅಂಬಾನಿ ಯವರ ಬಗೆಯಲ್ಲಿ ಕಂಪನಿಯನ್ನು ಮುಗಿಲೆತ್ತರಕ್ಕೇರಿಸಿಲ್ಲ…!
ಇದು ಇವತ್ತಿನ ಉದ್ಯಮ ಕಲೆ ರಾಜಕೀಯ ಸಂಬಂಧಿಸಿದ್ದು ಮಾತ್ರವಲ್ಲದೆ ಹಿಂದೆ ರಾಜ ಮನೆತನದಲ್ಲಿ ಕೂಡ ಅಷ್ಟೇ.. ಒಂದು ರಾಜ ವಂಶದಲ್ಲಿ ಯಾರೋ ಒಬ್ಬ ರಾಜ ಮಾತ್ರ ಸಾಮ್ರಾಜ್ಯ ವಿಸ್ತರಣೆ ಮಾಡಿ ಚಕ್ರಾಧಿಪತಿ ಆಗಿರುತ್ತಿದ್ದ.ಇರಲಿ…
ನಮ್ಮ ಇಂದಿನ ಬಹುತೇಕ ರಾಜಕಾರಣಿಗಳು ಶೂನ್ಯ ದಿಂದ ಬಂದವರು.ಹೋರಾಟ ಜೈಲುವಾಸ ಉಪ ವಾಸ, ಲಾಠಿಏಟು ಕೋರ್ಟ್ ಕೇಸು ಅಲೆ ದಾಟದ “ಅಗ್ನಿಯಲ್ಲಿ ಅರಳಿದ ಹೂಗಳು”.ಆದರೆ ಅವರ ಮಕ್ಕಳಿಗೆ ಬಹುತೇಕ ಸರ್ತಿ ಅಧಿಕಾರ ಕ್ಷೇತ್ರಗಳ ಆಳ್ವಿಕೆ ಪಿತ್ರಾರ್ಜಿತ ವಾಗಿ ಬಂದ ಆಸ್ತಿಯಂತೆ..!. ನಮ್ಮ ರಾಜ್ಯದಲ್ಲಿ ಕೆಲವು ಭಾಗಗಳು ಒಂದು ಬಗೆಯಲ್ಲಿ ಪಾಳೆಯಗಾರರ ಪಾಳೆಯ ಪಟ್ಟು ಇದ್ದಂತೆ..! .ಜನ ಜಾತಿಯತೆ ಹೊಗಳು ಭಟರು ಬಾಲ ಬಡುಕರು ತೋಳ್ಬಲ ಈ ಪಾಳೆಯಗಾರರ ಪೋಷಕರು. . ಇಲ್ಲಿ ಪ್ರಜಾಪ್ರಭುತ್ವ ಇರೋಲ್ಲ.
ಅಪ್ಪ ಮಗ ಮೊಮ್ಮಗ ಅಥವಾ ಹೆಂಡತಿ ಮಗ ಹೀಗೆ ಅವರ ಸುತ್ತವೇ ಅಧಿಕಾರ ಸುತ್ತುತ್ತದೆ…!. ಆದರೆ ಇವರಲ್ಲಿ ಮೊದಲು ಬಂದವರು ಜನರ ನಡುವಿನಿಂದ ಬಂದವರು. ಇವರ ಮಗ ,ಹೆಂಡತಿ, ಮಗಳು ಇವರೆಲ್ಲ ಅವನ ಮಗ , ಅವನ ಹೆಂಡತಿ, ಅವನ ಮಗಳು , ಅವನ ಮೊಮ್ಮಗ …ಅಂತ ಅಧಿಕಾರ ತಮ್ಮ ಪಿತ್ರಾರ್ಜಿತ ಹಕ್ಕು ಎಂಬಂತೆ ಬಂದಿ ರುತ್ತಾರೆ. ಇವರಿಗೆ ಅವನ ಮಗ /ಮಗಳು / ಹೆಂಡತಿ ಎನ್ನುವ ಅರ್ಹತೆಯ ಹೊರತೂ ಇನ್ಯಾವ ಯೋಗ್ಯತೆಯೂ ಇರುವುದಿಲ್ಲ. ಇವರಿಗೆ ನೂರಕ್ಕೆ ನೂರರಷ್ಟು ರಾಜಕೀಯ ವ್ಯಾಪಾರದ ” ಉದ್ಯಮ ” ಮಾತ್ರ. ದುಡ್ಡು ಹಾಕಿ ದುಡ್ಡು ತೆಗೆವ ಉದ್ಯಮ.
ರಾಜಕಾರಣಿಗಳಿಗೆ ಫೀಲ್ಡ್ ಗೊತ್ತಿರಬೇಕು…ಬರೀ ಅಪ್ಪನ ಮಗ ಆದರೆ ಸಾಲದು… ಈ ಮಕ್ಕಳಿಗೆ ತಮ್ಮ ಮನೆಗೆ ಸಹಾಯ ಕೇಳಿಕೊಂಡು ಬರುವ ಜನಗಳಷ್ಟೇ ಸಮಾಜ ಎಂದು ತಪ್ಪಾಗಿ ಅರ್ಥೈಸಿ ಕೊಂಡಿರುವ ಸಾದ್ಯತೆ ಹೆಚ್ಚಿರುತ್ತದೆ.ಜನ ಪ್ರತಿನಿಧಿಗಳ ಮನೆಗೆ ಬರುವ “ಆರ್ತ ” ಜನಗಳನ್ನು ಇಂತಹ “ರಾಜ ಮಕ್ಕಳು” ಅಸಡ್ಡೆ ಮಾಡುವ ಸಂಭವವೇ ಹೆಚ್ಚು.
ಈ ಸಹಾಯ ಕೇಳಿ ಬರುವ ಜನಗಳಿಗಿಂತ ಆಕ್ರಮದವರು, ಕಂಟ್ರಾಕ್ಟರ್ ಗಳು ಇವರಿಗೆ ಹೆಚ್ಚು ಆಕರ್ಷಣೀಯವಾಗ್ತಾರೆ. ಈ ಯುವ ಪಿತ್ರಾರ್ಜಿತ ರಾಜಕಾರಣಿ ಗಳು ಅಕ್ರಮ ಕಲಿತು ನಿಪುಣರಾಗಿ “ಡೀಲ್ ಮಾಸ್ಟರ್” ಗಳಾಗಬಹುದು ಹೊರತು ಜನಾನುರಾಗಿ ಯಾಗಲು ಸಾಧ್ಯವಿಲ್ಲ. ಒಬ್ಬ ವ್ಯಾಪಾರಿ ಯ ಮಗ ವ್ಯಾಪಾರದ ಪಟ್ಟು ಕಲಿತಂತೆ ರಾಜಕಾರಣಿ/ಜನ ಪ್ರತಿನಿಧಿಯ ಮಗ ಈ ಅಕ್ರಮ ದ ಪಟ್ಟು ಕಲಿತಿರುತ್ತಾನೆ. ಈ ವಿಚಾರದಲ್ಲಿ ಚೆನ್ನಾಗಿ ಜ್ಞಾನ ಸಂಗ್ರಹ ಮಾಡಿ ಅಕ್ತಮ ಸಂಪನ್ನ ನಾಗುತ್ತಾನೆ.
ಒಬ್ಬ ರಾಜಕಾರಣಿ ಜನರಿಂದ , ಜನ ಪರ ಹೋರಾಟದ ಚಿಂತನೆ ಯ ಮೂಲಕ ಬರಬೇಕು. ಹೀಗೆ ಹೋರಾಟದ ಮೂಲಕ ಬಂದವರಿಗೆ ground reality ಗೊತ್ತಿರುತ್ತದೆ. ಕಟ್ಟ ಕಡೆಯ ಕಾರ್ಯಕರ್ತ ಮತ್ತು ಪ್ರಜೆಯ ಬವಣೆಯ ಅರಿವಿರುತ್ತದೆ.
ಇದೇ ರಾಜಕಾರಣಿ ಗಳ ಮಕ್ಕಳು ಸಿದ್ದಾರ್ಥ ಬುದ್ಧ ನಾಗುವುದು ಉತ್ತಮ ರಾಜಕಾರಣಿ ಯಾಗಿ ಪ್ತಜ್ವಲಿಸಿ ಉಜ್ವಲ ಭವಿಷ್ಯ ಕಾಣುವುದು ತೀರಾ ಕಷ್ಟ…
ಅಪ್ಪನ influence ನ್ನ ಹೆಸರನ್ನು ಬಳಸಿ ಇವೂ ಚುನಾವಣೆ ಗೆಲ್ಲಬಹುದು. ಆದರೆ ಈ ಚಿನ್ನದ ಚಮಚಗಳಿಗೆ ಬಡವರ ಶ್ರೀ ಸಾಮಾನ್ಯ ನ ಬವಣೆ ನಿಲುಕುವ ಸಾದ್ಯತೆ ತೀರಾ ಕಡಿಮೆ. ಜನ ಈ ಇಪ್ಪತ್ತೊಂದನೇ ಶತಮಾನದಲ್ಲೂ ಇವ ಈ ರಾಜಕೀಯ ನಾಯಕನ ಮಗ , ಮಗಳು ಮತ್ತು ಹೆಂಡತಿ ಅಥವಾ ಮೊಮ್ಮಗ ಅಂತ ಗೆಲ್ಲಿಸುವ ಮೂರ್ಖತನ ಬಿಡಬೇಕು. ಇಂತವು ತಮ್ಮ influence ಪರಮಾಧಿಕಾರ ಎಂದು ತಪ್ಪು ಭಾವಿಸಿ ಸಮಾಜದಲ್ಲಿ ದುಂಡಾವರ್ತಿ ಮಾಡುತ್ತಾರೆ.
ಯಾವುದೇ ಕ್ಷೇತ್ರದಲ್ಲೂ ಕ್ಷೇತ್ರದ ಜನತೆ ಪದೇ ಪದೇ ಒಬ್ಬ ಅಭ್ಯರ್ಥಿ ಯನ್ನು ಗೆಲ್ಲಿಸುವ ಮೊದಲು ಚುನಾವಣೆ ಯಿಂದ ಚುನಾವಣೆಗೆ ಆತನ ಆಸ್ತಿ ಅಂತಸ್ತು ಎಷ್ಟು ಪಟ್ಟು ಏರಿದೆ ಎಂದು ಗಮನಿಸಿ ಆತನಿಗೆ ಮತ್ತೆ ಅಧಿಕಾರ ಕೊಡಬೇಕು…
ನಾವು ಮತದಾರರು ಪ್ರಭುದ್ದರಾಗದ ಹೊರತು ಮತದಾರನೇ “ಪ್ರಭು” ಗಳಾಗಲು ಸಾಧ್ಯವಿಲ್ಲ.
ಹೀಗೆ ಪದೇ ಪದೇ ಗೆದ್ದವರನ್ನೇ ಗೆಲ್ಲಿಸುತ್ತಾ ಹೋಗುವುದು , ಜಾತಿ , ಹಣ ಕ್ಕೆ ಮರುಳಾಗಿ ಓಟು ಹಾಕಿ ಗೆಲ್ಲಿಸುತ್ತಾ ಹೋದರೆ ಮತದಾರ ಪ್ತಭು ಆಗದೇ ಗುಲಾಮ ನಾಗುತ್ತಾನೆ. ಇದು ಪ್ತಜಾಗುಲಾಮತ್ವ ಆಗುವ ಪ್ರಕ್ರಿಯೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ದಿನ ಪತ್ರಿಕೆ ಓದುವುದು , ಟಿವಿಯಲ್ಲಿ ವಾರ್ತೆ ನೋಡುವ ಮತ್ತು ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಪರಾಮರ್ಶೆ ಮಾಡುವ ಅಭ್ಯಾಸ ಮಾಡಿಕೊಂಡು ಚುನಾವಣೆಯಲ್ಲಿ ರಾಜಕೀಯ ಪ್ರಭುದ್ದತೆಯಿಂದ ಮತದಾನ ಮಾಡದಿದ್ದರೆ ಪ್ರಜೆಗಳೂ ಮತ್ತು ಪ್ರಜಾಪ್ರಭುತ್ವ ವೂ ಫೈಲ್… ಪ್ರಜಾಪ್ರಭುತ್ವ ಗೆಲ್ಲಲಿ… ಇದಕ್ಕೆ ಯೋಚಿಸಿ ಚಿಂತನೆ ನಡೆಸಿ ಮತದಾನ ಮಾಡಿ…