ಹೆಂಡತಿ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ…! | ಹಳ್ಳಿ ಗುಗ್ಗು ಎಂದು ಹೀಯಾಳಿಸುತ್ತಿದ್ದ ಪತ್ನಿ…! |

September 18, 2023
12:27 PM
ಹಳ್ಳಿ ಗುಗ್ಗು ಎನ್ನುತ್ತಿದ್ದ ಕಾರಣದಿಂದ ಬೇಸತ್ತು ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಎಲ್ಲೆಡೆ ಪತಿಯ ಕಾಟಕ್ಕೆ ಪತ್ನಿ ಆತ್ಮಹತ್ಯೆ ಮಾಡುವ ಸುದ್ದಿ ಕಾಣುತ್ತಿದೆ, ಇಲ್ಲಿ ಮಾತ್ರಾ ಪತ್ನಿಯ ಕಾಟಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ, ಪತ್ನಿಯ ಹೀಯಾಳಿಕೆ. ಪ್ರತೀ ಬಾರಿ ಹಳ್ಳಿ ಗುಗ್ಗು ಎನ್ನುತ್ತಿದ್ದ ಕಾರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿಈ  ನಡೆದಿದೆ. 38 ವರ್ಷದ ಮಂಜುನಾಥ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಇಂಜಿನಿಯರ್‌ ಆಗಿರುವ ಈ ವ್ಯಕ್ತಿ ಕಿರಾತಕಿ ಪತ್ನಿಯ ಹಿಂಸೆ ತಾಳಲಾರದೇ ಪತಿ ಮಗಳನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮುನ್ನ ತನ್ನ ಒಡ ಹುಟ್ಟಿದ ಅಣ್ಣನಿಗೆ ಆಡಿಯೋ ಸಂದೇಶ ರವಾನಿಸಿ ಪ್ರಾಣ ಬಿಟ್ಟಿದ್ದಾನೆ. ಅಲ್ದೇ ಆಡಿಯೋದಲ್ಲಿ ಹೆಂಡತಿಯಿಂದ ತನು ಅನುಭವಿಸಿದ ಕಷ್ಟ ನೋವು ಅವಮಾನ ಎಲ್ಲವನ್ನ ಸಹೋದರನ್ನ ಬಳಿ ಹೇಳಿಕೊಂಡು ಮಗಳನ್ನ ಚೆನ್ನಾಗಿ ನೋಡಿಕೋ ಅಣ್ಣ ಅಂತ ಹೇಳಿ ಪಾಪದ ಪತಿ ಇಹ ಲೋಕ ತ್ಯಜಿಸಿಬಿಟ್ಟಿದ್ದಾನೆ.

ನೀನು ಹಳ್ಳಿ ಗುಗ್ಗು ಅಂತ ಪದೇ ಪದೇ ಕಿಚಾಯಿಸ್ತಿದ್ದ ಹೆಂಡತಿಯ ಮಾತಿನಿಂದ ಬೇಸತ್ತ ಈ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ. ಇಂಜಿನಿಯರ್ ಆಗಿ ಸಂಬಳಕ್ಕೇನು ಕೊರತೆ ಇರಲಿಲ್ಲ. ಮದುವೆ ಆಗಿ 9ವರ್ಷ ಆದರೂ ಕೂಡ ಪತ್ನಿಯ ನಿರಂತರ ಕಾಟ ತಪ್ಪಿರಲಿಲ್ಲ ಪತ್ನಿಯ ನಿತ್ಯದ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror