ಇದು ಜೂನ್ ತಿಂಗಳು. ಪರಿಸರ ಪ್ರಿಯರಿಗೆ ಈ ತಿಂಗಳು ಅತೀ ಮಹತ್ವ. ಪ್ರತಿಯೊಬ್ಬರೂ ಪರಿಸರ ದಿನಾಚರಣೆ ಹಾಗೂ ಪರಿಸರದ ಬಗ್ಗೆಯೇ ಮಾತನಾಡುತ್ತಾರೆ. ಹೀಗಿರುವಾ ಪರಿಸರ ಸ್ನೇಹಿ ನಡೆಯನ್ನೂ ಅನುಸರಿಸಿದರೆ ಪರಿಸರ ದಿನಕ್ಕೂ ಹೆಚ್ಚು ಅರ್ಥ ಬರುತ್ತದೆ. ಇದಕ್ಕಾಗಿಯೇ ಖಾದಿ ಬಟ್ಟೆಯನ್ನೈ ಬಳಕೆ ಮಾಡಬೇಕು. ಖಾದಿ ಬಟ್ಟೆ ಪರಿಸರ ಸ್ನೇಹಿಯೂ, ಉದ್ಯೋಗ ಸೃಷ್ಟಿಯೂ, ಗ್ರಾಮೀಣ ಆರ್ಥಿಕತೆ ಹೆಚ್ಚಿಸಲೂ ಇದು ಸಹಕಾರಿಯಾಗುತ್ತದೆ. ಗ್ರಾಮೀಣ ಬದುಕುಗಳಿಗೆ ಸ್ವಾವಲಂಬನೆಯ ದಾರಿ ಸುಗಮವಾಗುತ್ತದೆ. ಖಾದಿ ಬಟ್ಟೆ ಏಕೆ ಪರಿಸರ ಸ್ನೇಹಿ ಎಂಬುದರ ಬಗ್ಗೆ ಉಡುಪಿ ಸೀರೆ ಹಾಗೂ ಕೈಮಗ್ಗ ಉಳಿವಿನ ಕಡೆಗೆ ಗಮನಹರಿಸುತ್ತಿರುವ ಕದಿಕೆ ಟ್ರಸ್ಟ್ ನ ಮಮತಾ ರೈ ಅವರ ಜೊತೆ ಮಾತುಕತೆ ನಡೆಸಿದ ಸಾರಾಂಶ ಇಲ್ಲಿದೆ…
ಖಾದಿ ಬಟ್ಟೆ ಈಚೆಗೆ ಹೆಚ್ಚು ಜನರ ಇಷ್ಟ ಪಡುತ್ತಾರೆ. ಇನ್ನೂ ಇದು ವ್ಯಾಪಕವಾಗಬೇಕು. ಖಾದಿ ಬಟ್ಟೆ ಬಳಕೆಯ ಕಾರಣದಿಂದ ಉದ್ಯೋಗ ಸೃಷ್ಟಿಯೂ, ಗ್ರಾಮೀಣ ಆರ್ಥಿಕತೆ ಹೆಚ್ಚಿಸಲೂ ಇದು ಸಹಕಾರಿಯಾಗುತ್ತದೆ. ಗ್ರಾಮೀಣ ಬದುಕುಗಳಿಗೆ ಸ್ವಾವಲಂಬನೆಯ ದಾರಿ ಸುಗಮವಾಗುತ್ತದೆ.
ಕೈಮಗ್ಗ ಖಾದಿ ಬಟ್ಟೆ ಪರಿಸರ ಸ್ನೇಹಿಯಾಗಿದೆ. ಯಾವುದೇ ಇಂಧನ ಅಗತ್ಯ ಇಲ್ಲ. ನೇಕಾರರ ಮಾನವ ಶ್ರಮದಿಂದಲೇ ತಯಾರಾಗುವ ಖಾದಿ ಉಡುಪುಗಳು, ಗ್ರಾಮೀಣ ಜನರಿಗೆ ಉದ್ಯೋಗಕ್ಕೂ ಕಾರಣವಾಗಿದೆ. ಕೈಗಾರೀಕರಣದ ನಂತರ ಭೂಮಿಯ ತಾಪಮಾನ ಏರಿಕೆಯಾಗಿದೆ. ಇದರ ಪರಿಣಾಮ ಅಪಾರವಾಗಿದೆ. ಮಳೆಯ ಸಮಸ್ಯೆ ಸೇರಿದಂತೆ ವಾತಾವರಣದಲ್ಲಿ ಏರುಪೇರು ಕಂಡುಬಂದಿದೆ. ಹೀಗಾಗಿ ತಾಪಮಾನ ಇಳಿಕೆ ಅಗತ್ಯ ಇದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಇಂಗಾಲ ಕಡಿಮೆ ಹೊರಸೂಸುವ ಉದ್ದಿಮೆಗಳ ಅಗತ್ಯ ಇದೆ. ಈ ನೆಲೆಯಲ್ಲಿ ಖಾದಿಯಂತಹ ಬಟ್ಟೆಗಳ ಕಡೆಗೆ ಆಸಕ್ತವಾಗುವುದಿಂದ ಮಾನವ ಶ್ರಮದ ಮೂಲಕ ನಡೆಯುವ ಕೈಮಗ್ಗದಂತಹ ಉದ್ಯಮ ಬೆಳೆಯುತ್ತದೆ.
ಖಾದಿ ಪರಿಸರ ಸಹಜ ವಸ್ತು ಬಳಸಿ ತಯಾರಾಗುತ್ತವೆ. ಮರುಬಳಕೆ ಮಾಡಿ ಭೂಮಿಗೆ ಸೇರಿದಾಗಲೂ ಉಳಿಕೆ ಇಲ್ಲದೆ ಕರಗಿ ಭೂಮಿಗೆ ಸೇರುತ್ತದೆ. ಅದೇ ನೈಲಾನ್, ಪ್ಲಾಸ್ಟಿಕ್ ಮೂಲವಸ್ತು ಇರುವ ಬಟ್ಟೆಗಳು ಪರಿಸಕ್ಕೆ ಹಾನಿ, ಭೂಮಿಗೆ ಸೇರುವುದಿಲ್ಲ. ಅದರ ಜೊತೆಗೆ ಖಾದಿಯಂತಹ ಉದ್ಯಮಗಳು ಗ್ರಾಮೀಣ ಭಾಗದಲ್ಲೂ ಉದ್ಯೋಗ ಸೃಷ್ಟಿ ಮಾಡುತ್ತದೆ, ಸ್ಥಳೀಯವಾಗಿ ಆರ್ಥಿಕತೆಯೂ ಬೆಳೆಯುತ್ತದೆ.
ಹೀಗಾಗಿ ಪರಿಸರ ಪ್ರಿಯರಾಗಿರುವ ಎಲ್ಲರೂ ಖಾದಿ ಬಟ್ಟೆಯ ಕಡೆಗೆ ಹೆಚ್ಚು ಗಮನ ಹರಿಸಿದರೆ ಎಲ್ಲಾ ರೀತಿಯಿಂದಲೂ ಉಪಯುಕ್ತವಾಗಿದೆ.