Advertisement
The Rural Mirror ವಾರದ ವಿಶೇಷ

ಅಡಿಕೆ ಕೃಷಿ ಹಾಗೂ ಗೊಬ್ಬರ-ಪೋಷಕಾಂಶ ನಿರ್ವಹಣೆ ಹೇಗೆ ? | ಹಿಡನ್‌ ಹಂಗರ್‌ ಎಂದರೇನು ? | ಮಣ್ಣು ಪರೀಕ್ಷೆ ಏಕೆ ಅಗತ್ಯ ? | ಸಿಪಿಸಿಆರ್‌ಐ ವಿಜ್ಞಾನಿಗಳು ಹೇಳಿದ್ದೇನು ? |

Share

ಕೃಷಿ ವಿಜ್ಞಾನಿಗಳು ಹಾಗೂ ಕೃಷಿಕ ವಿಜ್ಞಾನಿಗಳ ಸಂವಾದ ವಿಟ್ಲದ ಸಿಪಿಸಿಆರ್‌ಐ ಕೇಂದ್ರದ ಸಭಾಭವನದಲ್ಲಿ ನಡೆಯಿತು. ಕೃಷಿಕರು, ವಿಜ್ಞಾನಿಗಳ ನಡುವೆ ಉತ್ತಮ ಸಂವಾದ ನಡೆಯಿತು. ಅಗತ್ಯ ಮಾಹಿತಿಗಳನ್ನು ವಿಜ್ಞಾನಿಗಳು ತಿಳಿಸಿದರು. ಅದರಲ್ಲಿ ಮಣ್ಣು ಪರೀಕ್ಷೆಯ ಬಗ್ಗೆಯೂ ಅಗತ್ಯ ಮಾಹಿತಿ ನೀಡಿದರು. ಕೃಷಿಯಲ್ಲಿ ಮಣ್ಣು ಪರೀಕ್ಷೆ ಅತೀ ಅಗತ್ಯ ಏಕೆಂದರೆ ಮಣ್ಣಿನಲ್ಲಿರುವ ಅನೇಕ ಪೋಷಕಾಂಶಗಳ ಕೊರತೆ ಎದ್ದು ಕಾಣಿಸದೇ ಇರುತ್ತದೆ. ಆರಂಭದಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಂಡುಬಂದು, ನಂತರ ಇದೇ ಬಹುದೊಡ್ಡ ಸಮಸ್ಯೆಯಾಗಿ ಕಂಡುಬರುತ್ತದೆ. ಇದನ್ನು ತಪ್ಪಿಸಲು ಮಣ್ಣು ಪರೀಕ್ಷೆ ಅಗತ್ಯ ಎಂಬುದನ್ನುಸಿಪಿಸಿಆರ್‌ಐ ವಿಜ್ಞಾನಿಗಳು ಮಾಹಿತಿ ನೀಡಿದರು. ವಿಜ್ಞಾನಿ ಡಾ.ಭವಿಷ್ಯ ಅವರು ಮಣ್ಣು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಈ ಸಂವಾದದಲ್ಲಿ ಕಂಡುಬಂದ ಅಂಶಗಳು ಹೀಗಿದೆ…

Advertisement
Advertisement
Advertisement
Advertisement

ಅಡಿಕೆ ಕೃಷಿ ಹಾಗೂ ಇತರ ಯಾವುದೇ ಕೃಷಿಯಲ್ಲಿ ಗಿಡಗಳ ಬೆಳವಣಿಗೆ, ಸರಿಯಾದ ಫಸಲು , ಉತ್ತಮ ಇಳುವರಿಗೆ ಆಯಾ ಕಾಲದಲ್ಲಿ ಗಿಡಗಳಿಗೆ ಗೊಬ್ಬರ ನೀಡುವುದು  ಅತೀ ಅಗತ್ಯ. ಆದರೆ ಹೇಗೆ ನೀಡಬೇಕು, ಯಾವಾಗ ನೀಡಬೇಕು ಎನ್ನುವುದು ಪ್ರಶ್ನೆ.  ಗಿಡಗಳಿಗೆ ಗೊಬ್ಬರ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯವಾಗಿದೆ. ಪ್ರತೀ ಗಿಡದಲ್ಲಿ, ಮರದಲ್ಲಿ ಹಿಡನ್‌ ಹಂಗರ್‌ ಇರುತ್ತದೆ. ಅಂದರೆ ಸೂಕ್ತವಾದ ಗೊಬ್ಬರ ನೀಡಿದರೂ ಅಗತ್ಯವಾದ ಪೋಷಕಾಂಶಗಳ ಕೊರತೆ ಇರುತ್ತದೆ. ಇದನ್ನು ತಿಳಿಯಲು ಅಂದರೆ ಈ ಹಿಡನ್‌ ಹಂಗರ್‌ ತಿಳಿಯಲು ಮಣ್ಣು ಪರೀಕ್ಷೆ ಅಗತ್ಯವಾಗಿದೆ.

Advertisement

ಅನೇಕ ಸಂದರ್ಭಗಳಲ್ಲಿ ಗೊಬ್ಬರ ಸರಿಯಾಗಿ ನೀಡಿದರೂ ಸರಿಯಾಗಿ ಗಿಡಗಳಿಗೆ ಸಿಗುವುದಿಲ್ಲ, ಅನೇಕ ಕೃಷಿಕರು ಹೇಳುವುದಿದೆ,” ಗೊಬ್ಬರ ನೀಡುತ್ತಿದ್ದೇವೆ, ಆದರೂ ಬೆಳೆ ಸರಿಯಾಗಿ ಬರುತ್ತಿಲ್ಲ, ಫಸಲು ಇಲ್ಲ” ಎಂದು. ಇದಕ್ಕೆ ಕಾರಣವೂ ಗಿಡಗಳ ಹಿಡನ್‌ ಹಂಗರ್.‌  ಗೊಬ್ಬರ ನೀಡಿರುವುದು  ಮುಖ್ಯವಲ್ಲ ಹೇಗೆ ನೀಡಿದ್ದೇವೆ, ಯಾವುದು ನೀಡಿದ್ದೇವೆ ಎನ್ನುವುದು  ಮುಖ್ಯವಾಗುತ್ತದೆ. ಇಂದು ದ ಕ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸತುವಿನ ಕೊರತೆ ಗಂಭೀರ ಸಮಸ್ಯೆಯಾಗಿದೆ. ಶೇ.30 ರಷ್ಟು ಪ್ರದೇಶಗಳಲ್ಲಿ ಸತುವಿನ ಕೊರತೆ ಇದೆ. ಇದಕ್ಕೆ ಕಾರಣ ಅತಿಯಾದ ರಸಗೊಬ್ಬರಗಳ ಪೂರೈಕೆ ಹಾಗೂ ಉದ್ದೇಶಿತ ಮಟ್ಟದಿಂದ ಹೆಚ್ಚುವರಿಯಾಗಿ ನೀಡುವ ಗೊಬ್ಬರಗಳು ಕಾರಣವಾಗುತ್ತವೆ. ಅಂದರೆ ರಂಜಕದ ಪ್ರಮಾಣ ಮಿತಿಗಿಂತ ಅಧಿಕವಾಗಿರುತ್ತದೆ.

Advertisement

ಅಡಿಕೆ ಕೃಷಿಯಲ್ಲಿ ರಂಜಕಕ್ಕಿಂತ ಹೆಚ್ಚು ಸಾರಜನಕ ಹೀರುತ್ತದೆ. ಅಡಿಕೆ ಮರ ರಂಜಕಕ್ಕಿಂತ ಹತ್ತು ಪಟ್ಟು ಹೆಚ್ಚು ಸಾರಜನಕ ಬಳಸುತ್ತದೆ,ಎಂಟು ಪಟ್ಟು ಹೆಚ್ಚು ಪೊಟ್ಯಾಶ್ ಬಳಸುತ್ತದೆ.ಗೊಬ್ಬ ಹಾಕುವಾಗ ಇದನ್ನು ಗಮನಿಸಬೇಕು.ಅಂದರೆ ರಂಜಕದ ಪ್ರಮಾಣ ಕಡಿಮೆ ಸಾಕಾಗುತ್ತದೆ.

ಇದರ ಜೊತೆಗೆ ಕ್ಯಾಲ್ಸಿಯಂ, ಮೆಗ್ನೇಶಿಯಂ ಕೂಡಾ ಅಗತ್ಯವಿದೆ. ಕೇರಳದ ವಯನಾಡ್‌ ಪ್ರದೇಶದಲ್ಲಿ  ವಿಪರೀತ ರಂಜಕದ ಬಳಕೆಯಾಗಿ ಈಗ ಸಮಸ್ಯೆಯಾಗುತ್ತಿದೆ. ರಂಜಕದ ಬಳಕೆ ಹೆಚ್ಚಾದರೆ ಅದು ಅಲ್ಯೂಮಿನಿಯಂ, ಕಬ್ಭಿಣದ ಜೊತೆ ಸೇರಿಕೊಂಡು ಮಣ್ಣಿನಲ್ಲಿಯೇ ಉಳಿದುಕೊಂಡು ಬಿಡುತ್ತದೆ. ಇದು ಸಮಸ್ಯೆಯಾಗುತ್ತದೆ. ಶೇ.60 ರಷ್ಟು ತೋಟಗಳಲ್ಲಿ  ರಂಜಕ ಹೆಚ್ಚಾಗಿದೆ. ಇದನ್ನು ತೆಗೆಯುವುದು ಕಷ್ಟವಾಗುತ್ತದೆ, ಈ ಕಾರಣದಿಂದ ಗಿಡಗಳು ಗೊಬ್ಬರದ ಹೀರುವಿಕೆ ಕಡಿಮೆಯಾಗುತ್ತದೆ. ರಂಜಕ ಹೆಚ್ಚಾದ ಕೂಡಲೇ ಸತುವಿಕ ಲಭ್ಯತೆ ಕಡಿಮೆಯಾಗುತ್ತದೆ.  ಈ ಎಲ್ಲಾ ಕಾರಣಗಳಿಂದಲೇ ಸಂಯುಕ್ತ ಗೊಬ್ಬರಗಳ ಬಳಕೆ ಮಿತಿಯಲ್ಲಿರಬೇಕು.  ಇಂತಹ ಸೂಕ್ಷ್ಮಗಳ ತಿಳಿಯಲು ಮಣ್ಣು ಪರೀಕ್ಷೆ ಅಗತ್ಯವಾಗಿದೆ.

Advertisement

ಮಣ್ಣು ಪರೀಕ್ಷೆ ಹೇಗೆ ? : ಯಾವ ಭಾಗದಲ್ಲಿ ಗೊಬ್ಬರ ನೀಡುತ್ತೇವೆಯೋ ಅಲ್ಲಿಂದಲೇ ಮಣ್ಣು ಪರೀಕ್ಷೆ ಮಾಡಬೇಕಿದೆ. ಅಂದರೆ ಮರದ ಬುಡದಿಂದ ಸುಮಾರು 75 ಸೆಂಮೀ ದೂರದಿಂದ 2 ಅಡಿ ದೂರದಿಂದ ಮಣ್ಣು ಪರೀಕ್ಷೆಗೆ ಮಣ್ಣು ತೆಗೆಯಬೇಕು. ಒಂದು ಅಡಿ ಆಳದಿಂದ ಮಣ್ಣು ತೆಗೆಯಬೇಕಿದೆ. ಸುಮಾರು 3-5 ಜಾಗದಲ್ಲಿ ಮಣ್ಣು ಸ್ಯಾಂಪಲ್‌ ತೆಗೆದು ನೆರಳಿನಲ್ಲಿ ಒಣಗಿಸಿ ಅದರಿಂದ ಕಾಲು ಕೆಜಿಯಷ್ಟು  ಮಣ್ಣನ್ನು ಪರೀಕ್ಷೆಗೆ ನೀಡಬೇಕು.ಗಿಡಗಳಿಗೆ ಗೊಬ್ಬರ ನೀಡುವುದಕ್ಕಿಂತ ಮುನ್ನ ಮಣ್ಣು ಪರೀಕ್ಷೆಗೆ ನೀಡಬೇಕು. ಗೊಬ್ಬರ ನೀಡಿದ 3 ತಿಂಗಳ ನಂತರ ಮಣ್ಣು ಪರೀಕ್ಷೆ ಮಾಡಿಸಬಹುದು.

ಸಾಮಾನ್ಯವಾಗಿ ಮಳೆಗಾಲದ ನಂತರ ಕೃಷಿಕರು ಗೊಬ್ಬರ ನೀಡುವುದು. ಈಗ ಮಳೆಯ ಕಾರಣದಿಂದ ಸ್ವಲ್ಪ ವಿಳಂಬವಾಗುತ್ತದೆ. ಇದಕ್ಕಾಗಿ ವರ್ಷದಲ್ಲಿ ಡಿಸೆಂಬರ್ ‌- ಮೇವರೆಗೆ ಕಂತುಗಳಲ್ಲಿ ಗೊಬ್ಬರ ನೀಡಿದರೆ ಅನುಕೂಲ. ಗಿಡಗಳಿಗೆ ಸರಿಯಾದ ಆಹಾರ ಲಭ್ಯತೆಯಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ಪೊಟ್ಯಾಶ್‌ ಬಳಕೆ ಅಗತ್ಯವಾಗಿದೆ. ಸಾವಯವ ಗೊಬ್ಬರ ನೀಡುವವರು ಗಿಡಗಳ ಬೇಡಿಕೆಗೆ ಅನುಗುಣವಾದ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀಡಬೇಕಾಗುತ್ತದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

1 day ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

2 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

2 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

3 days ago