ವಿಕಿಮೀಡಿಯ ಸಮಿತ್‌ 2024 | ಭರತೇಶ ಅಲಸಂಡೆಮಜಲು ಆಯ್ಕೆ

April 8, 2024
11:45 PM

ಎಪ್ರಿಲ್‌ ತಿಂಗಳ 19ರಿಂದ 22ರವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ವಿಕಿಮೀಡಿಯ ಸಮಿತ್‌ 2024ಕ್ಕೆ ಭರತೇಶ ಅಲಸಂಡೆಮಜಲು ಇವರು ಅಯ್ಕೆಯಾಗಿದ್ದಾರೆ.

ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸಕ್ರಿಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮಿಳನವನ್ನು ಪ್ರತಿನಿಧಿಸಲಿದ್ದಾರೆ. ಈ ವಿಕಿಮೀಡಿಯನ್‌ ಸಮಿತ್‌ನಲ್ಲಿ 100ಕ್ಕಿಂತ ಹೆಚ್ಚು ದೇಶಗಳ 150ಕ್ಕಿಂತ ಹೆಚ್ಚು ಬಹುಭಾಷಿಕರೊಂದಿಗೆ ಭಾಗವಹಿಸಿ ವಿಕಿಮೂಮೆಂಟ್‌ 2030 ಕಾರ್ಯರೂಪ, ಪ್ರಾದೇಶಿಕ ಗುಂಪುಗಳ ಅವಲೋಕನ, ಭಾಷೆಗಳ ಸವಾಲುಗಳ ಬಗೆಗಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಇವರು ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಗೌಡ ಎ ಹಾಗೂ ಗಿರಿಜಾ ಎ ಬಿ. ದಂಪತಿಗಳ ಮಗ. ಪ್ರಸ್ತುತ ಬ್ಯಾಂಕ್‌ ಆಫ್ ಬರೋಡದ ಉದ್ಯೋಗಿಯಾಗಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು. ಇತ್ತಿಚೇಗೆ ವಿಕಿಮೀಡಿಯ ಪೌಂಢೇಶನ್‌ನ ಸಹಯೋಗದಲ್ಲಿ ಇವರ ನಿರ್ಮಾಪಕತ್ವದಲ್ಲಿ ತಯಾರಾದ ತುಳುವಿನ ಮೊದಲ ಸಂಶೋಧನಾ ಸಾಕ್ಷ್ಯಚಿತ್ರ ಪುರ್ಸಕಟ್ಟುನ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಇವರು ತುಳು, ಕನ್ನಡ ಬರಹಗಾರರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror